ಪಹಲ್ಗಾಮ್ ಉಗ್ರರ ದಾಳಿ: ಇಸ್ರೇಲ್ ನಂತರ ಭಾರತಕ್ಕೆ ಬಂದಿಳಿದ ಅಮೆರಿಕಾದ ಯುದ್ಧ ವಿಮಾನ.!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ನವದೆಹಲಿ: ಪಹಲ್ಗಾಮ್ ನಲ್ಲಿ ಅಮಾಯಕರ ಪ್ರಾಣವನ್ನು ಉಗ್ರರು ತೆಗೆದ ಬೆನ್ನಲ್ಲೇ ಭಾರತ ಆಕ್ರೋಶಗೊಂಡಿದ್ದು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿದೆ. ಇದರ ಬೆನ್ನಲ್ಲೇ ಇಸ್ರೇಲ್ ಮತ್ತು ಅಮೆರಿಕಾ ಯುದ್ಧ ವಿಮಾನಗಳು ಈಗಾಗಲೇ ಭಾರತಕ್ಕೆ ಬಂದಿಳಿದಿವೆ. ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ಬಳಿಕ ಭಾರತ ರಾಜತಾಂತ್ರಿಕವಾಗಿ ಪಾಕಿಸ್ತಾನಕ್ಕೆ ಹೊಡೆತ ನೀಡಿದೆ. ವೀಸಾ ರದ್ದು, ಸಿಂಧೂ ನದಿ ಒಪ್ಪಂದ ಮುರಿದುಕೊಂಡಿದೆ.ಜೋತೆಗೆ ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳು 48 ಗಂಟೆಗಳಲ್ಲಿ ಭಾರತ ಬಿಟ್ಟು ಹೋಗಲು ಹೇಳಿದೆ. ಅತ್ತ ಪಾಕಿಸ್ತಾನವೂ ಶಿಮ್ಲಾ ಒಪ್ಪಂದವನ್ನು ಮುರಿದುಕೊಂಡಿದೆ.
ಇದೀಗ ಎರಡು ದೇಶದ ಗಡಿಭಾಗದಲ್ಲಿ ಯುದ್ಧ ವಿಮಾನಗಳು, ಕ್ಷಿಪಣಿ ಪ್ರಯೋಗ ಮತ್ತು ಸೈನಿಕರ ನಿಯೋಜನೆ ಮಾಡುತ್ತಿದೆ. ನಿನ್ನೆ ರಾತ್ರಿಯಿಂದ ಪಾಕಿಸ್ತಾನ ಪಡೆಗಳು ತಾವಾಗಿಯೇ ಗುಂಡಿನ ದಾಳಿಗೆ ಮುಂದಾಗಿದ್ದಾರೆ. ಇದಕ್ಕೆ ಭಾರತೀಯ ಸೇನೆಯೂ ತಕ್ಕ ಉತ್ತರವನ್ನೆ ನೀಡುತ್ತಿದೆ
ಇದರ ನಡುವೆ ಸೂರತ್ ನ ವಾಯುನೆಲೆಯಲ್ಲಿ ಇಸ್ರೇಲ್ ನ ಅತ್ಯಾಧುನಿಕ ಯುದ್ಧ ವಿಮಾನ ಬಂದು ನಿಂತಿದೆ. ಇದರ ಬೆನ್ನಲ್ಲೇ ಈಗ ಅಮೆರಿಕಾ ಯುದ್ಧವಿಮಾನವೂ ಸೂರತ್ ಗೆ ಬಂದಿಳಿದಿದೆ. ನಿನ್ನೆಯೇ ಅರಬ್ಬೀ ಸಮುದ್ರ ಗಡಿಯಲ್ಲಿ ಭಾರತ ತನ್ನ ನೌಕಾ ಸೇನೆಯ ಐಎನ್ಎಸ್ ಯುದ್ಧನೌಕೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿತ್ತು.
