




ಪಿಯುಸಿ ಫೇಲ್ ಡ್ರೈವರ್ ಕೆಲಸ ಮಾಡುತ್ತಲೇ ಓದಿ IPS ಹುದ್ದೆ ಅಲಂಕರಿಸಿದ ಮನೋಜ್ ಕುಮಾರ್ ಈಗ IG.!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ನವದೆಹಲಿ :ಮನೋಜ್ ಕುಮಾರ್ ತಮ ಆರಂಭದ ವಿಧ್ಯಾರ್ಥಿ ಜೀವನದಲ್ಲಿ 9, 10ನೇ ತರಗತಿಯಲ್ಲಿ ಸಿ ಗ್ರೇಡ್ ವಿದ್ಯಾರ್ಥಿ ಆಗಿದ್ದರು, ದ್ವೀತಿಯ ಪಿಯುಸಿಯಲ್ಲಿ ಫೇಲ್ ಆಗಿದ್ದರು ಆದರೆ ಮನಸ್ಸಿನಲ್ಲಿ ದೃಢವಾಗಿದ್ದ ಛಲ ಬಿಡೇ ಟೆಂಪೋ ಒಂದರ ಡ್ರೈವರ್ ಆಗಿ ಕೆಲಸ ಮಾಡುತ್ತಲೇ ಹಠ ಹಿಡಿದು ರಾತ್ರಿ ಹಗಲು ಓದಿ ಐಪಿಎಸ್ ಅಧಿಕಾರಿ ಅಧಿಕಾರಿಯಾದ ಮನೋಜ್ ಕುಮಾರ್ ಶರ್ಮಾರ ಯಶಸ್ಸಿನ ಪಯಣದ ಒಂದು ನೋಟ….
ನಮ್ಮ ಯುವ ಸಮೂಹಕ್ಕೆ ಅದರಲ್ಲೂ ಬಡತನದಲ್ಲಿ ಓದುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿರುವ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ರವರು ಈಗ IG ಆಗಿ ಭಡ್ತಿ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.
ಮನೋಜ್ ಕುಮಾರ್ ದ್ವೀತಿಯ ಪಿಯುಸಿಯ ವಾರ್ಷಿಕ ಪರೀಕ್ಷೆಯಲ್ಲಿ ಫೇಲ್ ಆದಂತವರು.! ಆದರು ನಾನು ಫೇಲ್ ಆಗಿದ್ದೀನಿ ನನ್ನ ವಿದ್ಯಾರ್ಥಿ ಜೀವನ ಇಲ್ಲಿಗೆ ಮುಗಿಯಿತು ಎಂದು ಅಂಜಿ ಕೂರದ ಮನೋಜ್ ಅವರು ಛಲ ಬಿಡದೇ ಓದಿ ದೇಶದ ಅತ್ಯುನ್ನತ ಕಠಿಣ ಪರೀಕ್ಷೆಯಾದ ನಾಗರೀಕ ಸೇವೆಗಳ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿ ಹುದ್ದೆ ಅಲಂಕರಿಸುವ ವರೆಗೂ ಆವರು ಹಿಂತಿರುಗಿ ನೋಡಲೇ ಇಲ್ಲ. ದ್ವೀತಿಯ ಪಿಯುಸಿಯಲ್ಲಿ ಫೇಲ್ ಹಾಗೂ ಐಪಿಎಸ್ ಅಧಿಕಾರಿ ಹುದ್ದೆ ಅಲಂಕರಿಸುವ ವರೆಗೂ ಇವರ ಜೀವನ ಮತ್ತು ಛಲಬಿಡದೆ ಓದಿದ ಹಾದಿಯೊಂತು ಪ್ರತಿಯೊಬ್ಬ ಬಡ ಕುಟುಂಬದ ಯುಪಿಎಸ್ಸಿ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡದೇ ಇರದು…

