ಕೊನೆಗೂ ಭದ್ರಾವತಿ ಶಾಸಕರ ಪುತ್ರನ ವಿರುದ್ಧ ದಾಖಲಾಯ್ತು FIR.ರಾವಣಸುರನ ಆಟ್ಟಹಾಸಕ್ಕೆ ಬ್ರೇಕ್ ಬಿಳಲಿದೇಯಾ.?
ashwasurya/Shivamogga
ಅಶ್ವಸೂರ್ಯ/ಭದ್ರಾವತಿ: ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಕೆ.ಕೆ.ಜ್ಯೋತಿ ಅವರು ಮಾಹಿತಿ ಅಧಾರದ ಮೇಲೆ ಭದ್ರಾವತಿಯ ತಾಲ್ಲೂಕಿನ ಸೀಗೆಬಾಗಿಯ ಬಾಬಳ್ಳಿ ಸಮೀಪದ ಭದ್ರಾನದಿಯಿಂದ
ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದು ತಿಳಿದು.ತಕ್ಷಣವೇ ಅಕ್ರಮ ಸಾಗಾಟದ ಸ್ಥಳಕ್ಕೆ ಸಿಬ್ಬಂದಿ ಸಮೇತರಾಗಿ ದಾವಿಸಿದ್ದಾರೆ. ಸ್ಥಳದಲ್ಲಿ ಅಕ್ರಮವಾಗಿ ಮರಳು ತುಂಬಿದ್ದ ಲಾರಿ ಇನ್ನತರ ವಸ್ತುಗಳನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ ಅ ಸಂಧರ್ಭದಲ್ಲಿ ಅಕ್ರಮ ಮರಳು ದಂಧೆಕೋರ ಹೊಲಸು ರಾಜಕಾರಣಿಯೊಬ್ಬನಿಗೆ ಫೋನ್ ಮಾಡಿದ್ದಾನೆ. ಹಾಲಿ ಶಾಸಕನ ಪುತ್ರ ಬಸವ ಎಂದು ಹೇಳಲಾಗುತ್ತಿದೆ. ಬಸವ ದಂಧೆಕೋರನಿಂದ ಮೊಬೈಲ್ ನ ಓಪನ್ ಸ್ಪೀಕರ್ ಅನ್ ಮಾಡಿಸಿ ಮೊಬೈಲ್ ಅನ್ನು ಮಹಿಳಾ ಅಧಿಕಾರಿ ಎದರಿಗೆ ಹಿಡಿದಾಗ ಹೆಂಡದ ಅಮಲು ಅಪ್ಪನ ಅಧಿಕಾರದ ತಿಮುರಿನಿಂದ ಮಹಿಳಾ ಅಧಿಕಾರಿಯ ಮುಂದೆ ಸೊಂಟದ ಕೇಳಗಿನ ಎಲ್ಲಾ ಪದವನ್ನು ಬಳಸಿ ತೀರಾ ಅವಾಚ್ಯವಾಗಿ ಬೈದು, ಕೊಲೆ ಬೆದರಿಕೆ ಹಾಕಿ, ವಾಹನ ಮೈಮೇಲೆ ಹತ್ತಿಸುವ ಜೀವ ಬೆದರಿಕೆ ಹಾಕಿದ್ದ ಕಾರಣಕ್ಕೆ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶರ ಕುಲಪುತ್ರ ಬಸವನ ವಿರುದ್ಧ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಕೊನೆಗೂ ದೂರು ದಾಖಲಾಗಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಮತ್ತು ಸಾರ್ವಜನಿಕ ವಲಯದಲ್ಲಿ ಬಹು ದೊಡ್ಡ ಚರ್ಚೆಗೆ ಗ್ರಾಸವಾಗಿದ್ದ ಮಹಿಳಾ ಅಧಿಕಾರಿ ಜ್ಯೋತಿ ನಿಂದನಾ ಪ್ರಕರಣ ಕೊನೆಗೂ ಕಾನೂನಾತ್ಮಕ ರೂಪಕ್ಕೆ ತಿರುಗಿದೆ ಸಂಗಮೇಶ್ ಪುತ್ರ ಬಸವನ ಮೇಲೆ ಎಫ್ ಐ ಆರ್ ದಾಖಲಾಗಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಜೋತಿ ಮತ್ತು ಅವರ ಸಿಬ್ಬಂದಿಗಳ ತಂಡ ಭದ್ರಾವತಿಯ ಸೀಗೆಬಾಗಿ ಬಾಬಳ್ಳಿ ಸಮೀಪದ ಭದ್ರಾನದಿಯಿಂದ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕ ಕ್ಷಣವೇ ತಡ ರಾತ್ರಿಯಾಗಿದ್ದರು ಲೆಕ್ಕಿಸದೇ ಗಣಿ ಅಧಿಕಾರಿಗಳಾದ ಕೆ ಕೆ ಜ್ಯೋತಿ, ಪ್ರಿಯಾ ದೊಡ್ಡಗೌಡರ್ ಮತ್ತು ಮೂವರು ಸಿಬ್ಬಂದಿಗಳು ಅಕ್ರಮ ಮರಳು ದಂಧೆಕೋರರನ್ನು ಮಟ್ಟಹಾಕಲು ಸ್ಥಳಕ್ಕೆ ದಾವಿಸಿ ದಾಳಿಗೆ ಮುಂದಾಗಿದ್ದಾರೆ.
