ಚಿಕ್ಕಮಗಳೂರು: ಕರ್ತವ್ಯಲೋಪ ಹಿನ್ನೆಲೆ ಶೃಂಗೇರಿ ಪೊಲೀಸ್ ಠಾಣೆಯ ಪಿ.ಎಸ್.ಐ. ಜಕ್ಕಣ್ಣನವ್ ಅಮಾನತು
Ashwasurya/Shivamogga
ಅಶ್ವಸೂರ್ಯ/ಚಿಕ್ಕಮಗಳೂರು:ಇತ್ತೀಚೆಗೆ ಶ್ರೆಂಗೇರಿ ಪೊಲೀಸ್ ಠಾಣೆ ಅಕ್ರಮ ದಂಧೆಕೋರರ ಅಡ್ಡಯಾಗಿತ್ತು.ಈ ಠಾಣೆಯಲ್ಲಿ ಪಿಎಸ್ಐ ಆಗಿದ್ದ ಜಕ್ಕಣ್ಣನವರ್ ಅಕ್ರಮ ದಂಧೆಕೋರರ ಜೋತೆಗೆ ಅದರಲ್ಲೂ ಅಕ್ರಮ ಮರಳು ಮಾಫಿಯಾದವರ ಜೋತೆಗೆ ಕೈ ಜೋಡಿಸಿದ್ದರು ಹೀಗಾಗಿಯೇ ತುಂಗೆಯ ಒಡಲಿನ ಮರಳು ಮತ್ತು ಸುತ್ತಮುತ್ತಲಿನ ಹಳ್ಳ ಕೊಳ್ಳಗಳ ಮರಳು ಅಕ್ರಮ ಮರಳು ದಂಧೆಕೋರರ ಕಪಿಮುಷ್ಟಿಗೆ ಸಿಲುಕಿ ಬರಿದಾಗಿದೆ.ಈ ಹಿನ್ನಲೆ ಸ್ಥಳೀಯ ಆಕ್ರೋಶಕ್ಕೆ ತುತ್ತಾಗಿದ್ದ ಪಿಎಸ್ಐ ವಿರುಧ್ಧ ಸಾಕಷ್ಟು ದೂರುಗಳ ಹಿರಿಯ ಅಧಿಕಾರಿಗಳ ಕಛೇರಿ ತಲುಪಿತ್ತು. ಈ ಹಿನ್ನೆಲೆಯಲ್ಲಿ ಹಲವು ಪ್ರಕರಣಗಳಲ್ಲಿ ಕರ್ತವ್ಯಲೋಪದ ಹಿನ್ನೆಲೆ ಶೃಂಗೇರಿ ಪಿ.ಎಸ್.ಐ.ಜಕ್ಕಣ್ಣನವರನ್ನು ಅಮಾನತುಗೊಳಿ ಪಶ್ಚಿಮ ವಲಯ ಐಜಿಪಿ ಆದೇಶ ನೀಡಿದ್ದಾರೆ.
ಶೃಂಗೇರಿ ಪಿ.ಎಸ್.ಐ ಜಕ್ಕಣ್ಣನವರನ್ನು ಅಮಾನತುಗೊಳಿಸಲಾಗಿದೆ. ಶೃಂಗೇರಿ ಭಾಗದಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದಅಕ್ರಮ ಮರಳು ದಂಧೆ, ಇಸ್ಪೀಟ್ ಅಡ್ಡೆ ರೈಡ್ ಗಳಲ್ಲಿ ಕರ್ತವ್ಯಲೋಪವೆಸಗಿದ್ದು, ಇದೀಗ ಮರಳು ದಂಧೆಗೆ ಬೆಂಬಲ ನೀಡಿದ ಅರೋಪದ ಹಿನ್ನೆಲೆ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.