ಬಾವಿ ಅಳಿಯನೊಂದಿಗೆ ಓಡಿ ಹೋಗಿದ್ದ ಅತ್ತೆ ವಾಪಸ್.!ಆಕೆ ಹೇಳಿದ್ದು ಏನು.?
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಉತ್ತಮ ಪ್ರದೇಶ : ಇದು ಅತ್ತೆ ಬಾವಿ ಅಳಿಯನ ಲವ್ ಸ್ಟೋರಿ.!
ನಾನು ಅಳಿಯ ರಾಹುಲ್‌ನನ್ನು ಇನ್ನೂ ಮದುವೆಯಾಗಿಲ್ಲ ಅಂತ ಅತ್ತೆ ಅನಿತಾ ಅಲಿಯಾಸ್ ಸ್ವಪ್ನಾ ಪೊಲೀಸ್ ಠಾಣೆಯಲ್ಲಿ ಹೇಳಿದ್ದಾಳೆ. ನಾನು ಆತನ ಜೊತೆ ಮನೆ ಬಿಟ್ಟು ಹೋಗಿದ್ದು ನಿಜ.!ಆದರೆ ಇಬ್ಬರೂ ಬಿಹಾರದ ನೇಪಾಳ ಗಡಿಗೆ ಹೋಗಿದ್ವಿ. ಆದರೆ ನನ್ನ ಪತಿ ಹಾಗೂ ಕುಟುಂಬದ ಸದಸ್ಯರು ನಾನು 3.5 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಅಂತ ಹೇಳಿದ್ದಾಳೆ.

ಗಂಡನ ವಿರುದ್ಧ ಗಂಭೀರ ಆರೋಪ
ನಾನು ರಾಹುಲ್ ಜೊತೆ ಮನೆ ಬಿಟ್ಟು ಹೋಗುವಾಗ ಕಾಲಿಗೆ ಕಾಲುಂಗುರ ಧರಿಸಿ, ಕುತ್ತಿಗೆಗೆ ಮಂಗಳಸೂತ್ರ ಧರಿಸಿ ಹೋಗಿದ್ದೆ ಎಂದಿದ್ದಾಳೆ. ಇನ್ನೂ ತನ್ನ ಗಂಡ ಜೀತೇಂದ್ರ ವಿರುದ್ಧ ಸಪ್ನಾ ಆರೋಪ ಮಾಡಿದ್ದಾಳೆ. ನನ್ನ ಗಂಡ 1500 ರೂಪಾಯಿಗಾಗಿ ನನ್ನನ್ನು ಕ್ರೂರವಾಗಿ ಹೊಡೆದಿದ್ದ. ಬೆಳಿಗ್ಗೆಯಿಂದ ಸಂಜೆಯವರೆಗೆ ಮದ್ಯಪಾನ ಮಾಡುತ್ತಾನೆ. ಅವರು ಆರು ತಿಂಗಳು ಮನೆಯಲ್ಲಿಯೇ ಇರುತ್ತಾರೆ. ದುಡಿದರೂ ಮನೆಗೆ ಅಂತ ಏನನ್ನೂ ಕೊಡೋದಿಲ್ಲ ಎಂದಿದ್ದಾಳೆ.
ಅಳಿಯನ ಜೊತೆ ಮಾತನಾಡುವಂತೆ ಗಂಡನೇ ಹೇಳುತ್ತಿದ್ದ
ಇಲ್ಲಿಯವರೆಗೆ ಆ ಮನುಷ್ಯನಿಗೆ ಮನೆ ಕಟ್ಟಲು ಸಾಧ್ಯವಾಗಿಲ್ಲ. ಅವನು ತನ್ನ ಜೀವನದಲ್ಲಿ ಏನನ್ನು ಮಾಡಲು ಸಾಧ್ಯವಿಲ್ಲ.? ಅವನು 1500 ರೂಪಾಯಿಗಳನ್ನು ಕೊಟ್ಟರೆ ಅದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾನೆ. ಹಣ ಎಲ್ಲಿಗೆ ಹೋಯಿತು, ನೀವು ಅದನ್ನು ಎಲ್ಲಿ ಖರ್ಚು ಮಾಡಿದ್ದೀರಿ ಎಂದು ಅವನು ಕೇಳುತ್ತಾನೆ ಅಂತ ಸಪ್ನಾ ಹೇಳುತ್ತಾ ಕಣ್ಣೀರಿಟ್ಟಿದ್ದಾಳೆ. ನನ್ನ ಗಂಡ ಹೇಳುತ್ತಿದ್ದರು ಅವಳು ತನ್ನ ಜೊತೆ ಮಾತನಾಡೋದಿಲ್ಲ, ಆದರೆ ಅಳಿಯನ ಜೊತೆ ಮಾತನಾಡುತ್ತಾಳೆ ಅಂತ ಆರೋಪಿಸುತ್ತಿದ್ರು. ನೀನು ನಿನ್ನ ಅಳಿಯನ ಜೊತೆ ಓಡಿಹೋಗು ಎಂದು ಗಂಡನೆ ನನಗೆ ಹೇಳುತ್ತಿದ್ದ ಎಂದು ಆಕೆ ಹೇಳಿದ್ದಾಳೆ.!
