ತೀರ್ಥಹಳ್ಳಿ: ಬೀದರಗೋಡು ಬಗರ್ ಹುಕುಂ ಹೆಸರಿನಲ್ಲಿ ಸರ್ಕಾರಿ ಜಾಗಕ್ಕೆ ಬೇಲಿಸುತ್ತಿದ ಕಿರಾತಕ.!ಪಾಣಿ ಪಟ್ಟ ತೋರಿಸಿ ಇವನು ಹಾಕಿದ ಟೋಪಿ ಕೋಟಿ ಕೋಟಿ ರೂಪಾಯಿ…! ಗೋವಿಂದ…ಗೋವಿಂದ…ಗೋ..ವಿಂದ…!!!
Ashwasurya/Shivamogga
ಅಶ್ವಸೂರ್ಯ/ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಬೀದರಗೋಡು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಯಾಗುತ್ತಿದೆ. ಇಲ್ಲೊಬ್ಬ ಕಿರಾತಕನ ಸ್ಟೋರಿ Interesting ಆಗಿದೆ.ಇತನಿಗೆ ಬೆಳಗ್ಗೆ ಯಿಂದ ಸಂಜೆ ವರೆಗೂ ಒಂದೆ ಜಪ ಇವತ್ತು ಯಾರಿಗೆ ಹಾಕಬೇಕು ಟೋಪಿ ಅನ್ನೊದು ಬಿಟ್ಟಿರೆ ಬೇರೆ ಯೋಚನೆಯೆ ಇವನ ತಲೆಯಲ್ಲಿ ಇಲ್ಲ.!ಅಪ್ಪ ಮಾಡಿದ ಒಂದಷ್ಟು ಅಸ್ತಿಯನ್ನೆ ತನ್ನ ಹಣಗಳಿಕೆಯ ಆಸ್ತ್ರಮಾಡಿಕೊಂಡು ಸಾಲದ ಹೆಸರಿನಲ್ಲಿ ಎತ್ತುವಳಿಗೆ ನಿಂತವನು ಇಂದಿಗೂ ಈ ಕ್ಷಣದ ವರೆಗೂ ಮುಂದುವರೆಸಿದ್ದಾನೆ.!!ಇವನು ಹಾಕಿದ ಟೋಪಿ ಚಿಲ್ಲರೆ ಹಣದ್ದು ಎಂದು ನೀವು ತಿಳಿದರೆ ಅದು ಸುಳ್ಳು.? ಕೈ ಯಲ್ಲಿ ಒಂದು ಬ್ಯಾಗು ಹಣೆ ಮೇಲೆ ಮೂರು ನಾಮ ಹಾಕಿಕೊಂಡು ಹೊರಟನೆಂದರೆ ಸರಿಯಾದ ಕುಳ ಒಂದಕ್ಕೆ ಮೂರು ನಾಮ ಹಾಕಿಬಿಟ್ಟ ಎಂದರ್ಥ.!!! ಅಂತಹ ಮಹಾನ್ ಕಲಾವಿದ ಇವನು.ಇವನ ಹೆಸರೆ ಹೇಳಿ ಬರಿಯ ಬೇಕೆಂದು ಇಲ್ಲಾ ಸಾಕಷ್ಟು ಜನಕ್ಕೆ ಇವನು ಹಾಕಿದ ಲಕ್ಷಾಂತರ ರೂಪಾಯಿಯ ದೊಡ್ಡ ದೊಡ್ಡ ನಾಮಗಳೆ ಸಾರಿ ಸಾರಿ ಹೇಳುತ್ತಿದೆ ಬೀದರಗೋಡು ವಾಸಿ ಗೋವಿಂದ ಗೋವಿಂದ ಎಂದು.!!! ಶಿವಮೊಗ್ಗ ಒಂದರಲ್ಲೆ ಇವುನು ಹಾಕಿದ ನಾಮ ಒಂದಲ್ಲ ಎರಡಲ್ಲ ಬರೋಬ್ಬರಿ ಎರಡುವರೆ ಕೋಟಿಯ ದೊಡ್ಡ ನಾಮವಂತೆ.!!!