Headlines

ಶಿವಮೊಗ್ಗ : ಮಾ.8 ರಿಂದ ಸುವರ್ಣ ಸಂಸ್ಕೃತಿ ಭವನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಎರಡು ದಿನಗಳ ರಂಗೋತ್ಸವ‌ ಕಾರ್ಯಕ್ರಮ,ನಾಟಕ “ಚೋಮನದುಡಿ” ಮತ್ತು “ಒಂದಾನೊಂದು ಕಾಲದಲ್ಲಿ”

ಅಶ್ವಸೂರ್ಯ/ಶಿವಮೊಗ್ಗ, ಮಾ.5 : ರಂಗಾಯಣ ಶಿವಮೊಗ್ಗ ಹಾಗೂ ನಮ್ಮ ಹಳ್ಳಿ ಥಿಯೇಟರ್ ಇವರ ಸಹಯೋಗದಲ್ಲಿ ಮಾ.8 ರಿಂದ 9 ರವೆಗೆ ಸಂಜೆ 6.30 ಕ್ಕೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಎರಡು ದಿನಗಳ ರಂಗೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಹೆಗ್ಗೋಡು ರಂಗಕರ್ಮಿಯಾದ ಎಸ್. ಹೆಚ್ ಫಣಿಯಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ರಂಗಾಯಣ ನಿರ್ದೇಶಕರಾದ ಪ್ರಸನ್ನ ಡಿ ಸಾಗರ ಅಧ್ಯಕ್ಷತೆ ವಹಿಸಲಿದ್ದು, ಪೇಸ್ ಯುಎಂಪಿಯು ಕಾಲೇಜಿನ ಹೆಚ್. ಎಲ್. ಡಾ.ಮೈತ್ರೀಯಿ ಆಗಮಿಸುವರು.
ಮಾ.8 ರ ಸಂಜೆ 6.30 ಕ್ಕೆ ಬೈಂದೂರಿನ ಸುರಭಿ ತಂಡದಿಂದ ಡಾ.ಕೆ.ಶಿವರಾಮ ಕಾರಂತರ ರಚನೆಯ ಗಣೇಶ್ ಮಂದಾರ್ತಿ ನಿರ್ದೇಶನದ “ಚೋಮನ ದುಡಿ” ಹಾಗೂ ಮಾ.9 ರ ಸಂಜೆ 6.30ಕ್ಕೆ ಬೆಂಗಳೂರಿನ ರಂಗಪಯಣ ತಂಡದಿಂದ ಡಾ.ಗಿರೀಶ್ ಕಾರ್ನಾಡ್ ರಚನೆಯ ರಾಜಗುರು ವಿನ್ಯಾಸ ಮತ್ತು ನಿರ್ದೇಶನದ “ಒಂದಾನೊಂದು ಕಾಲದಲ್ಲಿ” ನಾಟಕ ಪ್ರದರ್ಶನ ನಡೆಯಲಿದ್ದು, ಟಿಕೆಟ್ ದರ ಪ್ರತಿ ನಾಟಕಕ್ಕೆ ಒಬ್ಬರಿಗೆ ರೂ.30 ಹಾಗೂ ಎರಡು ನಾಟಕಕ್ಕೆ ಸೇರಿ ರೂ. 50 ನಿಗದಿ ಪಡಿಸಲಾಗಿದೆ ಎಂದು ರಂಗಾಯಣ ಆಡಳಿತಾಧಿಕಾರಿ ಡಾ.ಶೈಲಜಾ ಎ ಸಿ ತಿಳಿಸಿದ್ದಾರೆ.

ಇದು ಶಿವಮೊಗ್ಗ ರಂಗಾಯಣದ ಆತ್ಮೀಯ ಆಹ್ವಾನವಾಗಿದ್ದು
ರಂಗಾಯಣ ಶಿವಮೊಗ್ಗ ಹಾಗೂ ನಮ್ಮ ಹಳ್ಳಿ ಥಿಯೇಟರ್ ಶಿವಮೊಗ್ಗ ಆಯೋಜನೆಯ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ 2 ದಿನಗಳ ರಂಗೋತ್ಸವದಲ್ಲಿ
● ದಿನಾಂಕ : 08-03-2025 ಶನಿವಾರ ದಂದು, “ಚೋಮನ ದುಡಿ”* ನಾಟಕ ಸಂಜೆ 06:30 ಕ್ಕೆ ಪ್ರದರ್ಶನವಿರುತ್ತದೆ. ಮತ್ತು ದಿನಾಂಕ: 09-03-2025 ಭಾನುವಾರ ದಂದು, “ಒಂದಾನೊಂದು ಕಾಲದಲ್ಲಿ” ನಾಟಕ

ಸಂಜೆ 06:30 ಕ್ಕೆ ಪ್ರದರ್ಶನವಿರುತ್ತದೆ. ಹಾಗೆ ಈ ಎರಡು ದಿನಗಳು “ರಂಗಾಯಣ ಆವರಣದಲ್ಲಿ ರಂಗಾಯಣ ಶಿವಮೊಗ್ಗದ ನಾಟಕಗಳ ರಂಗಸಜ್ಜಿಕೆ ಮತ್ತು ರಂಗಪರಿಕರಗಳ ಪ್ರದರ್ಶನ ಏರ್ಪಡಿಸಲಾಗಿದೆ”.
ಟಿಕೆಟ್ ದರ ಒಬ್ಬರಿಗೆ ಒಂದು ನಾಟಕಕ್ಕೆ 30/-ರೂ.
ಎರಡು ನಾಟಕಕ್ಕೆ ಸೇರಿ 50/- ರೂ
● ಸ್ಥಳ: ಸುವರ್ಣ ಸಂಸ್ಕೃತಿ ಭವನ ಅಶೋಕ ನಗರ ಶಿವಮೊಗ್ಗ.
ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಂಗಭೂಮಿಯನ್ನು ಪ್ರೋತ್ಸಾಹಿಸಲು ಕೋರಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!