6 ಕೋಟಿಗೆ ಬೇಡಿಕೆಯಿಟ್ಟು,ಕಿಡ್ನ್ಯಾಪ್ ಮಾಡಿ ತಂದವನ ಕೈಗೆ 300 ರೂ.ಕೊಟ್ಟು ಮನೆಗೆ ವಾಪಸ್ ಕಳುಹಿಸಿದ ಕಿಡ್ನ್ಯಾಪರ್ಸ್.!
ಅಶ್ವಸೂರ್ಯ/ಬಳ್ಳಾರಿ: 6 ಕೋಟಿಗೆ ಬೇಡಿಕೆ ಇಟ್ಟ ಕಿಡ್ನಾಪರ್ಸ್ ಅಂತಿವುವಾಗಿ ಡೀಲ್ ಕುದರದೆ ಕಿಡ್ನ್ಯಾಪ್ ಮಾಡಿ ತಂದವನ ಕೈಗೆ 300 ರೂಪಾಯಿ ಕೊಟ್ಟು ಆತನನ್ನು ವಾಪಸ್ ಮನೆಗೆ ಕಳುಹಿಸಿರುವ ವಿಚಿತ್ರ ಘಟನೆ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ಹೌದು, ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಡಾಕ್ಟರ್ ಸುನಿಲ್ ಅವರನ್ನು ಬೆಳಗಿನ ಜಾವ ವಾಕಿಂಗ್ ಮಾಡುತ್ತಿರುವಾಗ ಕಿಡ್ನಾಪರ್ಸ್ ಬಂದು ಹಲ್ಲೆ ಮಾಡಿ ಅವರನ್ನು ತಮ್ಮ ಕಾರಿನಲ್ಲಿ ಎತ್ತಾಕಿಕೊಂಡು ಹೋಗಿದ್ದರು.ಕಾರಿನಲ್ಲಿ ಹೋಗುವಾಗ ಆತನ ಮೇಲೆ ಹಲ್ಲೆ ಕೂಡ ನಡೆಸಿದರು. ಬಳಿಕ ಆತನ ಅಣ್ಣನಿಗೆ ಕರೆ ಮಾಡಿ ನಿಮ್ಮ ತಮ್ಮನನ್ನು ನಾವು ಕಿಡ್ನಾಪ್ ಮಾಡಿದ್ದೇವೆ. ಕೂಡಲೇ ನಮಗೆ ಚಿನ್ನಾಭರಣ ಸೇರಿದಂತೆ 6 ಕೋಟಿ ಮೌಲ್ಯದ ಹಣವನ್ನು ತಮಗೆ ನೀಡಬೇಕಾಗಿ ಬೆದರಿಕೆ ಹಾಕಿದ್ದಾರೆ.!
ಇದನ್ನು ಕೇಳಿಸಿಕೊಂಡ ಆತನ ಅಣ್ಣ ವೇಣುಗೋಪಾಲ್ ಪೊಲೀಸರಿಗೆ ಕರೆ ಮಾಡಿ ಈ ಕುರಿತಂತೆ ಮಾಹಿತಿ ನೀಡಿರುತ್ತಾರೆ.ಬಳಿಕ ಪೊಲೀಸರು ಬಳ್ಳಾರಿ ಜಿಲ್ಲೆ ಮಾತ್ರವಲ್ಲದೇ ಬೇರೆ ಬೇರೆ ಜಿಲ್ಲೆಯ ಪೊಲೀಸರಿಗೆ ಈ ಮಾಹಿತಿಯನ್ನು ರವಾನಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಕಿಡ್ನ್ಯಾಪರ್ಸ್ ಗಳ ಬೇಟೆಗೆ ಇಳಿದಿದ್ದರು. ಇದನ್ನು ತಿಳಿದ ಕಿಡ್ನಾಪರ್ಸ್ ಬಳ್ಳಾರಿ ಜಿಲ್ಲೆ ಹೊರತಾಗಿ ಬೇರೆ ಎಲ್ಲಿಯೂ ಹೋಗದೆ ಅಲ್ಲಿಯೇ ಆತನನ್ನು ಸುತ್ತಾಡಿಸುತ್ತಾರೆ.
ಸಂಜೆವರೆಗೂ ಕಾದು ನೋಡಿದ ಕಿಡ್ನಾಪರ್ಸ್ ಗೆ ಒಂದು ರೂಪಾಯಿಯೂ ಹಣ ಸಿಗದೆ ಇದ್ದಾಗ ಬೇಸತ್ತು ಇವನಿಂದ ನಮಗೇನು ಸಿಗುವುದಿಲ್ಲ ಎಂದು ತಿಳಿದು ಕಡೆಗೆ ಬಳ್ಳಾರಿ ಜಿಲ್ಲೆಯ ಜಮೀನ್ ಒಂದರಲ್ಲಿ ಆತನನ್ನು ಬಿಟ್ಟು ಹೋಗಿದ್ದಾರೆ. ಬಿಟ್ಟು ಹೋಗುವಾಗ ಸರಿಯಾಗಿ ಮನೆಗೆ ಹೋಗಿ ಸೇರಿಕೋ ಎಂದು ಹೇಳಿ 300 ರೂಪಾಯಿ ಕೊಟ್ಟು ಕಳುಹಿಸಿದ ವಿಚಿತ್ರ ಘಟನೆಯೊಂದು ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ಆದರೆ ಆರು ಕೋಟಿಗೆ ಬೇಡಿಕೆ ಇಟ್ಟು ತಮ್ಮ ಜೇಬಿನಿಂದ 300 ರೂಪಾಯಿ ಕೊಟ್ಟು ಕಳುಹಿಸಿರುವುದು ವಿಚಿತ್ರವಾಗಿದೆ.