Whether the tiger death case was investigated as per ntca norms.
ಶಿಕಾರಿಪುರ: ಅಂಬ್ಲಿಗೋಳ ಹುಲಿ ಸಾವಿನ ಸುತ್ತ ಅನುಮಾನದ ಹುತ್ತ.! ಎನ್.ಟಿ.ಸಿ.ಎ ನಿಯಮಾವಳಿ ಪ್ರಕಾರ ತನಿಖೆ ನಡೆದಿದೆಯಾ..?
ಅಂಬ್ಲಿಗೋಳ ಜಲಾಶಯದಲ್ಲಿನ ಹುಲಿ ಸಾವಿನ ಪ್ರಕರಣವನ್ನು ಎನ್ಟಿಸಿಎ ಮಾನದಂಡಗಳ ಪ್ರಕಾರ ತನಿಖೆ ಮಾಡಲಾಗಿದೆಯೇ?
NEWS ASHWASURYA COM / SHIVAMOGGA
ಅಶ್ವಸೂರ್ಯ ಶಿಕಾರಿಪುರ: ಇತ್ತೀಚಿನ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಶಿಕಾರಿ ಎಗ್ಗಿಲ್ಲದೆ ನೆಡೆಯಿತ್ತಿದೆ.ಅದರಲ್ಲೂ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಗಡಿ ಭಾಗದಲ್ಲಿ ಕಾಡು ಪ್ರಾಣಿಗಳು ಬೇಟೆಗಾರರ ಗುಂಡಿನೇಟಿಗೆ ಬಲಿಯಾಗುತ್ತಿವೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಣ್ಣಿದ್ದು ಕುರುಡರಾಗಿದ್ದಾರೆ.!ಇನ್ನೂ ಕೆಲವು ಅರಣ್ಯ ಸಿಬ್ಬಂದಿ ಹಿಂದೆಲ್ಲಾ ಕೋವಿ ಪಾಲು ಕೇಳುವಂತೆ ಇವರುಗಳು ತಮ್ಮ ಅಧಿಕಾರದ ಅಕ್ರಮ ಪಾಲು ಕೇಳಿ ಪ್ರಾಣಿಗಳ ರಕ್ಷಕರಾಗಬೇಕಾದ ಕೇಲವು ಸಿಬ್ಬಂದಿಗಳೆ ಪ್ರಾಣಿಗಳ ಭಕ್ಷಕರಾಗಿದ್ದಾರೆ.! ಇದನ್ನು ಪ್ರಶ್ನಿಸಬೇಕಾದ ಕೇಲವು ಅಧಿಕಾರಿಗಳು ಬಾಯಿ ಮುಚ್ಚಿ ಕುಳಿತಿದ್ದಾರೆ.ಈ ಹಾದಿಯಲ್ಲಿ ಶಿಕಾರಿಪುರ ತಾಲ್ಲೂಕಿನ ಅಂಬ್ಲಿಗೋಳದ ಹುಲಿ ಸಾವಿನ ಸದ್ದು ಜೋರಾಗಿಯೆ ಇದ್ದರು ಅರಣ್ಯ ಇಲಾಖೆ ಮಾತ್ರ ನೀರಿನಲ್ಲಿ ಇದ್ದ ಹುಲಿಯ ಮೃತದೇಹವನ್ನು ಹೊರತೆಗೆದು ಮಹಜರು ನಡೆಸಿ.ತನಿಖೆಗೆ ಮುಂದಾಗಿದ್ದಾರೆ.ಅಂಬ್ಲಿಗೋಳದ ಹುಲಿ ಸಾವಿನ ಸದ್ದು ವಿಧಾನಸೌದದ ಅರಣ್ಯ ಸಚಿವರ ಬಾಗಿಲಿಗೆ ಬಡಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಸಚಿವರಾದ ಈಶ್ವರ್ ಖಡ್ರೆ ಅವರು ಸೂಕ್ತ ತನಿಖೆಗೆ ಆದೇಶಿಸಿದ್ದರು.
