ಭಾರತದ ವಿರುದ್ಧ ರಿವೆಂಜಿಗೆ ನಿಂತ ಪಾಕ್: ಅರಿವಿಲ್ಲದೆ ಪಾಕ್ ಪ್ರದೇಶ ಪ್ರವೇಶಿಸಿದ್ದ BSF ಯೋಧನ ಬಂಧಿಸಿದ ರಣಹೇಡಿ ಪಾಕಿಸ್ತಾನ.!
ASHWASURYA/SHIVAMOGGA
news.ashwasurya.in
ಒಂದು ಕ್ಷಣ ಅರಿವಿಲ್ಲದೆ ಪಾಕ್ ಪ್ರದೇಶ ದಾಟಿದ ಬಿಎಸ್ಎಫ್ ಯೋಧನನ್ನು ಪಾಕಿಸ್ತಾನ ಬಂಧಿಸಿರುವುದು ರಣಹೇಡಿ ಕೃತ್ಯವಾಗಿದೆ
ಅಶ್ವಸೂರ್ಯ/ಪಂಜಾಬ್: ಪಾಕಿಸ್ತಾನದ ಪಂಜಾಬ್ ಗಡಿಯನ್ನು ಆಕಸ್ಮಿಕವಾಗಿ ದಾಟಿದ ಬಿಎಸ್ಎಫ್ ಯೋಧನನ್ನು ಪಾಕಿಸ್ತಾನ ರೇಂಜರ್ಸ್ಗಳು ಬಂಧಿಸಿದ್ದಾರೆ. ಆರಂಭಿಕ ಬಿಡುಗಡೆಗಾಗಿ ಎರಡು ಪಡೆಗಳ ನಡುವೆ ಧ್ವಜ ಸಭೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಹಲ್ಗಾಮ್ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಭಾರತ ಪಾಕ್ ವಿರುದ್ಧ ಕೈಗೊಂಡಿದ್ದ ಕ್ರಮಗಳಿಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಗುರುವಾರ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ. ವಾಘಾ ಗಡಿ ದಾಟುವಿಕೆಯನ್ನು ತಾನೂ ಮುಚ್ಚಿದೆ. ಭಾರತದೊಂದಿಗಿನ ಎಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸಿದೆ ಮತ್ತು ಸಿಂಧೂ ಜಲ ಒಪ್ಪಂದವನ್ನು ಅಮಾನತು ಮಾಡಿದೆ.


