ಖತರ್ನಾಕ್ ಲೇಡಿ ರೇಖಾ ಮಾಡಿದ್ಲಾ ದೋಖಾ.! ಕೋಟಿ ವಂಚನೆ ಉದ್ಯಮಿಗೆ ಉಂಡೆ ನಾಮ.! ರಾಜಧಾನಿಯಲ್ಲಿ ವಿಲೇಜ್ ಲೇಡಿಯ ಕರಾಮತ್ತು.?
news.ashwasurya. in/Shivamogga
ಅಶ್ವಸೂರ್ಯ/ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ಹಣ ಅಂದ್ರೆ ಯಾವುದಾದರೂ ರೂಪದಲ್ಲಿ ಗಳಿಸಬೇಕೆನ್ನುವ ಹಂಬಲ ಹಲವರದ್ದು. ಅದರಲ್ಲೂ ಹಣಮಾಡು ದುರಾಸೆಯಿಂದ ಸಾಕಷ್ಟು ಮಂದಿ ಉಂಡೆನಾಮ ತಿಕ್ಕಿಸಿಕೊಂಡಿದ್ದಾರೆ. ಜೊತೆಗೆ ಹತ್ತಾರು ದುರಾಸೆ ಇಟ್ಕೊಂಡು ಯಾರೂ ಹೇಳಿದರು ಅಂತ ಅಡ್ಡಹಾದಿಯಲ್ಲಿ ಹಣಮಾಡಲುಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡವರ ದೊಡ್ಡ ಪಟ್ಟಿಯೆ ಇದೆ.?ಲಕ್ಷಾಂತರ ರೂಪಾಯಿ ಕಳೆದುಕೊಂಡವರ ಮೋಸ ಹೋದವರ ವರದಿಯನ್ನು ದಿನನಿತ್ಯ ಮಾಧ್ಯಮದ ಮುಖಾಂತರ ತಿಳಿದುಕೊಂಡರು ನಮ್ಮ ಜನ ಮತ್ತೆ ಮತ್ತೆ ಅಡ್ಡ ಹಾದಿಯಲ್ಲಿ ಹಣ ಮಾಡುವ ದುರಾಲೋಚನೆಯಿಂದ ಹಣ ಕಳೆದುಕೊಳ್ಳುತ್ತಿದ್ದಾರೆ.!ಇದಕ್ಕೆ ಉದಾಹರಣೆಯಾಗಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.ನಂಬಿದವರನ್ನು ಮೋಸಮಾಡಿ ಹಣದ ಮೋಹಕ್ಕೆ ಬಿದ್ದ ಕೆಲವು ಹೆಣ್ಣುಮಕ್ಕಳು ಏನೆಲ್ಲಾ ಮಾಡ್ತಾರೆ ಅನ್ನೋದಕ್ಕೆ ಇತ್ತೀಚಿನ ಐಶ್ವರ್ಯಾಗೌಡ, ಶ್ವೇತಾಗೌಡ ಪ್ರಕರಣಗಳು ಕಣ್ಮುಂದೆ ಸಾಕ್ಷಿಯಾಗಿ ನಿಂತಿವೆ.! ಇವರುಗಳ ವಂಚನೆಯನ್ನೂ ಮೀರಿಸುವಂಥಹ ನವರಂಗಿ ಲೇಡಿಯ ಮಹಾಮೋಸದ ಪ್ರಕರಣವೊಂದು ವರದಿಯಾಗಿದೆ. ಇವಳದು ಬಿಗ್ ಆಫರ್ ಕೋಟಿಗೆ ಐದು ಕೋಟಿ ಕೊಡ್ತೀನಿ ಎಂದು ಪುಕಾರು ಬಿಟ್ಟವಳು ನಂಬಿದವರಿಗೆ ಇಟ್ಟಿದ್ದು 5 ಕೋಟಿಯ ಉಂಡೆನಾಮ.!!
