Headlines

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ನೇತೃತ್ವದ ತಂಡದ ಕಾರ್ಯಾಚರಣೆ :10 ಕೋಟಿ ರೂ ಮೌಲ್ಯದ ಎಂಡಿ ಡ್ರಗ್ಸ್ ವಶ, ಇಬ್ಬರ ಬಂಧನ.

ಅಶ್ವಸೂರ್ಯ/ಮುಂಬಯಿ: ಮುಂಬಯಿ ನಗರದ ಪೊಲೀಸ್ ಕ್ರೈಮ್ ಬ್ರಾಂಚ್ ಅಧಿಕಾರಿಗಳ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ಅವರಿಂದ 10. ಕೋಟಿ ರೂಪಾಯಿ ಮೌಲ್ಯದ ಎಂಡಿ ಡ್ರಗ್ಸ್‌ನ್ನು ವಶ ಪಡಿಸಿಕೊಂಡಿದ್ದಾರೆ ಎಂದು ತಿಳಿಯಲಾಗಿದೆ.
ನಿರ್ದಿಷ್ಟ ಮಾಹಿತಿ ಆಧಾರದ ಮೇಲೆ, ಅಪರಾಧ ವಿಭಾಗದ ಬಾಂದ್ರಾ ಘಟಕ 9ರ ವಿಭಾಗದ ಸೀನಿಯರ್ ಇನ್‌ಸ್ಪೆಕ್ಟರ್‌ ಎನ್ ಕೌoಟರ್ ಸ್ಪೆಷಲಿಸ್ಟ್ ದಯಾನಾಯಕ್ ನೇತೃತ್ವದ ಅಧಿಕಾರಿಗಳ ತಂಡ ಸಂಜೆ ದಾದರ್ ನ ಪೂರ್ವ ವಲಯದ ಸ್ವಾಮಿನಾರಾಯಣ್ ದೇವಸ್ಥಾನದ ಬಳಿ ಇರುವ ಖಾಸಗಿ ಅತಿಥಿ ಗೃಹದ ಮೇಲೆ ದಾಳಿಮಾಡಿ ಕಾರ್ಯಾಚರಣೆ ನಡೆಸಿದ್ದಾರೆ.ಈ ದಾಳಿಯ ನಂತರದಲ್ಲಿ ಅಧಿಕಾರಿಯೊಬ್ಬರು ಹೇಳಿದಹಾಗೆ.

ಇಬ್ಬರು ಆರೋಪಿಗಳು ತಡರಾತ್ರಿ ಎಂ ಡಿ ಡ್ರಗ್ಸ್ ಸರಕಿನ ಜೊತೆಗೆ ಅಲ್ಲಿಗೆ ಬಂದಿದ್ದರು. ಅವರಲ್ಲಿ ಒಬ್ಬರು ಬಳಿಕ ಪೊಲೀಸ್ ಉಪಸ್ಥಿತಿಯನ್ನು ಗ್ರಹಿಸಿ ಪಲಾಯನ ಮಾಡಲು ಪ್ರಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಆರೋಪಿಗಳನ್ನು ‘ಎನ್‌ಕೌಂಟರ್‌ ಸ್ಪೆಷಲಿಸ್ಟ್’ ಇನ್ಸ್ ಪೆಕ್ಟರ್ ದಯಾ ನಾಯಕ್ ನೇತೃತ್ವದ ತಂಡ ಬಂಧಿಸಿದ್ದಾರೆ ಎಂದು ಅಧಿಕಾರಿಗಳು  ಹೇಳಿದ್ದಾರೆ. ಆರೋಪಿಗಳಿಂದ ಸುಮಾರು 5.4 ಕೆಜಿ ಎಂ ಡಿ ಡ್ರಗ್ ವಶಪಡಿಸಿಕೊಳ್ಳಲಾಗಿದೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 10. ಕೋಟಿ ರೂ. ಮೌಲ್ಯವನ್ನು ಹೊಂದಿವೆ.

ಇಬ್ಬರು ಆರೋಪಿಗಳನ್ನು ಗೋವಂಡಿ ನಿವಾಸಿ ಜಹಾಂಗೀರ್ ಶಾಹಾ ಆಲಂ ಶೇಖ್ (29) ಮತ್ತು ಪಶ್ಚಿಮ ಬಂಗಾಳದ ಮಾಲಾಕ್ಕೆ ಸೇರಿದ ಸೆನೌಲ್ ಜುಲಮ್ ಸೆಖ್ (28) ಎಂದು ಗುರುತಿಸಲಾಗಿದೆ ಎಂದು ದಯಾ ನಾಯಕ್ ತಿಳಿಸಿದ್ದಾರೆ.

ಆರೋಗ್ಯಗಳ ವಿರುದ್ಧದ ಮಾದಕವಸ್ತುಗಳು ಮತ್ತು ಸೈಕೋಟ್ರೋಪಿಕ್ ವಸ್ತುಗಳು (ಎನ್‌ಡಿಪಿಎಸ್) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಮಾಟುಂಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು ಇನ್ನಷ್ಟು ಮಾಹಿತಿ ಬರಬೇಕಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!