Headlines

Family Counselling: ಇಬ್ಬರು ಹೆಂಡಿರ ಮುದ್ದಿನ ಗಂಡ; 3 ದಿನ ಇವಳ ಜೋತೆ, 3 ದಿನ ಅವಳ ಜೋತೆ ಸಂಸಾರ.!! 1 ದಿನ ರಜೆ !ಲಡ್ಡು ಬಂದು ಬಾಯಿಗೆ ಬಿತ್ತು.!

ಅಶ್ವಸೂರ್ಯ/ಶಿವಮೊಗ್ಗ: ಬಿಹಾರ ಪೂರ್ಣಿಯ ಜಿಲ್ಲೆಯಲ್ಲಿ ಇಬ್ಬರು ಹೆಂಡತಿಯರಿಗೆ ತಿಳಿಯದ ಹಾಗೆ ಇಬ್ಬರಿಗೆ ತಾಳಿಕಟ್ಟಿ ಸಂಸಾರ ಹೂಡಿದ್ದಾ ಗಂಡನಿಗೆ ಲಡ್ಡು ಬಂದು ಬಾಯಿಗೆ ಬಿದ್ದಿದೆ.ಇತ್ತೀಚೆಗೆ ಇಬ್ಬರೂ ಹೆಂಡತಿಯರಿಗೆ ಇವನ ವಿಷಯ ಗೊತ್ತಾಗಿ ಪ್ರಕರಣ ಫ್ಯಾಮಿಲಿ ಕೌನ್ಸಿಲಿಂಗ್ ನ ಮುಂದೆ ಹೋಗಿತ್ತು.!ದೂರು ಬಂದ ಹಿನ್ನಲೆಯಲ್ಲಿ ಈ ಪ್ರಕರಣವನ್ನು ಕೈಗೆತ್ತಿಕೊಂಡು ಕೌನ್ಸಿಲಿಂಗ್ ಮಾಡಿದ ಅಧಿಕಾರಿಗಳು ಒಂದು ನಿರ್ಧಾರಕ್ಕೆ ಬಂದಿದ್ದರು. ನಿರ್ಧಾರದ ಪ್ರಕಾರ ಪತಿ ಮಹಾಶಯ ವಾರದಲ್ಲಿ ಮೂರು ದಿನ ಮೊದಲ ಹೆಂಡತಿಯೊಂದಿಗೆ ಮತ್ತು ಮೂರು ದಿನ ಎರಡನೇ ಹೆಂಡತಿಯೊಂದಿಗೆ ಕಳೆಯಬೇಕು. ಉಳಿದ ಒಂದು ದಿನ ಅವನಿಗೆ ಸ್ವತಂತ್ರ ನೀಡಲಾಗಿದೆ.ಎಂದರೆ ರಜೆ.! ಆ ದಿನ ಅವನು ತನ್ನ ಇಷ್ಟದ ಹೆಂಡತಿಯೊಂದಿಗೆ ಸಮಯ ಕಳೆಯಬಹುದು. ಇಲ್ಲವೆಂದರೆ ಒಬ್ಬನೇ ಕಾಲ ಕಳೆಯಬಹುದು.
ಎರಡನೇ ಮದುವೆಯ ಬಗ್ಗೆ ಮೊದಲ ಹೆಂಡತಿಗೆ ತಿಳಿದಿರಲಿಲ್ಲ
ಈ ಘಟನೆ ಪೂರ್ಣಿಯಾದ ರೂಪೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅವನಿಗೆ ಮೊದಲ ಹೆಂಡತಿಯಿಂದ ಇಬ್ಬರು ಮಕ್ಕಳಿದ್ದಾರೆ. ಏಳು ವರ್ಷಗಳ ಹಿಂದೆ ಈ ವ್ಯಕ್ತಿ ಎರಡನೇ ಮದುವೆ ಆಗಿದ್ದಾನೆ, ಆದರೆ ಅವನ ಮೊದಲ ಹೆಂಡತಿಗೆ ಈ ವಿಚಾರ ಏನೂ ತಿಳಿಸಿರಲಿಲ್ಲ.
