ಪಾಕಿಸ್ತಾನ ವಿರುದ್ಧದ ಯುದ್ಧಕ್ಕೂ ಮೊದಲೇ ಬೆಂಬಲ ಘೋಷಿಸಿದ ವಿಶ್ವ ನಾಯಕರು.! ಯುದ್ಧ ನಡೆದರೆ ಪಾಕ್ ಛಿದ್ರ.?

ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ದೆಹಲಿ: ಪಹಲ್ಗಾವ್ ನೆಡೆದ ಉಗ್ರರ ದಾಳಿಯನ್ನು ಹಲವು ದೇಶದ ವಿಶ್ವ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ ಜೋತೆಗೆ ಭಾರತಕ್ಕೆ ಬೆಂಬಲ ಸೂಚಿಸಿದ್ದಾರೆ.ಭಾರತಕ್ಕೆ ಒಂದು ಕಡೆ ಜಾಗತಿಕ ಮಟ್ಟದಲ್ಲೂ ದೊಡ್ಡ ಮಟ್ಟದ ಬೆಂಬಲ ಸಿಗುತ್ತಿದ್ದು, ಇನ್ನೊಂದು ಕಡೆ ಕೇಂದ್ರ ಸರ್ಕಾರ ಕೂಡ ಪಾಕಿಸ್ತಾನಕ್ಕೆ ಸರಿಯಾಗಿ ಪಾಠ ಕಲಿಸಲು ಸಜ್ಜಾಗಿದೆ ನಿಂತಿದೆ. ಅದರಲ್ಲೂ ಪಹಲ್ಗಾವ್ ನಲ್ಲಿ ಅಮಾಯಕರ ಜೀವ ತೆಗೆದು ನೆತ್ತರು ಹರಿಸಿದ ಉಗ್ರರಿಗೆ ಸದೆಬಡಿದು ಹೊಡೆದುರುಳಿಸುವ ನಿಟ್ಟಿನಲ್ಲಿ ಭಾರತ ನೆತ್ತರನ್ನು ಹರಿದುವ ಪ್ರತಿಜ್ಞೆ ಕೂಡ ಮಾಡಿದೆ. ಮತ್ತೊಂದೆಡೆ ಪಾಕಿಸ್ತಾನದ ಮೇಲೆ ಭಾರತ ಯುದ್ಧ ಘೋಷಿಸುವ ಸಾಧ್ಯುತೆಗಳಿವೆ ಎಂದು ಬಲವಾಗಿ ಕೇಳಿಬರುತ್ತಿದೆ.
ಭಾರತ ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಣೆ ಮಾಡುವ ಮುನ್ನವೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಆನೇಕ ವಿಶ್ವ ನಾಯಕರು ಉಗ್ರರನ್ನು ಸದೆ ಬಡಿಯುವುದಕ್ಕೆ ಭಾರತದೊಂದಿಗೆ ಇದ್ದೇವೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ನೆಡೆದ ಅದರಲ್ಲೂ ಕಾಶ್ಮೀರದಲ್ಲಿ ನಡೆದ ಉಗ್ರರದಾಳಿ ಅತ್ಯಂತ ಮಾರಕ ಮತ್ತು ಹೀನಾ ಕೃತ್ಯವಾಗಿದೆ. ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಈ ದಾಳಿಗೆ ಹೊಣೆ ಹೊತ್ತಿದೆ.
ಇಸ್ರೇಲ್ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಬೆಂಜಮಿನ್ ನೆತನ್ಯಾಹು ಭಾರತಕ್ಕೆ ಬೆಂಬಲ ಘೋಷಿಸಿದ್ದಾರೆ.

“ನನ್ನ ಪ್ರೀತಿಯ ಗೆಳೆಯ ನರೇಂದ್ರ ಮೋದಿ ಪಹಲ್ಗಾಮ್ನಲ್ಲಿ ನಡೆದ ದಾಳಿಯಿಂದ ತುಂಬಾ ದುಃಖವಾಗಿದೆ. ಇಸ್ರೇಲ್ ಭಾರತದೊಂದಿಗೆ ನಿಂತಿದೆ” ಎಂದು ಅವರು X ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಯುದ್ಧ ನಡೆದರೆ ಇಸ್ರೇಲ್ ಭಾರತಕ್ಕೆ ಬೇಷರತ್ತಾದ ಬೆಂಬಲವನ್ನು ನೀಡಲಿದೆ. ಇಸ್ರೇಲ್ ವಿದೇಶಾಂಗ ಸಚಿವ ಓರೆನ್ ಮಾರ್ಮೋರ್ಶ್ಟೈನ್ ಭಾರತಕ್ಕೆ ಸಂದೇಶ ನೀಡಿದ್ದಾರೆ. “ಇಸ್ರೇಲ್ ನಿಮ್ಮೊಂದಿಗೆ ಇರುತ್ತದೆ. ನಾವು ಭಾರತದ ಜೊತೆ ನಿಲ್ಲುತ್ತೇವೆ” ಎಂದು ಹೇಳಿದ್ದಾರೆ.
ಇಟಲಿ

