ತೀರ್ಥಹಳ್ಳಿ: ಕೋಟಿ ಕೋಟಿ ಹಣವಿದೆ ಎಂದು ದರೋಡೆಗೆ ಹೋದವರಿಗೆ ಸಿಕ್ಕಿದ್ದು 50,000 ಸಾವಿರ ರೂಪಾಯಿ.! ದರೋಡೆಗೆ ಹೋದ ಪ್ರಮುಖ ಆರೋಪಿಗೆ ಪೊಲೀಸರ ಗುಂಡೇಟು.!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ತೀರ್ಥಹಳ್ಳಿ : ಕಳೆದ ಏಪ್ರಿಲ್ 5 ರಾತ್ರಿ ಸುಮಾರು 9:45 ಆಸುಪಾಸಿನಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಮಹಿಷಿ ಗ್ರಾಮದ ಉತ್ತರಾಧಿ ಮಠದಕ್ಕೆ ದರೋಡೆಕೋರರ ಗ್ಯಾಂಗ್ ಒಂದು ಲಗ್ಗೆಹಾಕಿದೆ.
ಸುಮಾರು 12 ರಿಂದ 15 ದರೋಡೆ ಕೋರರ ತಂಡ ಮಠದ ಒಳನುಗ್ಗಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕುಮಾರ ಆಚಾರ್ಯ ಮತ್ತು ಮಠದಲ್ಲಿದ್ದರವನ್ನು ಹೆದರಿಸಿ, ಹಲ್ಲೆ ಮಾಡಿ ಮಠದಲ್ಲಿದ್ದ 50,000 ರೂಪಾಯಿ ಹಣವನ್ನು ಮತ್ತು ಮಠದಲ್ಲಿ ಅಳವಡಿಸಿದ್ದ ಸಿ. ಸಿ ಟಿ ವಿಯ ಡಿವಿಆರ್, ಲ್ಯಾಪ್ ಟಾಪ್, ಮೊಬೈಲ್ ಫೋನ್ ಗಳನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾರೆ.
ಈ ಸಂಬಂಧ ತಕ್ಷಣವೇ ಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದವರು ಮಾಳೂರು ಠಾಣೆಯಲ್ಲಿ ದೂರುದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಮಾಳುರು ಠಾಣೆಯ ಪೊಲೀಸರು, ಗುನ್ನೆ ನಂ.46/2025 ಕಲಂ 329(4), 310(2), 324(4), 352, 118(1), 351(2) ಬಿ.ಎನ್.ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ದರೋಡೆಕೋರರನ್ನು ಹೆಡೆಮುರಿಕಟ್ಟಲು ಮುಂದಾಗಿದ್ದರು.
ದರೋಡೆ ನೆಡೆದ ಮಹಿಷಿ ಮಠದಲ್ಲಿ ಸ್ಥಳ ಪರಿಶೀಲನೆ ನೆಡೆಸುತ್ತಿರುವ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಜಿ ಕೆ ಮಿಥುನ್ ಕುಮಾರ್ ಐಪಿಎಸ್ ಸಾರಥ್ಯದ ಪೊಲೀಸರ ತಂಡ
ಸದರಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಶಿವಮೊಗ್ಗ ಜಿಲ್ಲಾ ಅಧೀಕ್ಷಕರಾದ ಜಿ ಕೆ ಮಿಥುನ್ ಕುಮಾರ್ ಐಫಿಎಸ್ ಅವರ ಮಾರ್ಗದರ್ಶನದಲ್ಲಿ ಏಪ್ರಿಲ್ 6 ರಂದು ಪೊಲೀಸರ ನಾಲ್ಕು ತಂಡಗಳನ್ನು ರಚಿಸಲಾಗಿತ್ತು ಸದರಿ ತಂಡಗಳು ಕಾರ್ಯಾಚರಣೆಗೆ ಇಳಿದು ಒಂದಷ್ಟು ಮಂದಿ ದರೋಡೆ ಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಈವರೆಗಿನ ಕಾರ್ಯಚರಣೆಯಲ್ಲಿ ದೊರೆತ ಮಾಹಿತಿಯಂತೆ ಈ ಪ್ರಮಾಣಕ ಸಂಬಂದಿಸಿದಂತೆ ಒಟ್ಟು 21 ಜನ ಆರೋಪಿತರು ಭಾಗಿಯಾಗಿರುವುದು ಕಂಡು ಬಂದ ಹಿನ್ನಲೆಯಲ್ಲಿ ಅವರನ್ನು ಪತ್ತೆ ಮಾಡುವ ಕುರಿತಂತೆ ಪೊಲೀಸರ ತಂಡ ವಿವಿಧ ರೀತಿಯ ಕಾರ್ಯತಂತ್ರ ರೂಪಿಸಿ ಈಗಾಗಲೇ ಶಿಕಾರಿಪುರ, ಆನಂದಪುರ, ಹೊಸನಗರ ಮೂಲದ 12 ಜನ ಆರೋಪಿತರನ್ನು ವಿವಿಧ ಹಂತಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿತರ ವಿವರ.?
