NEET SUCCESSFUL JOURNEY : 2019 ರಲ್ಲಿ NEET ಪರೀಕ್ಷೆಯಲ್ಲಿ ಫೇಲ್.2020 ರಲ್ಲಿ 720 ಕ್ಕೆ 680. ದೆಹಲಿ ಏಮ್ಸ್ ವೈದ್ಯಕೀಯ ಕಾಲೇಜಿಗೆ ಪ್ರವೇಶ.!
ಮಗಳಿಗೆ ಫೋನ್ ಕೊಡಿಸಲು ಸಾಲ ಮಾಡಿದ್ದ ತಂದೆ; ತಂದೆಯ ಕನಸನ್ನು ನನಸುಮಾಡಿದ ಮಗಳು NEET ಪರೀಕ್ಷೆಯಲ್ಲಿ ಪಾಸ್ ಆಗಿ ದೆಹಲಿಯ ಏಮ್ಸ್ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದಳು.!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ: ಪ್ರತಿಯೊಬ್ಬ ವಿಧ್ಯಾರ್ಥಿಯು ಓದಬೇಕಾದ ವಿಧ್ಯಾರ್ಥಿನಿಯೊಬ್ಬಳ ನೈಜ ಕಥೆ.! ನಾವು ಹೇಳ ಹೊರಟಿರುವುದು ಚಾರುಲ್ ಹೊನಾರಿಯಾ ಎಂಬ ವಿಧ್ಯಾರ್ಥಿನಿಯ ನೀಟ್ ಯಶಸ್ಸಿನ ನೈಜ ವರದಿ…. NEET SUCCESSFUL JOURNEY.! ಪಿಯುಸಿ ಸೈನ್ಸ್ ವಿಧ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯಲ್ಲಿ (NEET Exam) ಪಾಸ್ ಆಗಬೇಕು ಅನ್ನೋದು ಬಹುದೊಡ್ಡ ಕನಸಾಗಿದೆ. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯುತ್ತಾರೆ. ಇದೊಂದು ಆಫ್ಲೈನ್ ಪರೀಕ್ಷೆಯಾಗಿದ್ದು (Offline Exam), ಇದರಲ್ಲಿ ಪಾಸ್ ಆಗುವುದು ಅಷ್ಟು ಸುಲಭದ ಮಾತಲ್ಲ. ಆದರೂ ಕೆಲವು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಜಯಶಾಲಿಗಳಾಗಿ ಹೊರಹೊಮ್ಮುವ ಮೂಲಕ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ (Inspired). ಇಲ್ಲು ಕೂಡ ನಾವು ವರದಿ ಮಾಡಲು ಮುಂದಾಗಿರುವುದು ಬಡ ಕುಟುಂಬದಿಂದ ಬಂದ ವಿದ್ಯಾರ್ಥಿನಿಯೊಬ್ಬಳು ಉತ್ತಮ ಅಂಕ ಪಡೆದು ಸಾಧನೆ ಮಾಡಿರುವ ಸಾಧಕಿಯ ಕಥೆ.!
ನೀಟ್- ಯುಜಿ (NEET-UG) ಪರೀಕ್ಷೆ ಅಂದರೆ ಭಾರತದ ಏಕೈಕ ದೊಡ್ಡ ಪದವಿಪೂರ್ವ ವೈದ್ಯಕೀಯ ಪ್ರವೇಶ ಪರೀಕ್ಷೆ. ಇದರಲ್ಲಿ ಉತ್ತೀರ್ಣರಾಗಬೇಕು ಅಂದರೆ ಪರಿಶ್ರಮ, ಅಭ್ಯಾಸ ಮತ್ತು ಸವಲತ್ತುಗಳು ಕೂಡ ಮುಖ್ಯವಾಗುತ್ತೆ. ಬಡ ಕುಟುಂಬದಿಂದ ಬಂದ ಅನೇಕ ಮಕ್ಕಳು ತಮ್ಮ ಕಠಿಣ ಪರಿಶ್ರಮದಿಂದ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಮ್ಮ ವಿದ್ಯಾರ್ಥಿ ಜೀವನದ ಯಶಸ್ಸಿನ ಹಾದಿಯಲ್ಲಿ ಹೆಜ್ಜೆಹಾಕಿದ್ದಾರೆ. ಅಂತವರಲ್ಲಿ ಚಾರುಲ್ ಹೊನಾರಿಯಾ ಕೂಡ ಒಬ್ಬರು.