ಅ ಸಂಧರ್ಭದಲ್ಲಿ ಸ್ಥಳದಲ್ಲಿದ್ದ ಅಕ್ರಮ ಮರಳು ದಂಧೆಕೋರನೊಬ್ಬ ವಿರೋಧ ವ್ಯಕ್ತಪಡಿಸಿದ್ದಾನೆ. ಅದಕ್ಕೆ ಅಧಿಕಾರಿಗಳು ಜಗ್ಗದಿದ್ದಾಗ ಆತ ವ್ಯಕ್ತಿಯೊಬ್ಬನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಆತ ಅಧಿಕಾರಿ ಜ್ಯೋತಿಯವರಿಗೆ ಫೋನ್ ಕೊಡಲು ಹೇಳಿದ್ದಾನೆ.ದಂಧೆಕೋರ ಮೊಬೈಲ್ ಅನ್ನು ಮಹಿಳಾ ಅಧಿಕಾರಿಗೆ ಕೊಡಲು ಮುಂದಾಗುತ್ತಾನೆ. ಆದರೆ ಮಹಿಳಾ ಅಧಿಕಾರಿ ಅದನ್ನು ತಿರಸ್ಕರಿಸುತ್ತಾರೆ.ಆಗ ಆತ ಮೊಬೈಲ್ ನ ಓಪನ್ ಸ್ಪೀಕರ್ ಅನ್ ಮಾಡಿ ಅಧಿಕಾರಿಯ ಮುಂದು ಹಿಡಿಯುತ್ತಿದ್ದಂತೆ. ಆ ಕಡೆಯಿಂದ ಫೋನಿನಲ್ಲಿ ಬಸವನ ಬಾಯಿ ಹೆಬ್ಬಾವಿನಂತೆ ತೆರದುಕೊಂಡು ಮನಸ್ಸಿಗೆ ಬರುವ ಅಷ್ಟು ಹೊಲಸು ಪದವನ್ನು ಹೇಳಿ ಅ ಮಹಿಳಾ ಅಧಿಕಾರಿಯನ್ನು ನಿಂದಿಸುತ್ತಾನೆ.ಎಲ್ಲಾ ಹೊಲಸು ಮಾತುಗಳನ್ನು ಕುಡಿದ ಅಮಲಿನಲ್ಲಿ ಫೋನಿನಲ್ಲೇ ಕಕ್ಕಿದ್ದಾನೆ.
ಈ ಎಲ್ಲಾ ಘಟನೆಯನ್ನು ಸಿಬ್ಬಂದಿಯೊಬ್ಬರು ಮೊಬೈಲ್ ನಲ್ಲಿ ಚಿತ್ರಿಕರಿಸಿದ್ದಾರೆ.ಘಟನೆಯ ನಂತರ ಅ ವೀಡಿಯೋ ಈಗ ಸಾಕಷ್ಟು ವೈರಲ್ ಆಗಿದೆ. ಅಧಿಕಾರಿ ಜ್ಯೋತಿಯವರು ಕೂಡ ಘಟನೆ ನಡೆದಿದೆಯೋ ಇಲ್ಲವೋ ಎಂಬುದನ್ನೂ ಹೇಳದೇ ಮೌನವಹಿಸಿದ್ದರು.ಯಾವಗ ಇದು ತಾರಕಕ್ಕೇರಿ ರಾಜ್ಯದ ಮೂಲೆ ಮೂಲೆ ಇಂದಲೂ ಪ್ರತಿಭಟನೆಯ ಕೂಗು ಜೋರಾಗುತ್ತಿದ್ದಂತೆ.ಅದರಲ್ಲೂ ಭದ್ರಾವತಿಯ ಬಿಜೆಪಿ ಘಟಕ, ಶಿವಮೊಗ್ಗ ಶಾಸಕರಾದ ಚನ್ನಬಸಪ್ಪ
ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪನವರು ಬಸವನ ವಿರುದ್ಧ ವಾಗ್ದಾಳಿ ಮಾಡಿ ಆತನನ್ನು ಕೂಡಲೇ ಬಂಧಿಸಬೇಕೆಂದು ಗುಡುಗಿದ್ದಾರೆ.ಅದರಲ್ಲೂ ಹೆಣ್ಣೊಬ್ಬಳನ್ನು ಮನಸ್ಸೊ ಇಚ್ಚೆ ಹೊಲಸು ಪದದಿಂದ ನಿಂಧಿಸಿರುವ ನಿಚನ ವಿರುದ್ಧ ಪಕ್ಷ ಭೇದ ಮರೆತು ಹೊರಟ ಮಾಡಬೇಕಿದೆ. ಹೆಣ್ಣನ್ನು ಮನಬಂದಂತೆ ನಿಂದಿಸಿರುವ ಆತನ ತಾಯಿ ಕೂಡಾ ಹೆಣ್ಣು ಅನ್ನುವ ಅರಿವು ಆತನಿಗೆ ಇಲ್ಲದೆ ಹೋಗಿದೆ.