ಇವನ ದಿನನಿತ್ಯದ ವಹಿವಾಟೆ ವಿಚಿತ್ರ ಬೆವರು ಸುರಿಸಿ ದುಡಿಯುವ ವ್ಯವದಾನವಿಲ್ಲದ ಈತ ಅಕ್ರಮ ಮರಳು ದಂಧೆ.!ಅಕ್ರಮ ಪಡಿತರ ಅಕ್ಕಿ ದಂಧೆ.ಅಕ್ರಮವಾಗಿ ಸರ್ಕಾರಿ ಭೂಮಿಗೆ ಬೇಲಿ ಸುತ್ತುವುದು. ದಿನ ಬೇಳಗಾದರೆ ತೀರ್ಥಹಳ್ಳಿಯ ತಹಶಿಲ್ದಾರರ ಕಛೇರಿ ಮತ್ತು ಸರ್ವೆ ಕಛೇರಿಯಲ್ಲಿ ಪ್ರತಿಷ್ಠಾಪಿತನಾಗುವ ಈತ ಅವರಿವರಿಗೆ ಹಾಕಿದ ನಾಮದ ದುಡ್ಡಲ್ಲಿ ಕೇಲವು ಅಧಿಕಾರಿಗಳ ಮೂಗಿಗೆ ನೋಟಿನ ಗಮಲು ತೋರಿಸಿ ಸರ್ಕಾರಿ ಜಾಗ ಕಬಳಿಸುವ ಕಾರ್ಯಕ್ಕೆ ಮುಂದಾಗುತ್ತಾನೆ. ಇತ್ತೀಚೆಗೆ ಇನ್ನೇನು ಸರ್ಕಾರಿ ಜಾಗ ಕಬಳಿಸಿಯೆ ಬಿಟ್ಟ ಎನ್ನುವ ಮಟ್ಟಕ್ಕೆ ಖುಷಿ ಪಟ್ಟಿದ್ದ ಸಾಲದ್ದಕ್ಕೆ ಸರ್ವೆ ಇಲಾಖೆಯ ಕೇಲವು ಲಂಚ ಬಾಕರು ಇವನ ಜೋತೆಗೆ ಕೈ ಜೋಡಿಸಿಯಾಗಿತ್ತು (ಇವರುಗಳ ಬಗ್ಗೆ ಮುಂದಿನ ದಿನಗಳಲ್ಲಿ ಬರೆಯುತ್ತೇನೆ ) ಇನ್ನೇನು ಮಂಜುನಾಥನಿಗೆ ಕಾಣಿಕೆ ಸಲ್ಲುತ್ತಿದ್ದ ಹಾಗೆ ಭಕ್ತ ಗೋವಿಂದನಿಗೆ
ಆಶೀರ್ವಾದ ಮಾಡಲು ಮುಂದಾಗಿದ್ದ.ಆ ಸಮಯಕ್ಕೆ ಸರಿಯಾಗಿ ಬೀದರಗೋಡಿನ ಕೆಲವು ಪಂಚಾಯತಿ ಸದಸ್ಯರು ಮತ್ತು ಸ್ಥಳೀಯ ಗ್ರಾಮಸ್ಥರು ಸಿಡಿದೆದ್ದ ಕಾರಣಕ್ಕೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ.ಇವನ ವರಸೆ ಯಾವ ಮಟ್ಟಕ್ಕಿದೆ ಎಂದರೆ ಇವನಿಗಿರುವ ಕುಟುಂಬದ ಆಸ್ತಿ ನಾಲ್ಕುವರೆ ಎಕರೆ ಖಾತೆ ಜಾಗಕ್ಕೆ ಈಗಾಗಲೇ ಬಗರ್ ಹುಕುಂ ಲೆಕ್ಕದಲ್ಲಿ ಇಲ್ಲಸಲ್ಲದ ಸುಳ್ಳು ದಾಖಲೆ ನೀಡಿ ಬೀದರಗೋಡು ಗ್ರಾಮಸ್ಥರೆ ಹೇಳುವಂತೆ ಸರಿ ಸುಮಾರು ಹದಿನೆಂಟರಿಂದ ಇಪ್ಪತ್ತು ಎಕರೆ ಸರ್ಕಾರಿ ಜಾಗ ಕಬಳಿಸಿ.