ಕಾಡು ಪ್ರಾಣಿಗಳ ಸಾಲಿನಲ್ಲಿ ಅಗ್ರಸಾಲಿನಲ್ಲಿರುವ ಹುಲಿ ಸಂರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ರೂಪಿಸಿದೆ.ಭಾರತದಲ್ಲಿ ಕೇವಲ 2700 ರಿಂದ 2800 ಆಸುಪಾಸಿನಲ್ಲಿ ಹುಲಿಗಳ ಸಂಖ್ಯೆ ಇರುವಾಗ ಅವುಗಳ ಸಂರಕ್ಷಣೆಗಾಗಿ ಕಾಕಷ್ಟು ಕಠಿಣ ರಾಷ್ಟ್ರೀಯ ನೀತಿಯನ್ನು ರೂಪಿಸಿಲಾಗಿದೆ. ಇನ್ನೂ ಹುಲಿ ಹೇಗೆ ಎಲ್ಲಿಯೆ ಸತ್ತರು ಅದರ ಸಂಪೂರ್ಣ ಮಾಹಿತಿ ಕಲೆಹಾಕಿ ಸ್ಥಳ ಮಹಜರುಮಾಡಿ ನಂತರ ವೈದ್ಯಕೀಯ ಪರೀಕ್ಷೆ ನೆಡೆಸಿ ಹಾಗೂ ಹುಲಿ ಸಾವಿನ ತನಿಖೆ ಹೇಗಿರಬೇಕು ಎಂಬ ನಿಯಮವನ್ನು ಸಹ ರೂಪಿಸಲಾಗಿದೆ. ನಾವು ಇಷ್ಟೆಲ್ಲಾ ಹೇಳಲು ಕಾರಣ ಈ ನಿಯಮಗಳನ್ನು ಶಿಕಾರಿಪುರ ತಾಲೂಕಿನ ಅಂಬ್ಲಿಗೋಳದ ಜಲಾಶಯದಲ್ಲಿ ಸಾವನ್ನಪ್ಪಿದ ಹುಲಿ ಪ್ರಕರಣದಲ್ಲಿ ಅರಣ್ಯ ಇಲಾಖೆ ಈ ಎಲ್ಲಾ ನಿಯಮಗಳನ್ನು ಅನುಸರಿಸಿದೆಯಾ.! ಎನ್ನುವ ಅನುಮಾನ ಸ್ಥಳೀಯರ ಜೊತೆಗೆ ಪ್ರಾಣಿ ಪ್ರಿಯರನ್ನು ಕಾಡತೊಡಗಿದೆ.?
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಬ್ಲಿಗೋಳ ರೇಂಜ್‌ನ ಜಲಾಶಯದಲ್ಲಿ ಕಳೆದ ವಾರ ಗಂಡು ಹುಲಿಯೊಂದು ಸತ್ತ ಸ್ಥಿತಿಯಲ್ಲಿ ನೀರಿನಲ್ಲಿ ತೇಲುತ್ತಿದ್ದ ದೃಷ್ಯವನ್ನು ಗಮನಿಸಿದ ಸ್ಥಳೀಯರು ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳು ಹುಲಿಯ ದೇಹವನ್ನು ನೀರಿನಿಂದ ಮೇಲಕ್ಕೆ ತೆಗೆದು ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ಸಾವನ್ನಪ್ಪಿರುವುದು ಗೊತ್ತಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಹುಲಿಯ ದೇಹದ ಭಾಗಕ್ಕೆ ಬೇಟೆಗಾರರ ಗುಂಡು ತೂರಿದಿಯಾ.? ಅಥವಾ ಇನ್ನೊಂದು ಹುಲಿಯ ಜೋತೆಗೊ ಅಥವಾ ಇನ್ಯಾವುದೊ ಪ್ರಾಣಿಗಳ ಜೋತೆಗೆ ಹೊಡೆದಾಡಿ ಗಾಯಗೊಂಡು ನೀರಿನಲ್ಲಿ ಬಿದ್ದು ಸತ್ತಿರ ಬಹುದಾ.? ಇಲ್ಲವೇ ಸ್ವಾಭಾವಿಕ ಕಾಯಿಲೆಗೆ ತುತ್ತಾಗಿ ಬಾಯಾರಿ ನೀರಿನ ಬಳಿ ಬಂದು ಅಯಾ ತಪ್ಪಿ ಬಿದ್ದು ಸಾವನಪ್ಪಿರ ಬಹುದಾ.? ಎನ್ನುವ ಹತ್ತು ಹಲವು ಪ್ರಶ್ನೆಗಳು ಪ್ರಾಣಿ ಪ್ರಿಯರ ಜೊತೆ ಸ್ಥಳೀಯರು ಮುಖ್ಯವಾಗಿ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳಿಗೆ ಕಾಡಿದ್ದಂತೂ ಸುಳ್ಳಲ್ಲ. ಹುಲಿ ಸಾವಿಗೆ ಸಂಭಂದಿಸಿದಂತೆ ಅರಣ್ಯ ಸಚಿವರು ಸೂಕ್ತ ತನಿಖೆಗೆ ಆದೇಶಿಸಿದರು ಹುಲಿ ಸಾವಿನ ತನಿಖೆ ಸೂಕ್ತವಾಗಿ ನೆಡೆದಿದಿಯಾ.?ಇಲ್ಲಿ ಗಮನಿಸಬೇಕಾಗಿರುವುದು ತನಿಖೆ ಎನ್.ಟಿ.ಸಿ.ಎ ಗೈಡ್ ಲೈನ್ ಪ್ರಕಾರ ನಡೆದಿದೆಯಾ.? ಎಂಬ ಅನುಮಾನ ಕಾಡುತ್ತಿದೆ.
