Headlines

ಕೊನೆಗೂ ನಾಪತ್ತೆಯಾಗಿದ್ದ ಫರಂಗಿಪೇಟೆ ದಿಗಂತ್ ಪತ್ತೆ.! ಶಿವಮೊಗ್ಗ, ಮೈಸೂರು, ಕೆಂಗೇರಿ, ನಂದಿಹಿಲ್ಸ್‌ ನಂತರ ಉಡುಪಿಗೆ ವಾಪಸ್ ಆಗಿದ್ದಾನೆ.!

news.ashwasurya.in

ಅಶ್ವಸೂರ್ಯ/ಮಂಗಳೂರು ಮಾ,9: ನಿಗೂಢವಾಗಿ ನಾಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ಪರೀಕ್ಷೆ ಬರೆಯುವುದಕ್ಕೆ ಹೆದರಿದ್ದ ನಾಪತ್ತೆಯಾಗಿದ್ದ ಎಂದು ಕೇಳಿ ಬರುತ್ತಿದೆ.
ನಗರದ ಕಪಿತಾನಿಯೋದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ದಿಗಂತ್ ಪರೀಕ್ಷೆ ಬರಿಯಲು ಹೆದರಿದ್ದ ಎನ್ನಲಾಗಿದೆ. ಶನಿವಾರ ಸಂಜೆ ತನ್ನ ತಾಯಿಗೆ ಫೋನ್ ಕರೆ ಮಾಡಿ ನಾನು ಉಡುಪಿಯಲ್ಲಿದ್ದೇನೆ. ನಾನೇನು ಓಡಿ ಹೋಗೋ ಹುಡುಗ ಅಲ್ಲ, ನನ್ನನ್ನು ಯಾರೋ ಹೊತ್ತುಕೊಂಡು ಹೋಗಿದ್ದಾರೆ. ಎಲ್ಲವನ್ನೂ ನಾನು ಮನೆಗೆ ಬಂದು ಹೇಳುತ್ತೇನೆ ಎಂದು ಫೋನ್ ಕರೆ ಕಡಿತಗೊಳಿಸಿದ್ದ.
ಆ ಬಳಿಕ ಪತ್ತೆಯಾದ ದಿಗಂತ್‌ನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ ಸಂಧರ್ಭದಲ್ಲಿ ನಾನು ಪರೀಕ್ಷೆಗೆ ಹೆದರಿ ಊರು ಬಿಟ್ಟಿದ್ದೆ ಎಂದು ಹೇಳಿಕೊಂಡಿದ್ದನಲ್ಲದೆ ಕಳೆದ 12 ದಿನದಿಂದ ತಾನು ಎಲ್ಲೆಲ್ಲಿಗೆ ಹೋಗಿದ್ದೆ ಎಂಬುದನ್ನು ವಿವರಿಸಿ ಹೇಳಿದ್ದಾನೆ.
ಫೆ.25ರಂದು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿದ್ದ ದಿಗಂತ್ ತನ್ನ ಚಪ್ಪಲಿಯನ್ನು ರೈಲ್ವೆ ಹಳಿಯ ಪಕ್ಕದಲ್ಲಿ ಕಳಚಿಟ್ಟಿದ್ದ. ಸಾಲದ್ದಕ್ಕೆ ಚಪ್ಪಲಿ ಮೇಲೆ ಮೂರು ಹನಿ ರಕ್ತವನ್ನು ಹಾಕಿದ್ದನಂತೆ.! ತನ್ನ ಸ್ನೇಹಿತನಿಂದ ಮೊದಲೇ ಪಡೆದಿದ್ದ ಶೂ ಅನ್ನು ಧರಿಸಿ ಫರಂಗಿಪೆಟೆಯಿಂದ ಅರ್ಕುಳದವರೆಗೆ ರೈಲ್ವೆ ಹಳಿಯಲ್ಲೇ ನಡೆದುಕೊಂಡು ಹೋಗಿದ್ದನಂತೆ.!? ಬಳಿಕ ಅದೇ ದಾರಿಯಾಗಿ ಬಂದ ಬೈಕೊಂದಕ್ಕೆ ಏರಿಹೋಗಿ ನಂತರ ಬಸ್ಸಿನಲ್ಲಿ ಶಿವಮೊಗ್ಗ ಬಂದು ಅಲ್ಲಿಂದ ರೈಲಿನಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಿದ್ದ. ಮೈಸೂರಿನಿಂದ ಕೆಂಗೇರಿಗೆ ತೆರಳಿದ್ದ. ನಂತರ ನಂದಿಹಿಲ್ಸ್‌ಗೆ ಹೋಗಿದ್ದನಙತೆ.! ಅಲ್ಲಿ ಎರಡು ದಿನ ಏನೋ ಕೆಲಸ ಮಾಡಿ ಬಳಿಕ ಮೈಸೂರಿಗೆ ಬಂದಿದ್ದನೆ. ಅಲ್ಲಿಂದ ನೆರವಾಗಿ ಮಾರ್ಚ್ 8,ರ ಬೆಳಿಗ್ಗೆ ಉಡುಪಿಗೆ ಹೋಗಿದ್ದ ಎಂದು ತಿಳಿದುಬಂದಿದೆ.
ಹೀಗೆ ರೈಲಿನಲ್ಲಿ ಉಡುಪಿ ಕಡೆಗೆ ಹೋಗುವಾಗ ಫರಂಗಿಪೇಟೆಯ ತನ್ನ ಮನೆಯ ಸುತ್ತಮುತ್ತ ಪೊಲೀಸರ ಸಹಿತ ಸಾರ್ವಜನಿಕರು ಇರುವುದನ್ನೂ ಕೂಡ ದಿಗಂತ್ ಗಮನಿಸಿದ್ದೆ ಎಂದು ಆತ ಪೊಲೀಸರ ತನಿಖೆಯ ವೇಳೆ ಬಾಯಿ ಬಿಟ್ಟಿದ್ದಾನೆ. ಎಂದು ತಿಳಿದು ಬಂದಿದೆ. ಮಧ್ಯಾಹ್ನದ ಹೊತ್ತಿಗೆ ವಿಪರೀತ ಹಸಿವಾದ ಕಾರಣ ಉಡುಪಿಯ ದಿಮಾರ್ಟ್‌ಗೆ ತೆರಳಿ ಅಲ್ಲಿಂದ ಬಿಸ್ಕೆಟ್ ಖರೀದಿಸಿ ಹೊರಬರುವಾಗ ಸಿಬ್ಬಂದಿಯ ಕೈಗೆ ಸಿಕ್ಕಿ ಬಿದ್ದಿರುವುದಾಗಿ ತಿಳಿದು ಬಂದಿದೆ.
ದಿಗಂತ್ ಪತ್ತೆಗಾಗಿ ಮನೆಮಂದಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ಕಾರಣ ಪೊಲೀಸರು ದಿಗಂತ್ ನನ್ನು ಹೈಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

Optimized by Optimole
error: Content is protected !!