ಅಳಿಯನ ಜೊತೆ ಓಡಿಹೋಗುವಂತೆ ಗಂಡ ಹೇಳುತ್ತಿದ್ದ
ನಾನು ನನ್ನ ಅಳಿಯ ಜೊತೆ ಮಾತನಾಡುವುದಿಲ್ಲ ಅಂತ ಹೇಳಿದೆ, ನಂತರ ಅವನು ಪ್ರತಿ ದಿನ ನನ್ನ ಅಳಿಯನ ಜೊತೆ ಓಡಿ ಹೋಗುವಂತೆ ಕೇಳಲು ಪ್ರಾರಂಭಿಸಿದನು. ಅವನು ನನ್ನನ್ನು ಕೆಟ್ಟದಾಗಿ ನಿಂದಿಸಿದನು. ನಾನು ಹತಾಶೆಯಿಂದ ಈ ಹೆಜ್ಜೆ ಇಟ್ಟಿದ್ದೇನೆ. ಈಗ ನನ್ನ ಜೀವನದಲ್ಲಿ ಯಾರೇ ಬಂದರೂ, ನಾನು ಅವರೊಂದಿಗೆ ಇರುತ್ತೇನೆ. ನನ್ನನ್ನು ಬಿಟ್ಟುಬಿಡಿ ಅಂತ ಸಪ್ನಾ ಕಣ್ಣೀರು ಹಾಕಿದ್ದಾಳೆ.
ನಾನು ರಾಹುಲ್ ಜೊತೆಗೇ ಬದುಕುತ್ತೇನೆ
ನಾನು ರಾಹುಲ್ ಜೊತೆ ಇರುತ್ತೇನೆ’ ಎಂದು ಅನಿತಾ ಹೇಳಿದ್ದಾಳೆ. ಅಲಿಘರ್ ಪೊಲೀಸರು ನಮ್ಮನ್ನು ಬೆನ್ನಟ್ಟುತ್ತಿದ್ದಾರೆಂದು ತಿಳಿದಾಗ, ನಾವು ಹಿಂತಿರುಗಿದೆವು. ಪೊಲೀಸರಿಂದ ತಪ್ಪಿಸಿಕೊಳ್ಳಲು ನಾನು ಎಲ್ಲಿಗೆ ಹೋಗಲಿ, ಹಾಗಾಗಿ ನಾನು ಹಿಂತಿರುಗಿದೆ. ವಿಚ್ಛೇದನ ಇರಲಿ, ಇಲ್ಲದಿರಲಿ, ನಾನು ಈಗ ರಾಹುಲ್ ಜೊತೆ ಮಾತ್ರ ಇರುತ್ತೇನೆ ಅಂತ ಸಪ್ನಾ ಹೇಳಿದ್ದಾಳೆ.
ಅತ್ತೆಯೊಂದಿಗೆ ಇರುವುದಾಗಿ ಅಳಿಯನ ಹೇಳಿಕೆ
ಅತ್ತ ಆಕೆ ತನ್ನ ಮನೆಯಿಂದ ತನ್ನ ಮೊಬೈಲ್ ಮತ್ತು 200 ರೂಪಾಯಿಗಳನ್ನು ಮಾತ್ರ ತೆಗೆದುಕೊಂಡು ಬಂದಿದ್ದಾಳೆ. ಇದನ್ನು ಬಿಟ್ಟರೆ ಅವಳು ತನ್ನೊಂದಿಗೆ ಬೇರೇನನ್ನೂ ತೆಗೆದುಕೊಂಡು ಬಂದಿಲ್ಲ. ನಾನು ಆಕೆಯ ಜೊತೆಯೇ ಇರುತ್ತೇನೆ ಅಂತ ಅಳಿಯ ರಾಹುಲ್ ಕೂಡ ಹೇಳಿದ್ದಾನೆ.