ಈ ಬೆಳವಣಿಗೆ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿ ಭಾರತ ಏಕಾಂಗಿಯಾಗಿ ಅಲ್ಲ, ತನ್ನ ಮಿತ್ರರಾಷ್ಟ್ರಗಳ ಸಹಾಯದೊಂದಿಗೇ ಪಾಕಿಸ್ತಾನಕ್ಕೆ ಪೆಟ್ಟು ನೀಡಲು ಮುಂದಾಗಿದೆಯೇ ಎಂಬ ಅನುಮಾನ ವಿಶ್ವದೆಲ್ಲೆಡೆ ಮೂಡಿದೆ.
ಉಗ್ರರು ಅಮಾಯಕರ ಜೀವ ತಗೆದ ಪಹಲ್ಗಾಮ್ನ ಸ್ಥಳಕ್ಕೆ ಭಾರತೀಯ ಸೇನಾ ಮುಖ್ಯಸ್ಥರು ಭೇಟಿ ನೀಡಿ, ಅಧಿಕಾರಿಗಳಿಂದ ಪರಿಸ್ಥಿತಿಯ ಮಾಹಿತಿಯನ್ನು ಪಡೆದಿದ್ದಾರೆ.


ಪಹಲ್ಗಾಮ್ನ ಉಗ್ರರ ದಾಳಿಯ ನಂತರದಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಶ್ರೀನಗರಕ್ಕೆ ಆಗಮಿಸಿದ್ದಾರೆ. 15 ಕಾರ್ಪ್ಸ್ ಕಮಾಂಡರ್ ಅವರು ಭದ್ರತಾ ಪರಿಸ್ಥಿತಿ ಮತ್ತು ತಮ್ಮ ಪ್ರದೇಶದೊಳಗಿನ ಭಯೋತ್ಪಾದಕರ ವಿರುದ್ಧದ ರಚನೆಗಳು ಮತ್ತು ಎಲ್ಒಸಿ ಉದ್ದಕ್ಕೂ ಕದನ ವಿರಾಮವನ್ನು ಉಲ್ಲಂಘಿಸಲು ಪಾಕಿಸ್ತಾನ ಸೇನೆಯ ಪ್ರಯತ್ನಗಳ ಬಗ್ಗೆ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಸೇನಾ ಮುಖ್ಯಸ್ಥರಿಗೆ ಸಂಪೂರ್ಣವಾಗಿ ವಿವರಿಸಿದ್ದಾರೆ.

ಈ ನಡುವೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಇಂದು ಜಮ್ಮು ಕಾಶ್ಮೀರಕ್ಕೆ ತೆರಳಿ ಪಹಲ್ಗಾಮ್ನ ಉಗ್ರರ ದಾಳಿಯ ಪ್ರದೇಶಕ್ಕೆ ಬೇಟಿ ನೀಡಿ ನಂತರ ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲಿದ್ದಾರೆ. ಗಾಯಾಳುಗಳ ಆರೋಗ್ಯ ವಿಚಾರಿಸಲು ರಾಹುಲ್ ಗಾಂಧಿಯವರು ಜಮ್ಮು ಕಾಶ್ಮೀರದ ಅನಂತ್ನಾಗ್ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ (ಜಿಎಂಸಿ) ಭೇಟಿ ನೀಡುವ ನಿರೀಕ್ಷೆಯಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ಘೋಷಿಸಿದ ಒಂದು ದಿನದ ನಂತರ, ಪಕ್ಷಾತೀತವಾಗಿ ಭಾರತದ ನಾಯಕರು ದಾಳಿಯ ಅಪರಾಧಿಗಳು ಮತ್ತು ಅವರ ವಿರುದ್ಧ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ಕ್ರಮಗಳಲ್ಲಿ ಸರ್ಕಾರಕ್ಕೆ ಬೇಷರತ್ತಾದ ಬೆಂಬಲವನ್ನು ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಕೂಡ ಪಹಲ್ಗಾಮ್ನಲ್ಲಿ ಭದ್ರತಾ ವೈಫಲ್ಯ ಆಗಿರುವ ಬಗ್ಗೆ ಒಪ್ಪಿಕೊಂಡಿದೆ.


