ಚಿಕ್ಕಮಗಳೂರು: ಅಪ್ಪನ ಮೃತದೇಹ ಮಾರ್ಚರಿಯಲ್ಲಿ.! ಮಗಳ ಮದುವೆ ಮಂಟಪದಲ್ಲಿ.! ಅಪ್ಪನ ಸಾವು ಅರಿಯದೆ ಹಸೆಮಣೆ ಏರಿದ ಮಗಳು.!ಹೇ ವಿಧಿ…ನೀನೇಷ್ಟು ಕ್ರೂರಿ.!
ASHWASURYA/SHIVAMOGGA
ಅಶ್ವಸೂರ್ಯ/ಚಿಕ್ಕಮಗಳೂರು: ಇದು ಕಳೆದ ಜನವರಿ 20 ರಂದು ನೆಡೆದ ಘಟನೆ.ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಮಗಳ ಮದುವೆಗೆ ಮಂಟಪ ಅಲಂಕಾರಗೊಂಡಿತ್ತು.!ಕುಟುಂಬಸ್ಥರು ಮದುವೆಯ ಸಡಗರದಲ್ಲಿ ಮುಳುಗಿಹೊಗಿದ್ದರು.ಅದೇನು ದುರ್ವಿಧಿಯೋ ಮಗಳ ಮದುವೆಯ ಹಿಂದಿನ ದಿನ ತಂದೆ ರಸ್ತೆ ಅಪಘಾತದಲ್ಲಿ ಮಸಣ ಸೇರಿದ್ದಾರೆ.!ಈ ವಿಚಯ ಕುಟುಂಬಸ್ಥರಿಗೆ ತಿಳಿಯುತ್ತಿದ್ದಹಾಗೆ.ಅತಂಕವಾಗಿದೆ.ಇನ್ನೊಂದು ಕಡೆ ತಂದೆಯ ಸಾವಿನ ವಿಷಯ ತಿಳಿಯದ ಮದುಮಗಳು ಮತ್ತು ತನ್ನ ಗಂಡನ ಸಾವು ತಿಳಿದ ಹೆಂಡತಿ ( ಮದುಮಗಳ ತಾಯಿ)ಸಂಭ್ರಮ ಸಡಗರದಲ್ಲಿ ಮುಳುಗಿಹೋಗಿದ್ದಾರೆ.ಈ ಸಂಧರ್ಭದಲ್ಲಿ ಕುಟುಂಬದವರು ಒಂದು ತೀರ್ಮಾನಕ್ಕೆ ಬಂದು ಮದುವೆ ನಿಲ್ಲಬಾರದು ಎಂದು ಆತನ ಮಗಳಿಗು ಮತ್ತು ಮಡದಿಗು ವಿಷಯ ತಿಳಿಸದೆ ಮದುವೆಯನ್ನು ನಿಶ್ಚಯದಂತೆ ಮಾಡಿ ಮುಗಿಸಿದ್ದಾರೆ. ಮದುವೆಯಾದ ಮರು ಕ್ಷಣವೇ ಮಗಳಿಗೆ ತನ್ನ ತಂದೆಯ ಸಾವಿನ ಸುದ್ದಿ ತಿಳಿದು ದುಃಖ ಮುಗಿಲು ಮುಟ್ಟಿದೆ.
ರಸ್ತೆ ಅಪಘಾತದಲ್ಲಿ ಮೃತರಾದ ಮದುಮಗಳ ತಂದೆ ಚಂದ್ರು
21 ವರ್ಷಗಳ ಕಾಲ ಮಗಳನ್ನು ಜೋಪಾನವಾಗಿ ನೋಡಿಕೊಂಡು.ಮಗಳಿಗೆ ವಿದ್ಯಾಭ್ಯಾಸ ನೀಡಿ ಉನ್ನತ ಭವಿಷ್ಯ ರೂಪಿಸುವ ಸಲುವಾಗಿ ಆಕೆಗೊಂದು ಒಳ್ಳೆಯ ಹುಡುಗನನ್ನು ಹುಡುಕಿ ಮದುವೆಮಾಡಿ ಆಕೆಯನ್ನು ಗಂಡನ ಮನೆಗೆ ಕಳಿಸುವ ಕ್ಷಣದ ಸಂಭ್ರಮವನ್ನು ಯಾವ ತಂದೆಯೂ ಕೂಡ ತಪ್ಪಿಸಿಕೊಳ್ಳಲಾರ. ಮಗಳ ಮದುವೆಯಲ್ಲಿ ಅಪ್ಪನ ಸಂತೋಷವನ್ನು ಹೇಳತಿರದು. ಅ ಕ್ಷಣದಲ್ಲಿ ಅಪ್ಪನಷ್ಟು ಭಾವುಕನಾಗುವ ವ್ಯಕ್ತಿ ಮತ್ತೊಬ್ಬನಿಲ್ಲ. ಮಗಳಿಗೂ ಹಾಗೆ, ಮದುವೆ ಮನೆಯಲ್ಲಿ ಬೇರೆಲ್ಲರಿಗಿಂತ ತನ್ನ ಅಪ್ಪನ ಮುಖವನ್ನು ನೋಡಬೇಕು ಆತನ ಎದುರೆ ಹಸೆಮಣೆಯಲ್ಲಿ ಕುಳಿತು ತಾಳಿ ಕಟ್ಟಿಸಿಕೊಂಡು ಹೊಸ ಬದುಕಿಗೆ ಹೆಜ್ಜೆ ಇಡಬೇಕೆನ್ನುವ ಬಯಕೆಯೇ ಹೆಚ್ಚಿರುತ್ತದೆ. ಆದರೆ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಡೆದ ಮನ ಮರಗುವಂತಹ ಘಟನೆಯನ್ನು ನೋಡಿದರೆ ಎಂತವರ ಕಣ್ಣಂಚು ತೇವವಾಗದೇ ಇರದು.ಮಗಳ ಮದುವೆ ನಿಶ್ಚಯವಾದ ಕ್ಷಣದಿಂದಲೂ ಮಗಳ ಮದುವೆಯ ಖುಷಿಯಲ್ಲಿದ್ದ ಅಪ್ಪ ಮದುವೆಯ ಹಿಂದಿನ ದಿನವೇ ರಸ್ತೆ ಅಪಘಾತದಲ್ಲಿ ತೀರಿ ಹೋಗಿದ್ದಾರೆ.! ಅಪ್ಪನ ಸಾವಿನಿಂದ ಸೂತಕವಾಗಿದ್ದರೂ ಈ ಮದುವೆ ನಿಲ್ಲಬಾರದು ಎನ್ನುವ ಕಾರಣಕ್ಕೆ ಆತನ ಮಗಳಿಗೆ ತಂದೆಯ ಸಾವಿನ ವಿಷಯವನ್ನು ತಿಳಿಸದೇ ಮದುವೆ ಕಾರ್ಯವನ್ನು ಅವರ ಸಂಬಂಧಿಕರು ಕುಟುಂಬಸ್ಥರು ಮಾಡಿ ಮುಗಿಸಿದ್ದಾರೆ. ಮದುವೆಮುಗಿದ ಬಳಿಕವಷ್ಟೆ ಮಗಳಿಗೆ ತನ್ನ ತಂದೆ ರಸ್ತೆ ಅಪಘಾತದಲ್ಲಿ ತೀರಿ ಹೋಗಿರುವ ವಿಷಯ ಗೊತ್ತಾಗಿದೆ.