ಎರಡನೇ ಮದುವೆಯ ಬಗ್ಗೆ ಮೊದಲ ಹೆಂಡತಿಗೆ ತಿಳಿದ ನಂತರ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಆಗ ಮನೆಯಲ್ಲಿ ನಿರಂತರ ಗಲಾಟೆ ಶುರುವಾಗಿದೆ. ಪರಿಸ್ಥಿತಿ ತೀರ ಹದಗೆಟ್ಟು, ಪತಿ ತನ್ನ ಮೊದಲ ಹೆಂಡತಿ ಮತ್ತು ಮಕ್ಕಳನ್ನು ಬಿಟ್ಟು ಎರಡನೇ ಹೆಂಡತಿಯೊಂದಿಗೆ ವಾಸಿಸಲು ಆರಂಭಿಸಿದ್ದ ತನ್ನ ಪತಿ ನನ್ನನ್ನು ನನ್ನ ಮಕ್ಕಳನ್ನು ಬಿಟ್ಟು ಹೋಗಿದ್ದಾನೆ, ಅಷ್ಟೇ ಅಲ್ಲದೇ ಮಕ್ಕಳ ವಿದ್ಯಾಭ್ಯಾಸ ಮತ್ತು ಖರ್ಚಿಗೂ ಹಣ ನೀಡುತ್ತಿಲ್ಲ ಎಂದು ಮೊದಲ ಹೆಂಡತಿ ಆರೋಪಿಸಿದ್ದಾಳೆ.
ಸುಮಾರು ಏಳು ವರ್ಷಗಳ ಹಿಂದೆ, ಆ ವ್ಯಕ್ತಿ ತನ್ನ ಮೊದಲ ಹೆಂಡತಿಗೆ ತಿಳಿಸದೆ ಎರಡನೇ ವಿವಾಹವಾದನು. ಈ ಘಟನೆಯ ಬಗ್ಗೆ ಮೊದಲ ಪತ್ನಿಗೆ ತಿಳಿದಾಗ, ಆಕೆ ಆಘಾತಕ್ಕೊಳಗಾಗಿದ್ದಳು ತಕ್ಷಣವೇ ಮತ್ತು ಪೊಲೀಸರಿಗೆ ದೂರು ನೀಡಿದಳು. ಜೊತೆಗೆ ವಿಚ್ಛೇದನ ನೀಡದೆ ಎರಡನೇ ಮದುವೆಯಾಗಿದ್ದಲ್ಲದೆ, ಮೊದಲ ಪತ್ನಿ ಮತ್ತು ಮಕ್ಕಳನ್ನು ಜವಬ್ದಾರಿಯುತವಾಗಿ ನೋಡಿಕೊಳ್ಳಲಿಲ್ಲ ಎಂಬ ಆರೋಪವೂ ಪತಿ ಮೇಲಿತ್ತು. ಈ ಬಗ್ಗೆ ಮೊದಲ ಪತ್ನಿ ಪೂರ್ಣಿಯಾ, ಎಸ್‌ಪಿ ಕಾರ್ತಿಕೇಯ ಶರ್ಮಾ ಅವರಿಗೆ ದೂರು ನೀಡಿದ್ದು, ಎಸ್ಪಿ ಈ ವಿಚಿತ್ರ ಪ್ರಕರಣವನ್ನು ಕುಟುಂಬ ಸಮಾಲೋಚನಾ ಕೇಂದ್ರಕ್ಕೆ ಹಸ್ತಾಂತರಿಸಿದರು.