ಆತನ ವಿರುದ್ಧ ಪ್ರತಿಭಟನೆಯ ಕೂಗು ಜೋರಾಗುತ್ತಿದ್ದಂತೆ.ನಿಂದನೆಗೆ ಒಳಗಾದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಖಡಕ್ ಮಹಿಳಾ ಅಧಿಕಾರಿ ಜೋತಿ ಅವರು ಭದ್ರಾವತಿಯ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದು, ಭದ್ರಾವತಿ ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅದಧಿಕಾರಿ ಜೋತಿ
ಸರ್ಕಾರಿ ಮಹಿಳಾ ಅಧಿಕಾರಿ ಜ್ಯೋತಿಯವರಿಗೆ ನಿಂದಿಸಿದ ಬಸವನನ್ನು ಕೂಡಲೇ ಬಂಧಿಸಬೇಕೆಂದು ಬಿಜೆಪಿ, ಜೆಡಿಎಸ್ ಮುಖಂಡರಲ್ಲದೆ ಸಾರ್ವಜನಿಕ ವಲಯದಿಂದಲೂ ಆತನನ್ನು ಬಂಧಿಸಬೇಕೆನ್ನುವ ಕೂಗು ಜೋರಾಗಿ ಕೇಳಿಬರುತ್ತಿದೆ. ಆದರೆ ಭದ್ರಾವತಿಯಲ್ಲಿ ನರಸತ್ತು ಮಲಗಿರು ಪೊಲೀಸ್ ವ್ಯವಸ್ಥೆ ಇಗಲಾದರು ಎಚ್ಚೇತ್ತುಕೊಂಡು ಆತನನ್ನು ಬಂಧಿಸುತ್ತಾರಾ? ಕಾದು ನೋಡಬೇಕಿದೆ.ಅಥವಾ ಶಾಸಕನ ಮಾತಿಗೆ ತಲೆ ಅಡಿಸಿಕೊಂಡು ಬಸವನ ಮೈ ಸವರುತ್ತಾರ ಕಾದು ನೋಡಬೇಕಿದೆ…ಒಟ್ಟಿನಲ್ಲಿ ರಾವಣಸುರರ ಆಟ್ಟಹಾಸಕ್ಕೆ ಬ್ರೇಕ್ ಹಾಕಿ.. ಎನ್ನುವುದು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿರುವ ಒಕ್ಕೊರಲಿನ ಧ್ವನಿಯಾಗಿದೆ…
ಶಾಸಕರ ಪುತ್ರ ಬಸವನ ವಿರುದ್ಧ ಪ್ರತಿಭಟಿಸಿದ ಭದ್ರಾವತಿ ಬಿಜೆಪಿ ಘಟಕ
ಭದ್ರಾವತಿ: ಮಾಹಿತಿ ಬಂದ ಕೂಡಲೆ ಅಕ್ರಮ ಮರಳು ಗಣಿಗಾರಿಕೆ ತಡೆಯಲು ಹೋದ ಗಣಿ ಇಲಾಖೆಯ ಮಹಿಳಾ ಅಧಿಕಾರಿಗೆ ಭದ್ರಾವತಿ ಶಾಸಕರ ಪುತ್ರ ಬಸವ ಮಾತನಾಡಿರುವ ಅಶ್ಲೀಲ ಪದ ಬಳಸಿದ ವೀಡಿಯೋ ಎಡಿಟೆಡ್ ಎಂದಾದರೆ ಅದನ್ನು ಎಫ್’ಎಸ್’ಎಲ್’ಗೆ ಕಳುಹಿಸಿ ಎಂದು ಭದ್ರಾವತಿ ಬಿಜೆಪಿ ಘಟಕ ಸವಾಲು ಹಾಕಿದೆ.