ಇಟಾಲಿಯನ್ ಪ್ರಧಾನಿ ಮೆಲೋನಿ, “ಪಹಲ್ಗಾಮ್” ನಲ್ಲಿ ನೆಡೆದ ದಾಳಿಯಿಂದ ತೀವ್ರ ದುಃಖಿತರಾಗಿದ್ದೇವೆ” ಎಂದು ತಿಳಿಸಿದ್ದಾರೆ.
ಫ್ರಾನ್ಸ್

ಫ್ರಾನ್ಸ್ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, “ಭಾರತದಾದ್ಯಂತ ಡಜನ್ಗಟ್ಟಲೆ ಜೀವಗಳನ್ನು ಕಳೆದುಕೊಂಡ ಉಗ್ರರ ದಾಳಿಯನ್ನು ಖಂಡಿಸುತ್ತೇನೆ. ಬಲಿಪಶುಗಳ ಕುಟುಂಬಗಳಿಗೆ ನನ್ನ “ಸಂತಾಪಗಳು” ಎಂದು ತಿಳಿಸಿದ್ದಾರೆ.
ಚೀನಾ
ಚೀನಾ ಬೀಜಿಂಗ್ನ ವಿದೇಶಾಂಗ ಸಚಿವಾಲಯ,ಭಾರತದ ಪಹಲ್ಗಾವ್ ನಲ್ಲಿ ನೆಡೆದ ಉಗ್ರರ ದಾಳಿಯಲ್ಲಿ ಬಲಿಯಾದ “ಬಲಿಪಶುಗಳಿಗೆ ಮತ್ತು ಅವರ ಕುಟುಂಬಗಳಿಗೆ ಪ್ರಾಮಾಣಿಕ ಸಂತಾಪ” ಎಂದು ಹೇಳಲಿದೆ.
ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್, “ಈ ದಾಳಿಯಿಂದ ಆಘಾತಕ್ಕೊಳಗಾಗಿದ್ದೇನೆ. ಆಸ್ಟ್ರೇಲಿಯಾ ಇದನ್ನು ಖಂಡಿಸುತ್ತದೆ” ಎಂದು X ಖಾತೆಯಲ್ಲಿ ಬರೆದಿದ್ದಾರೆ.
ಇಂಗ್ಲೆಂಡ್

ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್, “ಈ ದಾಳಿ ಸಂಪೂರ್ಣವಾಗಿ ವಿನಾಶಕಾರಿ. ಮೃತರಿಗೆ ನನ್ನ ಸಂತಾಪ” ಎಂದು ಪೋಸ್ಟ್ ಮಾಡಿದ್ದಾರೆ.
ಅಮೆರಿಕ

ಅಮೆರಿಕ ಅಧ್ಯಕ್ಷ ಟ್ರಂಪ್, “ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲ” ಎಂದು ತಿಳಿಸಿದ್ದಾರೆ.
ರಷ್ಯಾ

ರಷ್ಯಾ ಅಧ್ಯಕ್ಷ ಪುಟಿನ್, “ದಾಳಿಗೆ ಯಾವುದೇ ಸಮರ್ಥನೆ ಇಲ್ಲ. ರಷ್ಯಾ ಭಾರತೀಯ ಪಾಲುದಾರರೊಂದಿಗೆ ಸಹಕಾರವನ್ನು ಹೆಚ್ಚಿಸುತ್ತದೆ” ಎಂದು ಹೇಳಿದ್ದಾರೆ.
ಜರ್ಮನಿ

ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಭಾರತದ ಮೇಲಿನ “ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತೇನೆ. ಜೀವ ಕಳೆದುಕೊಂಡ ಅಮಾಯಕರ ಕುಟುಂಬಗಳಿಗೆ ನನ್ನ ಸಂತಾಪಗಳು” ಎಂದು ಹೇಳಿದ್ದಾರೆ.
ಮಾರಿಷಸ್