ಚಾರುಲ್ ಹೊನಾರಿಯಾ ಅವರ ಸಾಧನೆಯ ಒಂದಷ್ಟು ವಿಷಯಗಳು ನಿಮ್ಮ ಮುಂದಿಡುವ ಪ್ರಯತ್ನ.!ಇದು ನೀಟ್ ವಿಧ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಕಥೆ.
ಉತ್ತರ ಪ್ರದೇಶದ ಒಂದು ಸಣ್ಣ ಹಳ್ಳಿ ಕರ್ತಾರ್‌ಪುರ. ಚಾರುಲ್ ಹೊನಾರಿಯಾ ಈ ಹಳ್ಳಿಯವರು . ಚಾರುಲ್ ಹೊನಾರಿಯಾ ಅವರ ತಂದೆ ಶೌಕೀನ್ ಸಿಂಗ್ ಒಬ್ಬ ಸಾಮಾನ್ಯ ರೈತ. ಚಿಕ್ಕ ಆದಾಯದಲ್ಲಿ ಮನೆ ನಡೆಸಿಕೊಂಡು ಹೋಗುತ್ತಿದ್ದ ಬಡಪಾಯಿ. ಅವರದ್ದು ಏಳು ಜನರ ಕುಟುಂಬ.ಇದನ್ನು ನಿಭಾಯಿಸಿಕೊಂಡು ಹೋಗುವುದು ಚಾರುಲ್ ತಂದೆಗೆ ಸುಲಭದ ಮಾತಾಗಿರಲಿಲ್ಲ. ಅದರಲ್ಲೂ ಅವರು ಮಗಳು ಚಾರುಲಳಿಗೆ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯಲ್ಲೂ ಕೊರತೆ ಬಾರದ ರೀತಿ ನೋಡಿಕೊಳ್ಳುತ್ತಿದ್ದು. ಹೀಗೆ ಹಳ್ಳಿಯಿಂದ ಬಂದ ಚಾರುಲ್ ತನ್ನ ಪರಿಶ್ರಮದ ಫಲವಾಗಿ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಮ್ಮ ದೇಶದ ಪ್ರತಿಷ್ಟಿತ ವೈದ್ಯಕೀಯ ಕಾಲೇಜ್ ದೆಹಲಿಯ ಏಮ್ಸ್‌ನಲ್ಲಿ ವ್ಯಾಸಂಗ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ.! ಚಾರುಲ್ ತಂದೆಗೆ ಮಗಳನ್ನ ವೈದ್ಯೆಯಾಗಿ ನೋಡುವ ಕನಸು ಬಲವಾಗೆ ಇತ್ತು.ಆದರೆ ಒಂದು ಕಡೆ ಕಿತ್ತುತಿನ್ನುವ ಬಡತನ.! ಮತ್ತೊಂದು ಕಡೆ ಎನಾದರು ಸಾಧಿಸಲೆ ಬೇಕೆನ್ನುವ ಚಲದಲ್ಲಿ ಓದುತ್ತಿದ್ದ ಮಗಳು.
