ಬೆಂಗಳೂರು: ದರ್ಶನ್ ರಾಜಕೀಯ ಎಂಟ್ರಿ ಸುದ್ದಿ ಬೆನ್ನಲ್ಲೇ ಕಿಚ್ಚಾ- ಡಿಕೆಶಿ ಭೇಟಿ, ಅಸಲಿ ಕಾರಣ ತೆರೆದಿಟ್ಟ ಡಿಕೆ ಶಿವಕುಮಾರ್.
news.ashwasurya.in/Shivamogga
ಅಶ್ವಸೂರ್ಯ/ಬೆಂಗಳೂರು: ಕಿಚ್ಚ ಸುದೀಪ್ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ದಿಢೀರ್ ಭೇಟಿ ಮಾಡಲು ಕಾರಣವೇನು.? ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿಕೆ ಸುದೀಪ್ ಭೇಟಿ ಹಿಂದಿನ ಅಸಲಿ ಕಾರಣದ ತಿಳಿಸಿದ್ದಾರೆ.
ನಟ ಕಿಚ್ಚ ಸುದೀಪ್ ಅವರು ಬೆಂಗಳೂರಿನಲ್ಲಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನೆಗೆ ದಿಢೀರ್ ಭೇಟಿ ನೀಡಿದ್ದರು ಕಾರಣ ಸಿಸಿಎಲ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನೆಗೆ ಡಿಕೆ ಶಿವಕುಮಾರ್ ಅವರಿಗೆ ಸುದೀಪ್ ಆಹ್ವಾನ ನೀಡಲು ಬಂದಿದ್ದಾರೆ ಎನ್ನಲಾಗಿತ್ತು. ಆದರೆ ಈ ಭೇಟಿ ಹಿಂದಿನ ಅಸಲಿ ಕಾರಣವೇ ಬೇರೆಯಾಗಿದೆ ದರ್ಶನ್ ರಾಜಕೀಯಕ್ಕೆ ಬರತ್ತಾರೆ ಎನ್ನುವ ವಿಚಾರ ಹರಿದಾಡುತ್ತಿರುವಾಗಲೆ ಡಿಕೆಶಿ ಹಾಗೂ ಸುದೀಪ್ ಭೇಟಿಯಾಗಿದ್ದು ಏಕೆ.? ಎನ್ನುವ ಚರ್ಚೆಯಾಗಿದೆ. ಇದರ ನಡುವೆ ಸುದೀಪ್ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಕಿಚ್ಚ ಸುದೀಪ್ ಅವರು ದಿಢೀರ್ ಭೇಟಿಗೆ ಕಾರಣ ಏನು ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಸುದೀಪ್ ಅವರದ್ದು ಏನೋ ಸ್ವಲ್ಪ ಪರ್ಸನಲ್ ಕೆಲಸವಿತ್ತು ಅ ವಿಷಯವನ್ನು ಚರ್ಚಿಸಲು ಬಂದಿದ್ದರು ಎಂದಿದ್ದಾರೆ.! ಶೂಟಿಂಗ್ ಜಾಗದ ಸಲುವಾಗಿ ಮಾತಾಡಲು ಬಂದಿದ್ದರು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇದು ರಾಜಕಾರಣದ ಭೇಟಿ ಅಲ್ಲ ಕೆಲ ವಿಚಾರದ ಬಗ್ಗೆ ಚರ್ಚೆ ಮಾಡಲು ಬಂದಿದ್ರು ಅಷ್ಟೇ ಇದನ್ನು ಹೊರತುಪಡಿಸಿ ಬೇರೆ ಏನೂ ಇಲ್ಲ. ಸ್ನೇಹಿತನಾಗಿ ಬಂದು ಭೇಟಿ ಮಾಡಿ ಹೋದ್ರು ಅಷ್ಟೇ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕುತೂಹಲ ಮೂಡಿಸಿತ್ತು ರಾಜಕೀಯ ನಾಯಕನ ಮತ್ತು ಸಿನಿಮಾ ನಾಯಕನ ಭೇಟಿ.
