ಲಾಂಗ್ ಹಿಡಿದು ಬಂದು ಉಪನ್ಯಾಸಕರಿಗೆ ಅವಾಜ್ ಹಾಕುತ್ತಿರುವ ವಿಧ್ಯಾರ್ಥಿ
ನಾಗಮಂಗಲದೊಲ್ಲೊಬ್ಬ ಕಿರಾತಕ ‘ನಿಮ್ಮ ಮಗ ತರಗತಿಗೆ ಸರಿಯಾಗಿ ಬರುತ್ತಿಲ್ಲ ಎಂದು ಪೋಷಕರಿಗೆ ಉಪನ್ಯಾಸಕರು ಮಾಹಿತಿ ನೀಡಿದ ಕಾರಣಕ್ಕಾಗಿ ಆಕ್ರೋಶಗೊಂಡ ಪುಂಡ ವಿದ್ಯಾರ್ಥಿಯೊಬ್ಬ ತನಗೆ ಪಾಠ ಹೇಳುತ್ತಿದ್ದ ಉಪನ್ಯಾಸಕನ ಕ್ಲಾಸಿಗೆ ತೆರಳಿ ಕೈಯಲ್ಲಿ ಲಾಂಗ್ ಹಿಡಿದು ಬೆದರಿಕೆ ಹಾಕಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಡಿಪ್ಲೊಮಾ ಕಾಲೇಜಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅವರೇಗೆರೆ ಗ್ರಾಮದ ಉದಗೌಡ (17) ನೆಂಬ ವಿಧ್ಯಾರ್ಥಿಯೆ ಲಾಂಗ್ ಹಿಡಿದು ತನ್ನದೆ ಕ್ಲಾಸಿನ ಉಪನ್ಯಾಸಕರಿಗೆ ಅವಜ್ ಹಾಕಿರುವುದು. ಬಿ.ಜಿ.ನಗರದ ಡಿಪ್ಲೊಮಾ ಕಾಲೇಜಿ ನಲ್ಲಿ ಪ್ರಥಮ ವರ್ಷದ ಡಿಪ್ಲೊಮಾ ತರಗತಿ ಯಲ್ಲಿ ಓದುತ್ತಿದ್ದಾನೆ ಉದಯ ಗೌಡ ಈ ಕಾಲೇಜಿನ ಉಪನ್ಯಾಸಕರೊಬ್ಬರು ಇವನ ವರ್ತನೆಯಿಂದ ಬೇಸತ್ತು ಆತನ ಪೋಷಕರಿಗೆ ನಿಮ್ಮ ಮಗ ಉದಯ್ ಗೌಡ ತರಗತಿಗೆ ಸರಿಯಾಗಿ ಬರುತ್ತಿಲ್ಲ, ಜೊತೆಗೆ ಆತನ ವರ್ತನೆಯೂ ಸರಿಯಿಲ್ಲ, ಆತನಿಗೆ ಬುದ್ದಿ ಹೇಳಿ ಎಂದು ಆತನ ಪೋಷಕರಿಗೆ ದೂರು ನೀಡಿದ್ದರು.
ಈ ವಿಷಯ ತಿಳಿದು ಆಕ್ರೋಶಗೊಂಡ ಉದಯ್ ಗೌಡ, ಮರುದಿನ ಬೈಕ್‌ನಲ್ಲಿ ಬಂದು ಕಿರಾತಕನಂತೆ ಬಂದು ಯಾರ ಭಯವಿಲ್ಲದೆ ಉಪನ್ಯಾಸಕರಿದ್ದ ಕೊಠಡಿಯೊಳಗೆ ಹೋಗಿ ಕೈಯಲ್ಲಿ ಲಾಂಗ್ ಹಿಡಿದು ನನ್ನ ವಿಚಾರಕ್ಕೆ ಬಂದರೆ ತಕ್ಕ ಪಾಠ ಕಲಿಸುವುದಾಗಿ ಬೆದರಿಕೆ ಹಾಕಿದ್ದಾನೆ. ತಕ್ಷಣ ಇತರೆ ಉಪನ್ಯಾಸಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನ ಜೋತೆಗೆ ತಂದಿದ್ದ ಲಾಂಗ್ ಮತ್ತು
ಬೈಕ್ ಅನ್ನು ವಶಪಡಿಸಿಕೊಂಡು ಆತನನ್ನು ಠಾಣೆಗೆ ಕರೆದೊಯ್ದಿದ್ದರು. ನಂತರ ತಂದೆ-ತಾಯಿಯ ಸಮ್ಮುಖದಲ್ಲಿ ಆತನಿಗೆ ಬುದ್ಧಿ ಮಾತು ಹೇಳಿ ಠಾಣೆಯಿ೦ದ ಕಳಿಸಿಕೊಡಲಾಗಿದೆ. ಪೋಷಕರು ಮತ್ತು ಪೊಲೀಸರೆದುರು ತಾನು ಇನ್ನು ಮುಂದೆ ಇಂತಹ ತಪ್ಪನ್ನು ಮಾಡುವುದಿಲ್ಲ. ಎಂದು ಹೇಳಿದ್ದಾನೆ ಒಬ್ಬ ಅದರಲ್ಲೂ ನನ್ನ ವಿಧ್ಯಾರ್ಥಿಯ ಜೀವನ ಹಾಳಾಗುವುದು ಬೇಡ ಎಂದು ಉಪನ್ಯಾಸಕರು ತೀರ್ಮಾನಿಸಿ ಅವರು ಬುದ್ಧಿ ಹೇಳಿದ್ದಾರೆ
ತಾನು ಮಾಡಿದ ತಪ್ಪಿನ ಅರಿವಾಗಿ ವಿಧ್ಯಾರ್ಥಿ ಕೂಡ ಕ್ಷಮೆಯಾಚಿಸಿ ಇನ್ನೂ ಇಂತಹ ತಪ್ಪು ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದ್ದಾನೆ.
ಪೋಲಿಸ್ ಅಧಿಕಾರಿಗಳು ಪುಸ್ತಕ ಹಿಡಿಯುವ ಕೈಯಲ್ಲಿ ಲಾಂಗ್ ಹಿಡಿದು ಬಂದ ವಿಧ್ಯಾರ್ಥಿಯನ್ನು ಪೋಷಕರ ಜೋತೆಗೆ ಬಿಟ್ಟು ಕಳುಹಿಸಿದ್ದಾರೆ
ಸುಧೀರ್ ವಿಧಾತ,ಶಿವಮೊಗ್ಗ