ಅನುಮಾನದ ಸುಳಿಗೆ ಸಿಲುಕಿ ಪ್ರೇಯಸಿಯನ್ನು ಕುಕ್ಕರ್ ನಿಂದ ಬಡಿದು ಕೊಂದ ಪ್ರಿಯತಮ..! ಲಿವಿಂಗ್ ಟುಗೆದರ್ ಲವ್ ಸ್ಟೋರಿ ಕೊಲೆಯಲ್ಲಿ ಅಂತ್ಯ..!!

ಆರೋಪಿ ವೈಷ್ಣವ್ ( ಪ್ರಿಯತಮ ) ಕೊಲೆಯಾದ ದೇವಾ ( ಪ್ರೇಯಸಿ )

ಅನುಮಾನದ ಸುಳಿಗೆ ಸಿಲುಕಿ ಪ್ರೇಯಸಿಯನ್ನು ಕುಕ್ಕರ್ ನಿಂದ ಬಡಿದುಕೊಂದ ಪ್ರಿಯತಮ..! ಲಿವಿಂಗ್ ಟುಗೆದರ್ ಲವ್ ಸ್ಟೋರಿ ಕೊಲೆಯಲ್ಲಿ ಅಂತ್ಯ..!!

ಒಟ್ಟಿಗೆ ವಾಸಿಸುತ್ತಿದ್ದ ಪ್ರೇಮಿಗಳಿಬ್ಬರ ನಡುವೆ ಆರಂಭವಾದ ಜಗಳ ಪ್ರೇಯಸಿಯ ಕೊಲೆಯಲ್ಲಿ ಅಂತ್ಯ ವಾಗಿರುವ ಘಟನೆ ಬೆಂಗಳೂರಿನ ಬೇಗರೂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತನ್ನ ಪ್ರಿಯಯತಮೆಯನ್ನೇ ಪ್ರೇಮಿಯೊಬ್ಬ ಕುಕ್ಕರ್ ನಿಂದ ಬಡಿದು ಹತ್ಯೆ ಮಾಡಿದ್ದಾನೆ. ದೇವಾ ಎಂಬ 24ವರ್ಷದ ಯುವತಿಯನ್ನು ಅದೇ ವಯಸ್ಸಿನ ಪ್ರಿಯತಮ ವೈಷ್ಣವ್ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಇವರಿಬ್ಬರ ನಿಷ್ಕಲ್ಮಷ  ಲವ್ ಸ್ಟೋರಿಯಲ್ಲಿ ಅನುಮಾನದ ಸುಳಿಗೆ ಸಿಲುಕಿದ ಪ್ರಿಯತಮ ಪ್ರೇಯಸಿಯನ್ನು ಹತ್ಯೆಮಾಡಿದ್ದಾನೆ..!!

ಇವರಿಬ್ಬರ ನಡುವಿನ ಇಂಟರೇಸ್ಟಿಂಗ್ ಲವ್ ಸ್ಟೋರಿ ಇಲ್ಲಿದೆ ನೋಡಿ?