ಮಾರಿಷಸ್ ಮಾಜಿ ಪ್ರಧಾನಿ ಪ್ರವಿಂದ್ ಜುಗ್ನೌತ್, “ಪಹಲ್ಗಾಮ್ ದಾಳಿಯಿಂದ ಆಘಾತಕ್ಕೊಳಗಾಗಿದ್ದೇನೆ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ದುಃಖಿತ ಕುಟುಂಬಗಳೊಂದಿಗೆ” ಎಂದು X ನಲ್ಲಿ ಬರೆದಿದ್ದಾರೆ.
ಶ್ರೀಲಂಕಾ
ಶ್ರೀಲಂಕಾ ವಿದೇಶಾಂಗ ಸಚಿವಾಲಯ, “ಜೀವಹಾನಿ ಮತ್ತು ಗಾಯಗೊಂಡವರಿಗೆ ಸಂತಾಪ ಸೂಚಿಸುತ್ತೇವೆ” ಎಂದು ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.
ಯುರೋಪ್

ಯುರೋಪಿಯನ್ ಆಯೋಗದ ಉನ್ನತ ಪ್ರತಿನಿಧಿ ಕಾಜಾ ಕಲ್ಲಾಸ್, “ಭಯೋತ್ಪಾದನೆಯ ವಿರುದ್ಧ ದೃಢವಾಗಿ ನಿಂತಿದ್ದೇವೆ” ಎಂದು ತಿಳಿಸಿದ್ದಾರೆ.
ಯುಎಇ
ಯುಎಇ ವಿದೇಶಾಂಗ ಸಚಿವಾಲಯ, “ಈ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ. ಬಲಿಯಾದ ಅಮಾಯಕರ ಕುಟುಂಬಗಳಿಗೆ ನಮ್ಮ ಸಂತಾಪಗಳು” ಎಂದು ಹೇಳಿದೆ.
ಸೌದಿ ಅರೇಬಿಯಾ

ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್, “ಭಯೋತ್ಪಾದಕ ದಾಳಿಯಿಂದ ದುಃಖಿತನಾಗಿದ್ದೇನೆ. ಸೌದಿ ಭಾರತಕ್ಕೆ ಬೆಂಬಲ ನೀಡುತ್ತದೆ” ಎಂದು ತಿಳಿಸಿದ್ದಾರೆ.
ಇರಾನ್
ಇರಾನ್ ಸರ್ಕಾರ, “ಭಯೋತ್ಪಾದಕ ದಾಳಿಯಲ್ಲಿ ಮಡಿದ ಬಲಿಪಶುಗಳ ಕುಟುಂಬಗಳಿಗೆ ಸಂತಾಪ, ಗಾಯಗೊಂಡವರಿಗೆ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ” ಎಂದು ತಿಳಿಸಿದೆ.
ಡೆನ್ಮಾರ್ಕ್

ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್, “ಪಹಲ್ಗಾಮ್ ದಾಳಿಯಿಂದ ಆಘಾತಕ್ಕೊಳಗಾಗಿದ್ದೇವೆ. ಬಲಿಪಶುಗಳು, ಅವರ ಕುಟುಂಬಗಳಿಗೆ ನಮ್ಮ ಸಂತಾಪಗಳು” ಎಂದು ತಿಳಿಸಿದ್ದಾರೆ.
ಯುರೋಪಿಯನ್ ಒಕ್ಕೂಟ

ಯುರೋಪಿಯನ್ ಒಕ್ಕೂಟ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್, “ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತೇನೆ. ಭಾರತಕ್ಕೆ ನಮ್ಮ ಆಳವಾದ ಸಂತಾಪಗಳು” ಎಂದು ಹೇಳಿದ್ದಾರೆ.
ನೇಪಾಳ:

ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ, “ಪಹಲ್ಗಾಮ್ ದಾಳಿಯ ಬಲಿಯಾದವರಿಗೆ ತೀವ್ರ ಸಂತಾಪಗಳು. ನೇಪಾಳವು ಭಾರತದೊಂದಿಗೆ ದೃಢವಾಗಿ ನಿಂತಿದೆ” ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಭಾರತದ ಪಹಲ್ಗಾವ್ ಮೇಲಿನ ಉಗ್ರರ ದಾಳಿಯ ನಂತರದಲ್ಲಿ ಸಾಕಷ್ಟು ರಾಷ್ಟ್ರಗಳು ಭಾರತದ ಬೆಂಬಲಕ್ಕೆ ನಿಂತಿವೆ. ಪಾಕಿಸ್ತಾನದ ವಿರುದ್ಧ
ಯುದ್ಧ ನೆಡೆದದ್ದೆ ಆದರೆ ವಿಶ್ವ ಭೂಪಟದಲ್ಲಿ ಪಾಕಿಸ್ತಾನವನ್ನು ಹುಡುಕ ಬೇಕಾದಿತು ಎನ್ನುವುದಂತು ಸತ್ಯ….



