ತೀರ್ಥಹಳ್ಳಿ: ಬೀದರಗೋಡು ಮಾಲತಿ ನದಿಯ ಒಡಲು ಬರಿದು.! ಅಕ್ರಮ ಮರಳು ದಂಧೆಕೋರರ ಜಮಾವಣೆ.!ಕೈ ಕಟ್ಟಿ ಕುಳಿತ ಗಣಿ ಮತ್ತು ಭೂವಿಜ್ಞಾನ ಇಲಾಖೆ.!
Illegal sand mafia
Ashwasurya/Shivamogga
ಅಶ್ವಸೂರ್ಯ/ಶಿವಮೊಗ್ಗದ: ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಹೋಬಳಿ ಅರೇಹಳ್ಳಿ ಗ್ರಾಮ ಪಂಚಾಯತಿ ಹಾಗೂ ಬಿದರಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಲತಿ ನದಿಯ ಒಡಲು ಅಕ್ರಮ ಮರಳು ದಂಧೆಕೋರರ ಆರ್ಭಟಕ್ಕೆ ಬರಿದಾಗಿತ್ತಿದೆ. ಜೋತೆಗೆ ಅದರ ಅಕ್ಕ ಪಕ್ಕದ ಹಳ್ಳಗಳಲ್ಲೂ ಮರಳು ದಂಧೆಕೋರರ ಮರಳು ಸಾಗಾಟದಿಂದ ಬರಿದಾಗಿದ್ದು ಬೀದರಗೋಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರ ನೆಮ್ಮದಿ ಬೋರಲು ಬಿದ್ದಿದೆ.! ಅರೇಹಳ್ಳಿ ಹಾಗೂ ಮಳಲೂರಿನ ಕೇಳೂರು ಅರಮನಗದ್ದೆ ಪಡುಬೈಲು ಹಾಗೂ ಬಿದರಗೋಡು ಗ್ರಾಮದ ಮರಳು ದಂಧೆಕೋರರ ಕಪಿಮುಷ್ಠಿಗೆ ಸಿಲುಕಿ ಗ್ರಾಮದ ದೂಳುಮಯವಾಗಿದ್ದು ಸುತ್ತಮುತ್ತಲಿನ ತೋಟ ಗದ್ದೆಗಳ ಕೃಷಿ ಅಳಿವಿನಂಚಿಗೆ ಸರಿದಿದೆ.
ಅದರಲ್ಲೂ ಬಿದರಿಗೋದಡಿನ ಮಾಲತಿ ನದಿಯ ದಡದಲ್ಲಿರುವ ಪ್ರತಿಷ್ಠಿತ ಕುಟುಂಬದವರು ಮರಳು ದಂಧೆಕೋರರಿಗೆ ನದಿಗೆ ಟಿಪ್ಪರ್ ಮತ್ತು ಟ್ಯಾಕ್ಟರ್ ಗಳು ಹೋಗಲು ಮರಳು ದಂಧೆಕೋರರಿಗೆ ತೋಟದಲ್ಲಿ ರಸ್ತೆ ಸಂಪರ್ಕ ಮಾಡಿಕೊಟ್ಟಿದ್ದು ಒಂದು ಲೋಡಿಗೆ 1000/ ರೂಪಾಯಿ ವಸೂಲಿ ಮಾಡಿ ಇವರೊಂದು ರೀತಿಯಲ್ಲಿ ಅಕ್ರಮ ಮರಳು ದಂಧೆಕೋರರಿಗೆ ಬೆನ್ನಿಗೆ ನಿಂತಿದ್ದಾರೆ.ಇಲ್ಲಿ ದಿನ ನಿತ್ಯ ಹಗಲು ರಾತ್ರಿ ಎನ್ನದೆ ಅಕ್ರಮ ಮರಳು ದಂಧೆಯ ಆರ್ಭಟ ಮುಗಿಲು ಮುಟ್ಟಿದೆ. ಇನ್ನೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಂಬಂಧ ಪಟ್ಟ ಅಧಿಕಾರಿಗೆ ಹೇಳೊಣ ಎಂದು ಫೋನ್ ಮಾಡಿದರೆ ಫೋನ್ ರಿಸೀವ್ ಮಾಡುವ ವ್ಯವದಾನವೆ ಇಲ್ಲ ಅವರಿದ್ದು ಸ….? ಇವರು ಕೂಡ ಅಕ್ರಮ ಮರಳು ದಂಧೆಕೋರರಿಂದ ಫಲಾನುಭವಿಗಳೆ.
