

CRIME NEWS : ಪ್ರಿಯತಮೆಯ ವರ್ಷದ ತಿಥಿ ದಿನವೆ ಹತ್ಯೆಯಾದ ಪ್ರಿಯಕರ.! ಶವದ ಬಳಿ ಬಿದ್ದ ಕಿವಿಯ ತುಂಡು ಹೇಳಿದ ಹತ್ಯೆ ಹಿಂದಿನ ಸತ್ಯ.!!

news.ashwasurya.in/Shivamogga
ಅಶ್ವಸೂರ್ಯ/ವಿಜಯಪುರ: ಯುವತಿಯೊಬ್ಬಳ ಆತ್ಮಹತ್ಯೆಯ ವಿಚಾರಕ್ಕೆ ಗುಮ್ಮಟನಗರಿ ವಿಜಯಪುರದಲ್ಲಿ (Vijayapura) ಗುಂಡಿನ ದಾಳಿಗೆ ಯುವಕನೊಬ್ಬನ ಹತ್ಯೆ ನಡೆದಿದೆ.!ಕಳೆದ ಒಂದು ವರ್ಷದ ಹಿಂದೆ ತಾನು ಪ್ರೀತಿಸಿದ ಯುವತಿಯ ಮನೆಗೆ ಯುವಕನೊಬ್ಬ ಹೆಣ್ಣು ಕೇಳಲು ಹೋಗಿದ್ದನಂತೆ.!ಆದರೆ ಯುವತಿಯ ಮನೆಯವರು ಅವರ ಕುಟುಂಬದವರು ಹೆಣ್ಣು ಕೊಡಲು ಒಪ್ಪಿರಲಿಲ್ಲ. ತಾನು ಪ್ರೀತಿಸಿದ ಹುಡುಗ ನನ್ನಿಂದ ದೂರಾಗುವ ಕಾರಣಕ್ಕೊ ಏನು ಯುವತಿ ವರ್ಷದ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದಳು.ನಮ್ಮ ಮನೆಯ ಹುಡುಗಿಯ ತಲೆಕೆಡಸಿ ಅವಳ ಸಾವಿಗೆ ಯುವಕನೇ ಕಾರಣ ಎಂದು ಯುವತಿಯ ಕಡೆಯವರು ಸೇಡು ತೀರಿಸಿಕೊಂಡಿದ್ದಾರೆ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.!?ಹತ್ಯೆಯಾದ ಯುವಕನ ಶವದ ಬಳಿ ಕಿವಿಯ ತುಂಡೊಂದು ಬಿದ್ದಿದ್ದು ಇದು ಹಂತಕರ ಸುಳಿವು ನೀಡಿದೆಯಂತೆ.?
ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆದಿದೆ. ಜಿಲ್ಲೆಯ ತಿಕೋಟಾ ತಾಲೂಕಿನ ಅರಕೇರಿ ಗ್ರಾಮದ ಮನಾವರ ದೊಡ್ಡಿ ಬಳಿ ಗುಂಡಿನದಾಳಿ ನಡೆದಿದ್ದು, ಕಾರಿನಲ್ಲಿ ಬರುತ್ತಿದ್ದ ತಿಕೋಟಾ ತಾಲೂಕಿನ ಅರಕೇರಿ ತಾಂಡಾದ ನಿವಾಸಿ ಸತೀಶ್ ರಾಠೋಡ್ ಹತ್ಯೆಯಾಗಿದ್ದಾನೆ. ಅದೇ ತಾಂಡಾದ ರಮೇಶ್ ಚೌಹಾಣ್ ಹಾಗೂ ಆತನ ಸಹಚರರು ಈ ಹತ್ಯೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಮೃತದೇಹದ ಸಮೀಪವೇ ಹಂತಕನೊಬ್ಬನ ಕಿವಿಯ ತುಂಡು ಪತ್ತೆಯಾಗಿದೆ.!

