ಆ.25 ರಂದು ನಡೆದ ತ್ರಿಯಂಬಕಪುರ ಗ್ರಾಾಮ ಪಂಚಾಯತಿಯ ಗ್ರಾಮ ಸಭೆಯಲ್ಲಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ
ಕಂದಾಯ ಅಧಿಕಾರಿಗಳು ದಲಿತರ ಮನೆ ಬಾಗಿಲಿಗೆ ತೆರಳಿ ಜಾತಿ ಪ್ರಮಾಣ ಪತ್ರ ನೀಡುವಂತಾಗಬೇಕು -ಶಾಸಕ ಆರಗ
ತೀರ್ಥಹಳ್ಳಿ : ದಲಿತ ಕುಟುಂಬಗಳೂ ಜಾತಿ ಪ್ರಮಾಣಭ ಪತ್ರಕ್ಕಾಗಿ ಕಂದಾಯ ಇಲಾಖೆಗೆ ಆಲೆದು ವಾಪಾಸಾಗುತ್ತಿದ್ದಾರೆ.ಆತ ದಲಿತ ಎಂಬುದು ಎಲ್ಲರಿಗೂ ತಿಳಿದಿದ್ದರೂ ದಾಖಲಾತಿ ಒಟ್ಟುಗೂಡಿಸಿ ಜಾತಿ ಪ್ರಮಾಣ ಪತ್ರವನ್ನು ಪಡೆಯಲಾಗದೆ ಸರ್ಕಾರದ ಸವಲತ್ತಿನಿಂದ ವಂಚಿತನಾಗುತ್ತಿದ್ದಾನೆ.ಕಂದಾಯ ಇಲಾಖೆಯ ಅಧಿಕಾರಿಗಳೂ ದಲಿತರ ಮನೆಬಾಗಿಲಿಗೆ ತೆರಳಿ ಜಾತಿ ಪ್ರಮಾಣ ಪತ್ರವನ್ನು ನೀಡುವಂತಾಗಬೇಕು ಎಂದು ಮಾಜಿ ಗೃಹ ಸಚಿವರೂ ಕ್ಷೇತ್ರದ ಶಾಸಕರೂ ಆರಗ ಜ್ಞಾನೇಂದ್ರರವರು ತಿಳಿಸಿದರು.
ಆ.25 ರಂದು ನಡೆದ ತ್ರಿಯಂಬಕಪುರ ಗ್ರಾಾಮ ಪಂಚಾಯತಿಯ ಗ್ರಾಾಮ ಸಭೆಯಲ್ಲಿ ಮಾತನಾಡಿದ ಅವರು ಈ ಬಾರಿ ಶಾಸಕನಾದ ನಂತರ ಪ್ರಥಮ ಬಾರಿಗೆ ಗ್ರಾಮ ಸಭೆಯಲ್ಲಿ ಪಾಲ್ಗೊಂಡಿದ್ದೇನೆ.ಗ್ರಾಮ ಸಭೆ ಹೇಗೆ ನಡೆಯುತ್ತದೆ,ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆೆ ಗ್ರಾಮೀಣ ಪ್ರದೇಶಕ್ಕೆೆ ಹೇಗೆ ಅನುಕೂಲವಾಗುತ್ತದೆ ಎಂಬುದನ್ನು ತಿಳಿಯಲು ಇದೊಂದು ಸದವಕಾಶವಾಗಿದೆ.ಇಲ್ಲಿ ಭಾಗವಹಿಸಬೇಕಾದ ಎಲ್ಲಾ ಇಲಾಖೆಯ ಅಧಿಕಾರಿಗಳೂ ಭಾಗವಹಿಸಿದ್ದು ಗ್ರಾಾಮಸ್ಥರು ಉತ್ಸಾಹದಿಂದ ಅಧಿಕ ಸಂಖ್ಯೆೆಯಲ್ಲಿ ಪಾಲ್ಗೊಂಡಿದ್ದು ನನಗೆ ಹರ್ಷ ತಂದಿದೆ.ತ್ರಿಯಂಬಕಪುರ ಗ್ರಾಾಮ ಪಂಚಾಯತಿಯ ಜನತೆ ಗ್ರಾಾಮ ಸಭೆಯ ಮಹತ್ವವನ್ನು ಅರಿತಿದ್ದಾರೆ.