“ಭೀಮ ಸಂಗಮ – ನಮ್ಮೆಲ್ಲರ ಆತ್ಮೀಯ ಸಮಾಗಮ”
news.ashwasurya. in/Shivamogga
ಅಶ್ವಸೂರ್ಯ/ಶಿವಮೊಗ್ಗ: ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರು ಸ್ವಾತಂತ್ರ್ಯ ಭಾರತದ ಭದ್ರ ಅಡಿಪಾಯಕ್ಕೆ ಐತಿಹಾಸಿಕ ಸಂವಿಧಾನವನ್ನು ರಚನೆ ಮಾಡಿ “75 ವಸಂತಗಳು” ಸಂದಿರುವ ಈ ಐತಿಹಾಸಿಕ ಕಾಲಘಟ್ಟವನ್ನು ಗೌರವಪೂರ್ವಕವಾಗಿ ಅತ್ಯಂತ ಸಂಭ್ರಮದೊಂದಿಗೆ ಎಲ್ಲರನ್ನೂ ಒಳಗೊಂಡಂತೆ ಆಚರಣೆ ಮಾಡಲು ಭಾರತೀಯ ಜನತಾ ಪಕ್ಷ ದೇಶದಾದ್ಯಂತ ಆಚರಿಸುತ್ತಿರುವ “ಸಂವಿಧಾನ ಗೌರವ ಅಭಿಯಾನ – ಭೀಮ ಸಂಗಮ” ಎಂಬ ವಿಶೇಷ ಕಾರ್ಯಕ್ರಮವನ್ನು ಗೃಹ ಕಚೇರಿಯಲ್ಲಿ ನಡೆಸಿಕೊಡಲಾಯಿತು.
ಡಾ ಬಿ.ಆರ್. ಅಂಬೇಡ್ಕರ್ ಅವರು ಮಾದರಿಯಾಗಿ ನಡೆಸಿದ ಜೀವನ ಚರಿತ್ರೆ, ಶೋಷಿತ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮೇಲೆತ್ತಲು ತನ್ನ ಜೀವನವನ್ನು ಮುಡಿಪಾಗಿಟ್ಟ ರೀತಿ, ಕಾಂಗ್ರೆಸ್ ಪಕ್ಷ ಅವರನ್ನು ಯಾವ ರೀತಿಯಾಗಿ ನಡೆಸಿಕೊಂಡಿತು ಎಂಬ ಕುರಿತು, ಬಿಜೆಪಿ ಪಕ್ಷ ಅವರನ್ನು ಗೌರವಿಸಲು ಕೈಗೊಂಡಿರುವ ಕ್ರಮಗಳ ಕುರಿತು ಭೀಮ ಬಂಧುಗಳೊಂದಿಗೆ ಸುದೀರ್ಘವಾಗಿ ಮಾತನಾಡಲಾಯಿತು.
ನಂತರ ಸ್ವಗೃಹದಲ್ಲಿ ಭೀಮ ಬಂಧು ಅವರುಗಳಿಗೆ ಆಯೋಜಿಸಿದ್ದ ವಿಶೇಷ ಉಪಾಹಾರ ಕೂಟದಲ್ಲಿ ಅವರೊಂದಿಗೆ ಭಾಗಿಯಾಗಿ ಸ್ನೇಹ ಪೂರ್ವಕವಾಗಿ ಆತಿತ್ಯ ನೀಡಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಚನ್ನಬಸಪ್ಪ ಅವರು, ಹಿರಿಯರಾದ ಶ್ರೀ ಸಿದ್ಧರಾಮಣ್ಣ ಅವರು, ಶ್ರೀ ರುದ್ರೇಗೌಡ ಅವರು, ಪ್ರಮುಖರಾದ ಶ್ರೀ ಶಿವರಾಜ್ ಅವರು, ಶ್ರೀ ರಾಮು ಕೋಹಳ್ಳಿ ಅವರು ಸೇರಿದಂತೆ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು.