ಖ್ಯಾತ ನಟಿ ಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಸಮಯದಲ್ಲಿ ಬಲವಂತವಾಗಿ ಕಿಸ್ ಮಾಡಲು ಯತ್ನಿಸಿದ ಅಭಿಮಾನಿ..! ವಿಡಿಯೋ ವೈರಲ್.!
Ashwasurya/Shivamogga
ಅಶ್ವಸೂರ್ಯ: ಕೆಲವೊಂದು ಬಾರಿ ಸೆಲೆಬ್ರಿಟಿಗಳು ವಿಚಿತ್ರ ರೀತಿಯ ಅಭಿಮಾನಿಗಳನ್ನು ಭೇಟಿ ಮಾಡಬೇಕಾಗುವ ಸಂಧರ್ಭ ಎದುರಾಗುತ್ತದೆ. ವಿಶೇಷವಾಗಿ ನಟಿಯರ ವಿಷಯದಲ್ಲೂ ಇಂತಹ ಸಂಗತಿಗಳು ಹೆಚ್ಚಾಗಿ ಬೆಳಕಿಗೆ ಬರುತ್ತವೆ.. ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಕೆಲವೊಂದಿಷ್ಟು ಜನರು ಅವರನ್ನು ಬಲವಂತವಾಗಿ ಅಪ್ಪಿಕೊಳ್ಳಲು ಪ್ರಯತ್ನಿಸುತ್ತಾರೆ..
ಇದೀಗ ಅಂತಹುದೇ ಒಂದು ಘಟನೆ ನಡೆದಿದೆ.
ಪ್ರಸಿದ್ಧ ಮಾಡೆಲ್ ಪೂನಂ ಪಾಂಡೆ ಈ ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದ್ದಾರೆ.! ಪೂನಂ ಹಾಟ್ ಲುಕ್‌ನಲ್ಲಿ ತಮ್ಮವರ ಕ್ಯಾಮರಾಗೆ ಫೋಟೋಗೆ ಪೋಸ್ ನೀಡುತ್ತಿದ್ದಾಗ, ಅಲ್ಲಿಗೆ ಬಂದ ಕುಡುಕ ಅಭಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಕಿಸ್ ಮಾಡಲು ಪ್ರಯತ್ನಿಸಿದ್ದಾನೆ.. ಈ ಕುರಿತ ವಿಡಿಯೋ ವೈರಲ್ ಆಗಿದೆ..
ವಿಡಿಯೋದಲ್ಲಿ ಪೂನಂ ಕೆಂಪು ಬಣ್ಣದ ಡೀಪ್ ನೆಕ್ ಬಾಡಿಕಾನ್ ಡ್ರೆಸ್‌ನಲ್ಲಿ ಫೋಟೋಗೆ ಪೋಸ್ ಕೊಡುತ್ತಿರುವುದನ್ನು ಕಾಣಬಹುದು.. ಆಗ ಅಲ್ಲಿಗೆ ಬಂದ ಅಭಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ನಟಿ ಕೆನ್ನೆಗೆ ಮುತ್ತಿಡಲು ಯತ್ನಿಸಿದ್ದಾನೆ.. ಇದರಿಂದ ಪೂನಂಗೆ ಶಾಕ್ ಆಗಿ ಪಕ್ಕಕ್ಕೆ ಸರಿದಿದ್ದಾರೆ.!
ಇದೇ ವೇಳೆ ಪೂನಂ ಜೊತೆಗಿದ್ದವರು ತಕ್ಷಣ ಆ ವ್ಯಕ್ತಿಯನ್ನು ಹಿಂದಕ್ಕೆ ತಳ್ಳಿದ್ದಾರೆ. ಈ ಇಡೀ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಿಸ್ ಮಾಡಲು ಬಂದ ವ್ಯಕ್ತಿ ಕುಡಿದಿರುವುದು ಎದ್ದು ಕಾಣುತ್ತಿದೆ. ಈ ಘಟನೆಯಿಂದಾಗಿ ಪೂನಂ ಪಾಂಡೆ ಅವರು ಸ್ವಲ್ಪಮಟ್ಟಿಗೆ ಹೆದರಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.. ಇಂತಹ ಹುಚ್ಚು ಅಭಿಮಾನಕ್ಕೆ ಎನನ್ನಬೇಕೊ ಅ ದೇವರಿಗೆ ಗೊತ್ತು.?