ಇಲ್ಲಿನ ಅಧ್ಯಕ್ಷರು,ಸದಸ್ಯರುಗಳು ಕ್ರೀಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇಲ್ಲಿ ಸೇರಿರುವ ಜನಸ್ತೋೋಮವೇ ಸಾಕ್ಷಿಯಾಗಿದೆ.ಬಿಡುವಿಲ್ಲದ ಸಮಯದಲ್ಲೂ ಈ ಗ್ರಾಾಮ ಸಭೆಯಲ್ಲಿ ಇಷ್ಟು ಹೊತ್ತು ನಿಮ್ಮೊಂದಿಗಿರಬೇಕೆಂಬ ಹಂಬಲಕ್ಕೆೆ ಕಾರಣವೇ ಉತ್ತಮವಾಗಿ ನಡೆಯುತ್ತಿರುವ ಗ್ರಾಮ ಸಭೆಯಾಗಿದೆ ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಅಕ್ಷರ ದಾಸೋಹದ ಪ್ರವೀಣ್ ಪಾಲ್ಗೊಂಡಿದ್ದು,ಉಪಾಧ್ಯಕ್ಷರಾದ ಲಕ್ಷ್ಮೀದೇವಿ.ಮಾಜಿ ಅಧ್ಯಕ್ಷರಾದ ಸತ್ಯದೇವ್,ಸದಸ್ಯರಾದ ಪೂರ್ಣಿಮ ಪ್ರದೀಪ್ ಮತ್ತಿತರರಿದ್ದರು.
*ಗ್ರಾಮ ಸಭೆಗಳು ವ್ಯರ್ಥ ಕಾಲಹರಣವಾಗಬಾರದು*
ಗ್ರಾಮ ಸಭೆಗಳಲಿ ಚರ್ಚೆಯಾಗುವ ವಿಷಯಗಳು ಕಾರ್ಯಗತವಾಗಬೇಕು,ವ್ಯರ್ಥ ಕಾಲಹರಣವಾಗಬಾರದು.ಗ್ರಾಮದ ಕುಂದು ಕೊರತೆಯ ಬಗ್ಗೆೆ ಮುಕ್ತವಾಗಿ ಚರ್ಚೆಯಾಗಿ ಅಧಿಕಾರಿಗಳೂ ಅದನ್ನು ಬಗೆಹರಿಸುವಂತಾಗಬೇಕು.ಆಗ ಮಾತ್ರ ಗ್ರಾಮ ಸಭೆಗಳಿಗೆ ಮಹತ್ವ ಬರುತ್ತದೆ.ಇಲ್ಲಿನ ಅಧಿಕಾರಿಗಳು ತಮ್ಮ ಇಲಾಖೆಯ ಸಂಪೂರ್ಣ ಮಾಹಿತಿಯನ್ನು ಹಾಗೂ ಇಲಾಖೆ ನೀಡುವಂತಹ ಅನುದಾನಗಳ ಬಗ್ಗೆೆ ಮಾಹಿತಿ ನೀಡಿದ್ದಾರೆ.ಗ್ರಾಮಸ್ಥರು ಇಲಾಖೆಯಿಂದಾಗಬೇಕಾದ ಕೆಲಸಗಳ ಬಗ್ಗೆೆ ಹಾಗೂ ಅಡಚಣೆಯ ಬಗ್ಗೆೆ ತಿಳಿಸಿದ್ದಾರೆ.ಮುಂದಿನ ಗ್ರಾಮಸಭೆ ನಡೆಯುವಾಗ ಆ ಎಲ್ಲಾ ಸಮಸ್ಯೆೆಗಳೂ ಬಗೆಹರಿದಿರಬೇಕು.ಇಲ್ಲದಿದ್ದರೆ ಪ್ರಯೋಜನವಾಗುವುದಿಲ್ಲ.ಇಲ್ಲಿ ನಡೆದ ಗ್ರಾಮ ಸಭೆ ಶಿಸ್ತು ಬದ್ಧವಾಗಿದ್ದು ಅಧಿಕಾರಿಗಳೂ ಸಮಸ್ಯೆೆ ಬಗೆಹರಿಸುವ ನಿಟ್ಟಿನಲ್ಲಿ ಮುಂದಾಗುತ್ತಾಾರೆಂಬ ವಿಶ್ವಾಾಸ ನನಗಿದೆ ಎಂದರು.
ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕಾಗುತ್ತದೆ
ಕೃಷಿ ಇಲಾಖೆಯ ಅಧಿಕಾರಿಗಳು ಸಾಕಷ್ಟು ಮಾಹಿತಿಗಳನ್ನು ನೀಡಿದರು.ಇನ್ನೊಂದು ವಾರದಲ್ಲಿ ಮಳೆಯಾಗುವ ಸಾಧ್ಯತೆಯಿದೆಯೆಂಬುದನ್ನೂ ತಿಳಿಸಿದ್ದಾರೆ.ಈ ಬಾರಿ ಭತ್ತಕ್ಕೆೆ ಬೆಲೆ ಹೆಚ್ಚಿದ್ದು ಮಕ್ಕಿ ಗದ್ದೆೆಗಳನ್ನೆೆಲ್ಲಾಾ ನಾಟಿ ಮಾಡಿದ್ದಾರೆ.ಈಗಲೇ ನೀರಿನ ಅಭಾವವುಂಟಾಗುತ್ತಿದೆ.ತುಂಗಾ ನದಿಯ ನೀರಿನ ಹರಿವೂ ಕಡಿಮೆಯಾಗಿದೆ.ಮುಂದಿನ ದಿನಗಳಲ್ಲಿ ಪ್ರಕೃತಿ ಹೇಗೆ ನಡೆದುಕೊಳ್ಳುತ್ತದೆ ಎಂಬುದು ತಿಳಿಯದಾಗಿದೆ.ಸರ್ಕಾರ ರೈತರ ನೆರವಿಗೆ ಬರಬೇಕಿದೆ.ಬೆಳೆ ವಿಮೆಯನ್ನು ರೈತರು ಕಡ್ಡಾಾಯವಾಗಿ ಮಾಡಿಸಿಕೊಳ್ಳಬೇಕು.ಮನುಷ್ಯರಿಗೆ,ಜಾನುವಾರುಗಳಿ,ವಾಹನಗಳಿಗೆ ವಿಮೆಯಿತ್ತು.ಮೋದಿ ಸರ್ಕಾರ ಅಧಿಕಾರಕ್ಕೆೆ ಬಂದ ಮೇಲೆ ಬೆಳೆಗಳಿಗೂ ವಿಮೆಯನ್ನು ನೀಡಿದ್ದಾರೆ.ಹವಾಮಾನ ಆಧಾರಿತ ವಿಮೆ,ಕೃಷಿ ನಾಶ ವಿಮೆ ಬೇರೆ ಬೇರೆಯಾಗಿದೆ.ಮಳೆ ಬಾರದೆ ಹೋದರೆ ಹತಾಶರಾಗಿ ಆಕಾಶ ನೋಡಬೆೇಕಾಗುತ್ತದೆ.ವಿಮೆ ಮಾಡಿಸಿಕೊಂಡಿದ್ದರೆ ವಿಮಾ ಕಂಪನಿ ನಮಗೆ ಹಣ ತುಂಬುತ್ತದೆ.ಇಂತಹ ಸವಲತ್ತುಗಳನ್ನು ಗ್ರಾಾಮ ಸಭೆಯಲ್ಲಿ ಕೇಳಿ ತಿಳಿದುಕೊಂಡು ಅದನ್ನು ಉಪಯೋಗಿಸಿಕೊಳ್ಳುವಂತಾಗಬೇಕು.ಇನ್ನು ಒಂದು ವಾರದಲ್ಲಿ ಮಳೆ ಬಾರದೇ ಹೋದಲ್ಲಿ ಸರ್ಕಾರ ಈ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕಾಗುತ್ತದೆ ಎಂದರು.
