ಸಹೋದ್ಯೋಗಿಗಳಿಗೆ ನೂತನ ಡಿಜಿ-ಐಜಿಪಿ ಸಲೀಂ ಪತ್ರ: ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಲು ಕರೆ
ASHWASURYA/SHIVAMOGGA
news.ashwasurya.in
ನಾಡಿನಲ್ಲಿ ಶಾಂತಿ – ಸೌಹಾರ್ದಯುತ, ಸುರಕ್ಷತೆಯ ವಾತಾವರಣ ನಿರ್ಮಿಸುವ ಹಾಗೂ ಇಲಾಖೆಯನ್ನು ಸಮಾಜಸ್ನೇಹಿಯಾಗಿ ಬದಲಿಸಿ ಆಧುನೀಕರಣದೆಡೆಗೆ ಕೊಂಡೊಯ್ಯಲು ಸಾಮರ್ಥ್ಯ ಮೀರಿ ದುಡಿಯುವ ಧೈರ್ಯದೆಡೆಗೆ ಎಲ್ಲರೂ ಒಮ್ಮತವಾಗಿ ಕಾರ್ಯಪ್ರವೃತ್ತರಾಗೋಣ ಎಂದು ನೂತನ ಡಿಜಿ-ಐಜಿಪಿ ಎಂ ಎ ಸಲೀಂ ಪತ್ರದಲ್ಲಿ ತಿಳಿಸಿದ್ದಾರೆ.
ಅಶ್ವಸೂರ್ಯ/ಬೆಂಗಳೂರು: ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕ (ಡಿಜಿ-ಐಜಿಪಿ) ಡಾ.ಎಂ.ಎ. ಸಲೀಂ ಅವರು ಇಲಾಖೆಯ ಸುಧಾರಣೆ, ಕ್ರಿಯಾಶೀಲತೆ, ಸಾಮರ್ಥ್ಯ ವೃದ್ಧಿ ಸಂಬಂಧ ಸಹೋದ್ಯೋಗಿಗಳಿಗೆ ಸುದೀರ್ಘ ಪತ್ರ ಬರೆದು ಬೆಂಬಲ ಕೋರಿದ್ದಾರೆ.
ಪೊಲೀಸ್ ಇಲಾಖೆಯ ಕಾರ್ಯಚಟುವಟಿಕೆಯಲ್ಲಿ ಪಾರದರ್ಶಕತೆ ತರಲು ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಸಂತ್ರಸ್ತ ಕೇಂದ್ರಿತ ವಿಧಾನವನ್ನು ಅಳವಡಿಸಿಕೊಳ್ಳಲು, ಪೊಲೀಸ್ ಮಹಾನಿರ್ದೇಶಕರು (ಡಿಜಿ ಮತ್ತು ಐಜಿಪಿ) ಎಂಎ ಸಲೀಮ್ ಅವರು ತಮ್ಮ ಸಹೋದ್ಯೋಗಿ ಪೊಲೀಸ್ ಸಿಬ್ಬಂದಿಗೆ ಕರ್ತವ್ಯದಲ್ಲಿ ಪ್ರಾಮಾಣಿಕತೆಗೆ ಆದ್ಯತೆ ನೀಡಿ 10 ಅಂಶಗಳ ಪತ್ರ ಬರೆದಿದ್ದಾರೆ.

ನಾಡಿನಲ್ಲಿ ಶಾಂತಿ-ಸೌಹಾರ್ದಯುತ, ಸುರಕ್ಷತೆಯ ವಾತಾವರಣ ನಿರ್ಮಿಸುವ ಹಾಗೂ ಇಲಾಖೆಯನ್ನು ಸಮಾಜಸ್ನೇಹಿಯಾಗಿ ಬದಲಿಸಿ ಆಧುನೀಕರಣದೆಡೆಗೆ ಕೊಂಡೊಯ್ಯಲು ಸಾಮರ್ಥ್ಯ ಮೀರಿ ದುಡಿಯುವ ಧೈರ್ಯದೆಡೆಗೆ ಎಲ್ಲರೂ ಒಮ್ಮತವಾಗಿ ಕಾರ್ಯಪ್ರವೃತ್ತರಾಗೋಣ ಎಂದು ಸಲೀಂ ಪತ್ರದಲ್ಲಿ ತಿಳಿಸಿದ್ದಾರೆ.
ಈ ಗುರಿ ಸಾಧನೆಗೆ, ಪೊಲೀಸ್ ಇಲಾಖೆಯ ಅಡಿಪಾಯವಾಗಿರುವ ಕಿರಿಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಹಿಡಿದು ಹಿರಿಯ ಪೊಲೀಸ್ ಅಧಿಕಾರಿಗಳವರೆಗಿನ ಎಲ್ಲಾ ಸಹೋದ್ಯೋಗಿಗಳಿಂದ ಸದಾ ಬೆಂಬಲ ಅಪೇಕ್ಷಿಸುತ್ತೇನೆ. ಸಮಾಜದಲ್ಲಿ ನೆಮ್ಮದಿ ಹೆಚ್ಚಿಸುವ, ಶಾಂತಿ ಸ್ಥಾಪಿಸುವ, ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ, ದುರ್ಬಲ ವರ್ಗದವರು ಮತ್ತು ನೊಂದವರಿಗೆ ನ್ಯಾಯ ಕೊಡಿಸುವ ವಿಶೇಷ ಅವಕಾಶ ಮತ್ತು ಜವಾಬ್ದಾರಿ ಪೊಲೀಸರ ಮೇಲಿದೆ ಎಂಬುದನ್ನು ಮರೆಯಕೂಡದು.

ಈ ನಾಡು ಮತ್ತು ನಾಡಿನ ಜನತೆಯ ಒಳಿತಿಗಾಗಿ ಎಲ್ಲರೂ ಶಕ್ತಿ ಮೀರಿ ಪಾರದರ್ಶಕತೆ, ವೃತ್ತಿಪರತೆಯಿಂದ ಸೇವೆ ಸಲ್ಲಿಸಿ ಕರ್ನಾಟಕವನ್ನು ದೇಶದಲ್ಲೇ ಅತಿ ಹೆಚ್ಚು ಸುರಕ್ಷಿತ ವಾತಾವರಣವಿರುವ ಹಾಗೂ ಅತ್ಯುತ್ತಮ ವಾಸ ಯೋಗ್ಯ ತಾಣವಾಗಿ ಪರಿವರ್ತಿಸಲು ಪಣ ತೊಡೋಣ ಎಂದು ಕಿವಿಮಾತು ಹೇಳಿದ್ದಾರೆ


