Headlines

ಕೊಪ್ಪಳ: ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ಆರೋಪಿಗಳ ಬಂಧನ, ನಾಪತ್ತೆಯಾದ ಮತ್ತೊಬ್ಬ ಆರೋಪಿಗಾಗಿ ತೀವ್ರ ಶೋಧ.

ASHWASURYA/SHIVAMOGGA

news.ashwasurya.in

ಅಶ್ವಸೂರ್ಯ/ಕೊಪ್ಪಳ: ಪ್ರಕರಣಕ್ಕೆ ಸಂಬಂದಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿದುಬಂದಿದೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಮಲ್ಲೇಶ ಮತ್ತು ಚೇತನ ಸಾಯಿ ಎಂಬ ಇಬ್ಬರು ಅತ್ಯಾಚಾರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಕಾರ್ಯಚರಣೆಗೆ ಮುಂದಾಗಿದ್ದಾರೆ.
ಏನಿದು ಅತ್ಯಾಚಾರ ಪ್ರಕರಣ.?

ಘಟನಾ ಸ್ಥಳ

ತುಂಗಾಭದ್ರ ಎಡದಂಡೆ ಕಾಲುವೆ ಪಕ್ಕ ಇಸ್ರೇಲ್‌, ಅಮೆರಿಕ, ಒಡಿಶಾ, ಮಹಾರಾಷ್ಟ್ರ ಮತ್ತು ಸ್ಥಳೀಯ ಹೋಂ ಸ್ಟೇನ ಒಡತಿಯೊಬ್ಬರು ಗಿಟಾರ್‌ ಬಾರಿಸುತ್ತ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದರಂತೆ.! ಸಮಯಕ್ಕೆ ಸರಿಯಾಗಿ ದುಷ್ಕರ್ಮಿಗಳು ಅ ಸ್ಥಳಕ್ಕೆ ಬಂದು ಅಲ್ಲಿದ್ದ ಮೂವರು ಪುರುಷರ ಮೇಲೆ ಹಲ್ಲೆ ಮಾಡಿ ಅವರನ್ನು ನಾಲೆಗೆ ತಳ್ಳಿದ್ದಾರೆ.! ನಂತರ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಗಂಗಾವತಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಂತರ ದುಷ್ಕರ್ಮಿಗಳು ನಾಲೆಗೆ ತಳ್ಳಿದ ಮೂವರಲ್ಲಿ ಇಬ್ಬರು ಈಜಿ ದಡ ಸೇರಿದರೆ ಒಡಿಶಾ ಮೂಲದ ವ್ಯಕ್ತಿ ನೀರಿನಲ್ಲಿ ನಾಪತ್ತೆಯಾಗಿದ್ದರು. ಶುಕ್ರವಾರ ಬೆಳಿಗ್ಗೆಯಿಂದಲೇ ಆತನ ಪತ್ತೆಗೆ ಶೋಧ ಕಾರ್ಯ ನಡೆದಿತ್ತು.ನಂತರ ಮಲ್ಲಾಪುರ ಗ್ರಾಮದ ಪವರ್‌ ಹೌಸ್‌ ಗೇಟ್‌ ಬಳಿ ಆತನ ಮೃತದೇಹ ಸಿಕ್ಕಿದೆ.
ಗುರುವಾರ ರಾತ್ರಿ ಕೊಪ್ಪಳ ಜಿಲ್ಲೆಯ ಆನೆಗುಂಡಿಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯ (ಟಿಎಲ್‌ಬಿಸಿ) ದಡದಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ನಾಲ್ವರು ಪ್ರವಾಸಿಗರ ಮೇಲೆ ಮೂವರು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ.

ಹಲ್ಲೆಗೋಳಗಾದ ವ್ಯಕ್ತಿಗಳು

ಪ್ರವಾಸಿಗರನ್ನು ಅಮೆರಿಕದ ಡೇನಿಯಲ್, ಇಸ್ರೇಲ್‌ನ ಮಹಿಳೆ ಮತ್ತು ಮಹಾರಾಷ್ಟ್ರದ ನಾಸಿಕ್‌ನ ಪಂಕಜ್ ಪಟೇಲ್ ಮತ್ತು ಒಡಿಶಾದ ಬಿಬಾಸ್ ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ವಿದೇಶಿ ಮಹಿಳೆ ಸ್ಥಳೀಯ ಪೊಲೀಸರಿಗೆ ತಮ್ಮ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ದಾಖಲಿಸಿದ್ದಾರೆ. ಮೂವರು ಪ್ರವಾಸಿಗರಿಗೆ ಗಂಗಾವತಿ ಉಪ-ವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಆನೆಗುಂಡಿ ಬಳಿ ಹೋಂಸ್ಟೇ ನಡೆಸುತ್ತಿರುವ ಅಂಬಿಕಾ ನಾಯಕ್, ಪ್ರವಾಸಿಗರನ್ನು ಟಿಎಲ್‌ಬಿಸಿ ಪ್ರದೇಶಕ್ಕೆ ವೀಕ್ಷಣೆಗಾಗಿ ಕರೆದೊಯ್ದಾಗ ಈ ಘಟನೆ ನಡೆದಿದೆ. ದೂರಿನ ಪ್ರಕಾರ, ಕಾರಿನಲ್ಲಿ ಬಂದ ಮೂವರು ವ್ಯಕ್ತಿಗಳು ವಿದೇಶಿ ಮಹಿಳೆ ಮತ್ತು ಅಂಬಿಕಾ ಮೇಲೆ ಹಲ್ಲೆ ನಡೆಸಲು ಪ್ರಾರಂಭಿಸಿದ್ದರಂತೆ. ಮಹಿಳೆಯರ ಮೇಲೆ ದಾಳಿ ಮಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ತಡೆಯಲು ಪ್ರಯತ್ನಿಸಿದಾಗ ಡೇನಿಯಲ್, ಪಟೇಲ್ ಮತ್ತು ಬಿಬಾಸ್ ಅವರನ್ನು ಕಾಲುವೆಗೆ ತಳ್ಳಲಾಯಿತು. ಡೇನಿಯಲ್ ಮತ್ತು ಪಟೇಲ್ ಈಜಿಕೊಂಡು ಸುರಕ್ಷಿತವಾಗಿ ದಡ ಸೇರಿದ್ದರಂತೆ.

Leave a Reply

Your email address will not be published. Required fields are marked *

Optimized by Optimole
error: Content is protected !!