Headlines

ಚನ್ನಗಿರಿ: ಮೆಡಿಕಲ್ ಶಾಪ್ ಮಾಲೀಕನ ಮೊಬೈಲ್ ನಲ್ಲಿತ್ತು 60ಕ್ಕೂ ಅಧಿಕ ಅಶ್ಲೀಲ ವಿಡಿಯೋ.!

ಚನ್ನಗಿರಿ: ಮೆಡಿಕಲ್ ಶಾಪ್ ಮಾಲೀಕನ ಮೊಬೈಲ್ ನಲ್ಲಿತ್ತು 60ಕ್ಕೂ ಅಧಿಕ ಅಶ್ಲೀಲ ವಿಡಿಯೋ.!

ಅಶ್ವಸೂರ್ಯ/ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿಯ ಮೆಡಿಕಲ್ ಶಾಪ್ ಮಾಲೀಕನೊಬ್ಬನ ಮೊಬೈಲ್ ನಲ್ಲಿ 60ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ.!
ದಾವಣಗೆರೆಯ ದೇವರಾಜ ಅರಸು ಬಡಾವಣೆ ನಿವಾಸಿಯಾಗಿರುವ ಅಮ್ಜದ್ ಎಂಬುವನನ್ನು ಸುಮೊಟೋ ಕೇಸ್ ದಾಖಲಿಸಿಕೊಂಡ ಪೊಲೀಸರು ಬಂಧಿಸಿದ್ದಾರೆ. ಚನ್ನಗಿರಿಯ ಮೇಲಿನ ಬಸ್ ನಿಲ್ದಾಣದಲ್ಲಿ ಮೆಡಿಕಲ್ ಶಾಪ್ ಒಂದರ ಮಾಲಿಕನಾಗುರುವ ಆರೋಪಿ ಅನೇಕ ಯುವತಿಯರು, ಮಹಿಳೆಯರು, ಅಪ್ರಾಪ್ತರನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡು ವಿಡಿಯೋ ಮಾಡಿಕೊಳ್ಳುತ್ತಿದ್ದನಂತೆ.!? ಅವುಗಳನ್ನು ಮೊಬೈಲ್, ಕಂಪ್ಯೂಟರ್ ಸಿಸ್ಟಮ್ ನಲ್ಲಿ ಹಾಕಿಕೊಂಡು ನೋಡುತ್ತಿದ್ದ. ಇಂತಹ 60ಕ್ಕೂ ಅಧಿಕ ವಿಡಿಯೋ ದೃಶ್ಯಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ.

ಅಲ್ಲದೆ, ಮಹಿಳೆಯರು, ಯುವತಿಯರು ಅಪ್ರಾಪ್ತೆಯರು, ಬಸ್ ನಲ್ಲಿ ಪ್ರಯಾಣಿಸುವಾಗ ದೇಹದ ಭಾಗಗಳನ್ನು ಕದ್ದು ಮುಚ್ಚಿ ಸೆರೆಹಿಡಿಯುತ್ತಿದ್ದ. 30ಕ್ಕೂ ಅಧಿಕ ಮಹಿಳೆಯರನ್ನು ಆರೋಪಿ ಬಳಸಿಕೊಂಡಿರುವ ಆರೋಪ ಕೇಳಿ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಕೆಲವು ವಿಡಿಯೋಗಳು ಹರಿದಾಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಆರೋಪಿಯ ವಿರುದ್ಧ ಸಿ ಇ ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ 67, 67(ಎ), 67(ಬಿ) ಐಟಿ ಆಕ್ಟ್ ಮತ್ತು ಕಲಂ 77 ಹಾಗೂ ಕಲಂ 4, 6, 14, 15 ಪೋಕ್ಸೋ ಆಕ್ಟ್ 2012 ಅನ್ವಯ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ

ಹೆಣ್ಣು ಮಕ್ಕಳ ಗೌರವ ಘನತೆಗೆ ತಕ್ಕಂತೆ ಯಾವುದೇ ವಿಡಿಯೋ, ಫೋಟೋ ಶೇರ್ ಮಾಡದಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ತಿಳಿಸಿದ್ದು, ಅಂತಹ ವಿಡಿಯೋ, ಫೋಟೋ ಶೇರ್, ಸೇವ್ ಮಾಡಿದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮೆಡಿಕಲ್ ಶಾಪ್ ಗೆ ಔಷಧಿ ತೆಗೆದುಕೊಳ್ಳಲು ಬರುವ ಮಹಿಳೆಯರು, ಯುವತಿಯರು ಮತ್ತು ಬಾಲಕಿಯರನ್ನು ಪುಸಲಾಯಿಸಿ ತನ್ನ ಕಾಮತೃಷೆಗೆ ಬಳಿಸಿಕೊಂಡು ನಿಗೂಢವಾಗಿ ಅದನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದ ಮೆಡಿಕಲ್ ಶಾಪ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಬಂಧಿತ ಆರೋಪಿಯನ್ನು ಚೆನ್ನಗಿರಿಯ ಮೆಡಿಕಲ್ ಸ್ಟೋರ್ ಮಾಲೀಕ ವಿಕೃತ ಕಾಮಿ ಅಮ್ಜಾದ್ ಎಂದು ಗುರುತಿಸಲಾಗಿದೆ.

{“

Leave a Reply

Your email address will not be published. Required fields are marked *

Optimized by Optimole
error: Content is protected !!