ಅತ್ತ ಅಮ್ಮನ ಮರಣ, ಇತ್ತ ಜೀವನದ ಪರೀಕ್ಷೆ.! ( ಪಿಯುಸಿ ಪರೀಕ್ಷೆ.) ಅಮ್ಮನ ಶವಕ್ಕೆ ಕೈಮುಗಿದು ಪರೀಕ್ಷೆಗೆ ಹೊದ ಮಗ.! ವಿಧಿ ನಿನೇಷ್ಟೂ ಕ್ರೂರಿ.?
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ತಮಿಳುನಾಡು: ಅದೇನು ಗ್ರಹಚಾರವೊ ವಿದ್ಯಾರ್ಥಿ ಜೀವನದ ಬಹು ಮುಖ್ಯ ಹಂತವಾದ ದ್ವೀತಿಯ ಪಿಯುಸಿ ಪರೀಕ್ಷೆಯ ದಿನವೇ ವಿಧ್ಯಾರ್ಥಿಯೊಬ್ಬ ತನ್ನ ತಾಯಿಯನ್ನು ಕಳೆದುಕೊಳ್ಳಬೇಕಾಯಿತು ( ಅಮ್ಮನ ಸಾವು) ಆದರೆ ಕುಟುಂಬಸ್ಥರು ಮತ್ತು ಸಂಭಂದಿಕರು ಆತನ ಗೆಳೆಯರು ಮೃತಳ ಮಗನನ್ನು ಪರೀಕ್ಷೆ ಬರೆಯುವಂತೆ ಹೇಳಿದ್ದಾರೆ.ಅದು ಅಮ್ಮನ ಆಸೆಯು ಆಗಿತ್ತು.ಕೊನೆಗೂ ಮಗ ಅಮ್ಮನ ಮೃತ ದೇಹಕ್ಕೆ ಕೈ ಮುಗಿದು ಪರೀಕ್ಷೆ ಬರೆಯಲು ಹೊರಟಿದ್ದಾನೆ.! ಆತ ಅಮ್ಮನ ಮೃತ ದೇಹಕ್ಕೆ ಕೈಮುಗಿಯುವ ದೃಶ್ಯ
ಎಲ್ಲೆಡೆ ಹರಿದಾಡಿ ಮನಕಲುಕುವಂತೆ ಮಾಡಿದೆ.!
ಈ ಘಟನೆ ನಡೆದಿರುವುದು ತಮಿಳುನಾಡಿನಲ್ಲಿ ದ್ವೀತಿಯ ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಪರೀಕ್ಷೆಯ ದಿನವೇ ತನ್ನ ತಾಯಿಯ ಸಾವನ್ನು ನೋಡಬೇಕಾಯಿತು.!ಅಮ್ಮನ ಸಾವಿನ ನಂತರ ಆತ ಕೆಲವೇ ಗಂಟೆಗಳಲ್ಲಿ ದ್ವೀತಿಯ ಪಿಯುಸಿ ಬೋರ್ಡ್ ಪರೀಕ್ಷೆಯನ್ನು ಬರೆದಿದ್ದಾನೆ ಈ ಹೃದಯ ವಿದ್ರಾವಕ ಘಟನೆಯೊಂದು ಇದೀಗ ವರದಿಯಾಗಿದೆ.!? ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಲಿಯೂರಿನ ವಿದ್ಯಾರ್ಥಿ ಸುನೀಲ್ ಕುಮಾರ್, ಇಂತಹ ಪರಿಸ್ಥಿತಿಯನ್ನು ಎದುರಿಸಿದ 12 ನೇ ತರಗತಿಯ ವಿದ್ಯಾರ್ಥಿ.! ರಾತ್ರಿಯಲ್ಲ ನಾಳೆಯ ದಿನದ ದ್ವೀತಿಯ ಪಿಯುಸಿ ಪರೀಕ್ಷೆ ಬರೆಯಲು ಸುನೀಲ್ ಕುಮಾರ್ ಓದಿಕೊಂಡು ತಯಾರಾಗುತ್ತಿದ್ದರೆ.ಇತ್ತ ಹೆತ್ತ ತಾಯಿ ಮಗ ನಾಳೆ ಚನ್ನಾಗಿ ಪರೀಕ್ಷೆ ಬರೆಯಲಿ ಎಂದು ಮನದಲ್ಲೆ ಹಾರೈಸಿದ್ದಾಳೆ.!( ಪ್ರತಿಯೊಬ್ಬರು ಮಕ್ಕಳ ತಾಯಿ ಇದನ್ನೆ ಬಯಸುವುದು )ಅಂದು ಪಿಯುಸಿ ಪಬ್ಲಿಕ್ ಎಕ್ಸಾಂನ ಮೊದಲ ದಿನ.ಇತ್ತ ಮಗ ಬೆಳಗ್ಗೆ ಪರೀಕ್ಷೆಗೆ ಹೊರಡಲು ಸಿದ್ದನಾಗುತ್ತಿದ್ದಾನೆ (ಮಾರ್ಚ್ 3) ಇತ್ತ ತಾಯಿ ಮಗನನ್ನು ಪರೀಕ್ಷೆಗೆ ಕಳಿಸಿಕೊಡಲು ತಯಾರಿಮಾಡುತ್ತಿದ್ದಾಳೆ.ಅದರೆ ಈ ನಡುವೆ ವಿಧಿ ಆಟವೆ ಬೇರೆಯಾಗಿದೆ..ವಿದ್ಯಾರ್ಥಿ ಸುನೀಲ್ ಇನ್ನೇನು ಪರೀಕ್ಷೆಗೆ ಹೊರಡಬೇಕು ಅಮ್ಮ ಹೃದಯಾಘಾತದಿಂದ ಕುಸಿದು ಬಿದ್ದು ಉಸಿರು ಚಲ್ಲಿದ್ದಾಳೆ.!! ತನ್ನ ತಾಯಿ ಸುಭಾಲಕ್ಷ್ಮಿಯನ್ನು ಕಳೆದುಕೊಂಡಿದ್ದಾನೆ.
ಈ ಹುಡುಗನದು ಅದೇನು ಗ್ರಹಚಾರವೋ ಆರು ವರ್ಷಗಳ ಹಿಂದೆಯೇ ಸುನೀಲ್ ತನ್ನ ತಂದೆ ಕೃಷ್ಣಮೂರ್ತಿ ಅವರನ್ನು ಕಳೆದುಕೊಂಡಿದ್ದ. ಅಂದಿನಿಂದ ಸುನಿಲ್ ಮತ್ತು ಅವರ ಸಹೋದರಿ ಯಾಸಿನಿಯನ್ನು ಬೆಳೆಸುವ ಜವಾಬ್ದಾರಿಯನ್ನು ಸುಭಾಲಕ್ಷ್ಮಿ ಅವರ ಮೇಲಿತ್ತು. ಆದರೆ ವಿಧಿಯಾಟವೆ ಬೇರೆಯಾಗಿದೆ. ದುರಂತವೆಂಬಂತೆ ಮಗ ಸುನೀಲ್ ಪರೀಕ್ಷೆಯ ದಿನವೇ ತನ್ನ ತಾಯಿಯನ್ನು ಕಳೆದುಕೊಂಡಿದ್ದಾನೆ.!
ಒಂದು ಕಡೆ ತಾಯಿಯ ಮರಣ,ಇನ್ನೊಂದು ಕಡೆ ಜೀವನದ ಪರೀಕ್ಷೆ.!ಇಲ್ಲಿ ಆತನಿಗೆ ಯಾವುದು ಬೇಕು ಯಾವುದು ಬೇಡ.? ಪರೀಕ್ಷೆ ಬರೆಯಲು ಸಿದ್ಧನಾಗಿದ್ದ ಸುನೀಲ್‌ಗೆ ತಾಯಿ ಸಾವಿನಿಂದ ಮತ್ತಷ್ಟು ಆಘಾತವಾಗಿದೆ.ಆದರೆ ತಾಯಿಯನ್ನು ಕಳೆದುಕೊಂಡ ತೀವ್ರ ದುಃಖದಲ್ಲಿದ್ದರು ಸುನಿಲ್‌ನ ಸಂಬಂಧಿಕರು ಮತ್ತು ನೆರೆಹೊರೆಯವರು ಆತನ ಅಮ್ಮನ ಆಸೆಯಂತೆ ಪರೀಕ್ಷೆ ಬರೆಯಲು ಆತನನ್ನು ಪ್ರೋತ್ಸಾಹಿಸಿದ್ದಾರೆ.