ಹುಲಿ ರಾಷ್ರೀಯ ಪ್ರಾಣಿ ಅದರ ಸಂತತಿ ಬೆಳಸಲು ಮತ್ತು ಅವುಗಳ ಉಳಿವಿಗಾಗಿ ಕೇಂದ್ರ ಮತ್ತು ರಾಜ್ಯಸರ್ಕಾರ ಸಾಕಷ್ಟು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ ಹೀಗಿರುವಾಗ ಯಾವುದೇ ಹುಲಿ ಸಾವಿಗೆ ಪೂರಕವಾಗಿ ಸ್ಥಳ ಮಹಜರು, ತನಿಖೆ, ತಪಾಸಣೆ, ವೈದ್ಯಕೀಯ ಪರೀಕ್ಷೆ, ಅಂತ್ಯ ಸಂಸ್ಕಾರ ಮಾಡುವಾಗ ಸರ್ಕಾರದ ಮಾರ್ಗಸೂಚಿಗಳನ್ನು ಚಾಚು ತಪ್ಪದೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಅನುಸರಿಸಬೇಕಾಗುತ್ತದೆ.ಆದರೆ ಅಂಬ್ಲಿಗೋಳದಲ್ಲಿ ಸಾವನ್ನಪ್ಪಿದ ಗಂಡು ಹುಲಿಗೆ ಎಂಟರಿಂದ ಒಂಬತ್ತು ವರ್ಷ ವಯಸ್ಸು ಆಗಿದ್ದು, ಸಧೃಡವಾಗಿತ್ತು. ಈ ಹುಲಿ ಸಾವಿನ ತನಿಖೆಯಲ್ಲಿ ನ್ಯಾಷನಲ್ ಟೈಗರ್ ಪ್ರೊಟೆಕ್ಷನ್ ಆಕ್ಟ್‌ನ ಗೈಡ್ ಲೈನ್ ಫಾಲೋ ಆಗಿಲ್ಲ. ಒಂದು ಹುಲಿ ಸಾವನ್ನಪ್ಪಿದಾಗ, ವಿಭಾಗ ಮಟ್ಟದ ಅರಣ್ಯಾಧಿಕಾರಿ ಹಾಗೂ ವೈಲ್ಡ್ ಲೈಫ್ ವಾರ್ಡನ್ ನೇತೃತ್ವವದಲ್ಲಿ ಒಂದು ತಂಡವೇ ರಚನೆಯಾಗಬೇಕಾಗುತ್ತದೆ. ಕನಿಷ್ಟ ಇಬ್ಬರು ವೈದ್ಯರು ಘಟನಾ ಸ್ಥಳದಲ್ಲಿರಬೇಕಾಗುತ್ತದೆ. ಇದಲ್ಲದೆ ಜಿಲ್ಲಾ ಮಟ್ಟದ ವನ್ಯಜೀವಿ ವೈದ್ಯರ ಉಪಸ್ಥಿತಿಯೂ ಮುಖ್ಯವಾಗಿರುತ್ತದೆ. ಸಬ್ಜೆಕ್ಟ್ ಎಕ್ಸ್ ಪರ್ಟ್ ಅಂದರೆ ವೆಟನರಿ ಕಾಲೇಜಿನ ಪ್ಯಾಥೋಲಾಜಿಸ್ಟ್ ಉಪಸ್ಥಿತಿ ಮುಖ್ಯವಾಗಿರುತ್ತದೆ.
