ಹುಬ್ಬಳ್ಳಿ: ಬಾಲಕಿ ಕೊಲೆ ಆರೋಪಿಯನ್ನು ಗುಂಡಿಕ್ಕಿ ಕೆಡವಿದ ಲೇಡಿ ಸಿಂಗಮ್ PSI ಅನ್ನಪೂರ್ಣ.!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಶಿವಮೊಗ್ಗ: ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ಕಾರ್ಯಚರಣೆಯ ವೇಳೆ ಪೊಲೀಸರ ಎನ್ ಕೌಂಟರ್ ರಲ್ಲಿ ಬಲಿಯಾಗಿದ್ದಾನೆ.
ಬಿಹಾರ ಮೂಲದ ವಿಕೃತ ರಿತೇಶ್ ಎನ್ ಕೌಂಟರ್ ನಲ್ಲಿ ಹತ್ಯೆಯಾಗಿದ್ದಾನೆ. ಆರೋಪಿ ನಿನ್ನೆ ಬೆಳಿಗ್ಗೆ ಹುಬ್ಬಳ್ಳಿಯ ಅಶೋಕ ನಗರ ಠಾಣೆ ವ್ಯಾಪ್ತಿಯಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ 5 ವರ್ಷದ ಬಾಲಕಿಯನ್ನು ಚಾಕೋಲೆಟ್ ಆಸೆ ತೋರಿಸಿ ಹೊತ್ತೊಯ್ದ ಅತ್ಯಾಚಾರವೆಸಗಿ ಬಳಿಕ ಆಕೆಯನ್ನು ಕೊಂದು ಅಶೋಕನಗರದ ಪಾಳು ಮನೆಯ ಶೆಡ್ ನಲ್ಲಿ ಮೃತದೇಹವಿಟ್ಟು ಸ್ಥಳದಿಂದ ಪರಾರಿಯಾಗಿದ್ದ.
ಬಾಲಕಿಯನ್ನು ಮನೆಬಳಿಯಿಂದ ಹೊತ್ತೊಯ್ದ ದೃಶ್ಯ ಸಿಸಿಕ್ಯಾಮರದಾಲ್ಲಿ ಸೆರೆಯಾಗಿತ್ತು. ಇದನ್ನು ಆಧರಿಸಿ ಅಶೋಕನಗರ ಠಾಣೆ ಪೊಲೀಸರು ಕಾಮುಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ವಿಚಾರಣೆ ವೇಳೆ ಆರೋಪಿ ತಾನೇ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಕೃತ್ಯವೆಸಗಿದ್ದಾಗಿ ಒಪ್ಪಿಕೊಂಡಿದ್ದಾನೆ.
ಸ್ಥಳ ಮಹಜರು ನಡೆಸಲು ಆರೋಪಿಯನ್ನು ಬಾಲಕಿಯನ್ನು ಹತ್ಯೆಮಾಡಿದ ಸ್ಥಳಕ್ಕೆ ಕರೆದು ಕೊಂಡು ಹೋದ ಸಮಯದಲ್ಲಿ ಆರೋಪಿ ರಾಯನಾಳ ಸೇತುವೆ ಬಳಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಹಲ್ಲೆ ವೇಳೆ ಲೇಡಿ ಪಿಎಸ್ ಐ ಅನ್ನಪೂರ್ಣ ಅವರಿಗೆ ಗಾಯಗಳಾಗಿವೆ. ತಕ್ಷಣವೇ ಎಚ್ಚೆತ್ತುಕೊಂಡ ಪಿಎಸ್ಐ ಅನ್ನಪೂರ್ಣ ಮುಂದಾಗುವ ಅನಾಹುತ ಅರಿತು ಕೂಡಲೇ ಆತ್ಮರಕ್ಷಣೆಗಾಗಿ ತಮ್ಮ ಸರ್ವಿಸ್ ರಿವಲ್ವಾರ್ ತೆಗೆದು ಶರಣಾಗುವಂತೆ ಹೇಳಿ ಮೂರು ಸತ್ತು ಗಾಳಿಯಲ್ಲಿ ಗುಂಡುಹಾರಿಸಿದ್ದಾರೆ.ಆದರೆ ಆರೋಪಿ ಗುಂಡಿಗೂ ಜಗ್ಗದೆ ಮತ್ತೆ ಹಲ್ಲೆಗೆ ಮುಂದಾಗಿದ್ದಾನೆ ತಕ್ಷಣವೇ ಪಿಎಸ್ ಐ ಅನ್ನಪೂರ್ಣ, ಆರೋಪಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟು ಆರೋಪಿಯ ಬೆನ್ನಿಗೆ ತಗುಲಿದ್ದು, ಆತ ಸ್ಥಳದಲ್ಲೇ ಸುಡುಗಾಡು ಸೇರಿದ್ದಾನೆ.
ಬಾಲಕಿ ಕಿಡ್ನ್ಯಾಪ್ ಮಾಡಿ ಅತ್ಯಾಚಾರ ಹಾಗೂ ಕೊಲೆ ಮಾಡಿದ್ದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಹಿಡಿದು ಮಹಿಳಾ ಪಿಎಸ್ ಐ ಓರ್ವರು ಆರೋಪಿಯನ್ನು ಎನ್ ಕೌಂಟರ್ ನಲ್ಲಿ ಕೊಂದಿದ್ದು ಅವರ ಕರ್ತವ್ಯಕ್ಕೆ ಮೆಚ್ಚಿ ಸಂಪೂರ್ಣ ಭಾರತವೆ ಅವರನ್ನು ಕೊಂಡಾಡಿದ್ದಾರೆ.ಹಿರಿಯ ಅಧಿಕಾರಿಗಳು ರಾಜಕಾರಣಿಗಳು ಮತ್ತು ಪ್ರಜ್ಞಾವಂತರಿಂದ ಶ್ಲಾಘನೆ ವ್ಯಕ್ತವಾಗಿದೆ. ಅತ್ಯಾಚಾರಿ ಒಬ್ಬನನ್ನು ಎನ್‌ಕೌಂಟರ್ ನಲ್ಲಿ ಕೊಂದು ಮುಗಿಸಿದ್ದು ಇತರ ಆರೋಪಿಗಳಿಗೂ ಪಾಠವಾಗಿದೆ. ಅಲ್ಲದೇ ಲೇಡಿ ಪಿಎಸ್ ಐ ಕಾರ್ಯಕ್ಕೆ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮಾತ್ರವಲ್ಲ ರಾಜ್ಯಾ ರಾಷ್ಡ್ರಾದ್ಯಂತ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ…
ಪಿಎಸ್‌ಐ ಅನ್ನಪೂರ್ಣ ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ರೈತ ಕುಟುಂಬದಿಂದ ಬಂದವರು. ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಂತವರು.! ತಾಯಿ ನೆರವಿನಿಂದ ವಿದ್ಯಾಭ್ಯಾಸ ಮಾಡಿ ಎಂಎಸ್‌ಸಿ ಪದವಿಯಲ್ಲಿ ಚಿನ್ನದ ಪದಕಪಡೆದ ಪ್ರತಿಭಾವಂತ ವಿದ್ಯಾರ್ಥಿನಿ. ತನ್ನ ಬಯಕೆಯಂತೆ ಪೊಲೀಸ್ ಇಲಾಖೆಗೆ ಸೇರಿ ಈಗ ಪಿಎಸ್‌ಐ ಆಗಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.