ಗಂಡನ ಸರ್ಕಾರಿ ಕೆಲಸ ದಕ್ಕಿಸಿಕೊಳ್ಳಲು ಆತನ ಉಸಿರು ನಿಲ್ಲಿಸಿದ ಪತ್ನಿ..! ಹೆಣ್ಣೆ ನೀನೆಷ್ಟು ಕ್ರೂರಿ…

ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಉತ್ತರಪ್ರದೇಶ: ಹಲ್ದೌರ್ನ ಮುಕ್ರಾಂದ್ಪುರ ಗ್ರಾಮದ ನಿವಾಸಿ ದೀಪಕ್ ಕುಮಾರ್ 2024ರ ಜನವರಿ 17ರಂದು ಚೌಹಾದ್ಪುರ ನಹ್ತೌರ್ ನಿವಾಸಿ ಶಿವಾನಿ ಅವರನ್ನು ಪ್ರೇಮ ವಿವಾಹವಾಗಿದ್ದರು. ರೈಲ್ವೆ ಉದ್ಯೋಗಿ ಯಾಗಿದ್ದ ದೀಪಕ್ ತನ್ನ ಪತ್ನಿಯೊಂದಿಗೆ ನಜಿಬಾಬಾದ್ನ ಆದರ್ಶ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ಸಂಸಾರ ಹೂಡಿದ್ದರು.
ಪತಿಯನ್ನೇ ಕೊಂದ ಪತ್ನಿ.!
ಉತ್ತರ ಪ್ರದೇಶದ ಬಿಜ್ನೋರ್ನ ನಜೀಬಾಬಾದ್ ರೈಲ್ವೆ ನಿಲ್ದಾಣದ ಕ್ಯಾರೇಜ್ ಮತ್ತು ವ್ಯಾಗನ್ನಲ್ಲಿ ನಿಯೋಜಿಸಲಾದ ತಾಂತ್ರಿಕ ಉದ್ಯೋಗಿ ದೀಪಕ್ ಕುಮಾರ್ ಅವರನ್ನು ಅವರ ಪತ್ನಿ ಕತ್ತು ಹಿಸುಕಿ ಕೊಂದಿದ್ದಾರೆ. ಕೊಲೆಯ ನಂತರ ಆಕೆ ನಾಟಕವಾಡಿ ನನ್ನ ಗಂಡನಿಗೆ ಹೃದಯಾಘಾತವಾಗಿದೆ ಎಂದು ಅಷ್ಟೋತ್ತಿಗಾಗಲೆ ಉಸಿರು ಚಲ್ಲಿದ ಪತಿಯನ್ನು ವೈದ್ಯರ ಬಳಿಗೆ ಕರೆದೊಯ್ದಿದ್ದಳು. ಆದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅದು ಕೊಲೆ ಎಂದು ತಿಳಿದುಬಂದಿದೆ. ಇದೀಗ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಪ್ರೇಮ ಪ್ರಕರಣವೋ ಅಥವಾ ಬೇರೆ ಯಾವುದಾದರೂ ಕಾರಣವೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಲ್ದೌರ್ನ ಮುಕ್ರಾಂದ್ಪುರ ಗ್ರಾಮದ ನಿವಾಸಿ ದೀಪಕ್ ಕುಮಾರ್ 2024ರ ಜನವರಿ 17ರಂದು ಚೌಹಾದ್ಪುರ ನಹ್ತೌರ್ ನಿವಾಸಿ ಶಿವಾನಿ ಅವರನ್ನು ಪ್ರೇಮ ವಿವಾಹವಾಗಿದ್ದರು. ರೈಲ್ವೆ ಉದ್ಯೋಗಿ ದೀಪಕ್ ತನ್ನ ಪತ್ನಿಯೊಂದಿಗೆ ನಜಿಬಾಬಾದ್ನ ಆದರ್ಶ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಶುಕ್ರವಾರ ಮಧ್ಯಾಹ್ನ ಶಿವಾನಿ ತನ್ನ ಅತ್ತೆ ಮತ್ತು ಸೋದರ ಮಾವನಿಗೆ ದೂರವಾಣಿ ಮೂಲಕ ತನ್ನ ಪತಿ ದೀಪಕ್ ಕುಮಾರ್ ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿಸಿ, ಪತಿಯನ್ನು ನಜೀಬಾಬಾದ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಇದಾದ ನಂತರ, ಅವರನ್ನು ಸಮಿಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲು ಪ್ರಯತ್ನಿಸಲಾಯಿತು. ಆದರೆ ವೈದ್ಯರು ಅವನನ್ನು ಸೇರಿಸಿಕೊಳ್ಳಲಿಲ್ಲ. ದೀಪಕ್ ಬಿಜ್ನೋರ್ ಆಸ್ಪತ್ರೆಗೆ ತಲುಪುವ ಹೊತ್ತಿಗೆ ಅವರು ಸಾವನಪ್ಪಿದ್ದರು.

ಒಂದು ಮೂಲದ ಪ್ರಕಾರ ಪತ್ನಿ ತನ್ನ ಗಂಡನ ಕೆಲಸವನ್ನು (ಅನುಕಂಪ ಅಧಾರದ ಅಡಿಯಲ್ಲಿ) ತಾನು ಪಡೆಯಲು ಪತಿಯ ಹತ್ಯೆಗೆ ಮೊಹರ್ತ ಫಿಕ್ಸಿ ಮಾಡಿ ಆತನ ಉಸಿರು ನಿಲ್ಲಿಸಿದ್ದಾಳೆ ಎನ್ನುವ ಮಾತು ಕೇಳಿ ಬಂದಿದೆ..ಪ್ರೀತಿಸಿ ಮದುವೆಯಾಗಿ ಒಂದು ವರ್ಷಕಾಲ ಆತನ ಜೋತೆಗೆ ಜೀವನ ಮಾಡಿದ ಪರಮ ಪಾಪಿ ಮಡದಿ ಗಂಡನಿಗೆ ಚಟ್ಟ ಕಟ್ಟಿದ್ದುಮಾತ್ರ ದುರಂತವೆ ಹೌದು..!