ಆದರೆ ಅಂಬ್ಲಿಗೋಳ ಜಲಾಶಯದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡ ಗಂಡು ಹುಲಿ ಮೃತದೇಹದ ವೈದ್ಯಕೀಯ ತಪಾಸಣೆಯಲ್ಲಿ ಈ ನಿಯಮಾವಳಿಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಪ್ಯಾಥೋಲಾಜಿಸ್ಟ್ ನೇತ್ರತ್ವದಲ್ಲಿ ನಡೆಯಬೇಕಾದ ವೈದ್ಯಕೀಯ ಪರೀಕ್ಷೆ, ಲಯನ್ ಸಫಾರಿಯ ಔಟ್ ಸೋರ್ಸ್ ವೈದ್ಯರಿಂದ ನಡೆಸಲಾಗಿದೆ.ಇವರು ಓದಿರುವುದು ಬಿ.ವಿಎಸ್ಸಿ ಅಷ್ಟೆ. ಹಾಗಂತ ಈ ವೈದ್ಯರ ಕಾರ್ಯಕ್ಷಮತೆಯನ್ನು ಪ್ರಶ್ನಿಸುತ್ತಿಲ್ಲ. ಬದಲಾಗಿ ಹುಲಿ ಸಾವಿನ ವೈದ್ಯಕೀಯ ಪರೀಕ್ಷೆಯನ್ನ ಪ್ಯಾಥೋಲಾಜಿಸ್ಟ್ ಮಾಡಬೇಕಿತ್ತು ಎಂಬುದು ಮುಖ್ಯ ಉದ್ದೇಶವಾಗಿದೆ. ಇಲ್ಲಿ ಕೊಲ್ಲಲ್ಪಟ್ಟಿರುವುದು ಅಥವಾ ಸಾವನ್ನಪ್ಪಿರುವುದು ಒಂದು ಕುರಿ ಕೋಳಿ ಅಲ್ಲ ಎಂಬ ಪರಿಜ್ಞಾನವೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಇದ್ದಂತೆ ಕಾಣುತ್ತಿಲ್ಲ.! ಇಲ್ಲಿ ಎನ್.ಟಿ.ಸಿ.ಎ ಗೈಡ್ ಲೈನ್ ಅನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.ಈ ಬಗ್ಗೆ ಅರಣ್ಯ ಭವನದಲ್ಲಿರುವ ಚೀಫ್ ವೈಲ್ಡ್ ಲೈಫ್ ವಾರ್ಡನ್ ಸ್ಷಷ್ಟನೇ ನೀಡಿ, ಹುಲಿ ಸಾವಿಗೆ ನ್ಯಾಯ ಕೊಡುವರೇ…ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಅಂಬ್ಲಿಗೋಳ ಹುಲಿ ಸಾವಿನ ತನಿಖೆಯ ಬಗ್ಗೆ ಪ್ರಾಣಿಪ್ರಿಯರು ವನ್ಯಜೀವಿ ತಜ್ಞರುಗಳು ಧ್ವನಿ ಎತ್ತಬೇಕಿದೆ.
ಹುಲಿ ಮರಣದ ವಿಶ್ಲೇಷಣೆ ಪ್ರಕ್ರಿಯೆ
ಭಾರತದಲ್ಲಿ ಹುಲಿಗಳ ಸಾವಿನ ದಾಖಲೆಯನ್ನು ಕಾಯ್ದುಕೊಳ್ಳುವಲ್ಲಿನ ಕಠಿಣತೆ ಹೀಗಿದೆ:
1. ರಾಜ್ಯ ಸರ್ಕಾರದ ಅಧಿಕೃತ ಮೂಲವು ಹುಲಿ ಸಾವನ್ನು ವರದಿ ಮಾಡದ ಹೊರತು, ಯಾವುದೇ ಹುಲಿ ಸಾವನ್ನು ಡೇಟಾಬೇಸ್ನಲ್ಲಿ ನಮೂದಿಸಲಾಗುವುದಿಲ್ಲ.
2. ಮೂರನೇ ವ್ಯಕ್ತಿಯ ಮೂಲಗಳಿಂದ NTCA ಗೆ ಹುಲಿ ಸಾವು ವರದಿಯಾಗಿದ್ದರೂ ಸಹ, ಅದನ್ನು ದಾಖಲಿಸುವ ಮೊದಲು ರಾಜ್ಯದಿಂದ ದೃಢೀಕರಣವನ್ನು ಪಡೆಯಲಾಗುತ್ತದೆ.
3. ಎಲ್ಲಾ ಹುಲಿಗಳ ಸಾವುಗಳನ್ನು ಭಾರತದ ವನ್ಯಜೀವಿ (ರಕ್ಷಣೆ) ಕಾಯ್ದೆ, 1972 ರ ಸೂಕ್ತ ನಿಬಂಧನೆಗಳ ಅಡಿಯಲ್ಲಿ NTCA ಹೊರಡಿಸಿದ SOP ಪ್ರಕಾರ ವ್ಯವಹರಿಸಲಾಗುತ್ತದೆ . ನಿಯಮಗಳನ್ನು ಪಾಲಿಸದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ, ಪರಿಸ್ಥಿತಿ ಅಗತ್ಯವಾಗಿದ್ದರೆ, NTCA ಯ ಪ್ರಾದೇಶಿಕ ಕಚೇರಿಯಿಂದ ತನಿಖೆಯನ್ನು ಪ್ರಾರಂಭಿಸಲಾಗುತ್ತದೆ.
4. ಒಂದು ಪ್ರಕರಣವನ್ನು ನೈಸರ್ಗಿಕ ಅಥವಾ ಬೇಟೆಯಾಡುವಿಕೆ ಎಂದು ಸಾಬೀತುಪಡಿಸುವ ಜವಾಬ್ದಾರಿ (ನೆಕ್ರೋಪ್ಸಿ ವರದಿ, ರೋಗಶಾಸ್ತ್ರ ವರದಿ, ಬಣ್ಣದ ಛಾಯಾಚಿತ್ರಗಳು, ವಿಧಿವಿಜ್ಞಾನ ವರದಿಗಳು ಮತ್ತು SOP ಸ್ವರೂಪದ ಪ್ರಕಾರ ಇತರ ವರದಿಗಳಂತಹ ಸಾಕಷ್ಟು ಪುರಾವೆಗಳೊಂದಿಗೆ) ರಾಜ್ಯದ್ದಾಗಿದೆ.
5. ಮರಣದ ಕಾರಣವನ್ನು ಖಚಿತಪಡಿಸಿಕೊಳ್ಳಲು ನೆಕ್ರೋಪ್ಸಿ ವರದಿಯು ಸ್ಪಷ್ಟ ಪುರಾವೆಗಳನ್ನು ಒದಗಿಸುವ ಸಂದರ್ಭಗಳು ಇರಬಹುದು.
6. ಆದಾಗ್ಯೂ, ಅಂತಹ ಪುರಾವೆಗಳ ಅನುಪಸ್ಥಿತಿಯಲ್ಲಿ, ಮೇಲೆ ಪಟ್ಟಿ ಮಾಡಲಾದ ಪೋಷಕ ವರದಿಗಳನ್ನು ತೀರ್ಮಾನಕ್ಕೆ ಬರಲು ಬಳಸಲಾಗುತ್ತದೆ.
7. ಈ ವಿಶ್ಲೇಷಣೆಯನ್ನು ದೆಹಲಿಯಲ್ಲಿರುವ NTCA ಪ್ರಧಾನ ಕಚೇರಿಯಲ್ಲಿ ಮಾಡಲಾಗುತ್ತದೆ. ಖಚಿತವಾದ ನಂತರ, ಹುಲಿಯ ಸಾವಿಗೆ ಕಾರಣವನ್ನು ಅಂತಿಮವಾಗಿ ಹೇಳಲಾಗುತ್ತದೆ. ಯಾವುದೇ ಸಂದೇಹವಿದ್ದಲ್ಲಿ, ಪುರಾವೆಗಳ ಹೊರತಾಗಿಯೂ, ಪ್ರಕರಣವನ್ನು ಬೇಟೆಯಾಡುವಿಕೆ ಎಂದು ಮುಕ್ತಾಯಗೊಳಿಸಲಾಗುತ್ತದೆ.