ʼಪ್ರಪೋಸಲ್ʼ ಅಂದ್ರೆ ಇದು.!: ಭಯ ನಡುವೆ ಸಂತೋಷ ಜೊತೆಗೆ ನಾಟಕ ಎಲ್ಲವೂ ಒಂದೇ ಕ್ಷಣ ವೈರಲ್ ವಿಡಿಯೊದಲ್ಲಿ .!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಶಿವಮೊಗ್ಗ: ಆನ್‌ಲೈನ್ ದುನಿಯಾದಲ್ಲಿ ಇದೀಗ ಒಂದು ವಿಡಿಯೊ ಭರ್ಜರಿ ಸದ್ದು ಮಾಡುತ್ತಿದೆ.ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಮದುವೆಯಾಗಲಿರುವ ಜೋಡಿಯೊಂದು ಜಲಪಾತದ ಸುಂದರ ಪರಿಸರದ ಸ್ಥಳದಲ್ಲಿ ನಿಂತಿರುವಾಗ, ಮದುವೆಯಾಗಬೇಕಾದ ವರ ತನ್ನ ಬಾವಿ ಪತ್ನಿಗೆ ಅ ಸ್ಥಳದಲ್ಲಿ ಪ್ರಪೋಸ್ ಮಾಡಲು ಮುಂದಾಗುತ್ತಾನೆ. ಆದರೆ ಅಷ್ಟರಲ್ಲಿ ಆತ ಎಂಗೇಜ್‌ಮೆಂಟ್ ಉಂಗುರವಿರುವ ಡಬ್ಬಿಯನ್ನು ಜಲಪಾತಕ್ಕೆ ಹಾಕಿದಂತೆ ನಾಟಕವಾಡಿ ಕೆಳಗೆ ಬಿಳಿಸಿ ತಕ್ಷಣವೇ ಕಷ್ಟಪಟ್ಟು ಅದನ್ನು ಹಿಡಿದವನಂತೆ ನಾಟಕ ಮಾಡಿ ಎಲ್ಲರ ಹೃದಯ ಬಡಿತವನ್ನು ಒಂದು ಕ್ಷಣ ನಿಲ್ಲುವಂತೆ ಮಾಡಿದ್ದಾನೆ…!
ವಿಡಿಯೊದ ಆರಂಭದಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯುತ್ತದೆ. ಮಂದ ಬೆಳಕಿನಲ್ಲಿ ಹರಿಯುವ ನೀರಿನ ಸದ್ದು ಒಂದು ಕಡೆಯಾದರೆ ದಡದಲ್ಲಿ ನಿಂತ ಜೋಡಿಗಳ ಪ್ರಣಯ ಇನ್ನೊಂದು ಕಡೆ ನೋಡುಗರ ಕಣ್ಣಿಗೆ ಸಿನಿಮೀಯ ದೃಶ್ಯದಂತೆ ಕಾಣುತ್ತದೆ. “ಇದೇ ರೋಮ್ಯಾಂಟಿಕ್ ಪರಿಪೂರ್ಣತೆ” ಎಂದು ವೀಕ್ಷಕರು ಭಾವಿಸುವಷ್ಟರಲ್ಲಿ, ಅನಿರೀಕ್ಷಿತ ಗೊಂದಲ ಸೃಷ್ಟಿಯಾಗುತ್ತದೆ.
ಕ್ಯಾಮೆರಾದಿಂದ ಹೊರಗಿನ ಧ್ವನಿಗಳು ಆತಂಕಗೊಂಡು ಕೂಗುತ್ತವೆ: “ಇಲ್ಲವೇ ಇಲ್ಲ, ಇದು ನಂಬಲು ಸಾಧ್ಯವಿಲ್ಲ ಪೀಟರ್, ಏನು ಇದು ಏನು?! ಉಂಗುರದ ಡಬ್ಬಿ ಎಲ್ಲಿ ಹೋಯಿತು?! ಅದು ನಿಜವಾಗಿಯೂ ಬಿದ್ದಿತೇ..?! ಓಹ್ ಮೈ ಗಾಡ್! ” ಈ ಕೂಗುಗಳು ಕ್ಷಣ ಕಾಲ ವಾತಾವರಣವನ್ನು ಆತಂಕಕ್ಕೆ ದೂಡುತ್ತದೆ. ಉಂಗುರವು ಜಲಪಾತಕ್ಕೆ ಬಿದ್ದು ಹೋಯಿತು, ಪ್ರಪೋಸಲ್ ಅರ್ಧಕ್ಕೆ ನಿಂತು ಹೋಯಿತು ಎಂದು ಎಲ್ಲರೂ ಕ್ಷಣಕಾಲ ನಂಬುವಂತಾಗುತ್ತದೆ.
ಆದರೆ ಈ ವೈರಲ್ ವಿಡಿಯೊದಲ್ಲಿ ಒಂದು ಟ್ವಿಸ್ಟ್ ಕಾದಿತ್ತು! (ಉಂಗುರ ನಿಜವಾಗಿಯೂ ಬಿದ್ದಿರಲಿಲ್ಲ – ಅದು ಕೇವಲ ವರನ ಸಮಯೋಚಿತ ನಾಟಕ) ಏನೂ ಆಗಿಲ್ಲದವನಂತೆ ವರನು ತನ್ನ ವಾಚ್ ಅನ್ನು ಸರಿಪಡಿಸಿಕೊಂಡು ಜೇಬಿನಲ್ಲಿದ್ದ ಉಂಗುರದ ಡಬ್ಬಿ ತೆಗೆದು ಆಕೆಯ ಬಳಿ ಹೋಗಿ ತೋರಿಸಿದಾಗ ವಧು ಜೋತೆಯಲ್ಲಿ ಎಲ್ಲರೂ ಕ್ಷಣ ಕಾಲ ತಬ್ಬಿಬ್ಬಾಗಿ ಹೋಗುತ್ತಾರೆ.ಈ ಸಂಧರ್ಭದಲ್ಲಿ ವಾತಾವರಣವು ತಕ್ಷಣವೇ ಶಾಂತವಾಗುತ್ತದೆ. ನಾಟಕ, ಸಮಯಪ್ರಜ್ಞೆ ಮತ್ತು ವಧುವಿನ ಪ್ರತಿಕ್ರಿಯೆ – ಎಲ್ಲವೂ ಅದ್ಭುತವಾಗಿತ್ತು.
ಇದು ಮೊದಲೇ ಯೋಜಿಸಿದ ನಾಟಕವೋ ಅಥವಾ ಆಕಸ್ಮಿಕವಾಗಿ ನಡೆದ ಮೋಜಿನ ಘಟನೆಯೋ ಎಂಬುದು ತಿಳಿದಿಲ್ಲ. ಆದರೆ ಇಂಟರ್ನೆಟ್ ಬಳಕೆದಾರರು ಮಾತ್ರ ಈ ವಿಡಿಯೊಗೆ ಫಿದಾ ಆಗಿದ್ದಾರೆ.
ಒಟ್ಟಿನಲ್ಲಿ, ಈ ವಿಡಿಯೊವು ಆನ್‌ಲೈನ್‌ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ ಮತ್ತು ವೀಕ್ಷಕರನ್ನು ನಗುವಿನ ಅಲೆಯಲ್ಲಿ ತೇಲಿಸಿರುವುದಂತುವಸತ್ಯ.!


