Headlines

ತೀರ್ಥಹಳ್ಳಿ: ಪ್ರಸಿದ್ಧ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗೆ ಈ ಬಾರಿಯು ಎಸ್ಎಸ್ಎಲ್‌ಸಿ ಯಲ್ಲಿ 100ಕ್ಕೆ 100 ಫಲಿತಾಂಶ.

ASHWASURYA/SHIVAMOGGA

news.ashwasurya.in

ಅಶ್ವಸೂರ್ಯ/ಶಿವಮೊಗ್ಗ : 2024-25 ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ತೀರ್ಥಹಳ್ಳಿ ಪಟ್ಟಣದಲ್ಲಿರುವ ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯು ಪ್ರತಿ ವರ್ಷದಂತೆ ಈ ಬಾರಿಯು ರಾಜ್ಯಮಟ್ಟದಲ್ಲಿ ರ‍್ಯಾಂಕ್ ಅನ್ನು ಪಡೆಯುವ ಮೂಲಕ ಶೇ 100% ಫಲಿತಾಂಶದೊಂದಿಗೆ ಶಿವಮೊಗ್ಗ ಜಿಲ್ಲೆಯಲ್ಲಿಯೇ ಶ್ರೇಷ್ಠ ಮಟ್ಟದ ಫಲಿತಾಂಶವನ್ನು ದಾಖಲಿಸಿ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಶಿಕ್ಷಣದ ಶ್ರೇಷ್ಟತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ವಿಧ್ಯಾರ್ಥಿಗಳು.
ಪರೀಕ್ಷೆಗೆ ಹಾಜರಾದ 61 ವಿದ್ಯಾರ್ಥಿಗಳಲ್ಲಿ, ಅತ್ಯುನ್ನತ ಶ್ರೇಣಿಯಲ್ಲಿ 10 (600 ಕ್ಕಿಂತ ಹೆಚ್ಚು ಅಂಕ) ವಿಧ್ಯಾರ್ಥಿಗಳು, ಉನ್ನತ ಶ್ರೇಣಿಯಲ್ಲಿ 24 ವಿಧ್ಯಾರ್ಥಿಗಳು, ಉಳಿದ 27 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಕಲಶ್ 617 ಕ್ಕೆ 617 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 8 ನೇ ರ‍್ಯಾಂಕ್ ಪಡೆದು ಹೊರ ಹೊಮ್ಮಿರುತ್ತಾರೆ.

ರಾಜ್ಯ ಮಟ್ಟದ ರ‍್ಯಾಂಕ್ ಪಡೆಯುವುದರೊಂದಿಗೆ ಸಂಸ್ಥೆಗೆ ಶೇ 100 ಫಲಿತಾಂಶ ನೀಡುವುದರ ಮೂಲಕ ತಾಲ್ಲೂಕಿನ ಪ್ರೌಢಶಾಲೆಗಳಲ್ಲಿ ಗುಣಾತ್ಮಕ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದೆ.

ತೀರ್ಥಹಳ್ಳಿ ತಾಲ್ಲೂಕು ಹಾಗೂ ಶಿಕ್ಷಣ ಸಂಸ್ಥೆಗೆ ಮತ್ತು ಪೋಷಕರಿಗೆ ಕೀರ್ತಿ ತಂದಿರುವ ಈ ಸಾಧಕ ವಿದ್ಯಾರ್ಥಿಗಳನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಅಧ್ಯಕ್ಷರು ಹಾಗೂ ನಿರ್ದೇಶಕರು, ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಶಿಕ್ಷಕ ವೃಂದ ಮತ್ತು ಭೋಧಕೇತರ ವೃಂದದವರು ಹಾಗೂ ಪೋಷಕ ವೃಂದದವರು ಅಭಿನಂದಿಸಿ ಶುಭಹಾರೈಸಿರುತ್ತಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!