ಆಸ್ಪತ್ರೆಯ ಚಿತಾಗಾರದ ಮಾರ್ಚರಿಯಲ್ಲಿ ಅಪ್ಪನ ಶವವಿದ್ದರೆ, ಇದ್ಯಾವುದರ ಕಿಂಚಿತ್ತು ಅರಿವಿಲ್ಲದ ಮಗಳು ಹಸೆಮಣೆ ಏರಿ ಸಪ್ತಪದಿ ತುಳಿದು ಹೊಸ ಬದುಕಿಗೆ ಕಾಲಿಟ್ಟಿದ್ದಾಳೆ.ಅದೇನು ವಿಧಿ ಆಟವೊ ಮಗಳ ಮದುವೆಯ ಹಿಂದಿನ ದಿನವೂ ಮಗಳ ಮದುವೆಗೆ ಅಮಂತ್ರಣ ಪತ್ರಿಕೆ ಕೊಡಲು ಹೋಗಿದ್ದ ಅಪ್ಪ ರಸ್ತೆ ಅಪಘಾತದಲ್ಲಿ ಸಾವಿನ ಮನೆ ಸೇರಿದ್ದರು.ಈ ವಿಷಯ ಮದುವೆ ಆಗಲಿದ್ದ ಆತನ ಮಗಳಿಗೆ ಮತ್ತು ಪತ್ನಿಗೆ ತಿಳಿಸದೇ ಇಡೀ ಮದುವೆ ಸಮಾರಂಭವನ್ನು ಮುಗಿಸಿದ್ದಾರೆ ಕುಟುಂಬಸ್ಥರು.ತರೀಕೆರೆಯ ಚೀಲದ ಪಾಪಣ್ಣನವರ ಅವರ ಪುತ್ರ 45 ವರ್ಷದ ಚಂದ್ರು ಮೃತ ವ್ಯಕ್ತಿ. ಸೋಮವಾರ ಚಂದ್ರು ಅವರ ಪುತ್ರಿ ದೀಕ್ಷಿತಾ ಅವರ ವಿವಾಹ ನೆರವೇರಿದೆ. ಭಾನುವಾರ ಬೆಳಗ್ಗೆ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರಕ್ಕೆ ಲಗ್ನಪತ್ರಿಕೆ ಕೊಡಲು ಹೋಗಿದ್ದ ಚಂದ್ರು, ವಾಪಾಸ್ ಬರುವಾಗ ರಸ್ತೆ ಅಪಘಾತದಲ್ಲಿ ಸಾವು ಕಂಡಿದ್ದರು.
ಆದರೆ, ಈ ದುಃಖದ ಸುದ್ದಿಯನ್ನು ಮನೆಯಲ್ಲಿ ಯಾರಿಗೂ ತಿಳಿಸಿರಲಿಲ್ಲ. ಅಪ್ಪ ಆಸ್ಪತ್ರೆಯಲ್ಲಿ ಇದ್ದಾರೆ ಎಂದು ಆರತಕ್ಷತೆ-ಮದುವೆಯನ್ನು ಸಂಬಂಧಿಕರು ಮುಗಿಸಿದ್ದಾರೆ. ಚಂದ್ರು ಸಾವನ್ನಪ್ಪಿದ್ದ ವಿಷಯ ಪತ್ನಿಗೂ ತಿಳಿದಿರಲಿಲ್ಲ, ಮಗಳಿಗೂ ತಿಳಿದಿರಲಿಲ್ಲ. ಮದುವೆ ಕಾರ್ಯಕ್ಕೆ ಓಡಾಡಿ ಸುಸ್ತಾಗಿ ಆಸ್ಪತ್ರೆ ಸೇರಿದ್ದಾರೆ ಎಂದು ಪತ್ನಿ ಹಾಗೂ ಮಗಳಿಗೆ ತಿಳಿಸಿ ಧೈರ್ಯ ತುಂಬಿದ್ದ ಕುಟುಂಬದವರು ಮದುವೆ ಮುಗಿದ ಬಳಿಕ ಪತ್ನಿಗೆ-ಮಗಳಿಗೆ ಸಾವಿನ ವಿಷಯ ತಿಳಿಸಿದ್ದಾರೆ.ಕ್ಷಣದಲ್ಲೇ ಸಂಭ್ರಮದ ಸಡಗರದಲ್ಲಿದ್ದ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು ಮಾತ್ರ ದುರಂತವೆ ಹೌದು. ಪತ್ನಿ-ಮಗಳು ನೆರೆದಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಹೇ ವಿಧಿ…ನೀನೇಷ್ಟು ಕ್ರೂರಿ.