ಮೇಗರವಳ್ಳಿಯ ಬಿಬಿಎಂ ಸೊಸೈಟಿಯಲ್ಲಿ ನಡೆದ 42.6 ಲಕ್ಷದ ಬಿಲ್ಡಿಂಗ್ ಟೆಂಡರ್‌ನಲ್ಲಿ ಗೋಲ್ ಮಾಲ್: ಗುತ್ತಿಗೆದಾರ ನೇಮರಾಜ್ ತಿಳಿಸಿದ್ದಾರೆ. ಜೋತೆಗೆ ಸಾರ್ವಜನಿಕ ವಲಯದಲ್ಲಿ ದೊಡ್ಡಮಟ್ಟದ ಚರ್ಚೆಯಾಗಿದೆ.!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಶಿವಮೊಗ್ಗ: ಮೇಗರವಳ್ಳಿಯ ಬಿಬಿಎಂ ಸೊಸೈಟಿಯಲ್ಲಿ ನಡೆದ 42.6 ಲಕ್ಷದ ಬಿಲ್ಡಿಂಗ್ ಟೆಂಡರ್‌ನಲ್ಲಿ ಗೋಲ್‌ಮಾಲ್ ನೆಡೆದಿದೆ ಎಂದು ನೇಮರಾಜ್ ಆರೋಪಿಸಿದ್ದಾರೆ. ಟೆಂಡರ್ ಗೆ ಸಂಬಂಧಪಟ್ಟಂತೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಒಳ ಒಪ್ಪಂದ ಮಾಡಿಕೊಂಡು ಸೊಸೈಟಿಗೆ ಉಳಿಯಬೇಕಾದ ಲಕ್ಷಾಂತರ ರೂಪಾಯಿ ಯಾರದೋ ಪಾಲಾಗುವ ಲಕ್ಷಣಗಳು ಎದ್ದು ಕಾಣುತ್ತಿದೆ.!?

ನಾನು ಕೂಡ (ನೇಮರಾಜ್)ಗುತ್ತಿಗೆದಾರನಾಗಿದ್ದು ಟೆಂಡರ್ ಹಾಕಲು ಹೋದಾಗ ನನಗೆ ಟೆಂಡರ್ ಫಾರಂ ಕೂಡ ಕೊಡದೆ ಸತಾಯಿಸಿರುತ್ತಾರೆ ನಂತರ ಹೇಗೋ ಟೆಂಡರ್ ಫಾರಂ ಪಡೆದು ಅದನ್ನು ತುಂಬಿಸಿ ಬಿಬಿಎಂ ಸೊಸೈಟಿ ಹೆಸರಿಗೆ ಒಂದು ಲಕ್ಷದ ಆರು ಸಾವಿರ ರೂಪಾಯಿ ಡಿ ಡಿ ಕಟ್ಟಿ ತಂದು


ಟೆಂಡರ್ ದಿನ ಸಂಜೆ 4:55 ಕ್ಕೆ ಸೊಸೈಟಿ ಬಾಗಿಲಲ್ಲಿ ನಿಂತರೆ ಕಾರ್ಯದರ್ಶಿ ಮತ್ತು ಇನ್ನಿತರ ನಾಲ್ಕಾರು ಜನ ಒಳದಾಟದಂತೆ ಸಮಯ ಮುಗಿದಿದೆ ಎಂದು ನನ್ನನ್ನು ತಡೆದಿರುತ್ತಾರೆ.! ಆದರೂ ಕೂಡ ಒಳ ನುಗ್ಗಿ ಟೆಂಡರ್ ಫಾರ್ಮಗಳನ್ನು ಟೇಬಲ್ ಮೇಲೆ ಇಟ್ಟು ಬಂದಿರುತ್ತೇನೆ ಈ ಟೆಂಡರ್ ಪ್ರಕ್ರಿಯೆಯಲ್ಲಿ ಗೌಪ್ಯತೆಯ ಟೆಂಡರ್ ಹಾಕಲು ಬಾಕ್ಸ್‌ಗಳನ್ನು ಕೂಡ ಬಳಸಿರುವುದಿಲ್ಲ.

ಗುತ್ತಿಗೆದಾರ ನೇಮರಾಜ್
ಈ ಎಲ್ಲಾ ಲೋಪ ದೋಷಗಳ ವಿಚಾರವಾಗಿ ಎ ಆರ್ ಮತ್ತು ಡಿ ಆರ್ ಅವರಿಗೆ ದೂರು ಸಲ್ಲಿಸಲಾಗಿದೆ. ಮುಂದಿನ ಕಾನೂನು ಹೋರಾಟಕ್ಕೂ ಸಜ್ಜಗುತ್ತೇನೆ ಮತ್ತು ಈ ಕಟ್ಟಡಕ್ಕೆ ಸಂಬಂಧಪಟ್ಟ ಹಣ ಸಂಪೂರ್ಣ ಸಾಲದ ರೂಪದಲ್ಲಿ ಬಂದಿರುತ್ತದೆ ಈ ಸಾಲವನ್ನು ತೀರಿಸುವ ಹೊಣೆ ಕೂಡ ಷೇರುದರಾರದ್ದಾಗಿರುತ್ತದೆ ಹಾಗಾಗಿ ಈಗಲೇ ಎಚ್ಚೆತ್ತುಕೊಳ್ಳುವುದು ಉತ್ತಮ ಎಂದು ನೇಮರಾಜ್ ತಿಳಿಸಿದ್ದಾರೆ.



