ಹೊಸನಗರ:ಗೋ ಸೇವಾ ಗತಿ ವಿಧಿ ಕರ್ನಾಟಕ ಇವರ ನಂದಿ ರಥಯಾತ್ರೆ
ಅಶ್ವಸೂರ್ಯ/ಹೊಸನಗರ: ಗೋ ಸೇವಾ ಗತಿ ವಿಧಿ ಕರ್ನಾಟಕ ಇವರ ನಂದಿ ರಥಯಾತ್ರೆಯು ಹೊಸನಗರ ತಾಲ್ಲೂಕಿನ ನಗರಕ್ಕೆ ತುಲುಪಿತ್ತು. ದೇಸಿ ಗೋವಿನ ಮಹತ್ವ ಹಾಗೂ ರಕ್ಷಣೆಗೆ ಹಿಂದೂ ಸಮಾಜ ಕೈಗೊಳ್ಳಬೇಕಾದ ಕ್ರಮದ ಮಾಹಿತಿ ನೀಡಿ, ಸಂಘಟನೆಯ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ನಂದಿ ಪೂಜೆ ಹಾಗೂ ಗೋ ರಕ್ಷಣೆಯ ಸಂಕಲ್ಪದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ರಥ ಯಾತ್ರೆಯಲ್ಲಿ ಸುಬ್ರಹ್ಮಣ್ಯ ಒಡ್ಡಿನಬೈಲ್, ಹಾಲ್ಗದ್ದೆ ಉಮೇಶ್, ಕೆವಿ ಕೃಷ್ಣಮೂರ್ತಿ, ವಿಷ್ಣುಮೂರ್ತಿ, ನಗರ ನಿತಿನ್, ಕುಮಾರ್ ಭಟ್, ಕುಶಾಲ್ ಶೆಟ್ಟಿ, ನೇಮಿರಾಜ್, ದೇವರಾಜ್ ಚಿಕ್ಕಪೇಟೆ, ರಮೇಶ್, ಸಂತೋಷ್ ಚಿಕ್ಕಪೇಟೆ, ಸಾಮ್ರಾಜ್ ಶೆಟ್ಟಿ ಹಾಗೂ ಹಲವರು ಉಪಸ್ಥಿತರಿದ್ದು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.