ಚಾರುಲ್ ಅವರ ತಂದೆ ತಿಂಗಳಿಗೆ ಕೇವಲ 8 ಸಾವಿರ ರೂಪಾಯಿಗಳಷ್ಟು ಆದಾಯ ಬರುತ್ತಿತ್ತು. ಆದರೂ ಅವರು ಮಗಳನ್ನು ಒಬ್ಬ ಒಳ್ಳೆಯ ವೈದ್ಯೆಯನ್ನಾಗಿ ನೋಡಬೇಕೆಂಬ ಮಹದಾಸೆ ಹೊಂದಿದ್ದಂತಹ ವ್ಯಕ್ತಿ. ಚಾರುಲ್ ಕೂಡ ತಂದೆಯ ಕನಸನ್ನು ನನಸು ಮಾಡಲು ಪಣ ತೊಟ್ಟಿದ್ದಳು. ತುಂಬಾ ಶ್ರಮಪಟ್ಟು ಓದುತ್ತಿದ್ದಳು. 10ನೇ ತರಗತಿಯಿಂದಲೇ ನೀಟ್ ಪರೀಕ್ಷೆಗೆ ತಯಾರಿ ಆರಂಭಿಸಿದ್ದಳು. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಕನಸು ಕಾಣಲು ಶುರು ಮಾಡಿದ್ದಳು. ಆರಂಭದಲ್ಲಿ ಚಾರುಲ್‌ಗೆ ಇಂಗ್ಲಿಷ್ ಭಾಷೆಯಲ್ಲಿ ಸ್ವಲ್ಪ ಸಮಸ್ಯೆ ಇತ್ತು. ಆದ್ರೆ ಅವಳು ಆ ಸಮಸ್ಯೆಯನ್ನು ಕೂಡ ನಿವಾರಿಸಿಕೊಂಡಳು. 6ನೇ ತರಗತಿಯಿಂದಲೇ ಅವಳು ಇಂಗ್ಲಿಷ್ ಭಾಷೆಯ ಮೇಲೆ ಹೆಚ್ಚು ಗಮನ ಹರಿಸಲು ಆರಂಭಿಸಿದ್ದಳಂತೆ.
ಚಾರುಲ್ ವಾಸಿಸುತ್ತಿದ್ದ ಹಳ್ಳಿಯಲ್ಲಿ ಮೂಲಭೂತ ಸೌಕರ್ಯಗಳೇ ಇರಲಿಲ್ಲ. ಉತ್ತಮ ರಸ್ತೆ, ವಿದ್ಯುತ್, ಶಿಕ್ಷಣ ಸೌಲಭ್ಯಗಳು ಯಾವುದೂ ಇರಲಿಲ್ಲ. ಆದರೂ ಒಳ್ಳೆಯ ವೈದ್ಯೆಯಾಗಿ ತನ್ನ ಹಳ್ಳಿಯ ಜನರ ಸೇವೆ ಮಾಡಬೇಕೆನ್ನುವ ಹಂಬಲ ಆಕೆಯಲ್ಲಿತ್ತು. ನೀಟ್ ಪರೀಕ್ಷೆಗೆ ತಯಾರಿ ನಡೆಸುವಾಗ ಅವಳು ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಆದರೂ ಎಲ್ಲೂ ಅವಳು ಹಿಂದೆ ಸರಿಯಲಿಲ್ಲ. ತನ್ನ ಗುರಿಯನ್ನು ಮುಟ್ಟುವವರೆಗೂ ಹೋರಾಡುತ್ತಲೇ ದೃಢವಾದ ಹೆಜ್ಜೆ ಇಟ್ಟಳು.
