Headlines

ಹುಬ್ಬಳ್ಳಿ: ಬಾಲಕಿಯ ಕೊಲೆ ಆರೋಪಿ ಪೊಲೀಸರ ಗುಂಡೇಟಿಗೆ ಬಲಿ.!

ಹುಬ್ಬಳ್ಳಿ: ಬಾಲಕಿಯ ಕೊಲೆ ಆರೋಪಿ ಪೊಲೀಸರ ಗುಂಡೇಟಿಗೆ ಬಲಿ.!

ASHWASURYA/SHIVAMOGGA

news ashwasurya.in

ಅಶ್ವಸೂರ್ಯ/ಹುಬ್ಬಳ್ಳಿ: ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದಿದ್ದ ಆರೋಪಿಯನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಹತ್ಯೆಮಾಡಿದ ಸ್ಥಳಕ್ಕೆ ಕರೆದೊಯ್ದಾ ಸಂಧರ್ಭದಲ್ಲಿ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದಾಗ ಮಹಿಳಾ ಪಿಎಸ್ಐ ಆತನ ಮೇಲೆ ಗುಂಡು ಹಾರಿಸಿದ ಪರಿಣಾಮ ಆತ ಮೃತಪಟ್ಟ ಘಟನೆ‌ ಹುಬ್ಬಳ್ಳಿ ನಗರದ ಹೊರ ವಲಯದ ತಾರಿಹಾಳದ ಕೆಳಸೇತುವೆ ಬಳಿ ನಡೆದಿದೆ.
ಬಿಹಾರದ ಪಾಟ್ನಾದ ರಿತೇಶಕುಮಾರ (35) ಪೊಲೀಸರ ಗುಂಡಿಗೆ ಬಲಿಯಾದ ವ್ಯಕ್ತಿಯಾಗಿದ್ದಾನೆ. ಆರೋಪಿ ವಶಕ್ಕೆ ಪಡೆದು ಆತನು ವಾಸಿಸುತ್ತಿದ್ದ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ಮಾಡುವ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಮಹಿಳಾ ಪಿಎಸ್ ಐ ಅನ್ನಪೂರ್ಣಾ ಅವರು ಮೊದಲು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದಾರೆ. ಆದರೂ ಸಹ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ. ನಂತರ ಮತ್ತೊಂದು ಗುಂಡು ಹಾರಿಸಿದಾಗ ಆತನ ಬೆನ್ನಿಗೆ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಚಿಕಿತ್ಸೆಗೆಂದು ಕೆಎಂಸಿಆರ್ ಐ ಆಸ್ಪತ್ರೆ ಕರೆತಂದಿದ್ದಾಗ ವೈದ್ಯರು ಮೃತ ಪಟ್ಟಿರುವುದಾಗಿ ಹೇಳಿದರು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.

ಬಾಲಕಿ ಕೊಲೆಗೈದಿದ್ದು ಹೇಗೆ?:
ಪಾಟ್ನಾದ ನಿವಾಸಿಯಾದ ಆರೋಪಿ ರಿತೀಶ್ ಕುಮಾರ ಬೆಳಿಗ್ಗೆ 10.40ರ ಸುಮಾರಿಗೆ ವಿಜಯನಗರದ ವಾಸವಾಗಿದ್ದ ಬಾಲಕಿಗೆ ತಿಂಡಿ ತಿನಿಸುಗಳ ನೀಡುವುದಾಗಿ ಪುಸಲಾಯಿಸಿ ಕರೆದಿದ್ದಾನೆ. ನಂತರ ಅವಳನ್ನು ಎತ್ತಿ ಹಾಕಿಕೊಂಡು ಎದುರಿನ ಮೆನೆಯಲ್ಲಿರುವ ಶೆಡ್ ಕರೆದೊಯ್ದು ಅಸಭ್ಯವಾಗಿ ವರ್ತಿಸಿದ್ದಾನೆ. ಬಳಿಕ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬಾಲಕಿ ಶವ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಆತನನ್ನು ಹಿಡಿದು ಅಶೋಕ ನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಾಲಕಿ ಕೊಲೆ ಖಂಡಿಸಿ ಪ್ರತಿಭಟನೆ:
ಬಾಲಕಿ ಕೊಲೆ ಮಾಡಿರುವ ಆರೋಪಿಯನ್ನು ಎನ್‌ಕೌಂಟರ್ ಮಾಡಬೇಕು. ಇಲ್ಲವೇ ನಮಗೆ ವಶಕ್ಕೆ ನೀಡಿ ಎಂದು ಆಗ್ರಹಿಸಿ ವಿವಿಧ ಸಂಘಟನೆಗಳಿಂದ‌ ಅಶೋಕ‌ ನಗರದ ಪೊಲೀಸ್ ಠಾಣೆ ಎದುರು ಸುಮಾರು ಐದು ತಾಸು ವಿವಿಧ ಸಂಘಟನೆಯವರು ತೀವ್ರ ಪ್ರತಿಭಟನೆ ನಡೆಸಿದರು. ನಗರದ ರಾಣಿ ಚನ್ನಮ್ಮ ವೃತ್ತ, ಕೆಎಂಸಿಆರ್ ಐ ಶವಾಗಾರ, ಕೆಎಂಸಿಆರ್ ಐ ಮುಖ್ಯ ದ್ವಾರ ಬಳಿ ಹುಬ್ಬಳ್ಳಿ ಧಾರವಾಡ ಮುಖ್ಯ ರಸ್ತೆ ಬಂದ್ ಮಾಡಿ, ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ಆಯುಕ್ತರಿಗೆ ಜಯಘೋಷ:
ಬಾಲಕಿ ಕೊಲೆ ಆರೋಪಿಯು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ ಎಂಬ ಸುದ್ದಿ ತಿಳಿಯುತ್ತಿದಂತೆ ಕೆಎಂಸಿಆರ್ ಐ ಆಸ್ಪತ್ರೆ ಎದುರು ಸೇರಿದ್ದ ಜನಸ್ತೋಮ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರ ಪರವಾಗಿ ಜಯಘೋಷ ಕೂಗಿ ಹರ್ಷೋದ್ಘಾರ ವ್ಯಕ್ತಪಡಿಸಿದರು. ಕೆಎಂಸಿಆರ್ ಐ ಆಸ್ಪತ್ರೆಗೆ ವಿಧಾನ ಪರಿಷತ್ ಮುಖ್ಯ ಸಂಚೇತಕ ಸಲೀಂ ಅಹ್ಮದ, ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಇತರೆ ಮುಖಂಡರು ಭೇಟಿ ನೀಡಿ ಆಯುಕ್ತರಿಗೆ ಅಭಿನಂದನೆ ಸಲ್ಲಿಸಿದರು.

Leave a Reply

Your email address will not be published. Required fields are marked *

Optimized by Optimole
error: Content is protected !!