ಸುನಿಲ್ ಕೂಡ ಅಮ್ಮನ ಆಸೆ ಈಡೇರಿಸಲು ಪರೀಕ್ಷೆ ಬರೆಯಲು ಹೊರಡುವ ಮುನ್ನ, ಭಾವುಕನಾದ ಸುನಿಲ್ ತನ್ನ ಪರೀಕ್ಷೆಯ ಪ್ರವೇಶ ಪತ್ರವನ್ನು ತನ್ನ ತಾಯಿಯ ಪಾದಗಳ ಬಳಿ ಇಟ್ಟು ಕೈಮುಗಿದು ಕಣ್ಣೀರು ಹಾಕುತ್ತಾ ಅಮ್ಮ ಮೃತದೇಹದ ಪಾದಕ್ಕೆ ಬಿದ್ದು ಆಶೀರ್ವಾದ ಪಡೆದು ನೋವಿನಿಂದಲೇ ಪರೀಕ್ಷಾ ಕೇಂದ್ರಕ್ಕೆ ಸ್ನೇಹಿತರೊಂದಿಗೆ ಸುನಿಲ್ ಹೋಗಿದ್ದಾನೆ.
ತಾಯಿ ಸಾವನ್ನು ನೋಡಿದ ಮಗ ಸುನಿಲ್‌ಗೆ ಅತ್ತ ತಾಯಿ ಜೊತೆಗಿದ್ದು ಅಂತಿಮ ವಿಧಿವಿಧಾನಗಳನ್ನು ಮಾಡಲು ತಯಾರಿ ಮಾಡಿಕೊಳ್ಳುವುದಾ.? ಅಥವಾ ಅಮ್ಮನ ಬಹುದೊಡ್ಡ ಆಸೆಯಂತೆ ಪರೀಕ್ಷೆ ಬರೆಯುವುದಾ.?ದೊಡ್ಡ ಆಘಾತವೆ ಸುನೀಲ್ ನನ್ನು ಇನ್ನಿಲ್ಲದಂತೆ ಕಾಡಿದೆ. ಆದರೂ ಸುನೀಲ್ ತನ್ನೆಲ್ಲಾ ನೋವುಗಳನ್ನು ಎದೆಯೊಳಗೆ ಹುದುಗಿಸಿಕೊಂಡು ಗಟ್ಟಿ ಮನಸ್ಸಿನಿಂದ ಸುನಿಲ್ ಪರೀಕ್ಷೆ ಬರೆಯಲು ತೆರಳಿದ್ದಾನೆ. ಆದರೆ ಪರೀಕ್ಷೆಗೆ ಹೊರಡುವ ಮುನ್ನ, ಸುನಿಲ್ ತನ್ನ ತಾಯಿಯ ಪಾದವನ್ನು ಮುಟ್ಟಿ, “ಅಮ್ಮ, ದಯವಿಟ್ಟು ಸ್ವಲ್ಪ ಸಮಯ ಕಾಯಿರಿ,ಮೊದಲು ನಾನು ನಿನ್ನ ಆಸೆಯಂತೆ ಪರೀಕ್ಷೆಯನ್ನು ಬರೆಯಲು ಹೋಗಿ ಬರ್ತೀನಿ” ಎಂದು ತಾಯಿಯ ಶವದ ಮುಂದೆ ಕಣ್ಣಿರುಹಾಕುತ್ತಲೆ ಹೇಳಿ ಹೊರಟಿದ್ದಾನೆ. ಇದನ್ನು ನೋಡಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬಂದವರ ಕಣ್ಣಂಚಿನಲ್ಲೂ ನೀರು ಹರಿದಿದೆ.ಇಂತಹ ಸ್ಥಿತಿ ಯಾವ ಮಕ್ಕಳಿಗೂ ಬಾರದಿರಲಿ…ಮನೆಯಲ್ಲಿ ತನ್ನ ತಾಯಿಯ ಶವವನ್ನು ಇಟ್ಟುಕೊಂಡು,ಅಮ್ಮನ ಇಚ್ಛೆಯಂತೆ ತನ್ನ ಭವಿಷ್ಯಕ್ಕಾಗಿ ಕಠಿಣ ಪರಿಸ್ಥಿತಿಯಲ್ಲೂ ವಿದ್ಯಾರ್ಥಿ ಸುನೀಲ್ ಪರೀಕ್ಷೆಯನ್ನು ಬರೆದಿದು ಬಂದು ಅಮ್ಮನ ಪಾರ್ಥಿವ ಶರೀರದ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾನೆ ಎಂದರೆ ಆತನ ಧೈರ್ಯವನ್ನು ಮೆಚ್ಚಲೇಬೇಕು….