ಹೌದು, ಆಕೆಯ ಮಾತೆ ಬಂಡವಾಳ ಮಾತಿನಲ್ಲೆ ನಂಬಿಕೆ ಬರುವಂತೆಮಾಡಿ ತನ್ನ ಖೆಡ್ಡಕ್ಕೆ ಕೆಡವಿಕೊಂಡು ಅವರನ್ನು ಸಂಪೂರ್ಣವಾಗಿ ಬೋಳಿಸುವ ಕಲೆ ಆಕೆಯ ರಕ್ತದಲ್ಲಿ ಕರಗತವಾಗಿದೆಯಂತೆ.!ಪಾಪಿ ಪರದೇಶಿಯೊಬ್ಬರಿಗೆ ಕೋಟಿ ಹಣಕೊಟ್ಟರೆ ಐದು ಕೋಟಿ ಹಣ ಕೊಡ್ತೀನಿ ಎಂದವಳು, 5 ಕೋಟಿಯ ಕಲರ್ ಫುಲ್ ನಾಮ ಹಾಕಿರುವ ಆರೋಪ ಕೇಳಿಬಂದಿದೆ. ಇಂತಹ ಕೋಟಿನಾಮ ತಿಕ್ಕಿದ ಖತರ್ನಾಕ್ ಲೇಡಿ ಯಾರು.?
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಪುಟ್ಟ ಹಳ್ಳಿಯೊಂದರಲ್ಲಿ ಕಡುಬಡತನದಲ್ಲಿ ಹುಟ್ಟಿ ಬೆಳೆದ ರೇಖಾ ಎನ್ನುವ ಮಹಿಳೆಯೆ ಕೋಟಿ ನಾಮತಿಕ್ಕಿದ ಖತರ್ನಾಕ್ ಲೇಡಿ ಎನ್ನುವ ಆರೋಪ ಕೇಳಿ ಬಂದಿದೆ.?ಕಳೆದ ಹದಿನೈದು ವರ್ಷದ ಹಿಂದೆ ಹಣಮಾಡಲೆಂದೆ ಬೆಂಗಳೂರಿಗೆ ಬಂದಿದ್ದ ಈಕೆ ರಾಜಧಾನಿಗೆ ಪಾದ ಮಡಗಿದಾಗಿನಿಂದಲೂ ತನ್ನ ವಂಚನೆಯ ಕರಾಮತ್ತು ತೋರಿಸುತ್ತಾ ಬಂದಿದ್ದಾಳೆ ಎನ್ನುವುದು ಈಕೆಯ ಮೇಲಿನ ಸರಣಿ ಆರೋಪಗಳೇ ಸಾರಿ ಸಾರಿ ಹೇಳುತ್ತಿವೆ.! ಬೆಂಗಳೂರಿಗೆ ಬಂದ ಬಳಿಕ ಈಕೆ ತನ್ನ ವಂಚನೆಯ ಭಲೇಯನ್ನೆ ಹೆಣೆದಿದ್ದಾಳೆ. ಈ ವಂಚನೆಯ ಬಲೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಜನರು ಹಣ ಕಳೆದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ.?
ಅತ್ತೆ-ಮಾವನ ಮನೆಯಲ್ಲೇ ಕಳ್ಳತನ!
ಹುಡುಗರನ್ನ ಟ್ರ್ಯಾಪ್ ಮಾಡೋದ್ರಲ್ಲಿ ಪರಿಣಿತೆಯಂತೆ.! ಈಗ ಮದುವೆ ಆಗಿರುವ ಗಂಡನನ್ನು ಕೂಡ ಮೋಸದಿಂದಲೇ ಬಲೆಗೆ ಬೀಳಿಸಿಕೊಂಡಿದ್ದಳಂತೆ. ಸ್ನೇಹಿತನ ಮುಖಾಂತರ ಮಂಜುನಾಥ್ ಪರಿಚಯವಾಗಿದೆ. ಮಂಜುನಾಥ್ ಅವರ ಅಪ್ಪ ಅಮ್ಮನಿಗೆ ಎರಡ್ಮೂರು ಖಾಸಗಿ ಆಸ್ಪತ್ರೆಗಳಿಂದ ಕರೆ ಮಾಡಿಸಿ ರೇಖಾ ಪ್ರೆಗ್ನೆಂಟ್ ಅಂತ ಹೇಳಿಸಿ, ಮದುವೆ ಆಗಿದ್ದಳಂತೆ! ಆನಂತರ ಸ್ವತಃ ಸ್ವಂತ ಅತ್ತೆ ಮಾವನ ಮನೆಯಲ್ಲಿಯೇ ಕಳ್ಳತನ ಮಾಡಿ ಯಾರಿಗೂ ಗೊತ್ತಿಲ್ಲದಂತೆ ಮನೆಯಲ್ಲಿ ವಾಸ ಮಾಡುತ್ತಿದ್ದಳಂತೆ. ಮನೆಯಲ್ಲಿರುವ ಬಿರುವಿನ ನಕಲಿ ಕೀಯನ್ನು ಮಾಡಿಸಿ ಮನೆಯಲ್ಲಿದ್ದ ಒಡವೆ ಹಾಗೂ ಹಣವನ್ನು ದೋಚಿದ್ದಳು. ಒಂದು ದಿನ ಮನೆ ಕ್ಲೀನ್ ಮಾಡಬೇಕಾದರೆ ಅತ್ತೆ ಕೈಗೆ ರೇಖಾಮಾಡಿಸಿದ್ದ ಬೀರುನ ನಕಲಿ ಬೀಗ ಪತ್ತೆಯಾಗಿದೆ. ಆಗ ರೇಖಾ ತನ್ನ ಗಂಡನನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದಾಳೆ ಎಂದು ಆಕೆಯ ಅತ್ತೆ ಮಾವ ಆರೋಪ ಮಾಡಿದ್ದಾರೆ.ದಿನಬೆಳಗಾದರೆ ಸಾಕು ನವರಂಗಿ ರೇಖಾ ಕಲರ್ ಫುಲ್ ಮೇಕಪ್ ಮಾಡಿಕೊಂಡು ಹೊಳೆಯುತ್ತಾ ತನ್ನ ಸುತ್ತಮುತ್ತ ಪುಗಸಟ್ಟೆ ಬಿಲ್ಡಪ್ ಕೊಡುವ ರೇಖಾ ನೋಡೋದಕ್ಕೆ ಅಮಾಯಕಿ ಥರಾ ಕಂಡ್ರೂ ಖತರ್ನಾಕ್ ಲೇಡಿ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.!ತನ್ನ ಮಾತನ್ನೆ ಬಂಡವಾಳ ಮಾಡಿಕೊಂಡು ಕೋಟಿಹಣದ ಕೋಟೆ ಕಟ್ಟಿ ಹಣ ಇರುವವರನ್ನು ತನ್ನ ಮೋಸದ ಭಲೇಗೆ ಕೆಡವಿಕೊಳ್ಳುವ ಮಹಾನ್ ಚಾಲಕಿ. ಮೋಸಗಾತಿ ರೇಖಾ ನೂರು ರೂಪಾಯಿ ಕೊಟ್ಟರೆ ಇನ್ನೂರು ರೂಪಾಯಿ ಕೊಡ್ತೀನಿ ಅಂತ ದುಡ್ಡಿನಾಸೆ ತೋರಿಸಿ ಉದ್ಯಮಿ ಒಬ್ಬರಿಗೆ ಉಂಡೆನಾಮ ಹಾಕಿರುವ ಆರೋಪ ಕೇಳಿಬಂದಿದೆ.!?
ರೇಖಾ ಸುಮಾರು 14 ಕೋಟಿಗೂ ಅಧಿಕ ಹಣ ಸುಲಿಗೆ ಮಾಡಿರೋ ಆರೋಪ ಕೇಳಿಬಂದಿದೆ.!? ದುರಂತವೆಂದರೆ ಇದುವರೆಗೂ ಯಾವುದೇ ಹಣ ರಿಕವರಿ ಆಗಿಲ್ಲ. ಕಾಲ್ಟರ್ನ್ ಕಂಪನಿಯಲ್ಲಿ ಎಂಪ್ಲಾಯ್ ಅಂಥ ಹೇಳ್ತಿದ್ದ ರೇಖಾ. ಆ ಕಂಪನಿಗೆ ಕೆಲವು ವರ್ಷಗಳ ಹಿಂದೆ ಬೆಂಕಿಬಿದ್ದಿತ್ತಂತೆ. ಆ ಅವಘಡದಲ್ಲಿ ಒಂಭತ್ತು ಜನ ಸಜೀವ ದಹನ ಆಗಿದ್ರಂತೆ. ಈ ಕಂಪನಿಯ ಅಕೌಂಟ್ಸ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡ್ತಿದ್ದೆ ಅಂಥ ಹೊರಗಡೆ ಹೇಳಿಕೊಂಡಿದ್ದಳು.
