ತಿರುಪ್ಪೋರಿನ ಪೆರಿಯಪಾಳ್ಯಂ ನಿವಾಸಿ 35 ವರ್ಷದ ಚಾಣಕ್ಯ ಅಲಿಯಾಸ್ ಜಾನ್ ಹತ್ಯೆಯಾದ ರೌಡಿಶೀಟರ್. ಸೇಲಂನಾದ್ಯಂತ ಹಲವಾರು ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಅನೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆಯಂತೆ. ಆತ ವಾಹನ ಮಾರಾಟ ಮತ್ತು ಫೈನಾನ್ಸ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ.
ವರದಿಗಳ ಪ್ರಕಾರ ಜಾನ್ ತನ್ನ ಪತ್ನಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ತಮ್ಮ ಕಾರಿನಲ್ಲಿ ಬೆನ್ನತ್ತಿ ಬಂದ ಹಂತಕರು ಹಿಂದಿನಿಂದ ಜಾನ್ನ ಕಾರಿಗೆ ಡಿಕ್ಕಿ ಹೊಡೆದು ನಿಲ್ಲುವಂತೆ ಮಾಡಿದ್ದಾರೆ. ನಂತರ ನಾಲ್ವರು ವ್ಯಕ್ತಿಗಳು ಕಾರಿನಿಂದ ಹೊರಬಂದು ಆತನ ಪತ್ನಿ ಶರಣ್ಯಳನ್ನು ಪಕ್ಕಕ್ಕೆ ತಳ್ಳಿ ಜಾನ್ ಮೇಲೆ ಮನಬಂದಂತೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಶರಣ್ಯಾ ತನ್ನ ಪತಿಯನ್ನು ಬಿಟ್ಟು ಬಿಡುವಂತೆ ಎಷ್ಟೇ ಅಂಗಲಾಚಿದರೂ ಹಂತಕರ ತಂಡ ದಾಳಿಯನ್ನು ಮುಂದುವರಿಸಿದ್ದಾರೆ.
ತಮಿಳುನಾಡು||ಹಾಡಹಗಲೇ ಹೈವೇಯಲ್ಲಿ ಭೀಕರ ಕೃತ್ಯ.! ಹಂತಕರ ಲಾಂಗಿನೇಟಿಗೆ ಪತ್ನಿಯ ಎದುರಲ್ಲೆ ಉಸಿರು ಚಲ್ಲಿದ ರೌಡಿಶೀಟರ್.!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ: ತಮಿಳುನಾಡಿನ ಸೇಲಂ-ನಾಸಿಯಾನೂರು ಹೆದ್ದಾರಿಯಲ್ಲಿ ಹಾಡಹಗಲೇ ಭೀಕರ ಮರ್ಡರ್ ನಡೆದಿದೆ. ತನ್ನ ಪತ್ನಿಯೊಂದಿಗೆ ಕಾರಿನಲ್ಲಿ ಹೊಗುತ್ತಿದ್ದ ವೇಳೆ ರೌಡಿ ಶೀಟರ್ ಒಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಭೀಕರ ದಾಳಿಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದಥಳದಲ್ಲಿದ್ದ ಜನರು ಭಯಭೀತರಾಗಿ ನೋಡುತ್ತಿದ್ದಂತೆ ರೌಡಿಶೀಟರ್ ಹಂತಕರ ದಾಳಿಗೆ ರಕ್ತದ ಮಡುವಿನಲ್ಲಿ ಉಸಿರು ಚಲ್ಲಿದ್ದಾನೆ.
ತಿರುಪ್ಪೂರಿನ ಪೆರಿಯಪಾಳ್ಯಂ ನಿವಾಸಿಯಾದ 35 ವರ್ಷದ ಚಾಣಕ್ಯ ಅಲಿಯಾಸ್ ಜಾನ್ ಹತ್ಯೆಯಾದ ರೌಡಿಶೀಟರ್. ಸೇಲಂನಾದ್ಯಂತ ಕೆಲವು ಪೊಲೀಸ್ ಠಾಣೆಗಳಲ್ಲಿ ಹತ್ಯೆಯಾದ ರೌಡಿಶೀಟರ್ ವಿರುದ್ಧ ಅನೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆಯಂತೆ. ವಾಹನ ಮಾರಾಟ ಮತ್ತು ಸಾಲದ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ. ಜಾನ್ನ ಕಾರಿಗೆ ಹಂತಕರ ಗ್ಯಾಂಗ್ ಆತನ ಕಾರನ್ನು ಹಿಂಬಾಲಿಸಿಕೊಂಡು ಬಂದು ಹಿಂದಿನಿಂದ ಆತನ ಕಾರಿಗೆ ಡಿಕ್ಕಿ ಹೊಡೆದು ನಾಸಿಯಾನೂರು ಬಳಿ ನಿಲ್ಲುವಂತೆ ಮಾಡಿದ್ದಾರೆ.ತಕ್ಷಣವೇ ನಾಲ್ವರು ವ್ಯಕ್ತಿಗಳು ಕಾರಿನಿಂದ ಹೊರಬಂದು ಆತನ ಪತ್ನಿ ಶರಣ್ಯಳನ್ನು ಪಕ್ಕಕ್ಕೆ ತಳ್ಳಿ ಚಾಣಕ್ಯನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ತನ್ನ ಪತಿಯ ಜೀವ ಉಳಿಸುವಂತೆ ಶರಣ್ಯ ಎಷ್ಟೇ ಬೇಡಿಕೊಂಡರೂ ಹಂತಕರ ಗ್ಯಾಂಗ್ ಮನಬಂದಂತೆ ದಾಳಿಮಾಡಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಜಾನ್ ಸ್ಥಳದಲ್ಲೇ ಹೆಂಡತಿಯ ಎದುರಲ್ಲೆ ಸಾವಿನ ಮನೆ ಸೇರಿದ್ದಾನೆ, ಬಳಿಕ ಹಂತಕರ ತಂಡ ಸ್ಥಳದಿಂದ ಪರಾರಿಯಾಗುದ್ದಾರೆ.
ಘಟನಾ ಸ್ಥಳಕ್ಕೆ ಸಿತೋಡು ಪೊಲೀಸರು ಆಗಮಿಸಿ ಮೃತದೇಹವನ್ನು ಪೆರುಂದುರೈ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ತಕ್ಷಣವೇ ಹಂತಕರ ಹೆಡೆಮುರಿಕಟ್ಟಲು ಪೋಲಿಸರು ಕಾರ್ಯಚರಣೆಗೆ ಇಳಿದು ಮೂವರು ಆರೋಪಿಗಳಾದ ಸರೀಶ್, ಶರವಣನ್ ಮತ್ತು ಭೂಪಾಲನ್ ಅವರನ್ನು ಬೆನ್ನಟ್ಟಿ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕನೇ ಶಂಕಿತ ಕಾರ್ತಿಕ್ನನ್ನು ನಂತರ ಬಂಧಿಸಿದ್ದಾರೆ,ಈ ಹತ್ಯೆಯ ಹಿಂದಿನ ಕಾರಣವನ್ನು ಕಲೆಹಾಕಲು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದು ಈ ಹತ್ಯೆ ಹಿಂದಿನ ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.