ಅಧಿಕಾರಿಗಳು ಮರಳು ದಂಧೆಕೋರರ ಹಡಬೆ ಹಣಕ್ಕೆ ಕೈಚಾಚಿಯೆ ಇವತ್ತು ಗಣಿ ಭೂವಿಜ್ಞಾನ ಇಲಾಖೆ ಮೂರು ಕಾಸಿನ ಕಿಮ್ಮತ್ತಿಲ್ಲದೆ ನಾರುತ್ತಿರುವುದು. ಇವತ್ತು ಪರಿಸರದ ಒಡಲು ಮತ್ತು ಸರ್ಕಾರದ ಬೊಕ್ಕಸಕ್ಕೆ ಕನ್ನಹಾಕುವ ಕದಿಮರನ್ನು ಹಿಡಿದು ದೂರು ದಾಖಲಿಸಿ ಜೈಲಿಗಟ್ಟಿದ್ದರೆ ಇಂದು ಇಲಾಖೆಯ ಮಾನ ಬಿದಿಗೆ ಬಿಳುತ್ತಿರಲಿಲ್ಲ ಎಂದರೆ ತಪ್ಪಾಗಲಾರದು. ಈ ಅಕ್ರಮ ಮರಳು ದಂಧೆಯಲ್ಲೊ ಕೆಲವು ಪುಡಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಕೆಲವರು ಪಕ್ಕಾ ದಂಧೆ ಕೋರರು ದೊಡ್ಡ ದೊಡ್ಡ ರಾಜಕಾರಣಿಗಳ ಹೆಸರು ಹೇಳಿಕೊಂಡು ತೀರ್ಥಹಳ್ಳಿ ತಾಲ್ಲೂಕಿನ ನದಿ,ಹಳ್ಳ ಕೊಳ್ಳಗಳ ಒಡಲನ್ನು ರಾತ್ರಿ ಹಗಲೆನ್ನದೆ ಬಗೆ ಬಗೆದು ಬರಿದು ಮಾಡುತಿದ್ದಾರೆ ಇನ್ನೂ ಕೆಲವು ಅಧಿಕಾರಿಗಳಿಗಂತೂ ಈ ಅಕ್ರಮ ಮರಳು ದಂಧೆಕೋರರಿಂದ ದಿನನಿತ್ಯ ಹಬ್ಬದೂಟವೆ ಹೌದು.ಒಳ್ಳೆಯ ಸರ್ಕಾರಿ ಸಂಬಳವಿದ್ದು ಮರಳು ದಂಧೆಕೋರರ ಹಡಬೆ ಹಣಕ್ಕೆ ಕೈಚಾಚಿ ನಿಂತಿರುವ ಅಧಿಕಾರಿಗಳಿಂದ ತೀರ್ಥಹಳ್ಳಿಯ ತಾಲ್ಲೂಕಿನಾದ್ಯಂತ ಅಕ್ರಮ ಮರಳು, ಕಲ್ಲು ಗಣಿಗಾರಿಕೆ ದಂಧೆಕೋರರ ದರ್ಬಾರ್ ಯಾರ ಅಂಜಿಕೆ ಇಲ್ಲದೆ ರಾಜಾರೋಷವಾಗಿ ನೆಡೆಯುತ್ತಿದೆ.ಶಿವಮೊಗ್ಗದ ಪುಡಿ ರೌಡಿಗಳು,ಪುಡಿ ಪುಡಾರಿಗಳು,ಹಳೆ ಲಾಟರಿ ಇಸ್ಪೀಟ್ ದಂಧೆಕೋರರು. ಎಲ್ಲರೂ ತೀರ್ಥಹಳ್ಳಿಯ ಕಡೆ ವಲಸೆ ಹೋಗಿದ್ದಾರೆ.