*ಸರ್ಕಾರ ಜನರ ಮನೆಬಾಗಿಲಿಗೆ ತೆರಳಬೇಕು*
ಸರ್ಕಾರ ಜನ ಮನೆಬಾಗಿಲಿಗೆ ಹೋಗಬೇಕು ಆಗ ಮಾತ್ರ ಅವರುಗಳಿಗೆ ನಮ್ಮ ಪಾಲಿಗೆ ಸರ್ಕಾರವಿದೆ ಎನಿಸುತ್ತದೆ.ಇಲ್ಲದೇ ಹೋದಲ್ಲಿ ಸರ್ಕಾರದ ಪಾಡಿಗೆ ಸರ್ಕಾರ ಜನರ ಪಾಡಿಗೆ ಜನ ಆಗುತ್ತಾರೆ.ಯಾವ ಯೋಜನೆಗಳೂ ಜಾರಿಗೆ ಬರುವುದಿಲ್ಲ ಸರ್ಕಾರದ ಸವಲತ್ತುಗಳು ಜನರಿಗೆ ದೊರಕುವುದಿಲ್ಲ.ಕಂದಾಯ ಇಲಾಖೆಯ ಹಾಗೂ ಎಲ್ಲಾಾ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು.ತ್ರಿಯಂಬಕಪುರ ಗ್ರಾಮ ಪಂಚಾಯತಿ ಆಡಳಿತ ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ.ಸರ್ಕಾರದ ಪ್ರತಿಯೊಂದು ಯೋಜನೆಗಳನ್ನೂ ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗುವಂತಹ ಕೆಲಸ ಅಧ್ಯಕ್ಷ ಅನಿಲ್ ನೇತೃತ್ವದಲ್ಲಿ ನಡೆಯುತ್ತಿದೆ.ಅದಕ್ಕೆೆ ಉದಾಹರಣೆಯೇ ಸಣ್ಣ ಕೈಗಾರಿಕಾ ಇಲಾಖೆಯ ವತಿಯಿಂದ ನೀಡಲಾಗುತ್ತಿರುವ ಕೈಗಾರಿಕಾ ಉತ್ತೇಜನ ಉಪಕರಣಗಳನ್ನು ತನ್ನ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರಿಗೆ ತಲುಪಿಸಲು ಪ್ರಯತ್ನಿಸುತ್ತಿರುವುದಾಗಿದೆ ಎಂದರು.
*ಬಹು ಗ್ರಾಾಮ ಕುಡಿಯುವ ನೀರಿನ ಯೋಜನೆ ಯಶಸ್ವಿಯಾಗಬೇಕಿದೆ*
ತೀರ್ಥಹಳ್ಳಿ ತಾಲೂಕಿಗೆ ಕುಡಿಯುವ ನೀರಿನ ಯೋಜನೆಗೆ 354 ಕೋಟಿ ಅನುದಾನವನ್ನು ತಂದಿದ್ದು ಪ್ರತಿಯೊಬ್ಬರ ಮನೆ ಬಾಗಿಲಿಗೂ ಶುದ್ಧ ಕುಡಿಯುವ ನೀರು ನೀಡುವಂತಹ ಬಹು ಗ್ರಾಾಮ ಕುಡಿಯುವ ನೀರಿನ ಯೋಜನೆಯಾಗಿದ್ದು ಅನೇಕ ಗ್ರಾಾಮಗಳಲ್ಲಿ ಈ ಕೆಲಸ ಪೂರ್ಣಗೊಂಡಿದ್ದು ಇನ್ನೂ ಅನೇಕ ಗ್ರಾಮಗಳಲಿ ಈ ಕೆಲಸ ಬಾಕಿಯಿದೆ.ಕೆಲವರು ಈ ಯೋಜನೆ ಜಾರಿಗೊಳ್ಳಬಾರದೆಂದು ಅಪಪ್ರಚಾರ ಮಾಡುತ್ತಿದ್ದಾರೆ.ತುಂಗಾ ನದಿಯ ನೀರು ಈ ಯೋಜನೆಗೆ ಬಳಕೆಯಾಗುವುದರಿಂದ ನೀರು ಕಡಿಮೆಯಾಗುತ್ತದೆಂದು ಹೇಳುತ್ತಿದ್ದಾರೆ .ಸರ್ಕಾರದ ಆದ್ಯತೆ ಕುಡಿಯುವ ನೀರು ನೀಡಿ ಜೀವ ಉಳಿಸುವುದಾಗಿದೆ,ಆನಂತರ ಜೀವನದ ಬಗ್ಗೆೆ ಯೋಚನೆ ಮಾಡಬೇಕು.ಆ ಯೋಜನೆ ಸಂಪೂರ್ಣವಾಗಿ ಜಾರಿಯಾಗುವ ವ್ಯವಸ್ಥೆಯಾಗುತ್ತಿದೆ.ಆದರೆ ಕೆಲವರು ಅದನ್ನು ತಡೆಗಟ್ಟುವ ಪ್ರಯತ್ನ ಮಾಡುತ್ತಿದ್ದಾಾರೆ ಎಂದು ಆರಗ ತಿಳಿಸಿದದರು.