ಹತ್ಯೆಯಾದ ಸ್ಥಳದಲ್ಲಿ ಸತೀಶ್ ಮೃತದೇಹದ ಮೇಲೆ ಬಂದೂಕು ಪತ್ತೆಯಾಗಿದೆ. ಜೊತೆಗೆ ಮೃತದೇಹದ ಸಮೀಪವೇ ಓರ್ವನ ಕಿವಿಯ ತುಂಡು ಪತ್ತೆಯಾಗಿದ್ದು ಈ ಪ್ರಕರಣದ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ. ಗಲಾಟೆ ವೇಳೆ ಕಿವಿ ಕತ್ತರಿಸಿ ಹೋಗಿರಬಹುದು ಎನ್ನುವ ಅನುಮಾನ ಎದ್ದು ಕಾಣತ್ತಿದೆ. ಕತ್ತರಿಸಿ ಕೆಳಕ್ಕೆ ಬಿದ್ದಿರುವ ಕಿವಿಯ ತುಂಡು ಯಾರದಿರಬಹುದು.? ಎನ್ನುವ ಅನುಮಾನ ಸ್ಥಳ ಪರಿಶೀಲಿಸಿದ ಪೊಲೀಸರನ್ನು ಕಾಡಿದೆ.? ಇದು ಮೃತ ಸ್ನೇಹಿತನದ.? ಅಥವಾ ಹತ್ಯೆಮಾಡಿದ ಗ್ಯಾಂಗಿನ ಹಂತಕನದ.? ಎನ್ನುವ ಪ್ರಶ್ನೆ ಕಾಡಿದೆ. ಹೆಣ್ಣಿನ ವಿಚಾರದಲ್ಲಿ ನಡೆಯುತ್ತಿದ್ದ ಕಲಹ ಸೇಡಿನ ರೂಪತಾಳಿ ಯುವಕನ ಕೊಲೆಯಲ್ಲಿ ಅಂತ್ಯವಾಗಿದ್ದು ಮಾತ್ರ ದುರಂತವೆ ಹೌದು. ಯುವನ ಹತ್ಯೆಯಾದ ಸ್ಥಳಗಳಲ್ಲಿ ಆತನ ಕುಟುಂಬಸ್ಥರ ಆಕಂದ್ರನ ಮುಗಿಲು ಮುಟ್ಟಿದೆ. ಅರಕೇರಿಯ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನಮಾಡಿ ಮನೆಗೆ ಕಾರಿನಲ್ಲಿ ವಾಪಸ್ ಬರುವ ವೇಳೆ ಗುಂಡಿನ ದಾಳಿ ಮಾಡಿದ್ದಾರೆ. ಸ್ಥಳದಲ್ಲೇ ಸತೀಶ್ ರಾಠೋಡ್ ಸಾವನಪ್ಪಿದ್ದಾನೆ.