ಇವರಿರಲ್ಲಿ ಒಬ್ಬ ಪೋಲಿಸ್ ಪೆದೆ ಕೂಡ ಅಕ್ರಮ ಮರಳು ದಂಧೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಪವಿತ್ರ ಖಾಕಿಗೆ ಕಲೆ ಅಂಟಿಸುಕೊಂಡು ಹಡಬೆ ಹಣಕ್ಕಾಗಿ ಪವಿತ್ರವಾದ ಕೆಲಸವನ್ನೆ ಮರೆತಿದ್ದಾನೆ.ಇವನ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಸವಿವರವಾಗಿ ತಿಳಿಸುವೆ.ಒಟ್ಟಿನಲ್ಲಿ ತೀರ್ಥಹಳ್ಳಿ ತಾಲೂಕಿನಲ್ಲಿ ಅಕ್ರಮ ಮರಳು ಕಲ್ಲುಗಣಿಗಾರಿಕೆಯ ದಂಧೆಕೋರರ ಜಾತ್ರೆಯೆ ನೆಡೆಯುತ್ತಿದೆ.
ಅದರಲ್ಲೂ ಬೀದರಗೋಡಿನ ಬ್ರಹ್ಮರಾಕ್ಷಸನೊಬ್ಬ ಸರ್ಕಾರಿ ಜಾಗಕ್ಕೆ ಬೇಲಿ ಸುತ್ತಿ ಗಣಿಗಾರಿಕೆಗೆ ಮುಂದಾಗಿದ್ದಾನೆ ಅವನ ಸರಹದ್ದಿನ ಜಾಗವನ್ನು ಬಿಟ್ಟು ಭರ್ಜರಿ ಬಂಡೆ ಇರುವ ಜಾಗಕ್ಕೆ ಬೇಲಿ ಸುತ್ತಲು ಕೆಲವು ಸರ್ವೆ ಅಧಿಕಾರಿಗಳಿಗೆ ಒಂದಷ್ಟು ಹಣಕೊಟ್ಟು ನಕ್ಷೆಯನ್ನೆ ತಿದ್ದುಪಡಿಮಾಡಿ ನುಂಗಲು ಹೊರಟಿದ್ದ ಊರಿನ ಯುವಕರ ಗ್ರಾಮ ಪಂಚಾಯತಿಯ ಕೆಲವು ಸದಸ್ಯರ ಹೋರಾಟದಿಂದ ತಾತ್ಕಾಲಿಕವಾಗಿ ಆತನ ನುಂಗಾಟಕ್ಕೆ ಬ್ರೇಕ್ ಬಿದ್ದಿದೆ.ಅದರಲ್ಲೂ ಇವನ ನಾಲ್ಕುವರೆ ಏಕರೆ ಕುಟುಂಬದ ಖಾತೆ ಜಾಗಕ್ಕೆ ನಾಲ್ಕುವರೆ ಎಕರೆ ಬಗರ್ ಹಕುಂ ಜಾಗ ಸರ್ಕಾರದಿಂದ ಸೀಗಬೇಕಷ್ಟೆ ಅದರೆ ಈತ ಸುತ್ತಮುತ್ತಲಿನ ಸರ್ಕಾರಕ್ಕೆ ಬೇಲಿ ಸುತ್ತಿ ಸುಮಾರು ಹದಿನೇಳು ಎಕರೆ ಸರ್ಕಾರಿ ಜಾಗವನ್ನು ಮುಂಡಾಯಿಸಿ. ಕೆಕೆ ಹಾಕುತ್ತಿದ್ದಾನೆ. ಬೀದರಗೋಡು ಗ್ರಾಮದಲ್ಲಿ ಇಲ್ಲದ ಹಡಬೆ ದಂಧೆ ಇಲ್ಲಾ ಅಕ್ರಮ ಹೆಂಡ ಮಾರಟ.! ಅಕ್ರಮವಾಗಿ ಸರ್ಕಾರಿ ಜಾಗ ನುಂಗಾಟ.