ಅದನ್ನೆ ಬಂಡವಾಳ ಮಾಡಿಕೊಂಡು ಈ ಜಾಗದಲ್ಲಿ ಕಲ್ಲು ಗಣಿಗಾರಿಕೆ ಮಾಡೋಣ ಅಂತ ಸಾಕಷ್ಟು ಜನರನ್ನು ಪಾಟ್ನರ್ಸ್ ಲೆಕ್ಕದಲ್ಲಿ ಹಾಕಿಕೊಂಡು ಬೋಳಿಸುತ್ತಿದ್ದಾನೆ.ಆದರೆ ಇವನ ಜೋತೆಗೆ ಸೇರಿಕೊಂಡಿರುವ ಇಬ್ಬರು ಗಿರಾಕಿಗಳು ಮಾತ್ರ ಇವನನ್ನೆ ಬೋಳಿಸುವ ಲೆಕ್ಕದಲ್ಲಿ ಸ್ಕೆಚ್ ಹಾಕಿದ್ದಾರೆ. ಇವನ ಬಂಡವಾಳ ಸದ್ಯಕ್ಕೆ ಬಯಲಾಗಿದೆ.ಇತನ ಅಂದ ದುಂದಿ ದಂಧೆಗಳು ಒಂದೊಂದಾಗಿ ಕಳಚಿ ಬಿಳುತ್ತಿದೆ.ತೀರ್ಥಹಳ್ಳಿ ತಹಶಿಲ್ದಾರರು ಕೂಡ ಇವನ ಅಷ್ಟೂ ಜಾಗವನ್ನು ಅಳತೆಮಾಡಿ ಅವನ ಜಾಗ ಏನೀದಿಯೊ ಅದನ್ನು ಬಿಟ್ಟು. ಅವನು ಕಬಳಿಸಿ ದುಂಡಗಾಗುತ್ತಿರುವ ಸರ್ಕಾರಿ ಜಾಗವನ್ನು ವಾಪಸ್ ಸುಪರ್ದಿಗೆ ಪಡೆಯ ಬೇಕಿದೆ ಎಂದು ಸ್ಥಳೀಯ ಗ್ರಾಮಸ್ಥರೆ ಹೇಳುತ್ತಿದ್ದಾರೆ. ಇನ್ನಾದರು ತನ್ನ ದಿನನಿತ್ಯದ ಟೋಪಿ ಕೆಲಸವನ್ನು ಬಿಟ್ಟು ಅಪ್ಪಮಾಡಿಟ್ಟ ತೋಟದ ಕೆಲಸ ಮಾಡಿಕೊಂಡು ಬದುಕುವುದು ಲೇಸು ಅಂತ ನಮ್ಮ ಅನಿಸಿಕೆ… ಇಲ್ಲ ಮತ್ತೆದೆ ಟೋಪಿ ಕೆಲಸವನ್ನು ಮುಂದುವರೆಸಿದ್ದೆ ಆದರೆ ಇವನಿಂದ ವಂಚಿತರಾದವರು ಇವನನ್ನು ಮಟ್ಟಹಾಕದೆ ಬೀಡುವುದಿಲ್ಲ… ಪತ್ರಿಕೆ ಕೂಡ ಇವನ ಒಂದಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದೆ….ಭಾಗ,-2 ರಲ್ಲಿ ಇವನ ಮತ್ತಷ್ಟು ಮಾಹಿತಿಯನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡಲಿದೆ….