ಪ್ರಯಾಗರಾಜ್ ನ ಮಹಾಕುಂಭ ಮೇಳಕ್ಕೆ ಶಿವಮೊಗ್ಗದಿಂದ ವಿಶೇಷ ರೈಲು ವ್ಯವಸ್ಥೆ: ಸಂಸದ ಬಿ ವೈ ರಾಘವೇಂದ್ರ
Ashwasurya/Shivamogga
ಅಶ್ವಸೂರ್ಯ/ಶಿವಮೊಗ್ಗ: ಈಗಾಗಲೇ ಕೋಟ್ಯಂತರ ಭಕ್ತರನ್ನು ಸೇಳೆಯುತ್ತಿರುವ ಹಿಂದೂಗಳ ಪವಿತ್ರ ಸ್ಥಳ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಹೋಗಲು ಯೋಚಿಸುತ್ತಿರುವ ಮಲೆನಾಡಿನ ಭಕ್ತಾದಿಗಳಿಗೆ ವಿಶೇಷ ರೈಲು ಸೇವೆಯ ವ್ಯವಸ್ಥೆಯನ್ನು ಮಡಲಾಗಿದೆ.
ಈ ವಿಶೇಷ ರೈಲು ಫೆಬ್ರವರಿ 22ರ ಶನಿವಾರ ಸಂಜೆ 4:40ಕ್ಕೆ ಶಿವಮೊಗ್ಗದ ರೈಲು ನಿಲ್ದಾಣದಿಂದ (ರೈಲು ಸಂಖ್ಯೆ. 06223) ಹೊರಟು. ಫೆಬ್ರವರಿ 24ರ ಬೆಳಿಗ್ಗೆ 11:10ರ ಸಮಯಕ್ಕೆ ಪವಿತ್ರ ಪ್ರಯಾಗರಾಜ್ ತಲುಪಲಿದೆ ಹಾಗೂ ಫೆಬ್ರವರಿ 25ರಂದು ಬೆಳಿಗ್ಗೆ 5.40ಕ್ಕೆ ಪ್ರಯಾಗರಾಜ್ ರೈಲು ನಿಲ್ದಾಣದಿಂದ (ರೈಲು ಸಂಖ್ಯೆ 06224) ಹೊರಟು ಫೆಬ್ರವರಿ 27ರ ಬೆಳಿಗ್ಗೆ 06:45ಕ್ಕೆ ಶಿವಮೊಗ್ಗ ರೈಲು ನಿಲ್ದಾಣವನ್ನು ತಲುಪಲಿದೆ ಈ ವಿಶೇಷ ರೈಲಿನ ವ್ಯವಸ್ಥೆ ಕಲ್ಪಿಸಿದ್ದು ಮಲೆನಾಡಿನ ಸರ್ವ ಯಾತ್ರಾರ್ಥಿಗಳು ಈ ವಿಶೇಷ ಸೇವೆಯ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಸಂಸದ ಬಿ ವೈ ರಾಘವೇಂದ್ರ ವಿನಂತಿಸಿದ್ದಾರೆ.
ಈ ಒಂದು ಪ್ರಯಾಗರಾಜ್ ವಿಶೇಷ ಯಾತ್ರೆಯ ಟಿಕೆಟ್ ಬುಕಿಂಗ್ ಫೆಬ್ರವರಿ 15 ರ ಮಧ್ಯಾಹ್ನದ ನಂತರ ಆರಂಭವಾಗಲಿದ್ದು, ಯಾತ್ರಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಲು ಕೋರುತ್ತೇನೆ.
ಮಹಾ ಕುಂಭಮೇಳ ಯಾತ್ರಾರ್ಥಿಗಳ ಪ್ರಯಾಣಕ್ಕೆ ಅನುಕೂಲ ಮಾಡಿ ಕೊಟ್ಟಿರುವ ರೈಲ್ವೆ ಇಲಾಖೆಗೆ ತುಂಬು ಹೃದಯದ ಧನ್ಯವಾದಗಳು.
ಜನಪ್ರಿಯ ಸಂಸದರು
ಬಿ.ವೈ ರಾಘವೇಂದ್ರ
ಶಿವಮೊಗ್ಗ, ಶಿವಮೊಗ್ಗ ಜಿಲ್ಲೆ,