ಅಕ್ರಮ ಕಲ್ಲು ಮತ್ತು ಮರಳು ದಂಧೆಯ ಆರ್ಭಟ ಮುಗಿಲು ಮುಟ್ಟಿದೆ ಅದರಲ್ಲೂ ಅಕ್ರಮ ಮರಳು ದಂಧೆಯಲ್ಲಿ ರಾತ್ರಿ ಹಗಲೆನ್ನದೆ ನದಿ ತೀರದ ಒಡಲನ್ನು ಬಗಿಯುತ್ತಿರುವ ಖದೀಮರ ಪಟ್ಟಿಯನ್ನು ಸದ್ಯದಲ್ಲೇ ನಿಮ್ಮ ಮುಂದಿಡಲಿದ್ದೇವೆ ಪತ್ರಿಕೆ ಅಕ್ರಮ ದಂಧೆಕೋರರು ಯಾವ ಯಾವ ಸ್ಥಳದಲ್ಲಿ ಮರಳು ತೆಗೆಯುತ್ತಾರೆ.ಈ ದಂಧೆಯಲ್ಲಿರುವ ಖದೀಮರು ಯಾರು.?ಮರಳು ದಂಧೆಯಲ್ಲಿರುವ ಪೋಲಿಸಪ್ಪ ಯಾರು.? ಎಂದು ಮಾಹಿತಿಯನ್ನು ಕಲೆಹಾಕಿ ನಿಮ್ಮ ಮುಂದಿಡಲಿದ್ದೇವೆ.ಇನ್ನೂ ಬೀದರಗೋಡು ಸುತ್ತ ಮುತ್ತ ನದಿ,ಹಳ್ಳ,ಕೊಳ್ಳಗಳ ಮರಳನ್ನು ಬಗೆ ಬಗೆದು ಅಕ್ರಮ ಮರಳು ಸಾಗಾಟ ಮಾಡುತ್ತಿರುವ ಬಂಡೆ ಸತೀಶನ ನಡು ಪೊಲೀಸ್ ಇಲಾಖೆ ಮುರಿಯ ಬೇಕಿದೆ..? ಬಂಡೆ ಸತೀಶನ ಅಷ್ಟೂ ಅಕ್ರಮ ಮರಳು ದಂಧೆಕೋರತನದ ಸವಿವರವಾದ ವರದಿಯನ್ನು ನಿಮ್ಮ ಮುಂದಿಡಲಿದ್ದೇವೆ. ಬಂಡೆ ಸತೀಶ ಯಾರು.?ಅವನ ಹಿನ್ನಲೆ ಏನು.?ಮರಳು ಮಧು ಯಾರು.?ಅವನ ಹಿನ್ನಲೆ ಎನು.? ಮರಳು ದಂಧೆಯ ಖಾಕಿ ಕ್ರಿಮಿನಲ್ ಪೊಲೀಸ್ ಪೆದೆ ಯಾರು.?ಈ ಮರಳು ಮಾಫಿಯಾದಲ್ಲಿ ಕೈ ಹಾಕಿ ಪುನೀತನಾದ್ನಾ ಪೊಲೀಸಪ್ಪ.! ಎಲ್ಲವನ್ನೂ ನಿರೀಕ್ಷಿಸಿ….