ಎಂಜಿನಿಯರಿಂಗ್ ಓದಿ ಪದವಿ ಪಡೆದಿದ್ದ ಯುವತಿ ದೇವಾ ಮತ್ತು ಯುವಕ ವೈಷ್ಣವ್ ಮೂಲತಹ ಕೇರಳ ಮೂಲದವರು ದೇವಾ ಕೊಚ್ಚಿಯವಳಾದರೆ ವೈಷ್ಣವ್ ತಿರುವಂತನಪುರದವನು. ಇಬ್ಬರಿಗೂ ಓದುವ ವಯಸ್ಸಿನಲ್ಲೇ ಪ್ರೀತಿಗೆ ಬಿದ್ದಿದ್ರು.. 
ಇವರಿಬ್ಬರ ಪ್ರೀತಿಯ ವಿಚಾರ ಇಬ್ಬರ ಮನೆಯವರಿಗೂ ಗೊತ್ತಾಗಿ ಪ್ರೀತಿಗೆ ಒಪ್ಪಿಗೆ ಕೂಡ ಸಿಕ್ಕಿತು ಎನ್ನುವುದು ತಿಳಿದುಬಂದಿದೆ. ಇವರಿಬ್ಬರು ಓದಿನ ನಂತರ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು ಕೋರಮಂಗಲದ ಖಾಸಗಿ ಕಂಪನಿಯೊಂದರಲ್ಲಿ ಇಬ್ಬರೂ ಕೆಲಸ ಮಾಡುತ್ತಿದ್ದರಂತೆ.. ಬೇಗೂರು ಠಾಣೆಯ ಸರಹದ್ದಿನ ನ್ಯೂ ಮೈಕೋ ಲೇಔಟ್ ನಲ್ಲಿ ಮನೆ ಮಾಡಿಕೊಂಡಿದ್ದರಂತೆ. ಇಬ್ಬರೂ ಜೊತೆಯಲ್ಲೇ ಲಿವಿಂಗ್ ಟುಗೆದರ್ ಜೀವನ ನೆಡೆಸುತ್ತಿದ್ದರಂತೆ.!!
ಜೀವನ ಚೆನ್ನಾಗಿಯೇ ನಿಬಾಯಿಸುತ್ತಿದ್ದರಂತೆ. ಇನ್ನೇನು ಮದುವೆ ಮಾಡಿಕೊಳ್ಳುವ ಬಗ್ಗೆ ಇಬ್ಬರು ರೆಡಿಯಾಗಿದ್ದರಂತೆ… ಆದರೆ ಯಾರ ವಕ್ರ ದೃಷ್ಟಿ ಇವರಿಬ್ಬರ ಮೇಲೆ ಬಿತ್ತೊ ಅಷ್ಟರಲ್ಲೇ ಪ್ರೇಮಿಗಳ ನಡುವೆ ಜಗಳ ಶುರುವಾಗಿದೆ? ಇತ್ತೀಚೆಗೆ ಪ್ರೇಯಸಿ ದೇವಾ ಮೇಲೆ ಅನುಮಾನ ಪಡುತ್ತಿದ್ದ ವೈಷ್ಣವ್ ಆಗಾಗ ಜಗಳ ಮಾಡುತ್ತಿದ್ದನಂತೆ. ದೇವಾಳನ್ನು ಕೊಲೆ ಮಾಡುವ ದಿನವು ಸಂಜೆ ನಾಲ್ಕೂವರೆ ಸುಮಾರಿಗೆ ಇಬ್ಬರ ನಡುವೆ ಜಗಳ ಶುರುವಾಗಿದೆ.. ಜಗಳ ವಿಕೋಪಕ್ಕೆ ತಿರುಗಿರಬಹುದು? ಸಿಟ್ಟಿನಲ್ಲಿರಬಹುದಾದ ವೈಷ್ಣವ್ ಕಿಚನ್ ನಲ್ಲಿದ್ದ ಕುಕ್ಕರನ್ನು ಕೈಗೆತ್ತುಕೊಂಡು ಪ್ರೇಯಸಿ ದೇವಾ ತಲೆಗೆ ಬಲವಾಗಿ ಹೊಡೆದಿರಬಹುದು ಎನ್ನುವುದು ತಿಳಿದುಬಂದಿದೆ..! ಇದರ
ಪರಿಣಾಮ ಸ್ಥಳದಲ್ಲೇ ಕುಸಿದುಬಿದ್ದು ತೀವ್ರ ರಕ್ತಸ್ರಾವ ಗೊಂಡಿದ್ದ ದೇವಾ ಸಾವನ್ನಪ್ಪಿದ್ದಾಳೆ..!! ಹೀಗೊಂದು ಹತ್ಯೆ ನೆಡೆದಿದೆ ಎನ್ನುವ ಮಾಹಿತಿ ತಿಳಿಯುತ್ತಿದ್ದ ಹಾಗೆ ಬೇಗೂರು ಠಾಣೆಯ ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ಮಾಡಿದ ಬೇಗೂರು ಪೊಲೀಸರು ಆರೋಪಿ ವೈಷ್ಣವ್ ನನ್ನು ಬಂಧಿಸಿ ವಿಚಾರಣೆ ಒಳಪಡಿಸಿದ್ದಾರೆ.. ಅಷ್ಟು ವರ್ಷದಿಂದ ಪ್ರೀತಿಸಿ ಅನ್ಯೋನ್ಯತೆಯಿಂದ ಒಟ್ಟಿಗೆ ಬದುಕುತ್ತಿದ್ದ ಪ್ರೇಮಿಗಳ ನಡುವೆ ಸಂಶಯದ ಭೂತ ಅವರಿಸಿದೆ. ಅನುಮಾನದ ಸುಳಿಗೆ ಸಿಲುಕಿದ ವೈಷ್ಣವ್ ತನ್ನ ಜೊತೆಗೆ ಬಾಳಿ ಬದುಕಬೇಕಾಗಿದ್ದ ಪ್ರೇಯಸಿ ದೇವಾಳನ್ನು ಹತ್ಯೆಮಾಡಿ ಜೈಲು ಸೇರಿದ್ದಾನೆ. ತಮ್ಮ ಮುಂದಿನ ಸುಂದರ ಜೀವನಕ್ಕೆ ಸಪ್ತಪದಿ ತುಳಿಯಬೇಕಾಗಿದ್ದ ಜೋಡಿ ಪ್ರಿಯತಮನ ಕ್ಷಣಮಾತ್ರದ ಕೋಪಕ್ಕೆ ಪ್ರೇಯಸಿಯನ್ನೆ ಹತ್ಯೆ ಮಾಡಿ ಜೈಲು ಸೇರಿದ್ದು ಮಾತ್ರ ದುರಂತವೆ ಹೌದು.

ಸುಧೀರ್ ವಿಧಾತ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!