Headlines

ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ ನಿಮ್ಮ ಕನಸುಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ.! ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು.

ಅಶ್ವಸೂರ್ಯ/ಲಕ್ನೋ: ಲಕ್ನೋದ ಜೆಇಇ ಪರೀಕ್ಷೆಯಲ್ಲಿ ಫೇಲ್ ಅದ ಕಾರಣಕ್ಕೆ ಹದಿನೆಂಟು ವರ್ಷದ ಇಂಜಿನಿಯರ್ ವಿದ್ಯಾರ್ಥಿನಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.! ಈ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವತಿ ಅದಿತಿ (18) ವಿದ್ಯಾರ್ಥಿನಿ.
ಅದಿತಿ ಉತ್ತರ ಪ್ರದೇಶದ ಗೋರಖ್‌ಪುರದ ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮೊಮೆಂಟಮ್ ಕೋಚಿಂಗ್ ಸೆಂಟರ್‌ನ ವಿದ್ಯಾರ್ಥಿಯಾಗಿದ್ದಳು. ಕಳೆದ ಎರಡು ವರ್ಷಗಳಿಂದ ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳಂತೆ.! ಕೋಚಿಂಗ್ ತಯಾರಿಗಾಗಿ ಸತ್ಯದೀಪ ವಿದ್ಯಾರ್ಥಿ ನಿಲಯದಲ್ಲಿದ್ದಳಂತೆ.
ಜೆಇಇ ಪರೀಕ್ಷೆಯಲ್ಲಿ ಫೇಲ್ ಆದ ಬಳಿಕ ಬುಧವಾರ ಬೆಳಗ್ಗೆ ಮನೆಗೆ ಕರೆಮಾಡಿ ತಂದೆಯ ಬಳಿ ಮೊಬೈಲ್ ಫೋನ್‌ಗೆ ರಿಚಾರ್ಜ್ ಮಾಡುವಂತೆ ಹೇಳಿದ್ದಳಂತೆ. ಅದೇ ಸಮಯದಲ್ಲಿ ಅದಿತಿಯ ರೂಮ್‌ಮೇಟ್ ಹೊರಗೆ ಹೋಗಿದ್ದರು.
ಹೊರಗಡೆ ಹೋಗಿದ್ದ ರೂಮ್‌ಮೇಟ್ ವಾಪಾಸಾಗಿದ್ದು, ರೂಮ್ ಬಾಗಿಲು ಬಡಿದಿದ್ದಾಳೆ. ಈ ವೇಳೆ ಅದಿತಿ ಯಾವುದೇ ಪ್ರತಿಕ್ರಿಯೆ ನೀಡದಿದ್ದರಿಂದ ಅನುಮಾನಗೊಂಡು ಕಿಟಕಿಯಿಂದ ಒಳಗೆ ನೋಡಿದಾಗ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ. ಬಳಿಕ ಆಕೆಯ ರೂಮ್‌ಮೇಟ್ ಹಾಸ್ಟೆಲ್ ವಾರ್ಡನ್‌ಗೆ ವಿಷಯ ತಿಳಿಸಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಅಷ್ಟೋತ್ತಿಗಾಗಲೇ ಬಾಳಿ ಬದುಕ ಬೇಕಾದ ಜೀವ ಒಂದು ನೇಣು ಕುಣಿಕೆಗೆ ಕೊರಳೊಡ್ಡಿ ಉಸಿರು ಚಲ್ಲಿದೆ. ಅದಿತಿ ತನ್ನ ಕೈಯಾರ ಬದುಕಿಗೆ ಅಂತ್ಯವಾಡಿ ಸಾವಿನ ಮನೆ ಸೇರಿದ್ದಾಳೆ.!ಮುದ್ದಾದ ಹಿಡುಗಿ ಅದಿತಿಗೆ ಅದೇನಾಯಿತು ಹೆತ್ತವರನ್ನು ಒಡಹುಟ್ಟಿದ ತಂಗಿಯನ್ನು ಮರೆತು ಇಹಲೋಕ ತ್ಯಜಿಸಿದ್ದಾಳೆ.!ಅದಿತಿ ಸಾಯುವ ಮುನ್ನ ಅದೇನು ಮನದಲ್ಲಿತ್ತೊ ಒಂದೆರಡು ಸಾಲುಗಳನ್ನು ಹೆತ್ತವರಿಗಾಗಿ ಬರೆದು ಹೋಗಿದ್ದಾಳೆ.!ಅದು ಅದಿತಿಯ ಕೊನೆಯ ಪತ್ರವಾಗಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!