ಚಿತ್ರರಂಗದವರು ರಾಜಕೀಯಕ್ಕೆ ಹೋಗುವುದು ಹೊಸದೇನಲ್ಲ. ಕನ್ನಡ ಚಿತ್ರರಂಗದ ಕೆಲ ನಟ-ನಟಿಯರು ಕೂಡ ರಾಜಕೀಯಕ್ಕೆ ಕಾಲಿಟ್ಟು ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ಕೆಲವರು ಸಂಸದರು, ಸಚಿವರಾಗಿಯೂ ರಾಜಕೀಯದಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದಾರೆ. ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ಮಾಡಿದ್ದ ನಟ ದರ್ಶನ್ ಕೂಡ ರಾಜಕೀಯಕ್ಕೆ ಇಳೀತಾರೆ ಎನ್ನುವ ಸುದ್ದಿ ಹಬ್ಬಿತ್ತು. ಜೈಲಿಂದ ಹೊರ ಬಂದ ಮೇಲು ದರ್ಶನ್ ರಾಜಕೀಯ ಎಂಟ್ರಿ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತುವೆ. ಇದರ ನಡುವೆಯೇ ಕಿಚ್ಚ ಸುದೀಪ್ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ಕುತೂಹಲ ಮೂಡಿಸಿತ್ತು.
ದರ್ಶನ್ ರಾಜಕೀಯ ಎಂಟ್ರಿ ಫಿಕ್ಸ್?
ನಟ ದರ್ಶನ್ ಹಾಗೂ ನಟ ಕಿಚ್ಚ ಸುದೀಪ್ ಇಬ್ಬರು ರಾಜ್ಯ ರಾಜಕೀಯದಲ್ಲಿ ಆಪ್ತ ಸ್ನೇಹಿತರನ್ನು ಹೊಂದಿದ್ದಾರೆ. ಎಲೆಕ್ಷನ್ ಅಂತ ಬಂದಾಗ ಸ್ಟಾರ್ ಪ್ರಚಾರಕರಾಗಿ ಅಖಾಡಕ್ಕೆ ಇಳಿಯುವ ನಟ ದರ್ಶನ್, ಕೆಲ ಸ್ಪರ್ಧಿಗಳ ಪರ ಅಬ್ಬರದ ಪ್ರಚಾರ ಮಾಡಿದ್ದರು.ರಾಜಕೀಯ ನಾಯಕರ ಜೊತೆಗಿನ ದರ್ಶನ್ ಒಡನಾಡ ನೋಡಿದವರು ದರ್ಶನ್ ರಾಜಕೀಯಕ್ಕೆ ಎಂಟ್ರಿ ಕೊಡೋದು ಪಕ್ಕಾ.
ನಟ ದರ್ಶನ್ ರಾಜಕೀಯಕ್ಕೆ ಎಂಟ್ರಿ ಕೊಡುವ ಮುನ್ನವೇ ಕಿಚ್ಚ ಸುದೀಪ್ ರಾಜಕೀಯ ಪ್ರವೇಶ ಮಾಡ್ತಾರಾ ಎನ್ನುವ ಚರ್ಚೆ ಇದೀಗ ಶುರುವಾಗಿದೆ. ಡಿಕೆಶಿ ಜೊತೆ ಕಿಚ್ಚ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗ್ತಿದೆ. ಈ ಹಿಂದೆ ಕೂಡ ಕಿಚ್ಚನ ರಾಜಕೀಯ ಪ್ರವೇಶದ ಬಗ್ಗೆ ಸುದ್ದಿ ಹಬ್ಬಿತ್ತು. ನಾನು ರಾಜಕೀಯಕ್ಕೆ ಹೋಗುವುದಾದ್ರೆ ನಾನೇ ಹೇಳಿಕೊಳ್ಳುವೆ ಎಂದು ಸುದೀಪ್ ಕೂಡ ಹೇಳಿದ್ರು. ಎಲ್ಲವನ್ನೂ ಕಾದು ನೋಡಬೇಕಿದೆ.