ಆನೇಕಲ್: ರೌಡಿಶೀಟರ್ ವೆಂಕಟೇಶ್ ಬರ್ಬರ ಹತ್ಯೆ.!
ಅಶ್ವಸೂರ್ಯ/ಆನೇಕಲ್: ಕಾರಿನಲ್ಲಿ ಬೆನ್ನತ್ತಿ ಬಂದ ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿ ಮನಬಂದಂತೆ ಕೊಚ್ಚಿ ಕೊಲೆ ಮಾಡಿರುವ ಘಟನೆ ಸಂತೆಬೀದಿಯಲ್ಲಿ ಕಳೆದ ರಾತ್ರಿ ನಡೆದಿದೆ. ದೊಮಸಂದ್ರ ನಿವಾಸಿ ವೆಂಕಟೇಶ್ (35) ಕೊಲೆಯಾದ ವ್ಯಕ್ತಿ.
ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಈತ ಕಳೆದ ರಾತ್ರಿ 10 ಗಂಟೆ ಸುಮಾರಿನಲ್ಲಿ ಸಂತೆಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಅಪರಿಚಿತರ ಗ್ಯಾಂಗ್ ಏಕಾಏಕಿ ಮಾರಕಾಸ್ತ್ರದಿಂದ ದಾಳಿ ಮಾಡಿ ಬರ್ಬರವಾಗಿ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮುಸಿದ ಎಸ್ಪಿ ಸಿ.ಕೆ. ಬಾಬು ಮತ್ತು ಡಿವೈಎಸ್ಪಿ ಮೋಹನ್ ಕುಮಾರ್ ಹತ್ಯೆಯಾದ ಸ್ಥಳದ ಪರಿಶೀಲನೆ ನಡೆಸಿದ್ದಾರೆ.ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಸರ್ಜಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಂತಕರನ್ನು ಹೆಡೆಮುರಿಕಟ್ಟಲು ಪೊಲೀಸರು ಪ್ರತ್ಯೇಕ ಟೀಮ್ ಮಾಡಿಕೊಂಡು ಹಂತಕರ ಬೆನ್ನಿಗೆ ಬಿದ್ದಿದ್ದಾರೆ.ಹತ್ಯೆ ಹಿಂದಿನ ಅಸಲಿ ಸತ್ಯ ಹಂತಕರ ತಂಡವನ್ನು ಬಂದಿಸಿದ ನಂತರವಷ್ಟೆ ತಿಳಿಯಬೇಕಿದೆ.
ಆನೇಕಲ್ ನ ನಡು ರಸ್ತೆಯಲ್ಲಿ ಮಾಜಿ ರೌಡಿ ಶೀಟರ್ ಒಬ್ಬನ ಬರ್ಬರ ಹತ್ಯೆಯಾಗಿದೆ.ಹಂತಕರ ಗ್ಯಾಂಗ್ ಒಂದು ಕಾರು ಮತ್ತು ಬೈಕ್ ನಲ್ಲಿ ಬಂದು ರೀಯಲ್ ಎಸ್ಟೇಟ್ ಏಜೆಂಟ್ ರೌಡಿಶೀಟರ್ ವೆಂಕಟೇಶ್ ನನ್ನು ಮನಬಂದಂತೆ ಕೊಚ್ಚಿ ಹತ್ಯೆಮಾಡಿದ್ದಾರೆ.
ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ದೊಮ್ಮಸಂದ್ರ ನಿವಾಸಿ ವೆಂಕಟೇಶ್ ರೌಡಿಶೀಟರ್ ಆಗಿದ್ದು ಅವನನ್ನು ನಿನ್ನೆ ರಾತ್ರಿ 9.30 ಸುಮಾರಿಗೆ ಮನೆಯ ಸಮೀಪದ ಸಂತೆಬೀದಿಯಲ್ಲಿ ನಡೆದುಕೊಂಡು ಹೋಗುವಾಗ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ವ್ಯಾಗನಾರ್ ಕಾರು ಮತ್ತು ಮೂರು ಬೈಕ್ ಗಳಲ್ಲಿ ವೆಂಕಟೇಶ್ ನನ್ನು ಹಿಂಬಾಲಿಸಿ ಬಂದ ಹಂತಕರ ತಂಡ ಆತನ ತಲೆಯನ್ನೇ ಟಾರ್ಗೆಟ್ ಮಾಡಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಹತ್ತು ವರ್ಷಗಳ ಹಿಂದೆ ಕೊಲೆ ಯತ್ನ ಪ್ರಕರಣ ಒಂದರಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಮೃತ ವೆಂಕಟೇಶ್ ರೌಡಿಸಂ ಬಿಟ್ಟಿದ್ದು, ಪತ್ನಿ ಇಬ್ಬರು ಮಕ್ಕಳ ಜೊತೆ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದನಂತೆ. ಸಣ್ಣಪುಟ್ಟ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಎನ್ನುವುದು ತಿಳಿದುಬಂದಿದೆ.ಈ ಹತ್ಯೆಗೆ ಕಾರಣವೇನು.? ಹಂತಕರು ಯಾರು.?ಯಾವ ಉದ್ದೇಶಕ್ಕೆ ಈ ಕೊಲೆ ಮಾಡಲಾಗಿದೆ. ನಮಗೆ ಯಾವುದು ಗೊತ್ತಿಲ್ಲ ಎಂದು ಮೃತನ ಪತ್ನಿ ಸಂಗೀತಾ ಅಳಲು ತೋಡಿಕೊಂಡಿದ್ದಾರೆ. ಸರ್ಜಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.