ಪ್ರೀತಿಸಿದ ಯುವತಿಯನ್ನು ಮದುವೆಮಾಡಿ ಕೊಡಲು ನಿರಾಕರಿಸಿದ್ದ ಯುವತಿ ಕುಟುಂಬದವರೆ ಯುವಕನ ಹತ್ಯೆಮಾಡಿ ಮುಗಿಸಿದ್ದಾರೆ ಎನ್ನುವ ಅನುಮಾನ ಬಲವಾಗಿದೆ.ಹಂತಕರ ಗುಂಡಿನದಾಳಿಗೆ
ಹೆಣವಾಗಿರುವ ಸತೀಶ್ ರಾಠೋಡ್ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದನಂತೆ. ಕಳೆದ ಕೆಲ ವರ್ಷಗಳ ಹಿಂದೆ ಅರಕೇರಿ ತಾಂಡಾ ಒಂದರ ನಿವಾಸಿ ರಮೇಶ್ ಚೌವ್ಹಾಣ್ ಎಂಬುವರ ಪುತ್ರಿಯನ್ನು ಇಷ್ಟಪಟ್ಟಿದ್ದ. ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಿ ಎಂದು ಅವರ ಮನೆಗೆ ತನ್ನ ಕುಟುಂಬದ ಸದಸ್ಯರ ಜೊತೆ ಹೆಣ್ಣು ಕೇಳಲು ಹೋಗಿದ್ದನಂತೆ. ಆದರೆ ಸತೀಶ್ ಗೆ ಹಣ್ಣು ಕೊಡಲು ರಮೇಶ್ ಚೌವ್ಹಾಣ್ ಮತ್ತು ಕುಟುಂಬಸ್ಥರು ನಿರಾಕರಿಸಿದ್ದರು. ನನ್ನ ಮಗಳನ್ನ ನಿನಗೆ ಕೊಡೋದಿಲ್ಲ ಎಂದಿದ್ದರಂತೆ. ಅದಾದ ಬಳಿಕ ಎರಡು ಕುಟುಂಬಗಳ ನಡುವೆ ಗಲಾಟೆ ವೈಮನಸ್ಯು ನಡೆದಿದೆ. ಬಳಿಕ ಎಲ್ಲವೂ ತಿಳಿಯಾಗಿದೆ.
ಕಳೆದ ವರ್ಷ ಜನವರಿ 28 ರಂದು ಸತೀಶ್ ಚೌವ್ಹಾಣ್ ಪ್ರೀತಿಸಿದ ರಮೇಶ್ ಚೌವ್ಹಾಣ್ ಪುತ್ರಿ ಭಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಘಟನೆಗೆ ಸತೀಶ್ ರಾಠೋಡ್ ಕಾರಣ ಎಂದು ರಮೇಶ್ ಚೌವ್ಹಾಣ್ ಕುಟುಂಬ ಸೇಡಿನ ಕಿಡಿಕಾರಿದೆ ಆಗಿದ್ದನು. ಹೀಗಾಗಿ ಮಗಳು ಸತ್ತು ಒಂದು ವರ್ಷವಾದ ದಿನವೇ ಸತೀಶ್ ನನ್ನು ಗುಂಡಿನ ದಾಳಿ ಮಾಡಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಬಂದೂಕು ಹಾಗೂ ಕಿವಿ ಪತ್ತೆಯಾಗಿರುವುದು ಪ್ರಕರಣದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಜೊತೆಗೆ ಚಾಕು ಸಹ ಮೃತದೇಹದ ಪಕ್ಕದಲ್ಲೇ ಬಿದ್ದಿರೋದ್ರಿಂದ ಗಲಾಟೆ ನಡೆದು ಬಳಿಕ ಹತ್ಯೆ ಮಾಡಲಾಗಿದೆ ಅನ್ನೋ ಶಂಕೆ ವ್ಯಕ್ತವಾಗಿದೆ.
ಘಟನೆಗೆ ಹೆಣ್ಣಿನ ವಿಚಾರ ಕಾರಣವಾ ಅಥವಾ ಬೇರೆ ಕಾರಣ ಇದೆಯಾ?
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾಗಿರುವ ಬಂದೂಕು ಯಾರದ್ದು, ಕಿವಿ ಯಾರದ್ದು ಎನ್ನುವುದರ ಬಗ್ಗೆ ತನಿಖೆ ನಡೆಸಿದ್ದಾರೆ. ಸದ್ಯ ವಿಜಯಪುರ ಗ್ರಾಮೀಣ ಪೊಲೀಸರ ತನಿಖೆ ಬಳಿಕ ಘಟನೆಗೆ ಹೆಣ್ಣಿನ ವಿಚಾರ ಕಾರಣವಾ ಅಥವಾ ಬೇರೆ ಕಾರಣ ಇದೆಯಾ ಅನ್ನೋದರ ಬಗ್ಗೆ ಸತ್ಯಾಂಶ ಹೊರಬರಲಿದೆ.




