ಪ್ರೀತಿ ತಿರಸ್ಕರಿಸಿದ್ದಕ್ಕೆ ಪ್ರತೀಕಾರ, ಮಾಜಿ ಲವ್ವರ್ ಮೇಲೆ ಕಾರು ಹರಿಸಿ ಚಾಕು ಇರಿದ ಯುವತಿ | ಬೆಚ್ಚಿ ಬಿಳಿಸುವಂತಿದೆ ವೈರಲ್ ವಿಡಿಯೋ..!!
ASHWASURYA/SHIVAMOGGA
ಅಶ್ವಸೂರ್ಯ/ಗುಜರಾತ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಪ್ರೇಮ ವೈಫಲ್ಯದಿಂದ ರಿವೆಂಜ್‌ಗೆ ಬಿದ್ದಿದ್ದ ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ಮೇಲೆ ಕಾರು ಚಲಾಯಿಸಿ ಚಾಕು ಇರಿದು ಹಲ್ಲೆ ನಡೆಸಿದ ಘಟನೆ ನಡೆದಿದೆ. ಫೆಬ್ರವರಿ 25 ರಂದು ಅಹಮದಾಬಾದ್ ಶೇಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ರಿಂಕು ಎಂಬ ಯುವತಿ ತನ್ನ ಮಾಜಿ ಪ್ರಿಯಕರ ಜಯ್ ಕುಮಾರ್ ಪಟೇಲ್ ಎಂಬಾತನ ಮೇಲೆ ಈ ಡೆಡ್ಲಿ ಅಟ್ಯಾಕ್ ನಡೆಸಿದ್ದಾಳೆ. ಜಯ್ ಕುಮಾರ್ ಸ್ಕೂಟರ್‌ನಲ್ಲಿ ಕೆಲಸಕ್ಕೆಂದು ಹೋಗುತ್ತಿದ್ದಾಗ ರಿಂಕು ಆತನ ಸ್ಕೂಟರ್ ಅನ್ನು ಹಿಂಬಾಲಿಸಿಕೊಂಡು ಬಂದು ಕಾರಿನಿಂದ ಡಿಕ್ಕಿ ಹೊಡೆದಿದ್ದಾಳೆ. ಬಳಿಕ ಕೆಳಗೆ ಬಿದ್ದ ಜಯ್ ಕುಮಾರ್‌ಗೆ ಚಾಕುವಿನಿಂದ ಇರಿದು ಅದೆ ಕಾರಿನಲ್ಲಿ ಬಂದ ದಾರಿಯಲ್ಲೆ ಕಾರನ್ನು ತಿರುಗಿಸಿಕೊಂಡು ಹೋಗಿ ಎಸ್ಕೇಪ್ ಆಗಿದ್ದಾಳೆ.ಅವಳು ಆತನ ಸ್ಕೂಟರ್ ಅನ್ನು ಮತ್ತು ಆತನ ಮೇಲೆ ಅಟ್ಯಾಕ್ ಮಾಡಿದ ನಂತರ ಕಾರಿನಲ್ಲಿ ಎಸ್ಕೇಪ್ ಆಗುವ ದೃಶ್ಯ ಭಯಾನಕವಾಗಿದೆ. ಈ ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.!
ಹಲ್ಲೆಗೊಳಗಾದ ಜಯ್ ಕುಮಾರ್ ಪಟೇಲ್, ರಿಂಕು ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. 13 ವರ್ಷಗಳ ಹಿಂದೆ ರಿಂಕು ಮತ್ತು ಜಯ್ ಕುಮಾರ್ ಪ್ರೀತಿಸಿ ನಂತರ ಮದುವೆಯಾಗಲು ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರಂತೆ. ಆದರೆ ವೈಮನಸ್ಸಿನಿಂದ ನಿಶ್ಚಿತಾರ್ಥ ಮುರಿದುಕೊಂಡು ಬಿದ್ದಿದ್ದು.
ನಂತರ ರಿಂಕು ಬೇರೆಯವರನ್ನು ಮದುವೆಯಾದರೂ ಜಯ್ ಕುಮಾರ್ ಜೊತೆ ಸಂಪರ್ಕದಲ್ಲಿದ್ದಳಂತೆ.! ಜಯ್ ಕುಮಾರ್ ಆಕೆಯ ಕರೆ ಮತ್ತು ಸಂದೇಶಗಳಿಗೆ ಉತ್ತರಿಸದಿದ್ದಾಗ ಕೋಪಗೊಂಡ ರಿಂಕು ಈ ಹಲ್ಲೆ ನಡೆಸಿದ್ದಾಳೆ ಎಂದು ತಿಳಿದುಬಂದಿದೆ.
ಪೊಲೀಸರು ರಿಂಕುಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು ಗಾಯಗೊಂಡ ಜಯ್ ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.