ಸಾಲ ಮಾಡಿ ಮಗಳಿಗೆ ಸ್ಮಾರ್ಟ್‌ಫೋನ್ ತಂದುಕೊಟ್ಟ ತಂದೆಗೆ
ಆರ್ಥಿಕ ಸಮಸ್ಯೆ, ಇಂಗ್ಲಿಷ್ ಭಾಷೆಯಲ್ಲಿ ತೊಡಕುಗಳು, ಸರಿಯಾದ ಸಂಪನ್ಮೂಲಗಳ ಕೊರತೆ ಹೀಗೆ ಒಂದಲ್ಲ ಒಂದು ಸಮಸ್ಯೆ ಅವಳನ್ನು ಕಾಡುತ್ತಲೇ ಇತ್ತು. ಲಾಕ್‌ಡೌನ್ ಸಮಯದಲ್ಲಿ ಆನ್‌ಲೈನ್ ತರಗತಿಗಳನ್ನು ಕೇಳಲು ಟೆರೇಸ್ ಮೇಲೆ ಕೂರಬೇಕಾದ ಪರಿಸ್ಥಿತಿ. ಅವಳ ಪರಿಸ್ಥಿತಿ ಅರ್ಥ ಮಾಡಿಕೊಂಡ ಅವರ ತಂದೆ ಸಾಲ ಮಾಡಿ ಸ್ಮಾರ್ಟ್‌ಫೋನ್ ಕೂಡ ತಂದುಕೊಟ್ಟಿದ್ದರು. 2019ರಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ಚಾರುಲ್ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಆದರೆ ಅವಳು ಇದರಿಂದ ಧೃತಿಗೆಡಲಿಲ್ಲ ಮತ್ತೆ ಪುಟಿದೇಳುವ ಮನಸ್ಸು ಮಾಡಿದಳು.ಸೋಲನ್ನು ಬದಿಗಿಟ್ಟು ಗೆಲುವಿಗಾಗಿ ಮತ್ತೆ ಹೊಸ ಉತ್ಸಾಹದಿಂದ ಮುಂದಿನ ಪರೀಕ್ಷೆಗೆ ತಯಾರಿ ನಡೆಸಿದಳು.
2019ರಲ್ಲಿ ಫೇಲ್ ಅದ ಚಾರುಲ್ 2020ರಲ್ಲಿ 720ಕ್ಕೆ 680 ಅಂಕ!
10ನೇ ತರಗತಿಯಿಂದಲೇ ವಿದ್ಯಾರ್ಥಿವೇತನ ಪಡೆದು ಅಭ್ಯಾಸ ಮುಂದುವರಿಸಿದ ಚಾರುಲ್‌ಗೆ ಆರ್ಥಿಕ ಸಮಸ್ಯೆಯಿಂದಾಗಿ ಹೆಚ್ಚಿನ ತರಬೇತಿ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಅವರಿಗೆ ವಿದ್ಯಾಜ್ಞಾನ ಶಾಲೆ’ಯಲ್ಲಿ ಉಚಿತ ಶಿಕ್ಷಣ ದೊರೆಯಿತು. 12ನೇ ತರಗತಿಯಲ್ಲಿ ಅವಳು ಶೇ. 93 ಅಂಕಗಳನ್ನು ಗಳಿಸಿದಳು. 2019ರಲ್ಲಿ ನೀಟ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರ ಅವರು ‘ದಕ್ಷಿಣ ಕೋಚಿಂಗ್’ ಸೆಂಟರ್‌ನಿಂದ ವಿದ್ಯಾರ್ಥಿವೇತನ ಪಡೆದು ಮತ್ತೆ ತಯಾರಿ ಆರಂಭಿಸಿದರು. 2020ರಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ 720ಕ್ಕೆ 680 ಅಂಕಗಳನ್ನು ಗಳಿಸಿ, ಅಖಿಲ ಭಾರತ ಮಟ್ಟದಲ್ಲಿ 681ನೇ ಸ್ಥಾನ ಪಡೆದರು. ಅಷ್ಟೇ ಅಲ್ಲ, ದೆಹಲಿಯ ಏಮ್ಸ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ಅವಕಾಶವನ್ನು ಕೂಡ ಚಾರುಲ್ ಪಡೆದರು. 2020-2025ರ ಬ್ಯಾಚ್‌ನಲ್ಲಿ ಅವರು MBBS ವ್ಯಾಸಂಗ ಮಾಡುತ್ತಿದ್ದಾರೆ. ಚಾರುಲ್ ಹೊನಾರಿಯಾ ಅವರ ಯಶಸ್ಸಿನ ಕಥೆ ಪ್ರತಿಯೊಬ್ಬ ವಿಧ್ಯಾರ್ಥಿಗಳಿಗೂ ನಿಜಕ್ಕೂ ಸ್ಪೂರ್ತಿದಾಯಕ.
REGISTRATION LINK*
https://www.sirmveducation.com/SET_Registration