- 1) ಸುರೇಶ @ ನೇರಲೆ ಸುರೇಶ,
- 2) ಸತೀಶ @ ಸತ್ಯ ನಾರಾಯಣ,
- 3) ಪೃಥ್ವಿರಾಜ್,
- 4) ಸಿರಿ @ ಶ್ರೀಕಾಂತ,
- 5) ಅಭಿಲಾಷ್ @ ಅಭಿ,
- 6) ರಾಕೇಶ,
- 7) ಭರತ @ ಚಿಟ್ಟೆ,
- 8) ಪವನ @ ಗಿಡ್ಡ ಪವನ್,
- 9) ರಮೇಶ್ @ ನವೀನ್,
- 10) ನವೀನ್ ಕುಮಾರ್ @ ಡೈಮಂಡ್ ನವೀನ್,
- 11) ದರ್ಶನ್,
- 12) ಕರಿಬಸಪ್ಪ ಆರ್ ಇವರುಗಳನ್ನು ದಸ್ತಗಿರಿ ಮಾಡಿರುತ್ತಾರೆ.
ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿತನಾದ ಶ್ರೀನಿವಾಸ @ ಸೀನ ಈತನನ್ನು ವಶಕ್ಕೆ ಪಡೆಯಲು ಹೋದ ಮಾಳೂರು ಠಾಣಾ ಪಿಎಸ್ಐ ಕುಮಾರ್ ಕುರಗುಂದ ಮತ್ತು ಸಿಬ್ಬಂದಿಯವರ ಮೇಲೆ ಆರೋಪಿತ ತಪ್ಪಿಸಿಕೊಳ್ಳುವ ಸಲುವಾಗಿ ಮಚ್ಚಿನಿಂದ ಪೊಲೀಸ್ ಸಿಬ್ಬಂದಿ ಸಿಪಿಸಿ ಸಂತೋಷ್ ಕುಮಾರ್ ಮೇಲೆ ಹಲ್ಲೆ ಮಾಡಿ ಗಾಯಗೋಳಿಸಿದ್ದರಿಂದ ಮುಂದಾಗುವ ಅನಾಹುತವನ್ನು ಅರಿತ ಪಿಎಸ್ಐ
ರವರು ಕುಮಾರ್ ಕುರಗುಂದ ಅವರು ಆತ್ಮರಕ್ಷಣೆಗಾಗಿ ಸರ್ವಿಸ್ ಪಿಸ್ತೂಲ್ ನಿಂದ ದಾಳಿಗೆ ಮುಂದಾಗಿದ್ದ ಆರೋಪಿತನ ಮೇಲೆ ಗುಂಡು ಹಾರಿಸಿದ್ದರೆ.! ಆರೋಪಿತನ ಕಾಲಿಗೆ ಗುಂಡು ತಗುಲಿ ಆತ ಸ್ಥಳದಲ್ಲೆ ಕುಸಿದುಬಿದ್ದಿದ್ದಾನೆ.
ತಕ್ಷಣವೇ ಗಾಯಾಳುವನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೂ ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಕೂಡ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಕಂಡ ಆರೋಪಿತರನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಬಳಸಿದ
1) ಕೆಎ-51- ಎಬಿ- 5604 ನೊಂದಣಿ ಸಂಖ್ಯೆಯ ಟಿಟಿ ವಾಹನ, ಅಂದಾಜು ಮೌಲ್ಯ 10 ಲಕ್ಷರೂಪಾಯಿ.
2) ಕೆಎ-01- ಎಂಜಿ- 2700 ನೊಂದಣಿ ಸಂಖ್ಯೆಯ ಮಹೀಂದ್ರ ಸ್ಕಾರ್ಪಿಯೋ ಕಾರು, ಅಂದಾಜು ಮೌಲ್ಯ 04 ಲಕ್ಷರೂಪಾಯಿ ಇವುಗಳನ್ನು ವಶಪಡಿಸಿಕೊಂಡಿದ್ದು
ಇನ್ನೂ ಈ ಕೃತ್ಯಕ್ಕೆ ಬಳಸಿದ ಆಯುಧ ಮತ್ತು ಇನ್ನಿತರ ವಸ್ತುಗಳನ್ನು ವಶ ಪಡಿಸಿಕೊಳ್ಳಬೇಕಾಗಿದೆಇನ್ನು ಹೆಚ್ಚಿನ ತನಿಖೆ ಮುಂದುವರೆದಿದೆ.
ಮಾನ್ಯ ಪೊಲೀಸ್ ಅಧೀಕ್ಷಕರು ಸದರಿ ಕಾರ್ಯವನ್ನು ಪ್ರಶಂಸಿಸಿ ಕಾರ್ಯಾಚರಣೆ ತಂಡಕ್ಕೆ ಬಹುಮಾನವನ್ನು ಘೋಷಿಸಿ ಅಭಿನಂದನೆ ಸಲ್ಲಿಸಿರುತ್ತಾರೆ.