ಈ ಬೆಂಕಿ ಅವಘಡ ಪ್ರಕರಣದಲ್ಲಿ ನಾನು ಪ್ರಮುಖ ಸಾಕ್ಷಿಯಾಗಿದ್ದೆ, ಆ ಸಾಕ್ಷಿಯನ್ನ ಕಂಪನಿಯಿಂದ ಹೊರಗಡೆ ಕಳಿಸಬೇಕು ಅಂಥ ಕಂಪನಿ ಈಕೆಗೆ ಹಣ ಟ್ರಾನ್ಸ್ ಫರ್ ಮಾಡಿತ್ತಂತೆ. ಮಾಲೀಕರು ಬರೋಬ್ಬರಿ 25 ಕೋಟಿ ರೂಪಾಯಿ ಹಣವನ್ನ ಹಾಕಿದ್ರಂತೆ ಹಾಗಾಗಿ ತಾನು ಆ ಕಂಪನಿಯಿಂದ ಹೊರಗಡೆ ಬಂದೆ ಅಂಥ ಹೇಳಿಕೊಂಡಿದ್ದಳಂತೆ..! ಒಂದೇ ಸಮನೇ ಇಷ್ಟೊಂದು ಅಮೌಂಟ್ ಬಂದ ಹಿನ್ನೆಲೆ ನನಗೆ ಸಮಸ್ಯೆ ಆಯ್ತು, ಐಟಿ, ಇಡಿ ಹೀಗೇ ಬೇರೇ ಬೇರೆ ತನಿಖಾ ತಂಡ ಅಕೌಂಟ್ ನ್ನ ಫ್ರೀಜ್ ಮಾಡಿದ್ರು. ಹಾಗಾಗಿ ಆ ಹಣವನ್ನ ಬಿಡಿಸಿಕೊಳ್ಳೋಕೆ ಒದ್ದಾಡ್ತಿದ್ದೀನಿ. ಆ ಅಮೌಂಟ್ ಬಿಡಿಸೋಕೆ ನನಗೆ ಅಮೌಂಟ್ ಕೊಡಿ ಅಂಥ ಉದ್ಯಮಿಯೊಬ್ಬರನ್ನು ನಂಬಿಸಿದ್ದಳಂತೆ.
ಮತ್ತೊಂದೆಡೆ ಫ್ರೀಯಾಗಿ ಲೋನ್ ಕೊಡಿಸ್ತೀನಿ ಅಂಥ ಮೋಸ,ನನ್ನ 25 ಕೋಟಿ ರೂಪಾಯಿ ಸ್ಟ್ರಕ್ ಆಗಿದೆ ಅಂಥ ಹಣ ವಸೂಲಿ ಮಾಡಿರುವ ಆರೋಪ ಕೇಳಿಬಂದಿದೆ. ಶಾದಿ ಡಾಟ್. ನಲ್ಲೂ ಆಕ್ಟೀವ್ ಆಗಿದ್ದ ರೇಖಾ. ಹುಡುಗರೊಂದಿಗೆ ಸಲಿಗೆ ಬೆಳೆಸ್ಕೊಂಡು ಅವರನ್ನೂ ಬ್ಲಾಕ್ ಮೇಲ್ ಮಾಡುತ್ತಿದ್ದಳು ಎನ್ನುವ ಆರೋಪಗಳು ಕೇಳಿಬಂದಿವೆ. ರೇಪ್ ಕೇಸ್ ಹಾಕ್ತೀನಿ ನಾನು ಪ್ರೆಗ್ನೆಂಟ್ ಆಗಿದ್ದೀನಿ ಅಂಥ ಸುಳ್ಳು ಕಥೆ ಕಟ್ಟಿ ಮೋಸ ಮಾಡಿದ್ದಾಳಂತೆ. ಕೆಆರ್ ಪುರಂನ ಅಯ್ಯಪ್ಪನಗರದಲ್ಲಿ ವಾಸವಾಗಿರೋ ರೇಖಾ. ಸುಮಾರು 50ಕ್ಕೂ ಅಧಿಕ ಜನಕ್ಕೆ ಮೋಸ ಮಾಡಿರೋ ಆರೋಪ ಕೇಳಿ ಬಂದಿದೆ. ಈ ಹಿಂದೆಯೂ ಈಕೆ ಜೈಲಿಗೆ ಹೋಗಿದ್ದಳು, ಹೊರಬಂದ ಮೇಲೂ ಮತ್ತದೇ ಚಾಳಿ ಮುಂದುವರಿಸಿದ್ದಾಳೆ. ಪೊನ್ನಂಪೇಟೆ ಠಾಣೆಯಲ್ಲೂ ಈಕೆಯ ವಿರುದ್ಧ ಕೇಸ್ ದಾಖಲಾಗಿತ್ತು. ಉದ್ಯಮಿ ಒಬ್ಬರನ್ನು ರೇಖಾ ಗ್ಯಾಂಗ್ ಹನಿಟ್ರ್ಯಾಪ್ ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿದೆ.