ಕಲಬುರಗಿ: ತಂಗಿ ಜೊತೆಗೆ ಚಲ್ಲಾಟಕ್ಕೆ ಬಂದವನ ನೆತ್ತರು ಚಲ್ಲಿದ ಸಹೋದರ..! ಹತ್ಯೆ ಗೈದು ಕುಂಬ ಮೇಳಕ್ಕೆ ಹಾರಿದ ಹಂತಕ..!
Ashwasurya/Shivamogga
ಅಶ್ವಸೂರ್ಯ/ಕಲಬುರಗಿ: ತಂಗಿಯ ಪ್ರೀತಿ ವಿಷಯಕ್ಕೆ ಸಂಬಂಧಿಸಿದಂತೆ ಭೀಕರ ಹತ್ಯೆಯೊಂದು ನಡೆದು ಹೋಗಿದೆ.! ಫೆಬ್ರವರಿ 16 ರಂದು ಕಾಣೆಯಾಗಿದ್ದ ವ್ಯಕ್ತಿಯ ಶವ ಪೊಲೀಸರಿಗೆ ಒಂದು ವಾರದ ನಂತರ ಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆಘಾತಕಾರಿ ವಿಷಯಗಳು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಆಳಂದ ತಾಲೂಕಿನ ಖಜೂರಿ ಗ್ರಾಮದ ರಾಹುಲ್ ಎಂಬಾತೆ ಹಂತಕರಿಂದ ಹತ್ಯೆಯಾದ ಯುವಕ.! ರಾಹುಲ್ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಆಳಂದ ತಾಲೂಕಿನ ಆನೂರು ಗ್ರಾಮದ ಭಾಗ್ಯವಂತಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಜೀಪ್ ಚಾಲಕನಾಗಿದ್ದ ರಾಹುಲ್, ಭಾಗ್ಯವಂತಿಯನ್ನು ಪ್ರತಿದಿನ ಕಾಲೇಜಿಗೆ ಕರೆದೊಯ್ಯುತ್ತಿದ್ದಾಗ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಈ ಪ್ರೀತಿ ಮದುವೆಯಾಗಿ ಮಗುವಾದ ಮೇಲೆ ರಾಹುಲನಿಗೆ ಕಮ್ಮಿ ಆಗಿರಲಿಲ್ಲ.! ಮದುವೆಯ ನಂತರವೂ ಆಕೆಯ ಜೋತೆಗೆ ಪ್ರೀತಿಸುವುದನ್ನು ಮುಂದುವರೆಸಿದ್ದನಂತೆ.!
ರಾಹುಲ್, ಕೊಲೆಯಾದ ವ್ಯಕ್ತಿ.
ಫೆಬ್ರವರಿ 16 ರಂದು ಭಾಗ್ಯವಂತಿ ತನ್ನ ಪ್ರೀಯತಮ ರಾಹುಲ್ ನನ್ನು ಮನೆಗೆ ಕರೆದಿದ್ದಾಳೆ.!ಪ್ರೀತಿಸಿದ ಮನೆಗೆ ಕರೆದ ಖುಷಿಯಲ್ಲಿ ರಾಹುಲ್ ಆಕೆಯ ಮನೆಗೆ ಹೋಗಿದ್ದಾನೆ. ಆದರೆ ವಿಧಿ ಆಟವೆ ಬೇರೆಯಾಗಿತ್ತು.ಆಕೆಯ ಜೋತೆಯಲ್ಲಿ ಪ್ರೀತಿಯ ನಶೆಯಲ್ಲಿದ್ದ ಸಮಯದಲ್ಲೇ ಭಾಗ್ಯವಂತಿಯ ಅಣ್ಣ ಪೃಥ್ವಿರಾಜ್ ಮನೆಗೆ ಬಂದಿದ್ದಾನೆ. ತಂಗಿಯೊಂದಿಗೆ ರಾಹುಲ್ ಇರುವುದನ್ನು ನೋಡಿ ಇನ್ನಿಲ್ಲದಂತೆ ಎಗರಾಡಿ ಕೋಪಗೊಂಡ ಪೃಥ್ವಿರಾಜ್, ರಾಹುಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಹಲ್ಲೆಯಲ್ಲಿ ರಾಹುಲ್ ಸ್ಥಳದಲ್ಲೇ ಉಸಿರು ಚಲ್ಲಿದ್ದಾನೆ.
ರಾಹುಲ್ ಖಜೂರಿಯನ್ನು ಕೊಲೆ ಮಾಡಿದ ಬಳಿಕ
ಹಂತಕ ಪೃಥ್ವಿರಾಜ್ ಸಹಾಯಕ್ಕಾಗಿ ತನ್ನ ಸ್ನೇಹಿತರಾದ ಪವನ್ ಮತ್ತು ಇನ್ನೊಬ್ಬ ಅಪ್ರಾಪ್ತ ನನ್ನು ಕರೆದಿದ್ದಾನೆ.!
ರಾಹುಲ್‌ನ ಶವವನ್ನು ತನ್ನ ಸ್ನೇಹಿತ ಪವನ್ ಮತ್ತು ಮತ್ತೊಬ್ಬ ಅಪ್ರಾಪ್ತನ ಸಹಾಯದಿಂದ ಬೈಕ್‌ನಲ್ಲಿಟ್ಟುಕೊಂಡು ಹೋಗಿದ್ದಾರೆ ನಂತರ ಸಾಂಗ್ವಿ ಡ್ಯಾಂನಲ್ಲಿ ರಾಹುಲ್ ನ ಶವವನ್ನು ಎಸೆದಿದ್ದಾರೆ..!!
ಹಂತಕರು ಮೃತದೇಹಕ್ಕೆ ಕಲ್ಲು ಕಟ್ಟಿ ಡ್ಯಾಮಿನ ನೀರಿನೊಳಗೆ ಬಿಸಾಡಿದ್ದಾರೆ. ಶವ ಮೇಲೆ ತೇಲದಂತೆ ಬೃಹತ್ ಕಲ್ಲು ಕಟ್ಟಿದ್ದರಂತೆ. ಈ ಪ್ರಕರಣವನ್ನು ಕೈಗೆತ್ತಿಕೊಂಡ ಅಳಂದ ಪೊಲೀಸರು ಚುರುಕು ಕಾರ್ಯಚರಣೆ ನಡೆಸಿದ್ದು, ಪವನ್ ಹಾಗೂ ಓರ್ವ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಪೃಥ್ವಿರಾಜ್.!
ರಾಹುಲ್‌ನ ಶವವನ್ನು ತನ್ನ ಸ್ನೇಹಿತ ಪವನ್ ಮತ್ತು ಮತ್ತೊಬ್ಬ ಅಪ್ರಾಪ್ತನ ಸಹಾಯದಿಂದ ಬೈಕ್‌ನಲ್ಲಿಟ್ಟುಕೊಂಡು ಹೋಗಿ ಸಾಂಗ್ವಿ ಡ್ಯಾಂನಲ್ಲಿ ಎಸೆದಿದ್ದಾನೆ. ನಂತರ ಏನೂ ನಡೆದೆ ಇಲ್ಲವೆಂಬಂತೆ ರಾಹುಲ್ ಹೆಣ ಕೆಡವಿದ ಹಂತಕ ಪೃಥ್ವಿರಾಜ್.ಯಾರಿಗೂ ಅನುಮಾನ ಬಾರದಂತೆ ಕುಂಭಮೇಳಕ್ಕೆ ಹೋಗಿದ್ದಾನೆ.
ಕಾಣೆಯಾದ ರಾಹುಲ್‌ನ ಮೊಬೈಲ್ ಸಿಡಿಆರ್ ಆಧರಿಸಿ ತನಿಕೆಗೆ ಮುಂದಾದ ಪೊಲೀಸರಿಗೆ ಈ ಪ್ರಕರಣದ ಎಲ್ಲಾ ವಿಷಯಗಳು ಒಂದೊಂದಾಗಿ ಬೆಳಕಿಗೆ ಬಂದಿವೆ. 13 ದಿನಗಳ ನಂತರ ಪೊಲೀಸರಿಗೆ ರಾಹುಲ್‌ನ ಶವ ಪತ್ತೆಯಾಗಿದ್ದು
ಪ್ರಕರಣಕ್ಕೆ ಸಂಬಂಧಿಸಿದಂತೆ ಪೃಥ್ವಿರಾಜ್, ಆತನ ತಂಗಿ ಭಾಗ್ಯವಂತಿ ಮತ್ತು ತಾಯಿ ಸೀತಾಬಾಯಿ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಶವ ಸಾಗಿಸಲು ಸಹಾಯ ಮಾಡಿದ ಆರೋಪದ ಮೇಲೆ ಪವನ್ ಮತ್ತು ಮತ್ತೊಬ್ಬ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಪವನ್, ಕೊಲೆ ಆರೋಪಿ.!
ಬಂಧಿತರನ್ನು ಪೊಲೀಸರ ವಿಚಾರಣೆಗೊಳಪಡಿಸಿದಾಗ ಎ1 ಆರೋಪಿ ಕುಂಭಮೇಳಕ್ಕೆ ಎಸ್ಕೇಪ್ ಆಗಿರುವುದನ್ನು ಬಾಯಿಬಿಟ್ಟಿದ್ದಾರೆ. ಯುವತಿಯ ವಿಚಾರದಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಆಳಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಮುಖ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕಳೆದ ಜನವರಿ 30ರಂದು ಮನೆಯಿಂದ ಮೃತ ರಾಹುಲ್ ಕಾಣೆಯಾಗಿದ್ದನು. ಮಹಾರಾಷ್ಟ್ರದ ಸಾಂಗ್ಲಿ ಬಳಿಯ ಬೆಣ್ಣೆತೋರಾ ಹಿನ್ನೀರಿನಲ್ಲಿ ಆತನ ಮೃತದೇಹ ಪತ್ತೆಯಾಗಿದ್ದು, ಕೊಲೆ ಮಾಡಿ ಬಳಿಕ ಆತನ ಮೃತದೇಹವನ್ನು ಯಾರಿಗೂ ಸಿಗದಂತೆ ಕಲ್ಲುಕಟ್ಟಿ ಡ್ಯಾಮಿನ ನೀರಿಗೆ ಬಿಸಾಡಿ ಹೋಗಿದ್ದಾರೆ. ಈ ಸಂಬಂಧ ಕಾರ್ಯಚರಣೆ ನಡೆಸಿದ ಆಳಂದ ಪೊಲೀಸರು, ಕೊಲೆ ಮಾಡಿದ ಐವರ ಪೈಕಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇನ್ನೋರ್ವ ಪ್ರಮುಖ ಆರೋಪಿ ಕುಂಭಮೇಳಕ್ಕೆ ತೆರಳಿದ್ದಾನೆ ಎನ್ನುವ ಮಾಹಿತಿ ತಿಳಿದುಬಂದಿದೆ.ಅವನ ಬಂಧನಕ್ಕಾಗಿ ಪೊಲೀಸರ ತಂಡ ಕಾರ್ಯಚರಣೆಗೆ ಇಳಿದಿದೆ.