ಪಂಚಾಯತಿಗಳು ಸರ್ಕಾರದ ಸವಲತ್ತನ್ನು ಜನರಿಗೆ ದೊರಕಿಸಿಕೊಡುವ ನಿಟ್ಟನಲ್ಲಿ ಸಂಪೂರ್ಣ ಯಶಸ್ವಿಯಾಗಬೇಕು-ಅನಿಲ್.ಟಿ.ಜೆ
ತಾಲೂಕಿನಲ್ಲಿಯೇ ತನಗೆ ಎರಡನೇ ಅವಧಿಗೆ ಅಧ್ಯಕ್ಷನಾಗಲು ಅವಕಾಶ ದೊರಕಿದೆ-ಪಂಚಾಯತಿಯಲ್ಲಿ ನಿಗದಿತ ಸಮಯಕ್ಕೆೆ ಸಾಮಾನ್ಯ ಸಭೆಗಳನ್ನು,ವಾರ್ಡ್ ಸಭೆ,ಗ್ರಾಮ ಸಭೆಗಳನ್ನು ನಡೆಸಿಕೊಂಡು ಬಂದಿದ್ದು ಸದ್ಯರ ಸಹಕಾರ ಹಾಗೂ ಗ್ರಾಮಸ್ಥರ ಸಲಹೆಯಂತೆ ಆಡಳಿತವನ್ನು ನಡೆಸಿಕೊಂಡು ಬಂದಿದ್ದು ಪಂಚಾಯತಿಯ ಅಭಿವೃದ್ದಿಗೆ ಅವಿರತ ಶ್ರಮಿಸಲಾಗುತ್ತಿದೆ.ಪಂಚಾಯತಿ ವ್ಯಾಪ್ತಿಯಲ್ಲಿ ಶಾಸಕರ ಅನುದಾನದಿಂದ 18 ಕೋಟಿಗೂ ಅಧಿಕ ಕಾಮಗಾರಿಗಳನ್ನು ಮಾಡಿಸಿದ್ದು ಗ್ರಾಮ ಪಂಚಾಯತಿಯ ಅನುದಾನದಲ್ಲಿ ಶಾಲೆ ಕಾಂಪೌಂಡ್ ,ರಸ್ತೆೆ, ಕುಡಿಯುವ ನೀರಿನ ಸವಲತ್ತನ್ನು ನೀಡುವುದರ ಜೊತೆಗೆ ಸರ್ಕಾದ ಯೋಜನೆಗಳನ್ನು ಪಡೆದುಕೊಳ್ಳಲು ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಗುತ್ತಿದೆ.ಕೇವಲ ರಸ್ತೆೆ,ಮೋರಿ ನಿರ್ಮಾಣ ಮಾಡಿದರೆ ಮಾತ್ರ ಅಭಿವೃದ್ದಿಯಲ್ಲ,ಜನರನ್ನು ಸೃಜನಶೀಲರನ್ನಾಾಗಿ ಮಾಡಬೇಕು,ಅವರುಗಳಿಗೆ ಸರ್ಕಾರದ ಯೋಜನೆಗಳ ಬಗ್ಗೆೆ ಅರಿವು ಮೂಡಿಸುವಂತಾಗಿ ಆ ಸವಲತ್ತನ್ನು ಜನರು ಪಡೆದುಕೊಳ್ಳುವಂತೆ ಮಾಡುವ ಕೆಲಸ ಗ್ರಾಮ ಪಂಚಾಯತಿಯಿಂದಾಗಬೇಕು.ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕೆಂಬ ಭಾವನೆಯನ್ನು ಗ್ರಾಾಮಸ್ಥರಲ್ಲಿ ಬೆಳೆಸಬೇಕು ಅದು ಗ್ರಾಮ ಮಟ್ಟದಿಂದಲೇ ಆರಂಭವಾದರೆ ಸದೃಢ ಸಮಾಜ,ದೇಶ ನಿರ್ಮಾಣವಾಗಲು ಸಾಧ್ಯ ಎಂಬಂತಹ ಅಭಿಪ್ರಾಾಯವನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಆನಿಲ್.ಟಿ.ಜೆ. ವ್ಯಕ್ತಪಡಿಸಿದರು.
ಸುಧೀರ್ ವಿಧಾತ, ಶಿವಮೊಗ್ಗ