50 ವರ್ಷ ಅಯ್ತು ಕಂದ ನಿನಗೆ ಒಂದ್ಸಲ ಬಂದು ನನ್ನ ನೋಡ್ಕೊಂದು ಹೋಗು: ಪುನೀತ್ ರಾಜ್ಕುಮಾರ್ ಬಗ್ಗೆ ಸೋದರತ್ತೆ ಹೇಳಿದ್ದು..
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಗಾಜನೂರು : ಪುನೀತ್ ರಾಜ್ಕುಮಾರ್ ಅವರ 50ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಸೋದರ ಅತ್ತೆ ನಾಗಮ್ಮ ವಿಶೇಷವಾಗಿ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳಿದ್ದಾರೆ. ಅಪ್ಪು ನಿನಗೆ 50 ವರ್ಷ ಆಯಿತೇ? ಅಂತಲೂ ಆಶ್ಚರ್ಯಪಟ್ಟಿದ್ದಾರೆ. ಆದರೆ, ನಾಗಮ್ಮ ಅವರಿಗೆ ಅಪ್ಪು ಅಂದರೆ ಪಂಚ ಪ್ರಾಣ. ಅಪ್ಪು ಅವರು ಮರಣ ಹೊಂದಿರುವುದು ಅವರಿಗೆ ಗೊತ್ತೇ ಇಲ್ಲ.ಅವರಿಗೆ ತಿಳಿದರೆ ಸಹಿಸಿಕೊಳ್ಳುವ ಶಕ್ತಿ ಅವರಿಗಿಲ್ಲ ಎನ್ನುವ ಕಾರಣಕ್ಕೆ ಕುಟುಂಬಸ್ಥರು ಅವರಿಗೆ ಅಸಲಿ ವಿಚಾರ ತಿಳಿಸದೆ ಇಲ್ಲಿಯ ವರೆಗೂ ಕಾಪಾಡಿಕೊಂಡು ಬಂದಿದ್ದಾರೆ.! ಅಪ್ಪುಗೆ ಹುಟ್ಟುಹಬ್ಬದ ಶುಭ ಕೋರಿರುವ ಹಿರಿಯ ಜೀವ ನಾಗಮ್ಮ ಅವರ ವಿಡಿಯೋ ಫ್ಯಾನ್ಸ್ ಪೇಜ್ಗಳಲ್ಲಿ ಇದೀಗ ವೈರಲ್ ಆಗುತ್ತಿದೆ.
ನಿನಗೆ 50 ವರ್ಷ ಆಯ್ತಾ..ಅಬ್ಬಾ ಚೆನ್ನಾಗಿದಿಯಾ ಮಗನೇ? ಎಂದಿದ್ದಾರೆ. ನಿನ್ನ ಇನ್ನೂ ಮಗು ಅಂದುಕೊಂಡಿದ್ದೇನೆ ನಾನು.ನಿನು ನನ್ನನ್ನ ಒಂದ್ ಸಾರಿ ಬಂದು ನೋಡ್ಕೊಂಡ್ ಹೋಗು ಕಂದಾ. ನಿನಗೆ 50 ವರ್ಷ ಆಯ್ತಲ್ಲೋ ಎಂದು ಅವರು ಮಾತನಾಡಿದ್ದಾರೆ. ಅಪ್ಪುಗೆ 50 ವರ್ಷ ತುಂಬಿತು ಎಂದು ತಿಳಿದಾಗ ಖುಷಿಯಿಂದ ಸೋದರ ಅತ್ತೆ ನಾಗಮ್ಮ ಶುಭಹಾರೈಸಿದ್ದಾರೆ.
ಅದಷ್ಟೇ ಅಲ್ಲ, ವಿಡಿಯೋದಲ್ಲಿ ಅಪ್ಪು ಬಗೆಗಿನ ಒಂದು ಘಟನೆಯನ್ನ ನಾಗಮ್ಮ ನೆನಪಿಸಿಕೊಂಡಿದ್ದಾರೆ. ಅಪ್ಪು ಬಂದಾಗ ಫ್ಯಾನ್ಸ್ ಮನೆ ಬಳಿ ಬಂದರು. ಎಲ್ಲರೂ ಬಂದವರೇ ಫೋಟೋಗಳನ್ನೆ ತೆಗೆಸಿಕೊಂಡ್ರು. ಆ ದಿನ ಶೂಟಿಂಗ್ ಮಾಡೋಕೂ ಬಿಡಲೇ ಇಲ್ಲ. ಬರೀ ಫೋಟೋ ತೆಗೆಸಿಕೊಳ್ಳುವುದೇ ಆಯಿತು ನೋಡಿ ಅಂತಲೇ ನಾಗಮ್ಮ ಹೇಳಿಕೊಂಡಿದ್ದಾರೆ. ಇನ್ನೂ ಅಪ್ಪು ಮೇಲಿನ ಅವರ ಪ್ರೀತಿ ನೋಡಿದ್ರೆ ಎಂತಹವರಿಗೂ ಹೃದಯವು ಒಮ್ಮೆ ಮರುಗದೆ ಇರದು.!
ದುರಾದೃಷ್ಟವಶಾತ್ ಪುನೀತ್ ರಾಜ್ಕುಮಾರ್ ಅವರು ತಮ್ಮ 46ನೇ ವಯಸ್ಸಿಯಲ್ಲಿ ನಿಧನರಾದರು. ಅಕ್ಟೋಬರ್ 2, 2021ರಂದು ಅಪ್ಪು ಇಹಲೋಕ ತ್ಯಜಿಸಿದರು.
REGISTRATION LINK
https://www.sirmveducation.com/SET_Registration