ಆಕೆ ಮಧ್ಯಪ್ರದೇಶದ ಹುಡುಗಿ ಈತ ಆಂಧ್ರಪ್ರದೇಶದ ಹುಡುಗ ಇಬ್ಬರ ನಡುವಿನ ಪ್ರೀತಿ ಪೊಲೀಸರು ಬಂಧಿಸುವಲ್ಲಿಗೆ ಬಂದು ನಿಂತಿದೆ..!
news.ashwasurya.in
ಅಶ್ವಸೂರ್ಯ/ಶಿವಮೊಗ್ಗ: ಈ ಪ್ರೀತಿಗೆ ಕಣ್ಣಿಲ್ಲ ನಟ ರವಿಚಂದ್ರನ್ ಹಾಡಿನ ಮೂಲಕ ಸರಿಯಾಗಿಯೇ ತಿಳಿಸಿದ್ದಾರೆ.? ಯಾರು ಯಾರನ್ನು ಬೇಕಾದರೂ ಪ್ರೀತಿಸ ಬಹುದು ಅನ್ನುವುದು ಮಾತ್ರ ಸತ್ಯ. ಆಂಧ್ರಪ್ರದೇಶದ ಹುಡುಗ ಮತ್ತು ಮಧ್ಯಪ್ರದೇಶದ ಹುಡುಗಿ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆಂಧ್ರಪ್ರದ ನೆಲ್ಲೂರು ಜಿಲ್ಲೆಯ ಕವಾಲಿಯ ದೇವೆಂದೂಲವಿನ ರಾಜು ಮಧ್ಯಪ್ರದೇಶದ ಸಂಜನಾ ಮಂಜ ಅವರನ್ನು ಕೆಲವು ಸಮಯದ ಹಿಂದೆ ಭೇಟಿಯಾಗಿದ್ದರು.
ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಪ್ರೀತಿಯಾಗಿದೆ ಅದು ಬಿಟ್ಟಿರಲಾರದ ಮಟ್ಟಕ್ಕೆ ಬಂದು ನಿಂತಿದೆ.! ಇಬ್ಬರು ಒಮ್ಮೆ ಭೇಟಿಯಾದಾಗ ಇಬ್ಬರೂ ದೊಡ್ಡ ಪ್ಲಾನ್ ಮಾಡಿದ್ದಾರೆ..! ಹೇಗಾದರೂ ಮಾಡಿ ಹಣ ಮಾಡಲು ಬೇಕೆಂದು ತೀರ್ಮಾನಿಸಿ ಬಿಟ್ಟಿದ್ದಾರೆ. ಅದಕ್ಕಾಗಿ ಇಬ್ಬರು ಸೇರಿ ದೊಡ್ಡ ಪ್ಲಾನ್ ಮಾಡಿದ್ದಾರೆ..?ನೀವು ಕೇಳಿದರು ಒಮ್ಮೆ ಬೆಚ್ಚಿ ಬೀಳೋದು ಗ್ಯಾರಂಟಿ.!
ಈ ಅಂತರರಾಜ್ಯ ಪ್ರೇಮಿಗಳು ಒಮ್ಮೆ ಭೇಟಿಯಾದಾಗ ಇಬ್ಬರು ಹಣಮಡುವ ವಿಚಾರವನ್ನು ಪ್ರಸ್ತಾಪಮಾಡಿದ್ದಾರೆ.ಸಾಕಷ್ಟು ಹಣವನ್ನು ಹೇಗಾದರೂ ಸರಿ ಸಂಪಾದಿಸಿ ಐಶಾರಾಮಿ ಜೀವನ ಸಾಗಿಸಬೇಕು ಅನ್ನೋದು ಇಬ್ಬರ ಮಹಾದಾಸೆಯಾಗಿದೆ. ಅದಕ್ಕಾಗಿ ದೊಡ್ಡ ಪ್ಲಾನನ್ನೆ ರೂಪಿಸಿದ್ದಾರೆ. ಅದೇ ಅಕ್ರಮ ಗಾಂಜಾ ದಂಧೆ.!!ಅದನ್ನು ಶುರುಮಾಡಿಯೆ ಬಿಟ್ಟಿದ್ದರು.
ಚಾಲಾಕಿ ಜೋಡಿಗಳು. ಯಾವುದೇ ಕಾರಣಕ್ಕೂ ಪೊಲೀಸರ ಕೈಗೆ ಸಿಗದೇ ಇರಲು ಓಯೋ ರೂಮ್‌ನಲ್ಲಿ ಉಳಿದುಕೊಳ್ಳುವ ಪ್ಲಾನ್ ಮಾಡಿದ್ದಾರೆ. ಅಲ್ಲಿಂದಲೇ ಗಾಂಜಾ ದಂಧೆಯನ್ನು ಮಾಡುತ್ತಿದ್ದರು ಪ್ರೇಮಿಗಳು.ಕೊನೆಗೆ ಇದರ ಸುಳಿವು ತಿಳಿದ ಪೊಲೀಸರು ಪ್ರಕರಣ ಭೇದಿಸಿದ್ದಾರೆ.. ಈ ಬೆಚ್ಚಿಬೀಳಿಸುವ ಘಟನೆ ನೆಡೆದದ್ದು ಹೈದರಾಬಾದ್ ನಗರದ ಕೊಂಡಾಪುರದ ಓಯೋ ರೂಮ್ಸ್ ನಲ್ಲಿ. ಸದ್ಯ ಯುವಕ ಹಾಗೂ ಯುವತಿಯನ್ನು ಎಸ್‌ಟಿಎಫ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.ಹೆಚ್ಚಿನ ವಿಚಾರಣೆಯ ನಂತರ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ. ಕೊಂಡಾಪುರದ ಓಯೋ ರೂಂನಲ್ಲಿ ತಂಗಿದ್ದು ಕೆಲ ದಿನಗಳಿಂದ ಗಾಂಜಾ ದಂಧೆ ನಡೆಸುತ್ತಿದ್ದರು.ಈ ಕ್ರಮದಲ್ಲಿ ಶುಕ್ರವಾರ ರಾತ್ರಿ ಎಸ್‌ಟಿಎಫ್ ತಂಡ ತಪಾಸಣೆ ನಡೆಸಿ ದಾಳಿ ನಡೆಸಿದೆ. ಇಬ್ಬರೂ ಬೇರೆ ಬೇರೆ ಕಡೆಯಿಂದ ಗಾಂಜಾ ತಂದು ಓಯೋ ಕೊಠಡಿಯಿಂದ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.