ಪೊಲೀಸಪ್ಪನ ಕೈಯಲ್ಲಿತ್ತು ರೈಫಲ್.!ತಲೆಗೆ ಏರಿತ್ತು ಮದ್ಯದ ನಶೆ.! ಕರ್ತವ್ಯ ನಿರತನಾಗಿದ್ದಾಗಲೆ ರಸ್ತೆಯಲ್ಲಿ ಉರುಳಾಡಿದ ಪೊಲೀಸಪ್ಪ..!ನಶೆಯಲ್ಲಿ ಟ್ರಿಗರ್ ಒತ್ತಿದ್ರೆ ಹೊರಬರುತ್ತಿತ್ತು ಬುಲೆಟ್.! ವಿಡಿಯೋ ವೈರಲ್..
ASHWASURYA/SHIVAMOGGA
news.ashwasuryain
ಅಶ್ವಸೂರ್ಯ/ಉತ್ತರಪ್ರದೇಶ : ಮದ್ಯದ ನಶೆಯಲ್ಲಿ ಕೈಯಲ್ಲಿ ರೈಫಲ್ ಹಿಡಿದು ರಸ್ತೆಯಲ್ಲಿ ಉರುಳಾಡಿದ ಪೊಲೀಸಪ್ಪ ಸ್ಥಿತಿ ನೋಡಿದ್ರೆ ನೀವು ಒಂದು ಕ್ಷಣ ಬೇರಗಾಗೊದು ಗ್ಯಾರಂಟಿ.! ಜಸ್ಟ್ ಮಿಸ್ ಗುರು..!
ಜನರನ್ನು ರಕ್ಷಿಸಬೇಕಾದ ಪೊಲೀಸರೇ ದಾರಿ ತಪ್ಪುತ್ತಿದ್ದಾರಾ.?ಕುಡಿದ ಮತ್ತಿನಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ರಸ್ತೆಯಲ್ಲಿ ಬಿದ್ದು ಹೊರಳಾಡಿದ ಘಟನೆ ಜನರನ್ನು ಬೆಚ್ಚಿಬೀಳಿಸಿದೆ. ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಕುಡಿದ ಮತ್ತಿನಲ್ಲಿ ರೈಫಲ್ ಹಿಡಿದುಕೊಂಡು ರಸ್ತೆಯಲ್ಲಿ ಒದ್ದಾಡುತ್ತ ರಸ್ತೆಯಲ್ಲಿ ಮಲಗಿರುವುದನ್ನು ವಿಡಿಯೋದಲ್ಲಿ ನೋಡಬಹುದು..
ಇದನ್ನು ಗಮನಿಸಿದ ಸ್ಥಳೀಯರು ಮತ್ತು ವಾಹನ ಸವಾರರು ಕಾನ್‌ಸ್ಟೆಬಲ್‌ನನ್ನು ಮೇಲಕ್ಕೆತ್ತಿ ಪಕ್ಕದಲ್ಲಿ ಕೂರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದದ್ದು ಎಂದು ತಿಳಿದುಬಂದಿದೆ. ಪೂರ್ಣ ವಿವರಗಳನ್ನು ನೋಡುವುದಾದರೆ..
ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಮದ್ಯದ ಅಮಲಿನಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ರಸ್ತೆಯಲ್ಲೇ ಬಿದ್ದು ಹೊರಳಾಡಿದ್ದಾರೆ. ರೈಫಲ್ ಹಿಡಿದುಕೊಂಡಿದ್ದ ಪೊಲೀಸಪ್ಪನನ್ನು ನೋಡಿದ ಅಲ್ಲಿಯ ಜನರು ಜೀವ ಭಯದಲ್ಲಿ ಓಡಾಡುತ್ತಿದ್ದರು.
ವೈರಲ್ ಆಗಿರುವ ವಿಡಿಯೋದಲ್ಲಿ, ಸಮವಸ್ತ್ರ ಧರಿಸಿದ ಪೊಲೀಸ್ ಅಧಿಕಾರಿಯೊಬ್ಬರು ಸರ್ವಿಸ್ ರೈಫಲ್ ಹಿಡಿದುಕೊಂಡು ಮದ್ಯದ ಅಮಲಿನಲ್ಲಿ ಜನನಿಬಿಡ ರಸ್ತೆಯಲ್ಲಿ ಬಿದ್ದು ಹೊರಳಾಡಿದ್ದಾರೆ.. ಅವನಿಗೆ ಎದ್ದೇಳಲು ಸಹ ಕಷ್ಟವಾಗುತ್ತಿತ್ತು. ಆಗ ತಕ್ಷಣ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರು ಆತನಿಂದ ರೈಫಲ್ ತೆಗೆದುಕೊಂಡು ರಸ್ತೆಯ ಪಕ್ಕಕ್ಕೆ ಕರೆದೊಯ್ದಿದ್ದಾರೆ..


