Headlines

ಮಂಗಳೂರು ಇನ್ಸ್ಟಿಟ್ಯೂಟ್ಆಫ್ಆಂಕಾಲಜಿಸೂಪರ್ಸ್ಫೆಷಾಲಿಟಿಕ್ಯಾನ್ಸರ್ಆಸ್ಪತ್ರೆ. ತೀರ್ಥಹಳ್ಳಿವತಿಯಿಂದ, ಪತ್ರಿಕಾ ವಿತರಕ ಮಾಲತೇಶ್ ಅವರಿಗೆ ಸನ್ಮಾನ

news.ashwasurya.in/Shivamogga

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟ, ನಗರದ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಮಥುರ ಪ್ಯಾರಡೈಸ್ ರಜತೋತ್ಸವ ಸಮಿತಿ ಶಿವಮೊಗ್ಗ, ಆರೋಗ್ಯ ಭಾರತಿ ಶಿವಮೊಗ್ಗ ಹಾಗೂ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಅಸ್ಪತ್ರೆ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಕುಟುಂಬದ ಸದಸ್ಯರಿಗೆ ಕವಲೇದುರ್ಗ ಚಾರಣ, ಕುಪ್ಪಳ್ಳಿಯ ಕವಿಶೈಲ ಮತ್ತು ಶೃಂಗೇರಿಗೆ ಪ್ರವಾಸ ಮತ್ತು ಸಾಮಾನ್ಯ ಆರೋಗ್ಯ ಮತ್ತು ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಭಾನುವಾರ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಕಳೆದ ಹಲವಾರು ವರ್ಷಗಳಿಂದ ನಿಸ್ವಾರ್ಥವಾಗಿ ಪತ್ರಿಕಾ ವಿತರಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಎನ್, ಮಾಲತೇಶ್ ಇವರಿಗೆ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಅಸ್ಪತ್ರೆ ತೀರ್ಥಹಳ್ಳಿ ಇವರ ವತಿಯಿಂದ ಸನ್ಮಾನಿಸಲಾಯಿತು.

ಪತ್ರಿಕಾರಂಗ ಇಂದು ನಮ್ಮ ದೇಶದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಒಂದು ಉದ್ಯಮವಾಗಿದೆ ಇದರಲ್ಲಿ ಪತ್ರಿಕಾ ವಿತರಕರ ಸೇವೇಯೂ ಕೂಡ ಅತ್ಯಂತ ಸ್ಮರಣೀಯ ಎಂದು ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್ ಪ್ರಾಸ್ಥಾವಿಕವಾಗಿ ಮಾತನಾಡುತ್ತ ತಿಳಿಸಿದರು. ಅವರು ಕ್ಯಾನ್ಸರ್ ಬಗ್ಗೆ ಭಯ ಬೇಡ, ಅದೊಂದು ಗುಣ ಪಡಿಸಬಹುದಾದ ಕಾಯಿಲೆ, ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದುಕೊಂಡರೆ ಆರೋಗ್ಯದಲ್ಲಿ ಯಾವುದೇ ತೊಂದರೆ ಆಗದಂತೆ ಜೀವನ ನಡೆಸಬಹುದು ಎಂದು ತಿಳಿಸಿದರು. ತೀರ್ಥಹಳ್ಳಿಯಲ್ಲಿ ಇರುವ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಆಸ್ಪತ್ರೆಯ ಅಧಿಕಾರಿ ಜಗದೀಶ್‌ರವರಿಗೆ ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ವತಿಯಿಂದ ಗೌರವಿಸಲಾಯಿತು.

ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಗೌರವಾಧ್ಯಕ್ಷರಾದ ಷಿಕಾರಿಪುರ ಹುಲಿಗಿ ಕೃಷ್ಣ ರವರು ಮಾತನಾಡುತ್ತ ಎಮ್.ಐ.ಓ ಆಸ್ಪತ್ರೆಯವರು ಕ್ಯಾನ್ಸರ್ ಮುಕ್ತ ಸಮಾಜಕ್ಕೆ ತನ್ನದೇ ಆದ ತಂಡದೊಂದಿಗೆ ಶಿವಮೊಗ್ಗ ಜಿಲ್ಲೆಯ ಪ್ರತಿಯೊಂದು ತಾಲೂಕಿನ ಪ್ರಮುಖ ಕೇಂದ್ರಗಳಲ್ಲಿ ಕ್ಯಾನ್ಸರ್ ಜಾಗೃತಿ ಅರಿವು ಮೂಡಿಸುಸತ್ತಿರುವುದು ಉತ್ತಮ ಕಾರ್ಯವೆಂದರು. ಇದೇ ಸಂದರ್ಭದಲ್ಲಿ ಪತ್ರಿಕಾ ವಿತರಕರರಾದ ದೇವರಾಜ್ ಶೆಟ್ರು, ದುರ್ಘೋಜಿ, ಪ್ರಾಣೇಶ್, ಶಿಕಾರಿಪುರ ಶಿವಯ್ಯ, ನಾವಿಕ ಡಿಟಿಪಿ ಆಪರೇಟರ್ ಆದ ರಾಜೇಶ್ವರಿ ಮಲೆನಾಡು ಎಕ್ಸ್ ಪ್ರೆಸ್ ಡಿಟಿಪಿ ಆಪರೇಟರ್ ಆದ ಗೀತಾ ಶಿವಮೊಗ್ಗ ಟೈಮ್ಸ್ ಡಿಟಿಪಿ ಆಪರೇಟರ್ ಆದ ಶೋಭಾ, ಬಾವಿಕ ಇನ್ನು ಮುಂತಾದವರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

Optimized by Optimole
error: Content is protected !!