Meter Interest Scam:
ಮೀಟರ್ ಬಡ್ಡಿ ದಂಧೆಕೋರರಿಗೆ ಮದ್ದು ಅರೆಯುತ್ತಿದ್ದಾರೆ ಶಿವಮೊಗ್ಗ ಪೊಲೀಸರು
ashwasurya/Shivamogga
ಅಶ್ವಸೂರ್ಯ/ಶಿವಮೊಗ್ಗ: ಬಿದಿ ವ್ಯಾಪರಸ್ಥರಿಗೆ ಕೂಲಿ ಕಾರ್ಮಿಕರಿಗೆ, ಸಣ್ಣ ಪುಟ್ಟ ವ್ಯವಹಾರಸ್ಥರಿಗೆ ಮತ್ತು ಬಡ ಜನರಿಗೆ ಕಾನೂನು ಬಾಹಿರವಾಗಿ ಸಾಲ ಕೊಟ್ಟು ನಿತ್ಯ ಹಿಂಸೆ ನೀಡುವ ಮೀಟರ್ ಬಡ್ಡಿ ದಂಧೆ ಕೋರರಿಗೆ ಶಿವಮೊಗ್ಗ ಪೊಲೀಸರು ಬೆಂಡೆತ್ತುತಿದ್ದಾರೆ.ಬಡ್ಡಿ ದಂಧೆಕೋರ ಜಾಡು ಹಿಡಿದು ಹೊರಟಿದ್ದ ಪೊಲೀಸರಿಗೆ ಶಿವಮೊಗ್ಗ ನಗರದಲ್ಲಿ ಮೀಟರ್ ಬಡ್ಡಿ ದಂಧೆ ವ್ಯಾಪಕವಾಗಿರುವ ಸುಳಿವು ದೊರೆತಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ( ಫೆಬ್ರವರಿ,11) ಮುಂಜಾನೆ ಏಕಕಾಲದಲ್ಲಿ ನಗರದ ಅಷ್ಟೂ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಕಾರ್ಯಾಚರಣೆ ನಡೆಸಿದ ಶಿವಮೊಗ್ಗ ಪೊಲೀಸರ ತಂಡ ಖಡಕ್ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ ಕೆ ಐಪಿಎಸ್ ಅವರ ಮಾರ್ಗದರ್ಶನದಲ್ಲಿ.
ರವಿ ಪಾಟೀಲ್, ಪೊಲೀಸ್ ನಿರೀಕ್ಷಕರು, ದೊಡ್ಡಪೇಟೆ ಪೊಲೀಸ್ ಠಾಣೆ ರವರು ದೊಡ್ಡಪೇಟೆ ಪೊಲೀಸ್ ಠಾಣಾ ಸರಹದ್ದಿನ ಅಣ್ಣಾ ನಗರ ,ಮಾರ್ನಾಮಿ ಬೈಲು,ಕಾಮಾಕ್ಷಿ ಬೀದಿ ಯಲ್ಲಿ ಮತ್ತು ಹರೀಶ್ ಕೆ ಪಾಟೀಲ್, ಪೊಲೀಸ್ ನಿರೀಕ್ಷಕರು, ಕೋಟೆ ಪೊಲೀಸ್ ಠಾಣೆ ರವರು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರ ದಲ್ಲಿ, ಶ್ರೀಮತಿ ಚಂದ್ರಕಲಾ, ಪೊಲೀಸ್ ನಿರೀಕ್ಷಕರು, ವಿನೋಬನಗರ ಪೊಲೀಸ್ ಠಾಣೆ ರವರು ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಶಿಪುರ ದಲ್ಲಿ, ಶ್ರೀ ಸಿದ್ದೇಗೌಡ, ಪೊಲೀಸ್ ನಿರೀಕ್ಷಕರು, ಜಯನಗರ ಪೊಲೀಸ್ ಠಾಣೆ ರವರು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆ ಗಂಗೂರು , ಬಸವನಗುಡಿಯಲ್ಲಿ ಗುರುರಾಜ್ ಕೆ ಟಿ, ಪೊಲೀಸ್ ನಿರೀಕ್ಷಕರು, ತುಂಗಾನಗರ ಪೊಲೀಸ್ ಠಾಣೆ ರವರು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಿಶೆಟ್ಟಿಕೊಪ್ಪ, ಚಾಲುಕ್ಯನಗರದಲ್ಲಿ, ಸತ್ಯನಾರಾಯಣ, ಪೊಲೀಸ್ ನಿರೀಕ್ಷಕರು, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ರವರು ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾ ಬಡಾವಣೆ ಗುರುಪುರ ಸೇರಿದಂತೆ ಒಟ್ಟು 09 ಕಡೆಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಿ ಒಟ್ಟು 39 ಲಕ್ಷ ರೂಪಾಯಿ ನಗದು, 24 ಮೊಬೈಲ್, 02 ಲ್ಯಾಪ್ ಟಾಪ್, 72 ಚೆಕ್ ಗಳು, 19 ಆರ್ಸಿ ಬುಕ್ ಗಳು, 07 ವೆಹಿಕಲ್ ಬಾಂಡ್, 02 ಫಾರ್ಮ್ ನಂ 29, 30 ಮತ್ತು ಅಗ್ರಿಮೆಂಟ್ ಕಾಪಿ , ಪಾಸ್ ಬುಕ್, ಸೇಲ್ ಡೀಡ್, ಪಹಣಿ, 29 ಬೈಕ್ ಗಳು ಮತ್ತು 2 ಕಾರುಗಳನ್ನು ಅಮಾನತ್ತು ಪಡಿಸಿಕೊಂಡಿದ್ದು, ಒಟ್ಟು 09 ಆರೋಪಿತರ ವಿರುದ್ಧ ಒಟ್ಟು 09 ಪ್ರಕರಣಗಳನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.ಈ ನಂತರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ದಾಳಿಯಿಂದ ಶಿವಮೊಗ್ಗದ ದೊಡ್ಡ ದೊಡ್ಡ ಬಡ್ಡಿ ದಂಧೆಕೋರರಲ್ಲಿ ಭಯ ಹುಟ್ಟಿದೆ.
ಈ ಮೀಟರ್ ದಂಧೆಯಲ್ಲಿ ಒಂದಷ್ಟು ಮಹಿಳೆಯರು ಇದ್ದಾರೆ.ಈಗ ಪೊಲೀಸರ ಭಲೇಗೆ ಬಿದ್ದ ಬಡ್ಡಿ ದಂಧೆಕೋರರಿಗಿಂತ ಬಲಿಷ್ಠ ದಂಧೆಕೋರರು ಶಿವಮೊಗ್ಗ ನಗರದಲ್ಲಿದ್ದು ಇವರನ್ನು ಮಟ್ಟಹಾಕಬೇಕಿದೆ ಪೋಲಿಸರು.
ಮೀಟರ್ ಬಡ್ಡಿ ಮೂಲಕ ಬಡವರನ್ನು ಹಿಂಸಿಸುತ್ತಿದ್ದ ಬಡ್ಡಿ ದಂಧೆಕೋರರ ವಿರುದ್ಧ ಶಿವಮೊಗ್ಗ ಪೊಲೀಸರು ಮಂಗಳವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಶಿವಮೊಗ್ಗ ಭದ್ರಾವತಿ ಅವಳಿ ನಗರಗಳ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ಮುಂದುವರಿಯಲಿದ್ದು ಕಾನೂನು ಬಾಹಿರವಾಗಿ ಸಾಲ ಕೊಟ್ಟು, ಸುಲಿಗೆ, ಅಪಹರಣ ಮಾಡುವುದು, ಹಲ್ಲೆ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗ ನಗರ ಗ್ರಾಮಾಂತರ ವ್ಯಾಪ್ತಿಯಲ್ಲಿ ಬಡ್ಡಿ ದಂಧೆಕೋರರ ವಿರುದ್ಧ ದಾಳಿಮಾಡಿ ಪ್ರಕರಣಗಳನ್ನು ದಾಖಲಿಸಿಕೊಂಡು ಬಂಧಿತರಿಂದ ಸಾಲದ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು, ಮೊಬೈಲ್ ಫೋನ್, ಅಡವಿಟ್ಟುಕೊಂಡ ಬೈಕ್ ಗಳು, ಬಾಂಡ್ ಪೇಪರ್, ಖಾಲಿ ಚೆಕ್, ಸಾಲದ ಮಾಹಿತಿ ಇರುವ ಪುಸ್ತಕ, ಇನ್ನೂ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ
ಈ ಸಂಧರ್ಭದಲ್ಲಿ ಪೊಲೀಸ್ ಇಲಾಖೆ ಗಮನ ಹರಿಸಬೇಕಿರುವುದು ಮೀಟರ್ ಬಡ್ಡಿದಂಧೆಯ ಸುಳಿಗೆ ಸಿಲುಕಿದವರು ದೂರು ದಾಖಲಿಸಲು ಪ್ರತ್ಯೇಕ ವ್ಯವಸ್ಥೆಮಾಡ ಬೇಕಿದೆ.