ಮಾಣಿಕ್ಯ’ ಸಿನಿಮಾ ನಟಿ ರನ್ಯಾ ರಾವ್ ಫ್ಲಾಟ್ ಮೇಲು ದಾಳಿ – ಮನೆಯಲಿದ್ದ ಕೋಟಿ ಮೌಲ್ಯದ ಚಿನ್ನ ವಶ.!
ಅಶ್ವಸೂರ್ಯ/ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ ಫ್ಲಾಟ್ ಮೇಲೂ ಡಿಆರ್‌ಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಕೋಟಿ ಕೋಟಿ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಲ್ಯಾವೆಲ್ಲಿ ರಸ್ತೆಯ ಮನೆಯಲ್ಲಿ 2.06 ಕೋಟಿ ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ 2.67 ಕೋಟಿ ಹಣವನ್ನು DRI ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಪ್ರಕರಣದ ಹಿನ್ನಲೆ.
ದುಬೈನಿಂದ 14.8 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಆರೋಪದಡಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡ ನಟಿ ರನ್ಯಾ ರಾವ್ ಅವರನ್ನು ಸೋಮವಾರ ತಡರಾತ್ರಿ ಬಂಧಿಸಲಾಗಿತ್ತು.! ಚಿನ್ನದ ಕಳ್ಳಸಾಗಣೆ ಮೇಲೆ ಹದ್ದಿನ ಕಣ್ಣಿಟ್ಟಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನಪ್ರಿಯ ಕನ್ನಡ ನಟಿ ರನ್ಯಾ ರಾವ್ ಅವರನ್ನು ಬಂಧಿಸಿದ್ದರು. ಸೋಮವಾರ ರಾತ್ರಿ ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಆಗಮಿಸಿದಾಗ ಅಧಿಕಾರಿಗಳು ನಟಿಯ ಬಟ್ಟೆಯೊಳಗಿದ್ದ 14.8 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದರು.! ಅ ನಂತರ ಅವರನ್ನು ಬಂಧಿಸಲಾಗಿತ್ತು.
ರನ್ಯಾ ರಾವ್ ಅವರ ಆಗಾಗ್ಗೆ ದುಬೈಗೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಡಿಆರ್‌ಐ ಅಧಿಕಾರಿಗಳು ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ವರದಿಗಳ ಪ್ರಕಾರ, ರನ್ಯಾ ರಾವ್ ಕೇವಲ 15 ದಿನಗಳಲ್ಲಿ ನಾಲ್ಕು ಬಾರಿ ದುಬೈಗೆ ಹೋಗಿ ಬಂದಿದ್ದರಂತೆ. ಈ ಎಲ್ಲಾ ವಿಷಯವನ್ನು ಕಲೆಹಾಕಿದ ಡಿಆರ್‌ಐ ಅಧಿಕಾರಿಗಳು. ಗುಪ್ತಚರ ಮಾಹಿತಿಯ ನಂತರ ಅಧಾರದ ಮೇಲೆ ಅಧಿಕಾರಿಗಳು ರನ್ಯಾ ರಾವ್ ಬೆಂಗಳೂರಿಗೆ ಬಂದು ಇಳಿಯುತ್ತಿದ್ದಂತೆ ರನ್ಯಾ ರಾವ್ ಅವರನ್ನು ಪರಿಶೀಲಿಸಿದ್ದಾರೆ, ಅವರ ಬಳಿ ಇದ್ದ 14.8 ಕೆಜಿ ಚಿನ್ನವನ್ನು ವಶಪಡಿಸಿಕೊಂಡು ಅರೆಸ್ಟ್ ಮಾಡಿದ್ದಾರೆ.
ರನ್ಯಾ ಹೆಚ್ಚಿನ ಚಿನ್ನವನ್ನು ಧರಿಸಿದ್ದರು. ಅಲ್ಲದೇ ತನ್ನ ಉಡುಪಿನೊಳಗೆ ಚಿನ್ನದ ಬಾರ್‌ಗಳನ್ನು ಮರೆಮಾಚಿ ಇಟ್ಟಿದ್ದರು ಎಂದು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದರು ಎಂದು ಮೂಲಗಳು ಬಹಿರಂಗಪಡಿಸುತ್ತಿವೆ.
ರನ್ಯಾ ರಾವ್ ಕರ್ನಾಟಕದಲ್ಲಿ ಡಿಜಿಪಿ ಹುದ್ದೆಯಲ್ಲಿರುವ ಹಿರಿಯ ಐಪಿಎಸ್ ಅಧಿಕಾರಿಯ ಮಗಳು. ಆಕೆಯ ತಂದೆ ಅಥವಾ ಯಾವುದೇ ಸಿಬ್ಬಂದಿ ಕಳ್ಳಸಾಗಣೆ ಕಾರ್ಯಾಚರಣೆಯಲ್ಲಿ ತಿಳಿದೋ ಅಥವಾ ತಿಳಿಯದೆಯೋ ಭಾಗಿಯಾಗಿದ್ದಾರೆಯೇ ಎಂದು ಅಧಿಕಾರಿಗಳು ಈಗ ತನಿಖೆ ನಡೆಸುತ್ತಿದ್ದಾರೆ..
ವಿಮಾನ ನಿಲ್ದಾಣಕ್ಕೆ ಬಂದ ನಂತರ ರನ್ಯಾ ತನ್ನನ್ನು ಡಿಜಿಪಿ ಮಗಳು ಎಂದು ಗುರುತಿಸಿಕೊಳ್ಳುತ್ತಿದ್ದರು. ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ತನ್ನ ಮನೆಗೆ ಕರೆದೊಯ್ಯಲು ಕರೆಸಿಕೊಳ್ಳುತ್ತಿದ್ದರು. ಬಹುಶಃ ಸಂಪೂರ್ಣ ಪರಿಶೀಲನೆಯನ್ನು ತಪ್ಪಿಸಲು ಇದನ್ನು ನೆಪವಾಗಿ ಬಳಸಿಕೊಳ್ಳುತ್ತಿದ್ದರು ಎಂದು ಆರಂಭಿಕ ವಿಚಾರಣೆಯಲ್ಲಿ ತಿಳಿದುಬಂದಿದೆ ಎನ್ನಲಾಗುತ್ತಿದೆ.
ರನ್ಯಾಳನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿನ ಡಿಆರ್‌ಐ ಪ್ರಧಾನ ಕಚೇರಿಗೆ ಕರೆದೊಯ್ಯಲಾಯಿತು. ಪ್ರಕರಣದ ಕುರಿತು ಅಧಿಕಾರಿಗಳು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ರನ್ಯಾ ರಾವ್ ಯಾರು?
ರನ್ಯಾ ರಾವ್ ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿಯರಲ್ಲಿ ಒಬ್ಬರು. ಸುದೀಪ್ ಜೊತೆ ಮಾಣಿಕ್ಯ ಚಿತ್ರದಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಬೇರೆ ಚಿತ್ರಗಳಲ್ಲು ರನ್ಯಾ ರಾವ್ ಅಭಿನಯಿಸಿದ್ದು, ಖ್ಯಾತಿ ಗಳಿಸಿದ್ದಾರು.ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಅವರ ವರ್ಚಸ್ಸು ಇಳಿ ಮುಖವಾಗಿತ್ತು .