ಕುಟುಂಬ ಸಲಹಾ ಕೇಂದ್ರದಲ್ಲಿ ವಿಚಾರಣೆ ಫೆಬ್ರವರಿ 14 ರಂದು ಪತಿ ಮತ್ತು ಇಬ್ಬರು ಹೆಂಡತಿಯರನ್ನು ಹಾಜರಾಗುವಂತೆ ತಿಳಿಸಿದ್ದರು. ವಿಚಾರಣೆಯ ಸಮಯದಲ್ಲಿ, ಮೊದಲ ಹೆಂಡತಿ ತನ್ನ ಗಂಡ ಎರಡನೇ ಮದುವೆಯಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಆಗ ಕೇಂದ್ರದ ಸದಸ್ಯರು ಆತನನ್ನು ತರಾಟೆ ತೆಗೆದುಕೊಂಡಿದ್ದಾರೆ, ಅಷ್ಟೇ ಅಲ್ಲದೇ ಎರಡನೇ ಹೆಂಡತಿಗೂ ಸರಿಯಾಗಿ ಕ್ಲಾಸ್ ತೆಗೆದು ಕೊಂಡಿದ್ದಾರೆ.ಮೂವರನ್ನು ವಿಚಾರಣೆಗೆ ಒಳಪಡಿಸಿದ ನಂತರದಲ್ಲಿ ಒಂದು ತೀರ್ಮಾನಕ್ಕೆ ಬಂದ ಕೌನ್ಸಿಲಿಂಗ್ ಅಧಿಕಾರಿಗಳು ದಿನಗಳ ಹಂಚಿಕೆ ಮಾಡಿ ಈ ಪ್ರಕರಣವನ್ನು ಬಗೆಹರಿಸಲು ಮುಂದಾದರು.! ವಾರದಲ್ಲಿ ಮೊದಲು ಪತಿ ನಾಲ್ಕು ದಿನ ಮೊದಲ ಹೆಂಡತಿಯೊಂದಿಗೆ ಇರಬೇಕೆಂದು ಮತ್ತು ಮೂರು ದಿನ ಎರಡನೇ ಹೆಂಡತಿಯ ಜೋತೆಗೆ ಇರಬೇಕೆಂದು ನಿರ್ಧರಿಸಿತು, ಆದರೆ ಎರಡನೇ ಹೆಂಡತಿ ಇದಕ್ಕೆ ವಿರೋಧ ವ್ಯಕ್ತಪಡಿಸಿದಳು. ಹೀಗಾಗಿ, ಅಂತಿಮವಾಗಿ, ಸಮಯವನ್ನು ಇಬ್ಬರೂ ಹೆಂಡತಿಯರ ನಡುವೆ ಸಮಾನವಾಗಿ ಹಂಚಲಾಯಿತು. ಮೂರು ದಿನ ಮೊದಲ ಹೆಂಡತಿಯ ಜೋತೆಗೆ, ಇನ್ನೂ ಮೂರು ದಿನ ಎರಡನೇ ಹೆಂಡತಿಯ ಜೊತೆ ಕಳೆಯಬೇಕು. ಉಳಿದ ಒಂದು ದಿನ ಅವನಿಗೆ ಸ್ವತಂತ್ರ ನೀಡಲಾಗಿದೆ. ಆ ದಿನ ಅವನು ತನ್ನ ಇಷ್ಟದ ಹೆಂಡತಿಯೊಂದಿಗೆ ಸಮಯ ಕಳೆಯಬಹುದು. ಇಷ್ಟವಿಲ್ಲ ಎಂದರೆ ಒಬ್ಬನೇ ಇರಬಹುದು.
ಇನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪತಿ ಪ್ರತಿ ತಿಂಗಳು 4000 ರೂಪಾಯಿಗಳನ್ನು ಮೊದಲ ಹೆಂಡತಿಗೆ ನೀಡಬೇಕೆಂದು ಆದೇಶಿಸಲಾಯಿತು. ಎರಡೂ ಕಡೆಯವರು ಈ ತೀರ್ಮಾನವನ್ನು ಒಪ್ಪಿಕೊಂಡರು ಮತ್ತು ವಿವಾದ ಅಲ್ಲಿಗೆ ಮುಗಿದಿದೆ. ಈ ವಿಶೇಷ ರಾಜಿ ಪ್ರಕರಣ ರಾಷ್ಟ್ರಾದ್ಯಂತ ಚರ್ಚೆಗೆ ಕಾರಣವಾಗಿದೆ ಮತ್ತು ಜನರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!