ಈ ಪ್ರಕರಣವನ್ನು ವಿರೋಧಿಸಿ ಶಾಸಕ ಬಿ.ಕೆ. ಸಂಗಮೇಶ್ ಆತನ ಕುಲಪುತ್ರ ಬಸವನ ವಿರುದ್ಧ ಭದ್ರಾವತಿ ನಗರದಲ್ಲಿ ಬಿಜೆಪಿ ನಡೆಸಿದ ಬೃಹತ್ ಪ್ರತಿಭಟನಾ ಧರಣಿಯಲ್ಲಿ ಬಿಜೆಪಿ ಮುಖಂಡ ಧರ್ಮಪ್ರಸಾದ್ ಅಪ್ಪ ಮಕ್ಕಳ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಮಹಿಳಾ ಅಧಿಕಾರಿಗೆ ಬಸವ ಅಕ್ರಮ ಮರಳು ದಂಧೆಕೋರರನ ಮೊಬೈಲ್ ಗೆ ಕಾಲ್ ಮಾಡಿ ಮೊಬೈಲ್ ಓಪನ್ ಸ್ಪೀಕರ್ ಅನ್ ಮಾಡಿಸಿ ಮಹಿಳಾ ಅಧಿಕಾರಿಯ ಮುಂದಿಟ್ಟು ನೀಚ ಪದ ಬಳಸಿದ ವೀಡಿಯೋ ಹೊರಬಿದ್ದ ನಂತರ ಅದು ಎಡಿಟೆಡ್ ವೀಡಿಯೋ ಎಂದು ತಳ್ಳಿ ಹಾಕುವ ಪ್ರಯತ್ನಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬರುತ್ತಿದೆ.ಇಡೀ ಭದ್ರಾವತಿಗೆ ಬಸವನ ಧ್ವನಿ ತಿಳಿದಿದೆ. ಹಾಗೆ ಅದು ಎಡಿಟೆಡ್ ವೀಡಿಯೋ ಆದರೆ ಅದನ್ನು ಎಫ್’ಎಸ್’ಎಲ್’ಗೆ ಕಳುಹಿಸಿ. ಎಂದು ಸವಾಲು ಹಾಕಿದರು.
ಕ್ಷೇತ್ರದಲ್ಲಿ ಅಮಾಯಕರ ಮೇಲೆ ದೌರ್ಜನ್ಯ ನೆಡೆಯುತ್ತಿದೆ.ಅದರಲ್ಲೂ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ಮೇಲೆ ಇವರ ದಬ್ಬಾಳಿಕೆ ಹೇಳ ತೀರದಾಗಿದೆ.ಮಗನ ಆರ್ಭಟಕ್ಕೆ ಶಾಸಕರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ತಾಕತ್ ಇದ್ದರೆ ನಮ್ಮ ವಿರುದ್ಧ ಹೋರಾಡಿ ಎಂದು ಸವಾಲು ಹಾಕಿದರು.
ಅಧಿಕಾರಿಗಳಿಂದ ಕರ್ತವ್ಯ ಲೋಪವಾಗಿದೆ ಎಂದು ಆರೋಪಿಸಿದ ಅವರು, ಕ್ಷೇತ್ರದಲ್ಲಿನ ಅಧಿಕಾರಿಗಳ ಮೇಲೂ ಸಹ ದೌರ್ಜನ್ಯ ನಡೆಯುತ್ತಿದ್ದು, ಅವರುಗಳಿಗಾಗಿ ಇಂದು ನಾವು ಹೋರಾಡುತ್ತಿದ್ದೇವೆ. ರಮೇಶ್ ಎನ್ನುವವರು ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿರುವುದು ಸಾಬೀತಾದರೂ ಅವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಅಕ್ರಮ ಮರಳು ದಂಧೆ ನಡೆಯುತ್ತಿರುವುದು ತಿಳಿದಿದ್ದರೂ, ಇದನ್ನು ತಡೆಯದಂತೆ ಸಿಎಂ, ಡಿಸಿಎಂಗಳಿಂದ ಫೋನ್ ಮಾಡಿಸುತ್ತಾರೆ. ಅಧಿಕಾರಿಗಳ ಮೇಲೂ ಸಹ ಶಾಸಕರ ಕುಟುಂಬದ ದೌರ್ಜನ್ಯ ನಡೆಯುತ್ತಿದ್ದು, ಇದು ಇಡೀ ಭದ್ರಾವತಿಗೇ ಗೊತ್ತಿದೆ ಎಂದರು.
ಮಹಿಳಾ ಅಧಿಕಾರಿಗೆ ನೀಚ ಪದ ಬಳಸಿ ನಿಂದಿಸಿದ ಬಸವನ ವಿರುದ್ಧ ಕಾನೂನು ಕ್ರಮ ಕೈಗೊಂಡು ಇವನನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಪ್ರಮುಖರಾದ ಮಂಗೋಟೆ ರುದ್ರೇಶ್, ಮಂಜುಳಾ, ಸತೀಶ್ (ಟೈಲರ್), ಜಿ. ಆನಂದಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.