ಶೃಂಗೇರಿಯ ಹುಲಗಾರುಬೈಲು ಅರಣ್ಯದೊಳಗೆ ಬಂದೂಕು ಪತ್ತೆ.! ನಕ್ಸಲರು ಉಪಯೋಗಿಸುತ್ತಿದ್ದ ಬಂದೂಕುಗಳ.?
ಅಶ್ವಸೂರ್ಯ/ಚಿಕ್ಕಮಗಳೂರು: ಶ್ರೆಂಗೇರಿಯ ಹುಲಗಾರುಬೈಲು ಅರಣ್ಯದಲ್ಲಿ ಬಂದೂಕು ಪತ್ತೆಯಾಗಿದ್ದು, ಶರಣಾದ ನಕ್ಸಲರು ಎಸೆದಿರುವ ಅನುಮಾನ ವ್ಯಕ್ತವಾಗಿದೆ.
ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಗಾರುಬೈಲು ಅರಣ್ಯದಲ್ಲಿ ಒಂದು ನಾಡ ಬಂದೂಕು,18 ಖಾಲಿ ಕಾಟ್ರೇಜ್ ಪತ್ತೆಯಾಗಿದ್ದು, ಇದರ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಕ್ಸಲರ ಶರಣಾಗತಿ ಬೆನ್ನಲ್ಲೇ ಕಾಡಿನಲ್ಲಿ ಬಂದೂಕು ಪತ್ತೆಯಾಗಿದ್ದು ಸುದ್ದಿಯಾಗಿದೆ. ಕಳೆದ ಶನಿವಾರ ನಕ್ಸಲ್ ರವೀಂದ್ರ ಶಸ್ತ್ರ ರಹಿತವಾಗಿ ಶರಣಾಗತಿಯಾಗಿದ್ದ. ರವೀಂದ್ರ ಬಳಿ ಇದ್ದ ಶಸ್ತ್ರ ಇದೀಗ ಪತ್ತೆಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.ಶರಣಾಗತಿ ಮುನ್ನ ರವೀಂದ್ರ ಕಾಡಿನಲ್ಲಿ ಎಸೆದಿರಬಹುದು ಎನ್ನಲಾಗಿದೆ.
ಶೃಂಗೇರಿ ಪೊಲೀಸರು ನಾಡ ಬಂದೂಕು ಸೇರಿದಂತೆ 18 ಖಾಲಿ ಕಾಟ್ರೇಜ್ ವಶಕ್ಕೆ ಪಡೆದಿದ್ದಾರೆ. ಎನ್ ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಈ ಹಿಂದೆ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಕಾಡಿನ ನಡುವೆ ಭೂಮಿಯೊಳಗೆ ಹೂತುಹಾಕಿದ್ದ ಶಸ್ತ್ರಾಸ್ತ್ರಗಳು ಪತ್ತೆಯಾಗಿತ್ತು. ಈ ವೇಳೆ AK56 ಸೇರಿದಂತೆ 6 ಬಂದೂಕು ಜೀವಂತ ಮದ್ದುಗುಂಡು ಪತ್ತೆಯಾಗಿತ್ತು.ಒಟ್ಟಿನಲ್ಲಿ ನಕ್ಸಲರ ಶರಣಾಗತಿಯ ಬೆನ್ನಲ್ಲೆ ಅವರುಗಳು ಉಪಯೋಗಿಸಿದ್ದ ಶಸ್ತ್ರಾಸ್ತ್ರಗಳು ಪೊಲೀಸರ ವಶವಾಗುತ್ತಿರುವುದು ಒಳ್ಳೆಯ ಬೆಳವಣಿಗೆ.