ಮನೋಜ್ ಕುಮಾರ್ ರವರು ಮೂಲತ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯವರು.ತಮ್ಮ ಚಿಕ್ಕ ವಯಸ್ಸಿನಿಂದಲೇ ಇವರು ಐಎಎಸ್ ಅಧಿಕಾರಿ ಆಗುವ ಕನಸು ಕಂಡಂತವರು. ಆದರೆ ಇವರಿಗೆ ದ್ವಿತೀಯ ಪಿಯುಸಿಯಲ್ಲಿ ದೊಡ್ಡ ಆಘಾತವೆ ಆಯಿತು ದ್ವೀತಿಯ ಪಿಯು ಫಲಿತಾಂಶ ಹೊರಬಿದ್ದಾಗ ಮನೋಜ್ ಅವರು ಫೇಲ್ ಆಗಿದ್ದರೂ. ಅಷ್ಟೇ ಅಲ್ಲದೇ ಇವರು 9, 10ನೇ ತರಗತಿಯಲ್ಲಿ ಸಿ ಗ್ರೇಡ್ ಸ್ಟೂಡೆಂಟ್ ಆಗಿದ್ದಂತವರು.
ದ್ವೀತಿಯ ಪಿಯುಸಿಯಲ್ಲಿ ಹಿಂದಿ ವಿಷಯ ಒಂದನ್ನು ಹೊರತು ಪಡಿಸಿ ಮಿಕ್ಕೆಲ್ಲಾ ವಿಷಯಗಳಲ್ಲಿ ಇವರು ಫೇಲ್ ಆಗಿದ್ದರು. ಇಂತಹ ಹೀನಾಯ ಫಲಿತಾಂಶದ ನಡುವೆಯೂ ಸಹ ಅವರ ನಂಬಿಕೆ ಹಾಗೂ ಛಲವನ್ನು ಎಂದು ಬಿಡಲಿಲ್ಲ.ತಮ್ಮ ಮನದಲ್ಲಿದ್ದ ಗುರಿಯನ್ನು ಬಿಟ್ಟು ಹಿಂದೇಟು ಹಾಕಲಿಲ್ಲ.! ದೇಶದ ಉನ್ನತ ಪರೀಕ್ಷೆ ಹಾಗೂ ಅತಿ ಕಷ್ಟಕರ ಪರೀಕ್ಷೆಯಾದ ಯುಪಿಎಸ್ಸಿ ಸಿಎಸ್ಇ ಪರೀಕ್ಷೆಗೆ ಪಣತೊಟ್ಟು ಓದಲು ಆರಂಭಿಸಿದರಂತೆ.
ಮನೋಜ್ ಕುಮಾರ್ ರವರು ತಮ್ಮ ಬಗ್ಗೆಯೇ ಒಂದು ಪುಸ್ತಕವನ್ನು ‘Twelth Fail’ ಎಂಬ ಹೆಸರಿನೊಂದಿಗೆ ಬರೆದಿದ್ದಾರೆ. ಇದರಲ್ಲಿ ಅವರು ತಾವು ಓದುವಾಗ ಗ್ವಾಲಿಯಾರ್ನಲ್ಲಿ ಟೆಂಪೊ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೆ ಎಂದು ಬರೆದಿದ್ದಾರೆ. ಇದಕ್ಕೆ ಕಾರಣ ಅವರ ಕುಟುಂಬದ ಕಡುಬಡತನ.ಇರಲು ಸಹ ಒಂದು ಮನೆಯೂ ಇರದಂತಹ ಸ್ಥಿತಿ ಇವರದಾಗಿತ್ತು.ದೆಹಲಿಯ ಲೈಬ್ರರಿ ಒಂದರಲ್ಲಿ ಜವಾನನಾಗಿ ಕೆಲಸ ಮಾಡಿದ್ದರು. ಇದೇ ವೇಳೆ ಅವರು ದೊಡ್ಡ ದೊಡ್ಡ ವ್ಯಕ್ತಿಗಳ ಕುರಿತು ಓದಿಕೊಂಡಿದ್ದರಂತೆ. ಗೋರ್ಕಿ ಮತ್ತು ಅಬ್ರಹಾಂ ಲಿಂಕನ್ ರಿಂದ ಮುಕ್ತಬೋಧ್ ವರೆಗೆ ಓದಿದ್ದರಂತೆ. ಈ ಬುಕ್ಗಳನ್ನು ಓದಿದ ನಂತರ ತಮ್ಮ ಬದುಕಿನ ಆಯಾಮಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.

ತಮ್ಮ ಕಠಿಣ ಪರಿಶ್ರಮದಿಂದ ಯುಪಿಎಸ್ಸಿ ಪರೀಕ್ಷೆ ಬರೆದು ಯಶಸ್ಸು ಪಡೆದ ಮನೋಜ್ ಕುಮಾರ್ 2005 ರಲ್ಲಿ ಮಹಾರಾಷ್ಟ್ರ ಕೇಡರ್ನಲ್ಲಿ ಐಪಿಎಸ್ ಅಧಿಕಾರಿ ಆದರು. ಪ್ರಸ್ತುತ ಮುಂಬೈ ಪಶ್ಚಿಮ ವಿಭಾಗದಲ್ಲಿ ಹೆಚ್ಚುವರಿ ಕಮಿಷನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವಿಧ್ಯಾರ್ಥಿಗಳೆ ಎಂದಿಗೂ ನಿಮ್ಮ ಛಲ ಬಿಡಬೇಡಿ.ಒಮ್ಮೆ ಸೋಲಾದರು ನಿಮ್ಮ ಗೆಲುವಿಗೆ ಸಾಕಷ್ಟು ಅವಕಾಶಗಳು ನಿಮ್ಮೆ ಮುಂದಿರುತ್ತದೆ. ನಿಮ್ಮ ಕಠಿಣ ಪರಿಶ್ರಮದ ಜೋತೆಗೆ ಛಲವಿರಬೇಕು ಅಷ್ಟೇ. ಸಾಧಿಸುವ ಗುರಿ ಇರಬೇಕು ಆಗ ಮಾತ್ರ ನೀವು ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ. ನಿಮ್ಮ ಗುರಿ ಎಡೆಗೆ ಹೆಜ್ಜೆ ಹಾಕಲು ಸಾಧ್ಯ ಎನ್ನುವುದನ್ನು ಯಾವುದೇ ಕ್ಷಣಕ್ಕೂ ಮರೆಯಬೇಡಿ….






